Health Tips: ಉಗುರುಗಳ ಪೋಷಣೆಗಾಗಿ ಇಲ್ಲಿದೆ ಕೆಲವೊಂದು ಸಲಹೆಗಳು
ಅನೇಕ ಅಂಶಗಳು ನಮ್ಮ ಉಗುರುಗಳು ಬೆಳೆಯದಂತೆ ತಡೆಯುತ್ತವೆ. ಈ ಕೆಳಗಿನ ಉಗುರು ಆರೈಕೆ ಸಲಹೆಗಳನ್ನು ನಿಮ್ಮ ದಿನಚರಿಯಲ್ಲಿ ಸೇರಿಸುವ ಮೂಲಕ ನಿಮ್ಮ ಉಗುರುಗಳನ್ನು ಆರೋಗ್ಯಕರವಾಗಿ ಪೋಷಿಸಬಹುದು.
Updated on: Jun 06, 2022 | 7:00 AM

Here are some tips for nail care

Here are some tips for nail care

ನಿಮ್ಮ ಉಗುರುಗಳನ್ನು ಬಲಪಡಿಸುವ ಇನ್ನೊಂದು ವಿಧಾನವೆಂದರೆ ಆರೋಗ್ಯಕರ ಆಹಾರವನ್ನು ಸೇವಿಸುವುದು. ಒಮೆಗಾ-3 ನಿಮ್ಮ ಉಗುರುಗಳ ಜೀವಕೋಶಗಳನ್ನು ಪೋಷಿಸುವ ಮೂಲಕ ನೈಸರ್ಗಿಕ ಉಗುರು ಬಲವರ್ಧಕವಾಗಿ ಕಾರ್ಯನಿರ್ವಹಿಸುತ್ತದೆ.

ನಿಮ್ಮ ದೈನಂದಿನ ಆಹಾರದಲ್ಲಿ ಒಮೆಗಾ -3 ಕೊಬ್ಬಿನಾಮ್ಲಗಳನ್ನು ಸೇರಿಸುವುದರ ಜೊತೆಗೆ, ಆರೋಗ್ಯಕರ ಉಗುರುಗಳಿಗಾಗಿ ಬಯೋಟಿನ್ ಸೇವನೆಯನ್ನು ಹೆಚ್ಚಿಸಬೇಕು. ಬಯೋಟಿನ್ ಅತ್ಯಗತ್ಯ ಬಿ ವಿಟಮಿನ್ ಆಗಿದ್ದು ಅದು ಉಗುರು ಗಡಸುತನ ಮತ್ತು ದಪ್ಪಕ್ಕೆ ಸಹಾಯ ಮಾಡುತ್ತದೆ.

ಅನೇಕ ಮಹಿಳೆಯರು ಕಡಿಮೆ ಗುಣಮಟ್ಟದ ನೇಲ್ ಕೇರ್ ಉತ್ಪನ್ನಗಳನ್ನು ಬಳಸುತ್ತಾರೆ. ಇದು ನಿಮ್ಮ ಉಗುರುಗಳ ಆರೋಗ್ಯಕ್ಕೆ ಹಾನಿಯಾಗಬಹುದು. ಯಾವಾಗಲೂ ಉತ್ತಮ ಗುಣಮಟ್ಟದ ಉಗುರು ಆರೈಕೆ ಉತ್ಪನ್ನಗಳನ್ನು ಬಳಸಿ. ಅಸಿಟೋನ್ ಮುಕ್ತ ಬಣ್ಣವನ್ನು ಬಳಸಿ.

ಹ್ಯಾಂಡ್ ಸ್ಯಾನಿಟೈಸರ್‌ಗಳನ್ನು ಹೆಚ್ಚು ಬಳಸಬೇಡಿ. ಏಕೆಂದರೆ ಅವುಗಳಲ್ಲಿ ಹೆಚ್ಚಿನವು ನಿಮ್ಮ ಉಗುರುಗಳಿಗೆ ಹಾನಿ ಉಂಟುಮಾಡುವ ಆಲ್ಕೋಹಾಲ್ ಅನ್ನು ಹೊಂದಿರುತ್ತವೆ. ನಿಮ್ಮ ಉಗುರುಗಳನ್ನು ನಿಯಮಿತವಾಗಿ ಟ್ರಿಮ್ ಮಾಡಿ. ಅವುಗಳನ್ನು ಚಿಕ್ಕದಾಗಿ, ಫೈಲ್ ಮಾಡಿ ಮತ್ತು ಬಫರ್ ಮಾಡಿ. ಆದರೆ ಹೆಚ್ಚು ಬಫರ್ ಮಾಡಬೇಡಿ. ಕೈಗಳ್ಳನ್ನು ತೊಳೆಯುವಾಗ ಉಗುರುಗಳನ್ನು ಸರಿಯಾಗಿ ತೊಳೆಯಿರಿ.




