
ನಮ್ಮ ಜೀವನಶೈಲಿಯಲ್ಲಿ (Lifestyle) ಹಲವಾರು ರೀತಿಯ ಮಾರ್ಪಾಡುಗಳು ಆಗುತ್ತಿದ್ದಂತೆ ಆರೋಗ್ಯದ ಮೇಲೆ ಒತ್ತಡ ಹೆಚ್ಚಾಗುತ್ತದೆ. ಇದು ನಿಮ್ಮ ಹೃದಯದ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. ಹಾಗಾಗಿ ನಾವು ನಮ್ಮ ಹಾರ್ಟ್ ಅನ್ನು ಹೆಲ್ತಿಯಾಗಿ ಇರಿಸಿಕೊಳ್ಳಲು ಪ್ರಯತ್ನಿಸಬೇಕಾಗುತ್ತದೆ. ನಾವು ಪ್ರತಿನಿತ್ಯ ಮಾಡುವ ವ್ಯಾಯಾಮದ ಜೊತೆಗೆ ಊಟ ತಿಂಡಿ ವಿಚಾರದಲ್ಲೂ ಸ್ವಲ್ಪ ಆರೋಗ್ಯಕರ ಬದಲಾವಣೆಗಳನ್ನು ಮಾಡಿಕೊಳ್ಳಬೇಕಾಗುತ್ತದೆ. ಅದರಲ್ಲಿಯೂ ಬೆಳಗ್ಗಿನ ತಿಂಡಿ (Healthy breakfast) ಚೆನ್ನಾಗಿದ್ದರೆ ನಿಮ್ಮ ಅರ್ಧ ಆರೋಗ್ಯ ಚೆನ್ನಾಗಿರುತ್ತದೆ. ಹಾಗಾಗಿ ತಿಂಡಿ ವಿಷಯದಲ್ಲಿ ಸ್ವಲ್ಪ ಚೂಸಿ ಆಗುವುದು ಒಳ್ಳೆಯದು. ಹಾಗಾದರೆ ಹೃದಯದ ಆರೋಗ್ಯ ಕಾಪಾಡಿಕೊಳ್ಳಲು ಬೆಳಗ್ಗಿನ ಉಪಹಾರದಲ್ಲಿ ಏನಿದ್ದರೆ ಸೂಕ್ತ ಎಂಬುದರ ಮಾಹಿತಿ ಇಲ್ಲಿದೆ. ಇದನ್ನು ನೀವು ಮಕ್ಕಳಿಗೂ ಕೂಡ ನೀಡಬಹುದಾಗಿದೆ.
ಸಾಮಾನ್ಯವಾಗಿ ಇದೊಂದು ಉಪಹಾರವೇ ಎಂದು ಕೆಲವರಿಗೆ ಅನಿಸಬಹುದು. ಆದರೆ ಮೊಳಕೆಕಾಳಿನಲ್ಲಿ ಹೇರಳವಾದ ಪೋಷಕಾಂಶಗಳಿವೆ. ಅಲ್ಲದೆ ಇವು ನಮ್ಮ ಹಾರ್ಟ್ ಗೆ ಬೆಸ್ಟ್ ಆಹಾರ. ಇದು ಕೊಲೆಸ್ಟ್ರಾಲ್ ಅನ್ನು ಕೂಡ ನಿಯಂತ್ರಣದಲ್ಲಿಡುತ್ತದೆ. ಹಾಗಾಗಿ ಪ್ರತಿನಿತ್ಯವೂ ಇವುಗಳ ಸೇವನೆ ಮಾಡಬಹುದು.
ಹಾರ್ಟ್ ಯಾವಾಗಲೂ ಆರೋಗ್ಯವಾಗಿರಬೇಕು ಎಂಬ ಆಸೆ ಇದ್ದರೆ ಬೆಳಗ್ಗಿನ ಉಪಹಾರದಲ್ಲಿ ಓಟ್ಸ್ ಬಳಕೆ ಮಾಡಿ. ಇದರಲ್ಲಿ ಫೈಬರ್ ಅಂಶ ಹೆಚ್ಚಾಗಿದ್ದು ಇದರ ನಿಯಮಿತ ಸೇವನೆಯಿಂದ ನಮ್ಮ ಆರೋಗ್ಯವನ್ನು ಕಾಪಾಡಬಹುದಾಗಿದೆ. ಇವುಗಳನ್ನು ಹಲವಾರು ರೀತಿಯಲ್ಲಿ ಸೇವನೆ ಮಾಡಬಹುದು. ಉಪಮಾ ಅಥವಾ ಇಡ್ಲಿ ಅಥವಾ ಹಣ್ಣುಗಳ ಜೊತೆಗೂ ತಿನ್ನಬಹುದು.
