ಸಕ್ಕರೆ ಕಾಯಿಲೆ ಬಂತೆಂದರೆ ಸಾಕು ಸಿಹಿ ತಿಂಡಿಗಳಿಂದ ದೂರವಿರಬೇಕಾದುದು ಅನಿವಾರ್ಯ. ಇದಕ್ಕೆ ಪರಿಹಾರವಾಗಿ ಇಲ್ಲಿದೆ ಆರೋಗ್ಯಕರ ಕೇಕ್ . ಸುಲಭವಾಗಿ ಮನೆಯಲ್ಲೇ ಈ ರೆಸಿಪಿಯನ್ನೊಮ್ಮೆ ಟ್ರೈ ಮಾಡಿ. ಮಕ್ಕಳಿಗೆ , ವಿಶೇಷವಾಗಿ ಸಕ್ಕರೆ ಕಾಯಿಲೆಯಿಂದ ಬಳಲುತ್ತಿದ್ದು , ಸಿಹಿ ತಿಂಡಿಗಳಿಂದ ದೂರವಿರುವವರಿಗೆ ಮಾಡಿ ಕೊಡಿ.
ಪ್ರತಿಯೊಬ್ಬರೂ ಸಿಹಿತಿಂಡಿಗಳನ್ನು ಇಷ್ಟಪಡುವುದು ಸಹಜ. ಹಾಗಾಗಿ ಸಕ್ಕರೆ ಕಾಯಿಲೆ ಇರುವವರು ಮತ್ತು ಸಿಹಿ ತಿನ್ನುವ ಉತ್ಸಾಹವನ್ನು ನಿಯಂತ್ರಿಸಲು ಸಾಧ್ಯವಾಗದವರಿಗೆ ವಿಶೇಷವಾಗಿ ಈ ಕೇಕ್ ರೆಸಿಪಿಯನ್ನು ತಿಳಿಸಲಾಗಿದೆ. ಹೌದು ಇದು ರಾಗಿ ಚಾಕೊಲೇಟ್ ಕೇಕ್. ಇದರ ಪಾಕವಿಧಾನ ಇಲ್ಲಿದೆ, ಇದನ್ನು ಡಯಾಬಿಟಿಕ್ ಕೇಕ್ ಎಂದು ಕೂಡ ಕರೆಯಬಹುದು. ಯಾಕೆಂದರೆ ಇದನ್ನು ಅವರಿಗಾಗಿ ವಿಶೇಷವಾಗಿ ತಯಾರಿಸಲಾಗಿದೆ. ಆದ್ದರಿಂದ ಈ ಪಾಕವಿಧಾನವನ್ನು ಒಮ್ಮೆ ಪ್ರಯತ್ನಿಸಿ.
ಬೇಕಾಗುವ ಸಾಮಾಗ್ರಿಗಳು:
ಮೊಸರು-1/2 ಕಪ್
ಅಡಿಗೆ ಸೋಡಾ-1 ಟೀಚಮಚ
ಬೇಕಿಂಗ್ ಪೌಡರ್-1 ಟೀಚಮಚ
ಉಪ್ಪು- 1 ಚಿಟಿಕೆ
ವೆನಿಲ್ಲಾ ಎಸೆನ್ಸ್ -1 ಚಮಚ
ಕೋಕೋ ಪೌಡರ್- 1 ಚಮಚ
ರಾಗಿ ಹಿಟ್ಟು -1 1/2 ಕಪ್
ನೀರು – 3/4 ಕಪ್
ಬೆಣ್ಣೆ- 1 ಚಮಚ
ಮಾಡುವ ವಿಧಾನ:
ಈ ಕೇಕ್ ಮಾಡಲು, ಗಾಜಿನ ಬೌಲ್ ಅನ್ನು ತೆಗೆದುಕೊಂಡು ಮೊಸರು ಬೇಕಿಂಗ್ ಪೌಡರ್, ಬೇಕಿಂಗ್ ಸೋಡಾ, ಸ್ಟೀವಿಯಾ, ಉಪ್ಪು, ವೆನಿಲ್ಲಾ ಎಸೆನ್ಸ್ ಅನ್ನು ಮಿಶ್ರಣ ಮಾಡಿ. ಒಮ್ಮೆ ಮಾಡಿದ ನಂತರ, 10 ನಿಮಿಷಗಳ ಕಾಲ ಪಕ್ಕಕ್ಕೆ ಇರಿಸಿ.
ಮೊಸರು ಬೆರೆಸಿದ 10 ನಿಮಿಷಗಳ ನಂತರ, ರಾಗಿ ಹಿಟ್ಟು ಮತ್ತು ಎಣ್ಣೆಯೊಂದಿಗೆ ಕೋಕೋ ಪೌಡರ್ ಸೇರಿಸಿ ಸರಿಯಾಗಿ ಗಂಟಾಗದಂತೆ ಮಿಶ್ರಣ ಮಾಡಿ. ಸ್ವಲ್ಪ ನೀರು ಸೇರಿಸಿ ಮತ್ತು ಕೇಕ್ ಹಿಟ್ಟನ್ನು ತಯಾರಿಸಿ.
ಕೇಕ್ ಟಿನ್ ತೆಗೆದುಕೊಂಡು ಅದಕ್ಕೆ ಬೆಣ್ಣೆಯನ್ನು ಹಚ್ಚಿ. ನಂತರ ಅದಕ್ಕೆ ತಯಾರಿಸಿ ಕೇಕ್ ಹಿಟ್ಟನ್ನು ಹಾಕಿ. ನಂತರ ಓವನ್ ನಲ್ಲಿ 180 ಡಿಗ್ರಿ ಸೆಲ್ಸಿಯಸ್ನಲ್ಲಿ 30-40 ನಿಮಿಷಗಳ ಕಾಲ ಇಡಿ. 40 ನಿಮಿಷಗಳ ನಂತರ ಓವನ್‌ನಿಂದ ಕೇಕ್ ಅನ್ನು ತೆಗೆಯುವ ಮೊದಲು ಟೂತ್‌ಪಿಕ್ ಒಮ್ಮೆ ಪರೀಕ್ಷಿಸಿ ನೋಡಿ. ನಂತರ ಒಣ ದ್ರಾಕ್ಷಿ, ಗೋಡಂಬಿ ಬೀಜಗಳಿಂದ ಅಲಂಕರಿಸಿ.
ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: