Heart Health: ಹೃದ್ರೋಗಿಗಳು ತುಪ್ಪ ಮತ್ತು ಬೆಣ್ಣೆಯನ್ನು ತಿನ್ನಬಹುದೇ? ತಜ್ಞರು ಹೇಳುವುದೇನು?

ಹೆಚ್ಚಿನ ಹೃದ್ರೋಗಿಗಳು ತಮ್ಮ ಆಹಾರದಲ್ಲಿ ತುಪ್ಪ ಮತ್ತು ಬೆಣ್ಣೆಯನ್ನು ಸೇರಿಸುವುದನ್ನು ತಪ್ಪಿಸುತ್ತಾರೆ. ಆದರೆ ಹೃದ್ರೋಗಿಗಳು ನಿಜವಾಗಿಯೂ ತುಪ್ಪ ಅಥವಾ ಬೆಣ್ಣೆಯನ್ನು ತ್ಯಜಿಸಬೇಕೇ ಅಥವಾ ತಮ್ಮ ಆಹಾರದಲ್ಲಿ ಸೇರಿಸಬೇಕೆ ಎಂಬುದು ಪ್ರಶ್ನೆ. ಈ ಬಗ್ಗೆ ತಜ್ಞರ ನೀಡಿರುವ ಸಲಹೆ ಇಲ್ಲಿದೆ.

Heart Health: ಹೃದ್ರೋಗಿಗಳು ತುಪ್ಪ ಮತ್ತು ಬೆಣ್ಣೆಯನ್ನು ತಿನ್ನಬಹುದೇ? ತಜ್ಞರು ಹೇಳುವುದೇನು?
Heart Health
Image Credit source: Pinterest

Updated on: Oct 31, 2023 | 1:11 PM

ಒತ್ತಡದ ಜೀವನಶೈಲಿ ಮತ್ತು ಅನಾರೋಗ್ಯಕರ ಆಹಾರ ಕ್ರಮದಿಂದಾಗಿ ಜನರು ರಕ್ತದೊತ್ತಡ, ಪಾರ್ಶ್ವವಾಯು ಮತ್ತು ಹೃದಯ ಕಾಯಿಲೆಗಳ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ವಯಸ್ಕರಲ್ಲಿ ಮಾತ್ರವಲ್ಲದೆ ಯುವಕರಲ್ಲಿಯೂ ಇದರ ಪ್ರಕರಣಗಳು ವೇಗವಾಗಿ ಹೆಚ್ಚುತ್ತಿವೆ. ಹೃದ್ರೋಗಿಗಳು ತಮ್ಮ ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಣದಲ್ಲಿಟ್ಟುಕೊಂಡರೆ, ಅಪಾಯವು ಹೆಚ್ಚಾಗುವುದಿಲ್ಲ. ಆಹಾರದಲ್ಲಿ ಹೆಚ್ಚಿನ ಪ್ರಮಾಣದ ಕೊಬ್ಬನ್ನು ಸೇರಿಸುವುದು ಕೊಲೆಸ್ಟ್ರಾಲ್ ಅಪಾಯವನ್ನು ಹೆಚ್ಚಿಸುತ್ತದೆ. ಹೃದ್ರೋಗಿಗಳು ತುಪ್ಪ ಅಥವಾ ಬೆಣ್ಣೆಯನ್ನು ತಿನ್ನುವುದನ್ನು ತಪ್ಪಿಸಲು ಇದು ಕಾರಣವಾಗಿದೆ.ತುಪ್ಪ ಮತ್ತು ಬೆಣ್ಣೆಯು ಸ್ಯಾಚುರೇಟೆಡ್ ಕೊಬ್ಬಿನಿಂದ ಸಮೃದ್ಧವಾಗಿದೆ. ಇದು ಹೃದಯ ಸಂಬಂಧಿ ಕಾಯಿಲೆಗಳ ಅಪಾಯವನ್ನು ಹೆಚ್ಚಿಸಲು ಕಾರಣವಾಗುತ್ತದೆ.

