Long Covid: ಶುದ್ಧ ಆಮ್ಲಜನಕವು ದೀರ್ಘಕಾಲದ ಕೋವಿಡ್​ ಅನ್ನು ಗುಣಪಡಿಸಬಲ್ಲದು

ಗಾಳಿಯ ಒತ್ತಡ ಹೆಚ್ಚಿರುವ ಪ್ರದೇಶದಲ್ಲಿ ಶುದ್ಧ ಆಮ್ಲಜನಕವನ್ನು ಉಸಿರಾಡಿದಾಗ ದೀರ್ಘಕಾಲದ ಕೋವಿಡ್​ನಿಂದ ಬಳಲುತ್ತಿರುವವರಲ್ಲಿ ಚೇತರಿಕೆ ಕಂಡುಬಂದಿರುವುದು ಅಧ್ಯಯನವೊಂದರಲ್ಲಿ ತಿಳಿದುಬಂದಿದೆ.

Long Covid: ಶುದ್ಧ ಆಮ್ಲಜನಕವು ದೀರ್ಘಕಾಲದ ಕೋವಿಡ್​ ಅನ್ನು ಗುಣಪಡಿಸಬಲ್ಲದು
Covid 19
Follow us
TV9 Web
| Updated By: ನಯನಾ ರಾಜೀವ್

Updated on: Jul 15, 2022 | 10:54 AM

ಗಾಳಿಯ ಒತ್ತಡ ಹೆಚ್ಚಿರುವ ಪ್ರದೇಶದಲ್ಲಿ ಶುದ್ಧ ಆಮ್ಲಜನಕವನ್ನು ಉಸಿರಾಡಿದಾಗ ದೀರ್ಘಕಾಲದ ಕೋವಿಡ್​ನಿಂದ ಬಳಲುತ್ತಿರುವವರಲ್ಲಿ ಚೇತರಿಕೆ ಕಂಡುಬಂದಿರುವುದು ಅಧ್ಯಯನವೊಂದರಲ್ಲಿ ತಿಳಿದುಬಂದಿದೆ. ಕಳೆದ 3 ತಿಂಗಳುಗಳಿಂದ ಕೊರೊನಾ ಲಕ್ಷಣಗಳಿರುವ ಹೈಪರ್ಬೇರಿಕ್ ಆಕ್ಸಿಜನ್ ಥೆರಪಿ (HBOT)ಯನ್ನು 73 ಮಂದಿ ಕೋವಿಡ್ ರೋಗಿಗಳಿಗೆ ನೀಡಲಾಗಿತ್ತು, ಗಾಳಿ ಒತ್ತಡವು 2-3 ಪಟ್ಟು ಹೆಚ್ಚಿರುವ ಪ್ರದೇಶದಲ್ಲಿ ರೋಗಿಗಳನ್ನು ಇರಿಸಲಾಗಿತ್ತು.

ವೈಜ್ಞಾನಿಕ ವರದಿಗಳಲ್ಲಿ ಮಂಗಳವಾರ ಪ್ರಕಟವಾದ ವರದಿಯ ಪ್ರಕಾರ, HBOT ಗುಂಪು ಆಲೋಚನಾ ಕೌಶಲ್ಯ, ಶಕ್ತಿ, ನಿದ್ರೆ ಸೇರಿದಂತೆಡ ಹಲವು ವಿಚಾರಗಳಲ್ಲಿ ಶಾಮ್ ಗುಂಪಿಗೆ ಹೋಲಿಸಿದರೆ ಗಮನಾರ್ಹ ಸುಧಾರಣೆ ಕಂಡುಬಂದಿದೆ

ದೀರ್ಘಕಾಲದ ಕೋವಿಡ್ ಎಂದರೇನು? ಕೊರೊನಾದಿಂದ ಚೇತರಿಸಿಕೊಂಡ ಬಳಿಕವೂ ಬಹುದಿನಗಳ ಕಾಲ ಲಕ್ಷಣಗಳನ್ನು ಹೊಂದಿರುವುದನ್ನು ದೀರ್ಘಕಾಲದ ಕೋವಿಡ್ ಎಂದು ಕರೆಯುತ್ತೇವೆ.

ಈ ರೋಗಲಕ್ಷಣಗಳು ಸುಮಾರು 12 ವಾರಗಳವರೆಗೆ, ಕೆಲವೊಮ್ಮೆ ವರ್ಷಗಳ ಕಾಲ ಹಾಗೆಯೇ ಇರುತ್ತದೆ. ಆ ಸಂದರ್ಭದಲ್ಲಿ ಆಯಾಸ, ರುಚಿ ಇಲ್ಲದಿರುವುದು, ಮೆದುಳು ನಿಸ್ತೇಜತೆ, ಕಿರಿಕಿರಿ, ಮುಂತಾದ ಲಕ್ಷಣಗಳು ಕಂಡುಬರುತ್ತವೆ. ದೀರ್ಘಕಾಲದ ಕೋವಿಡ್ ರೋಗಲಕ್ಷಣಗಳನ್ನು ಕಡಿಮೆ ಮಾಡುವಲ್ಲಿ ಕೆಲವು ಆಹಾರವು ಪ್ರಮುಖ ಪಾತ್ರ ವಹಿಸುತ್ತದೆ

ಪ್ರೋಟೀನ್‌ಗಳು, ಕಾರ್ಬೋಹೈಡ್ರೇಟ್‌ಗಳು, ಮತ್ತು ಖನಿಜಗಳಂತಹ ಅಗತ್ಯ ಪೋಷಕಾಂಶಗಳು ದೀರ್ಘ ಕೋವಿಡ್ ರೋಗಲಕ್ಷಣಗಳಿಂದ ಪರಿಹಾರವನ್ನು ನೀಡುತ್ತವೆ.

ಕೊರೊನಾದಿಂದ ಚೇತರಿಸಿಕೊಂಡ ಬಳಿಕವೂ ದೇಹದಲ್ಲಿ ಶಕ್ತಿ ನಿಶ್ಯಕ್ತಿ ಕಾಡುತ್ತದೆ. ಈ ಸಮಯದಲ್ಲಿ ನೀವು ಆಲೂಗಡ್ಡೆ, ಬ್ರೆಡ್, ಅಕ್ಕಿ, ಸಂಪೂರ್ಣ ಓಟ್ಸ್, ಪಾಸ್ಟಾ, ರಾಗಿ, ಬಾರ್ಲಿಯಂತಹ ಧಾನ್ಯಗಳನ್ನು ಹೆಚ್ಚು ತಿನ್ನಬೇಕು. ಏಕೆಂದರೆ ಅವುಗಳಲ್ಲಿ ಪಿಷ್ಟವು ಅಧಿಕವಾಗಿರುತ್ತದೆ.

ಧಾನ್ಯದ ಬ್ರೆಡ್ ಅನ್ನು ಸಹ ತಿನ್ನಿರಿ. ಇವುಗಳಲ್ಲಿ ಫೈಬರ್ ಅಂಶ ಹೆಚ್ಚಾಗಿರುತ್ತದೆ. ಈ ಆಹಾರಗಳು ದೇಹಕ್ಕೆ ತ್ವರಿತ ಶಕ್ತಿಯನ್ನು ನೀಡುತ್ತದೆ. ಆಯಾಸವೂ ಕಡಿಮೆಯಾಗುತ್ತದೆ.

ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಕಾಪಾಡುವಲ್ಲಿ ಹಣ್ಣುಗಳು ಪ್ರಮುಖ ಪಾತ್ರವಹಿಸುತ್ತವೆ. ತಾಜಾ ಹಣ್ಣುಗಳನ್ನು ನಿಯಮಿತವಾಗಿ ಸೇವಿಸುವುದು ಆರೋಗ್ಯಕ್ಕೆ ಒಳ್ಳೆಯದು.

ನೀವು ಒಣ ಹಣ್ಣುಗಳನ್ನು ಸಹ ತಿನ್ನಬಹುದು. ಸೇಬು, ಪೇರಳೆ ಹಣ್ಣುಗಳನ್ನು ತಿನ್ನಬಹುದು. ಇವುಗಳನ್ನು ಬೆಳಗಿನ ಉಪಾಹಾರ ಅಥವಾ ಮಧ್ಯಾಹ್ನದ ಊಟಕ್ಕೆ ಸೇವಿಸಬಹುದು. ಸಂಜೆ ವೇಳೆ ಹೆಚ್ಚಿನ ನೀರಿನಂಶವಿರುವ ಕಲ್ಲಂಗಡಿ ಹಣ್ಣನ್ನು ತಿನ್ನಬಹುದು.