Health Tips: ನಿಮ್ಮ ಹಲ್ಲುಗಳ ಸ್ವಚ್ಛತೆ ಮತ್ತು ಆರೋಗ್ಯಕ್ಕೆ ಈ 7 ಆಹಾರ ಪದಾರ್ಥಗಳನ್ನು ಸೇವಿಸಿ

| Updated By: ganapathi bhat

Updated on: Mar 31, 2022 | 7:12 AM

ಯುರೋಪಿಯನ್ ಜರ್ನಲ್ ಆಫ್ ಪ್ರಿವೆಂಟಿವ್ ಕಾರ್ಡಿಯಾಲಜಿಯಲ್ಲಿ ಪ್ರಕಟವಾದ ಅಧ್ಯಯನವು ಕಳಪೆ ಬಾಯಿಯ ನೈರ್ಮಲ್ಯವು ರಕ್ತದಲ್ಲಿನ ಬ್ಯಾಕ್ಟೀರಿಯಾಗಳಿಗೆ ಕಾರಣವಾಗುತ್ತದೆ ಮತ್ತು ದೇಹದಲ್ಲಿ ಉರಿಯೂತವನ್ನು ಉಂಟುಮಾಡುತ್ತದೆ ಎಂದು ಸೂಚಿಸಿದೆ.

Health Tips: ನಿಮ್ಮ ಹಲ್ಲುಗಳ ಸ್ವಚ್ಛತೆ ಮತ್ತು ಆರೋಗ್ಯಕ್ಕೆ ಈ 7 ಆಹಾರ ಪದಾರ್ಥಗಳನ್ನು ಸೇವಿಸಿ
ಸಾಂಕೇತಿಕ ಚಿತ್ರ
Follow us on

ಬಾಯಿಯ ಆರೋಗ್ಯವನ್ನು ಹೆಚ್ಚಾಗಿ ಲಘುವಾಗಿ ಪರಿಗಣಿಸಲಾಗುತ್ತದೆ. ಆದರೆ ಬಾಯಿಯ, ಹಲ್ಲಿನ ಸಮಸ್ಯೆಗಳನ್ನು ತಡೆಗಟ್ಟಲು ನಮ್ಮ ಬಾಯಿ, ಹಲ್ಲು ಮತ್ತು ಒಸಡುಗಳನ್ನು ಸ್ವಚ್ಛವಾಗಿ ಮತ್ತು ಆರೋಗ್ಯಕರವಾಗಿ ಇಟ್ಟುಕೊಳ್ಳುವ ಅಭ್ಯಾಸವು ಅತ್ಯಗತ್ಯ. ಇದು ನಮ್ಮ ದೈನಂದಿನ ಜೀವನದ ಅವಿಭಾಜ್ಯ ಅಂಗವಾಗಿದೆ ಏಕೆಂದರೆ ದೀರ್ಘಕಾಲದವರೆಗೆ ಹಲ್ಲಿನ ನೈರ್ಮಲ್ಯವನ್ನು ನಿರ್ಲಕ್ಷಿಸುವುದು ಅಂತಿಮವಾಗಿ ನಮ್ಮ ಒಟ್ಟಾರೆ ಆರೋಗ್ಯದ ಮೇಲೆ ಪರಿಣಾಮ ಬೀರಲು ಪ್ರಾರಂಭಿಸುತ್ತದೆ. ಕಳಪೆ ಬಾಯಿಯ ನೈರ್ಮಲ್ಯವು ಹಲ್ಲು ಹುಳುಕಾಗುವುದು, ಹಲ್ಲಿನ ಸವೆತ ಮತ್ತು ಒಸಡುಗಳ ಉರಿಯೂತಕ್ಕೆ ಕಾರಣವಾಗುತ್ತದೆ. ಯುರೋಪಿಯನ್ ಜರ್ನಲ್ ಆಫ್ ಪ್ರಿವೆಂಟಿವ್ ಕಾರ್ಡಿಯಾಲಜಿಯಲ್ಲಿ ಪ್ರಕಟವಾದ ಅಧ್ಯಯನವು ಕಳಪೆ ಬಾಯಿಯ ನೈರ್ಮಲ್ಯವು ರಕ್ತದಲ್ಲಿನ ಬ್ಯಾಕ್ಟೀರಿಯಾಗಳಿಗೆ ಕಾರಣವಾಗುತ್ತದೆ ಮತ್ತು ದೇಹದಲ್ಲಿ ಉರಿಯೂತವನ್ನು ಉಂಟುಮಾಡುತ್ತದೆ ಎಂದು ಸೂಚಿಸಿದೆ.

ಹಲ್ಲಿನ ಆರೋಗ್ಯವು ಕಾಳಜಿಯ ವಿಷಯವಾಗಿರುವುದರಿಂದ, ಆರೋಗ್ಯಕರ ಹಲ್ಲುಗಳು ಮತ್ತು ಒಸಡುಗಳಿಗಾಗಿ ಒಬ್ಬರ ಆಹಾರದಲ್ಲಿ ಸೇರಿಸಬೇಕಾದ ಕೆಲವು ಆಹಾರ ಪದಾರ್ಥಗಳ ಮೇಲೆ ಬೆಳಕು ಚೆಲ್ಲಲು ಇಲ್ಲಿ ಪ್ರಯತ್ನಸಿದ್ದೇವೆ. ಹಲ್ಲಿನ ಆರೋಗ್ಯಕ್ಕೆ ಯಾವ ಆಹಾರಗಳ ಸೇವನೆ ಉತ್ತಮ ಎಂದು ಇಲ್ಲಿ ತಿಳಿಸಲಾಗಿದೆ.

ಮೊಸರು: ಕ್ಯಾಲ್ಸಿಯಂ ಮತ್ತು ಪ್ರೋಟೀನ್‌ನಲ್ಲಿ ಮೊಸರು ಅಧಿಕವಾಗಿದೆ. ಇದು ನಿಮ್ಮ ಹಲ್ಲು ಮತ್ತು ಒಸಡುಗಳ ಶಕ್ತಿ ಮತ್ತು ಆರೋಗ್ಯಕ್ಕೆ ಸೂಕ್ತವಾದ ಆಯ್ಕೆಯಾಗಿದೆ. ಮೊಸರಿನಲ್ಲಿ ಕಂಡುಬರುವ ಪ್ರೋಬಯಾಟಿಕ್‌ಗಳು ನಿಮ್ಮ ಒಸಡುಗಳಿಗೆ ಪ್ರಯೋಜನವನ್ನು ನೀಡುತ್ತದೆ. ಏಕೆಂದರೆ ದೇಹಕ್ಕೆ ಉತ್ತಮ ಬ್ಯಾಕ್ಟೀರಿಯಾಗಳು ಹಲ್ಲು ಹುಳುಕಿಗೆ ಕಾರಣವಾಗುವ ಬ್ಯಾಕ್ಟೀರಿಯಾವನ್ನು ಹಿಮ್ಮೆಟ್ಟಿಸುತ್ತದೆ. ನಿಮ್ಮ ಆಹಾರದಲ್ಲಿ ಮೊಸರು ಸೇರಿಸಲು ನೀವು ಬಯಸಿದರೆ ಉತ್ತಮ. ಅದರಲ್ಲೂ ಸಕ್ಕರೆ ಇಲ್ಲದ ಸರಳ ವಿಧದ ಮೊಸರು ಆರಿಸಿ.

ಹಸಿರು ತರಕಾರಿಗಳು: ಆರೋಗ್ಯಕರ ಜೀವನ ಮತ್ತು ಆರೋಗ್ಯಕರ ಹಲ್ಲುಗಳಿಗೆ ಹಸಿರು ಸೊಪ್ಪು, ತರಕಾರಿಗಳು ಉತ್ತಮ ಆಹಾರ ಪದಾರ್ಥಗಳಾಗಿವೆ. ಏಕೆಂದರೆ ಅವುಗಳು ವಿಟಮಿನ್​ಗಳು ಮತ್ತು ಖನಿಜಗಳಲ್ಲಿ ಸಮೃದ್ಧವಾಗಿವೆ ಮತ್ತು ಕಡಿಮೆ ಕ್ಯಾಲೋರಿಗಳನ್ನು ಹೊಂದಿರುತ್ತವೆ. ಎಲೆಕೋಸು ಮತ್ತು ಪಾಲಕ್ ಸೊಪ್ಪು ನಮ್ಮ ಬಾಯಿಯ ಆರೋಗ್ಯವನ್ನು ಹೆಚ್ಚಿಸುತ್ತದೆ. ಇದು ಹಲ್ಲುಗಳ ಮೇಲೆ ದಂತಕವಚವನ್ನು ನಿರ್ಮಿಸಲು ಸಹಾಯ ಮಾಡುತ್ತದೆ. ಅವುಗಳು ಫೋಲಿಕ್ ಆಮ್ಲವನ್ನು ಒಳಗೊಂಡಿರುತ್ತವೆ. ಇದು ಒಂದು ರೀತಿಯ ಬಿ ವಿಟಮಿನ್ ಆಗಿದ್ದು ಅದು ಅಗಾಧವಾದ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ.

ಸೇಬು: ಸೇಬಿನಂತಹ ಹಣ್ಣುಗಳಲ್ಲಿ ಫೈಬರ್ ಮತ್ತು ನೀರಿನ ಅಂಶದಲ್ಲಿ ಹೆಚ್ಚಿನ ಪ್ರಮಾಣದಲ್ಲಿರುತ್ತವೆ. ಸೇಬನ್ನು ತಿನ್ನುವುದರಿಂದ ನಿಮ್ಮ ಬಾಯಿಯಲ್ಲಿ ಲಾಲಾರಸ ಉತ್ಪತ್ತಿಯಾಗುತ್ತದೆ. ಇದು ಅನಗತ್ಯವಾದ ಬ್ಯಾಕ್ಟೀರಿಯಾ ಮತ್ತು ಆಹಾರದ ಕಣಗಳನ್ನು ತೊಳೆಯುತ್ತದೆ. ಸೇಬುಗಳ ನಾರಿನ ಅಂಶ ಕೂಡ ಒಸಡುಗಳನ್ನು ಉತ್ತೇಜಿಸುತ್ತದೆ.