ಹೆಚ್ಚಿನ ಹೃದ್ರೋಗಿಗಳು ತಮ್ಮ ಆಹಾರದಲ್ಲಿ ತುಪ್ಪ ಮತ್ತು ಬೆಣ್ಣೆಯನ್ನು ಸೇರಿಸುವುದನ್ನು ತಪ್ಪಿಸುತ್ತಾರೆ. ಆದರೆ ಹೃದ್ರೋಗಿಗಳು ನಿಜವಾಗಿಯೂ ತುಪ್ಪ ಅಥವಾ ಬೆಣ್ಣೆಯನ್ನು ತ್ಯಜಿಸಬೇಕೇ ಅಥವಾ ತಮ್ಮ ಆಹಾರದಲ್ಲಿ ಸೇರಿಸಬೇಕೆ ಎಂಬುದು ಪ್ರಶ್ನೆ. ಈ ಬಗ್ಗೆ ತಜ್ಞರ ನೀಡಿರುವ ಸಲಹೆ ಇಲ್ಲಿದೆ.

ಇದನ್ನೂ ಓದಿ: ವೈದ್ಯರು ಮೊದಲು ರೋಗಿಯ ನಾಲಿಗೆಯನ್ನು ಪರೀಕ್ಷಿಸುತ್ತಾರೆ ಯಾಕೆ? ಇದರಿಂದ ಏನು ತಿಳಿಯುತ್ತದೆ ಗೊತ್ತಾ?

ಹೃದ್ರೋಗಿಗಳು ತುಪ್ಪ ಮತ್ತು ಬೆಣ್ಣೆಯನ್ನು ತಿನ್ನಬಹುದೇ?

ಹೃದ್ರೋಗಿಗಳು ಮನೆಯಲ್ಲಿ ತಯಾರಿಸಿದ ಬಿಳಿ ಬೆಣ್ಣೆ ಮತ್ತು ತುಪ್ಪವನ್ನು ಕಡಿಮೆ ಪ್ರಮಾಣದಲ್ಲಿ ಸೇವಿಸಬಹುದು. ಚೀಸ್, ಕಾಳುಗಳು ಮತ್ತು ತರಕಾರಿಗಳಂತಹ ಪ್ರೋಟೀನ್-ಭರಿತ ಆಹಾರಗಳನ್ನು ಸೇವಿಸಿ ಹಾಗೂ ಸಕ್ಕರೆ ಮತ್ತು ಹೆಚ್ಚಿನ ಸೋಡಿಯಂನೊಂದಿಗಿನ ಆಹಾರವನ್ನು ಮಿತಿಗೊಳಿಸಿ. ನಿಮ್ಮ ಆಹಾರದಲ್ಲಿ ಸಂಸ್ಕರಿಸಿದ ಕಾರ್ಬೋಹೈಡ್ರೇಟ್‌ಗಳ ಬದಲಿಗೆ ಧಾನ್ಯಗಳನ್ನು ಸೇರಿಸಿ ಎಂದು ಡಾ.ಹಂಸ ಯೋಗೇಂದ್ರ ಹೇಳುತ್ತಾರೆ.

ಇದಲ್ಲದೆ, ಹೆಚ್ಚಿನ ಪ್ರಮಾಣದಲ್ಲಿ ನೀರು ಕುಡಿಯಿರಿ. ಬಾಯಾರಿಕೆ ಆದಾಗ ಮಾತ್ರ ನೀರು ಕುಡಿಯುವ ಅಭ್ಯಾಸ ಇಟ್ಟುಕೊಳ್ಳಬೇಡಿ. ಇದರ ಹೊರತಾಗಿ ಸರಿಯಾದ ಸಮಯಕ್ಕೆ ನಿದ್ದೆ ಹಾಗೂ ಆಹಾರ ಸೇವಿಸುವುದನ್ನು ಮರೆಯದಿರಿ. ಇದಲ್ಲದೇ ಮದ್ಯಪಾನ ತ್ಯಜಿಸುವುದು ಉತ್ತಮ. ರಕ್ತದೊತ್ತಡವನ್ನು ನಿಯಮಿತವಾಗಿ ಪರೀಕ್ಷಿಸಿ.

ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: