ನಿಮ್ಮ ಚರ್ಮ ಮತ್ತು ಕೂದಲು ಡ್ಯಾಮೇಜ್ ಆಗುವುದಕ್ಕೆ ಹೈ ಬ್ಲಡ್ ಶುಗರ್ ಕಾರಣವೇ?

ಇತ್ತೀಚಿನ ದಿನಗಳಲ್ಲಿ ಅನೇಕರು ಹೈ ಬ್ಲಡ್ ಶುಗರ್ ಮತ್ತು ಮಧುಮೇಹ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇದರ ಪರಿಣಾಮ ದೇಹದ ಹಲವು ಭಾಗಗಳ ಮೇಲೆ ಕಂಡುಬರಬಹುದು. ಅಷ್ಟೇ ಅಲ್ಲ, ಹೆಚ್ಚಿದ ರಕ್ತದ ಸಕ್ಕರೆ ಮಟ್ಟವು ಚರ್ಮ ಮತ್ತು ಕೂದಲಿನ ಆರೋಗ್ಯದ ಮೇಲೂ ಪರಿಣಾಮ ಬೀರಬಹುದು ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಹಾಗಾದರೆ ಹೈ ಬ್ಲಡ್ ಶುಗರ್ ಚರ್ಮ ಮತ್ತು ಕೂದಲಿನ ಮೇಲೆ ಹೇಗೆ ಪರಿಣಾಮ ಬೀರುತ್ತದೆ, ಯಾವ ರೀತಿಯ ಲಕ್ಷಣ ಕಂಡು ಬಂದಾಗ ಪರೀಕ್ಷೆ ಮಾಡಿಸಬೇಕು, ಶುಗರ್ ಸಮಸ್ಯೆಯನ್ನು ಹೇಗೆ ತಡೆಗಟ್ಟಬೇಕು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ನಿಮ್ಮ ಚರ್ಮ ಮತ್ತು ಕೂದಲು ಡ್ಯಾಮೇಜ್ ಆಗುವುದಕ್ಕೆ ಹೈ ಬ್ಲಡ್ ಶುಗರ್ ಕಾರಣವೇ?
High Blood Sugar
Image Credit source: Getty Images

Updated on: Jun 02, 2026 | 5:57 PM

ಇತ್ತೀಚಿನ ದಿನಗಳಲ್ಲಿ ಮಧುಮೇಹ (ಡಯಾಬಿಟಿಸ್) ಮತ್ತು ಹೈ ಬ್ಲಡ್ ಶುಗರ್ (High Blood Sugar) ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಸಾಮಾನ್ಯವಾಗಿ ಜನರು ಇದರ ಪರಿಣಾಮ ಹೃದಯ, ಮೂತ್ರಪಿಂಡ ಮತ್ತು ಕಣ್ಣುಗಳ ಆರೋಗ್ಯದ ಮೇಲಾಗುತ್ತದೆ ಎಂದು ಭಾವಿಸಿರುತ್ತಾರೆ. ಆದರೆ ಹೆಚ್ಚಿದ ರಕ್ತದ ಸಕ್ಕರೆ ಮಟ್ಟವು ಚರ್ಮ ಮತ್ತು ಕೂದಲಿನ ಆರೋಗ್ಯದ ಮೇಲೂ ಪರಿಣಾಮ ಬೀರಬಹುದು ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಹೌದು, ಇವೆಲ್ಲಾ ಕೇಳುವುದಕ್ಕೆ ಆಶ್ಚರ್ಯವಾಗುತ್ತದೆ ಆದರೆ ಇದು ಸತ್ಯ. ಹಾಗಾಗಿ ಹೈ ಬ್ಲಡ್ ಶುಗರ್ ಚರ್ಮ ಮತ್ತು ಕೂದಲಿನ ಮೇಲೆ ಹೇಗೆ ಪರಿಣಾಮ ಬೀರುತ್ತದೆ, ಯಾವ ರೀತಿಯ ಲಕ್ಷಣ ಕಂಡು ಬಂದಾಗ ಪರೀಕ್ಷೆ ಮಾಡಿಸಬೇಕು, ಹೈ ಬ್ಲಡ್ ಶುಗರ್ ಸಮಸ್ಯೆಯನ್ನು ಹೇಗೆ ತಡೆಗಟ್ಟಬೇಕು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಚರ್ಮ ಮತ್ತು ಕೂದಲಿನ ಮೇಲೆ ಹೇಗೆ ಪರಿಣಾಮ ಬೀರುತ್ತದೆ?

ಅಮೆರಿಕನ್ ಡಯಾಬಿಟಿಸ್ ಅಸೋಸಿಯೇಷನ್ ಪ್ರಕಾರ, ದೀರ್ಘಕಾಲದವರೆಗೆ ರಕ್ತದಲ್ಲಿನ ಸಕ್ಕರೆ ಮಟ್ಟ ಹೆಚ್ಚಾಗಿದ್ದರೆ ದೇಹದ ರಕ್ತಸಂಚಾರ ವ್ಯವಸ್ಥೆಯ ಮೇಲೆ ಪರಿಣಾಮ ಉಂಟಾಗುತ್ತದೆ. ಇದರ ಪರಿಣಾಮವಾಗಿ ಚರ್ಮದ ಕೋಶಗಳಿಗೆ ಅಗತ್ಯವಾದ ಪೋಷಕಾಂಶಗಳು ಸರಿಯಾಗಿ ತಲುಪುವುದಿಲ್ಲ. ಇದರಿಂದ ಚರ್ಮ ಒಣಗುವುದು, ತುರಿಕೆ, ಸೋಂಕುಗಳು ಹೆಚ್ಚಾಗುವುದು ಮತ್ತು ಗಾಯಗಳು ನಿಧಾನವಾಗಿ ಗುಣವಾಗುವಂತಹ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಕೆಲವು ಸಂದರ್ಭಗಳಲ್ಲಿ ಚರ್ಮದ ಬಣ್ಣದಲ್ಲಿಯೂ ಬದಲಾವಣೆ ಕಂಡುಬರಬಹುದು. ಇದೇ ರೀತಿ, ಕೂದಲಿನ ಬೇರುಗಳಿಗೆ ಸರಿಯಾದ ಪೋಷಣೆ ದೊರೆಯದಿದ್ದರೆ ಕೂದಲು ದುರ್ಬಲವಾಗಿ ಉದುರುವ ಸಮಸ್ಯೆ ಹೆಚ್ಚಾಗಬಹುದು. ಕೂದಲಿನ ಬೆಳವಣಿಗೆ ನಿಧಾನವಾಗುವುದೂ ಕೂಡ ಕಂಡುಬರಬಹುದು.

ಯಾವ ಲಕ್ಷಣಗಳು ಕಂಡುಬಂದರೆ ಪರೀಕ್ಷೆ ಮಾಡಿಸಬೇಕು?

  • ಪದೇ ಪದೇ ದಾಹವಾಗುವುದು
  • ಆಗಾಗ ಮೂತ್ರ ವಿಸರ್ಜನೆ
  • ಕಾರಣವಿಲ್ಲದೆ ತೂಕ ಕಡಿಮೆಯಾಗುವುದು
  • ಅತಿಯಾದ ಆಯಾಸ
  • ದೃಷ್ಟಿ ಮಸುಕಾಗುವುದು
  • ಚರ್ಮದಲ್ಲಿ ಪದೇ ಪದೇ ಸೋಂಕು ಕಾಣಿಸಿಕೊಳ್ಳುವುದು
  • ಗಾಯಗಳು ನಿಧಾನವಾಗಿ ಗುಣವಾಗುವುದು
  • ಅತಿಯಾಗಿ ಕೂದಲು ಉದುರುವುದು

ಇದನ್ನೂ ಓದಿ: ರಾತ್ರಿ ಮಲಗುವ 3 ಗಂಟೆ ಮುಂಚಿತವಾಗಿ ಊಟ ಮಾಡಿ; ಈ ರೋಗ ಬೇಕು ಅಂದ್ರು ಬರುವುದಿಲ್ಲ!

ಚರ್ಮ ಮತ್ತು ಕೂದಲನ್ನು ಆರೋಗ್ಯಕರವಾಗಿ ಕಾಪಾಡಿಕೊಳ್ಳಲು ಏನು ಮಾಡಬೇಕು?

  • ಸಮತೋಲಿತ ಆಹಾರ ಸೇವಿಸಿ
  • ಸಿಹಿ ಮತ್ತು ಹೆಚ್ಚು ಸಂಸ್ಕರಿತ ಆಹಾರಗಳ ಸೇವನೆಯನ್ನು ಕಡಿಮೆ ಮಾಡಿ
  • ನಿಯಮಿತವಾಗಿ ವ್ಯಾಯಾಮ ಮಾಡಿ
  • ಸಾಕಷ್ಟು ನೀರು ಕುಡಿಯಿರಿ
  • ಉತ್ತಮ ನಿದ್ರೆ ಪಡೆಯಿರಿ
  • ಒತ್ತಡವನ್ನು ನಿಯಂತ್ರಿಸಿ
  • ವೈದ್ಯರ ಸಲಹೆಯಂತೆ ಔಷಧಿಗಳನ್ನು ತೆಗೆದುಕೊಳ್ಳಿ

ಹೆಚ್ಚಿದ ರಕ್ತದ ಸಕ್ಕರೆ ಮಟ್ಟವು ಕೇವಲ ಆಂತರಿಕ ಅಂಗಗಳಿಗಷ್ಟೇ ಅಲ್ಲ, ಚರ್ಮ ಮತ್ತು ಕೂದಲಿನ ಆರೋಗ್ಯಕ್ಕೂ ಹಾನಿ ಉಂಟುಮಾಡಬಹುದು. ಆದ್ದರಿಂದ ಮಧುಮೇಹ ಇರುವವರು ರಕ್ತದ ಸಕ್ಕರೆ ಮಟ್ಟವನ್ನು ನಿಯಮಿತವಾಗಿ ಪರಿಶೀಲಿಸಿಕೊಳ್ಳುವುದು ಮತ್ತು ಆರೋಗ್ಯಕರ ಜೀವನಶೈಲಿಯನ್ನು ಅನುಸರಿಸುವುದು ಅತ್ಯಗತ್ಯ. ಸಮಯಕ್ಕೆ ಸರಿಯಾದ ಆರೈಕೆ ಚರ್ಮ ಮತ್ತು ಕೂದಲಿನ ಸಮಸ್ಯೆಗಳ ಅಪಾಯವನ್ನು ಕಡಿಮೆ ಮಾಡಬಹುದು.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us