ಮಾಂಸಗಳು: ಇವು ಕೆಲವು ಪೋಷಕಾಂಶಗಳನ್ನು ನೀಡುತ್ತವೆ ಮತ್ತು ಮಾಂಸವನ್ನು ಅಗಿಯುವುದು ಲಾಲಾರಸವನ್ನು ಉತ್ಪತ್ತಿ ಮಾಡುತ್ತದೆ. ಮತ್ತು ಹೆಚ್ಚು ಲಾಲಾರಸವು ಬಾಯಿಗೆ ಒಳ್ಳೆಯದು. ಹಲ್ಲಿನ ಕೊಳೆತಕ್ಕೆ ಕಾರಣವಾಗುವ ಆಹಾರದ ಕಣಗಳನ್ನು ತೊಳೆಯುತ್ತದೆ. ಕೆಂಪು ಮಾಂಸ ಮತ್ತು ಆರ್ಗನ್ ಮಾಂಸಗಳು ಈ ಉದ್ದೇಶಕ್ಕಾಗಿ ವಿಶೇಷವಾಗಿ ಸಹಾಯಕವಾಗಿವೆ. ಕೊಬ್ಬಿನ ಮೀನು (ಸಾಲ್ಮನ್ ನಂತಹ) ಇವು ಹಲ್ಲಿನ ದಂತಕವಚವನ್ನು ರಕ್ಷಿಸಲು ಪ್ರಮುಖ ಆಹಾರವಾಗಿದೆ.

ಡಾರ್ಕ್ ಚಾಕೊಲೇಟ್: ಹೌದು, ಇದು ನಿಜವೇ ಆಗಿದೆ. ಚಾಕೊಲೇಟ್! ಇದು ಮಿತವಾಗಿ ತಿನ್ನುವವರೆಗೆ ಮಾತ್ರ. CBH ಎಂಬ ಸಂಯುಕ್ತದಿಂದಾಗಿ ಡಾರ್ಕ್ ಚಾಕೊಲೇಟ್ ಹಲ್ಲುಗಳಿಗೆ ಸೂಪರ್‌ಫುಡ್ ಆಗಿದೆ. ಇದು ಹಲ್ಲಿನ ದಂತಕವಚವನ್ನು ಗಟ್ಟಿಯಾಗಿಸಲು ಸಹಾಯ ಮಾಡುತ್ತದೆ. ಇದು ನಿಮ್ಮ ಹಲ್ಲುಗಳ ಹುಳುಕು ಕಡಿಮೆ ಆಗುವಂತೆ ಮಾಡುತ್ತದೆ. ಅದಾಗ್ಯೂ, ಪ್ರತಿಯೊಂದು ರೀತಿಯ ಚಾಕೊಲೇಟ್ ನಿಮಗೆ ಒಳ್ಳೆಯದಲ್ಲ.

ಹಸಿರು ಮತ್ತು ಕಪ್ಪು ಚಹಾ: ಈ ಚಹಾ ಪಾಲಿಫಿನಾಲ್‌ಗಳನ್ನು ಒಳಗೊಂಡಿರುತ್ತದೆ. ಅದು ಪ್ಲೇಕ್ ಬ್ಯಾಕ್ಟೀರಿಯಾದೊಂದಿಗೆ ಹೋರಾಟ ನಡೆಸುತ್ತದೆ. ಈ ವಸ್ತುಗಳು ಬ್ಯಾಕ್ಟೀರಿಯಾವನ್ನು ಕೊಲ್ಲುತ್ತವೆ ಅಥವಾ ಬೆಳೆಯದಂತೆ ಹಿಡಿದಿಟ್ಟುಕೊಳ್ಳುತ್ತವೆ. ಅಲ್ಲದೆ, ಸಕ್ಕರೆಯಿಲ್ಲದ ಚೂಯಿಂಗ್ ಗಮ್ ಕೂಡ ಒಸಡುಗಳನ್ನು ಶುಚಿಗೊಳಿಸುವ ಮತ್ತೊಂದು ಉತ್ತಮ ಆಯ್ಕೆ ಆಗಿರಬಹುದು.

ಇದನ್ನೂ ಓದಿ: Beauty Tips: ಕಿತ್ತಳೆ ಸಿಪ್ಪೆಯಿಂದ ಈ ವಿಶೇಷ ಫೇಸ್ ಪ್ಯಾಕ್ ಮಾಡಿ; ಮುಖದ ಕಾಂತಿ ಹೆಚ್ಚಿಸಿಕೊಳ್ಳಿ!

ಇದನ್ನೂ ಓದಿ: Health Tips: ಡಯಟ್​ನಲ್ಲಿ ಬಸಳೆ ಸೊಪ್ಪು ಬಳಸುವುದರಿಂದ ಏನೆಲ್ಲ ಉಪಯೋಗವಿದೆ ಗೊತ್ತಾ?