ಗಟ್ಟಿ ಮೊಸರನ್ನು (Curd) ನಿಮ್ಮ ಉಪಹಾರದಲ್ಲಿ ತಿನ್ನಬಹುದು. ಮೊಸರು ಮತ್ತು ಹಣ್ಣು ಈ ಕಾಂಬಿನೇಷನ್ ಹೊಟ್ಟೆ ತುಂಬಿಸುತ್ತದೆ ಜೊತೆಗೆ ನಿಮ್ಮನ್ನು ಹೆಲ್ತಿಯಾಗಿಡುತ್ತದೆ. ಇದು ಹೃದಯಕ್ಕೂ ಎನರ್ಜಿ ತುಂಬುತ್ತದೆ. ಇದರಲ್ಲಿ ಕೊಬ್ಬು ಕಡಿಮೆ ಇರುತ್ತದೆ. ಆಂಟಿ ಆಕ್ಸಿಡೆಂಟ್ ಕೂಡಾ ಹೌದು. ಮೊಸರು ಮತ್ತು ಹಣ್ಣು ಅತ್ಯುತ್ತಮ ಡೆಸರ್ಟ್ ಕೂಡಾ ಹೌದು.
ಮೊಟ್ಟೆಯಲ್ಲಿ ಪ್ರೊಟೀನ್ ಸಾಕಷ್ಟು ಪ್ರಮಾಣದಲ್ಲಿರುತ್ತದೆ. ಇದೊಂದು ರೀತಿಯ ಎನರ್ಜಿ ಬೂಸ್ಟರ್ ಆಗಿ ಕಾರ್ಯನಿರ್ವಹಿಸುತ್ತದೆ. ಹಾಗಾಗಿ ಬ್ರೇಕ್ ಫಾಸ್ಟಿನಲ್ಲಿ ಮೊಟ್ಟೆ ಸೇವನೆ ಮಾಡುವುದು ನಮ್ಮ ದೇಹಕ್ಕೆ ಒಳ್ಳೆಯದು ಇದರಿಂದ ಶಕ್ತಿ ಸಿಗುತ್ತದೆ. ಆದರೆ ಬೆಳಗ್ಗಿನ ಉಪಾಹಾರದಲ್ಲಿ ಮೊಟ್ಟೆಯ ಹಳದಿ ಭಾಗವನ್ನು ತೆಗೆಯಿರಿ. ಕೇವಲ ಬಿಳಿ ಬಣ್ಣದ ಭಾಗವನ್ನು ಮಾತ್ರ ತಿನ್ನಿ.
ಇದನ್ನೂ ಓದಿ: ಹೃದಯಾಘಾತಕ್ಕೆ ಇದುವೇ ಪ್ರಮುಖ ಕಾರಣಗಳು, ಇಲ್ಲಿದೆ ನೋಡಿ
ಹಬೆಯಲ್ಲಿ ಬೆಂದ ಆಹಾರಗಳು ಸಾಮಾನ್ಯವಾಗಿ ಆರೋಗ್ಯಕರವಾಗಿರುತ್ತದೆ. ಅದೇ ರೀತಿ ಇಡ್ಲಿ ಕೂಡ ಆರೋಗ್ಯಕ್ಕೆ ಬಹಳ ಒಳ್ಳೆಯದು. ನೀವು ರವೆ, ಉದ್ದು ಮಾತ್ರವಲ್ಲ ಜೋಳ, ಓಟ್ಸ್, ಗೋಧಿ ಹಿಟ್ಟು, ಇತ್ಯಾದಿಗಳನ್ನು ಸೇರಿಸಿಯೂ ಇಡ್ಲಿ ಮಾಡಬಹುದು. ಬೇಕಾದರೆ ಇಡ್ಲಿಗೆ ನಿಮಗಿಷ್ಟದ ತರಕಾರಿ ಸೇರಿಸಬಹುದು.
ಸೂಚನೆ: ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ. ಇದು ಯಾವುದೇ ರೀತಿಯಲ್ಲಿ ಅರ್ಹ ವೈದ್ಯಕೀಯ ಸಲಹೆಗೆ ಪರ್ಯಾಯವಲ್ಲ. ಹೆಚ್ಚಿನ ಮಾಹಿತಿಗಾಗಿ ಯಾವಾಗಲೂ ತಜ್ಞರನ್ನು ಅಥವಾ ನಿಮ್ಮ ವೈದ್ಯರನ್ನು ಸಂಪರ್ಕಿಸುವುದನ್ನು ಮರೆಯಬೇಡಿ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