ಒತ್ತಡ ಮಧುಮೇಹಕ್ಕೆ ಕಾರಣವಾಗಬಹುದು! ಇದರಿಂದ ದೂರವಿರುವುದು ಹೇಗೆ ತಿಳಿಯಿರಿ
ಒತ್ತಡದ ಜೀವನಶೈಲಿ ಜನರ ಮಾನಸಿಕ ಒತ್ತಡವನ್ನು ಹೆಚ್ಚಿಸುತ್ತಿದೆ. ಪ್ರತಿಯೊಬ್ಬರೂ ಒಂದಲ್ಲ ಒಂದು ವಿಷಯದ ಬಗ್ಗೆ ಚಿಂತಿತರಾಗಿದ್ದು ಅವರಿಗೆ ತಿಳಿಯದಂತೆ ಒತ್ತಡ ಅವರನ್ನು ಆವರಿಸಿಕೊಂಡಿದ್ದು ಅರ್ಧಕ್ಕಿಂತ ಹೆಚ್ಚು ರೋಗಗಳಿಗೆ ಇದು ಕಾರಣವಾಗಿದೆ. ಯಾವುದೇ ರೋಗವಾಗಲಿ ಅದು ಆರಂಭವಾಗುವುದು ಒತ್ತಡದಿಂದ ಎಂದು ತಜ್ಞರು ಹೇಳುತ್ತಾರೆ. ಅಂತಹ ಗಂಭೀರ ಕಾಯಿಲೆಯಲ್ಲಿ ಮಧುಮೇಹವೂ ಸೇರಿಕೊಂಡಿದೆ. ನಮ್ಮ ದೇಶದಲ್ಲಿ ಹೆಚ್ಚಿನ ಜನರು ಇದರ ವಿರುದ್ಧ ಹೋರಾಡುತ್ತಿದ್ದಾರೆ.
ಇಂದಿನ ಒತ್ತಡದ ಜೀವನಶೈಲಿ ಜನರ ಮಾನಸಿಕ ಒತ್ತಡವನ್ನು ಹೆಚ್ಚಿಸುತ್ತಿದೆ. ಪ್ರತಿಯೊಬ್ಬರೂ ಒಂದಲ್ಲ ಒಂದು ವಿಷಯದ ಬಗ್ಗೆ ಚಿಂತಿತರಾಗಿದ್ದು ಅವರಿಗೆ ತಿಳಿಯದಂತೆ ಒತ್ತಡ ಅವರನ್ನು ಆವರಿಸಿಕೊಂಡಿದ್ದು ಅರ್ಧಕ್ಕಿಂತ ಹೆಚ್ಚು ರೋಗಗಳಿಗೆ ಇದು ಕಾರಣವಾಗಿದೆ. ಯಾವುದೇ ರೋಗವಾಗಲಿ ಅದು ಆರಂಭವಾಗುವುದು ಒತ್ತಡದಿಂದ ಎಂದು ತಜ್ಞರು ಹೇಳುತ್ತಾರೆ. ಅಂತಹ ಗಂಭೀರ ಕಾಯಿಲೆಯಲ್ಲಿ ಮಧುಮೇಹವೂ ಸೇರಿಕೊಂಡಿದೆ. ನಮ್ಮ ದೇಶದಲ್ಲಿ ಹೆಚ್ಚಿನ ಜನರು ಇದರ ವಿರುದ್ಧ ಹೋರಾಡುತ್ತಿದ್ದಾರೆ.
ಒತ್ತಡ ಮತ್ತು ಮಧುಮೇಹದ ನಡುವೆ ಸಂಬಂಧವಿದೆ ಎಂಬುದನ್ನು ತಜ್ಞರು ಹೇಳುತ್ತಾರೆ. ಒತ್ತಡವಿದ್ದಾಗ, ದೇಹವು ಕಾರ್ಟಿಸೋಲ್ ಎಂಬ ಹಾರ್ಮೋನ್ ಅನ್ನು ಬಿಡುಗಡೆ ಮಾಡುತ್ತದೆ, ಇದನ್ನು ಒತ್ತಡದ ಹಾರ್ಮೋನ್ ಎಂದೂ ಕರೆಯಲಾಗುತ್ತದೆ. ಈ ಹಾರ್ಮೋನ್ ಸ್ರವಿಸುವಿಕೆಯಿಂದಾಗಿ, ದೇಹದಲ್ಲಿ ಗ್ಲೂಕೋಸ್ ಮಟ್ಟವು ಹೆಚ್ಚಾಗುತ್ತದೆ. ಒತ್ತಡದಿಂದಾಗಿ ಮಧುಮೇಹ ಹೆಚ್ಚಾಗಲು ಇದು ಕಾರಣವಾಗಿದೆ. ನೀವು ಒತ್ತಡಕ್ಕೆ ಒಳಗಾದಾಗಲೆಲ್ಲಾ, ನಿಮ್ಮ ದೇಹಕ್ಕೆ ಒತ್ತಡ ಬಿದ್ದಾಗ ಕಾರ್ಟಿಸೋಲ್, ಕ್ಯಾಟೆಕೊಲಮೈನ್ ಮತ್ತು ಥೈರಾಯ್ಡ್ ಸೇರಿದಂತೆ ಅನೇಕ ಹಾರ್ಮೋನುಗಳ ಮಟ್ಟಗಳು ಬದಲಾಗಲು ಪ್ರಾರಂಭಿಸುತ್ತವೆ. ಈ ಹಾರ್ಮೋನುಗಳ ಅಸಮತೋಲನವು ಅನೇಕ ರೋಗಗಳಿಗೆ ಕಾರಣವಾಗುತ್ತದೆ. ಇದು ಮಧುಮೇಹಕ್ಕೂ ಕೂಡ ಅನ್ವಯಿಸುತ್ತದೆ.
ದೀರ್ಘಕಾಲದ ರೋಗಗಳನ್ನು ಪ್ರಚೋದಿಸುತ್ತದೆ;
ಒತ್ತಡವು ನಿರಂತರವಾಗಿ ಹೊಸ ರೋಗಗಳು ಬರುವುದಕ್ಕೆ ಮುಖ್ಯ ಕಾರಣವಾಗುವುದಲ್ಲದೆ, ದೇಹದಲ್ಲಿರುವ ಹಳೆಯ ಕಾಯಿಲೆಗಳನ್ನು ಪ್ರಚೋದಿಸುತ್ತದೆ, ಇದರಿಂದ ಆ ರೋಗವನ್ನು ಗುಣಪಡಿಸುವುದು ಬಹಳ ಕಷ್ಟವಾಗುತ್ತದೆ. ಅದಲ್ಲದೆ ಒತ್ತಡವು ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಆದ್ದರಿಂದ ನೀವು ಆರೋಗ್ಯವಾಗಿರಲು ಒತ್ತಡವನ್ನು ನಿರ್ವಹಿಸುವುದು ಬಹಳ ಮುಖ್ಯವಾಗುತ್ತದೆ.
ಒತ್ತಡದ ಲಕ್ಷಣಗಳು;
ನಿಮ್ಮನ್ನು ಒತ್ತಡ ಕಾಡುತ್ತಿದೆ ಎಂಬುದು ಕೆಲವೊಮ್ಮೆ ಅರಿವಿಗೆ ಬರುವುದಿಲ್ಲ. ಒತ್ತಡವನ್ನು ಕಡಿಮೆ ಮಾಡಿಕೊಳ್ಳಲು ಅದರ ಗುಣಲಕ್ಷಣಗಳನ್ನು ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯವಾಗುತ್ತದೆ. ಹಾಗಾದರೆ ಒತ್ತಡದ ಲಕ್ಷಣಗಳೇನು?
-ತಲೆನೋವು
-ಸ್ನಾಯು ನೋವು ಅಥವಾ ಉದ್ವಿಗ್ನತೆ
-ಹೆಚ್ಚು ಅಥವಾ ಕಡಿಮೆ ನಿದ್ರೆ ಮಾಡುವುದು
-ಯಾವಾಗಲೂ ಅನಾರೋಗ್ಯದಿಂದ ಬಳಲುತ್ತಿರುವುದು
-ಆಯಾಸ
-ಹೆಚ್ಚು ಅಥವಾ ಕಡಿಮೆ ಹಸಿವಾಗುವುದು
ಒತ್ತಡವಿದ್ದಾಗ ನಿಮ್ಮ ನಡವಳಿಕೆಯಲ್ಲಿ ಈ ರೀತಿ ಬದಲಾವಣೆಗಳಾಗಬಹುದು;
-ಯಾವಾಗಲೂ ಕಿರಿಕಿರಿ ಮತ್ತು ಅಸಮಾಧಾನದಿಂದ ಇರುವುದು
-ಯಾವಾಗಲೂ ಖಿನ್ನತೆಯಿಂದ ಬಳಲುವುದು
-ಏನನ್ನಾದರೂ ಅಥವಾ ಯಾವುದಾದರೂ ಒಂದು ವಿಷಯದ ಬಗ್ಗೆ ಯೋಚಿಸುವುದು
-ಸ್ನೇಹಿತರು ಮತ್ತು ಕುಟುಂಬದಿಂದ ದೂರವಿರುವುದು
-ಹೆಚ್ಚು ಅಥವಾ ಕಡಿಮೆ ತಿನ್ನುವುದು
-ತುಂಬಾ ಕೋಪ ಮಾಡಿಕೊಳ್ಳುವುದು
-ಅತಿಯಾದ ಮದ್ಯಪಾನ ಅಥವಾ ಧೂಮಪಾನ
ಇದನ್ನೂ ಓದಿ: ವಿಶ್ವ ಗರ್ಭನಿರೋಧಕ ದಿನವನ್ನು ಏಕೆ ಆಚರಿಸಲಾಗುತ್ತದೆ? ಈ ದಿನದ ಇತಿಹಾಸ, ಮಹತ್ವ ತಿಳಿಯಿರಿ
ಒತ್ತಡವನ್ನು ತಡೆಯುವುದು ಹೇಗೆ?
ಯಾವುದೇ ರೋಗವನ್ನು ನಿವಾರಿಸಲು, ಅದರ ಮೂಲ ಕಾರಣವನ್ನು ತಿಳಿದುಕೊಳ್ಳುವುದು ಬಹಳ ಮುಖ್ಯವಾಗುತ್ತದೆ. ಸಾಮಾನ್ಯವಾಗಿ ಹೆಚ್ಚಿನ ರೋಗಗಳ ಮೂಲಕ್ಕೆ ಕಾರಣ ಒತ್ತಡವಾಗಿರುತ್ತದೆ. ಇದನ್ನು ನಿಯಂತ್ರಿಸುವುದು ಬಹಳ ಮುಖ್ಯವಾಗುತ್ತದೆ.
-ನಿಯಮಿತವಾಗಿ ವ್ಯಾಯಾಮ ಮಾಡಿ
-ಯೋಗ ಅಥವಾ ಧ್ಯಾನ ಮಾಡಿ
-ನಿಮ್ಮ ಪ್ರೀತಿಪಾತ್ರರೊಂದಿಗೆ ಮಾತನಾಡಿ
-ಕೆಫೀನ್ ಸೇವನೆಯನ್ನು ಕಡಿಮೆ ಮಾಡಿ
-ನಿಮಗಿಷ್ಟವಾಗಿರುವ ಸಂಗೀತ ಕೇಳಿ
-ಒಳ್ಳೆಯ ಪುಸ್ತಕಗಳನ್ನು ಓದಿ
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