ಮೆದುಳಿನ ಡೋಪಮೈನ್ ಹಾರ್ಮೋನ್ ಮೇಲೆ ಪ್ಲಸೀಬೊ ಪರಿಣಾಮವನ್ನು ಉಂಟು ಮಾಡುವುದಿಲ್ಲ, ಅಧ್ಯಯನದಿಂದ ದೃಢ
ಡೋಪಮೈನ್ ನೈಸರ್ಗಿಕವಾಗಿ ಮಾನವನ ಮೆದುಳಿನಲ್ಲಿ ಉತ್ಪತ್ತಿಯಾಗುವ ಹಾರ್ಮೋನ್ ಆಗಿದ್ದು, ಇದು ಖುಷಿ ಹಾಗೂ ಆರಾಮದಾಯಕದಂತಹ ಅನುಭವವನ್ನು ಉಂಟು ಮಾಡುತ್ತದೆ. ಆದರೆ ಈ ಪ್ಲಸೀಬೊ ಪರಿಣಾಮ ಅಥವಾ ಪ್ಲಸೀಬೊ ಚಿಕಿತ್ಸೆಯ ಸಮಯದಲ್ಲಿ ನೋವು ನಿವಾರಕ ಅನುಭವವು ಡೋಪಮೈನ್‌ನಿಂದ ಉಂಟಾಗುವುದಿಲ್ಲ ಎಂದು ಅಧ್ಯಯನದಿಂದ ದೃಢವಾಗಿದೆ.
ನಮ್ಮ ದೇಹದಲ್ಲಿ ಬಿಡುಗಡೆಯಾಗುವ ಡೋಪಮೈನ್ ಹಾರ್ಮೋನ್ ನಿಂದ ಸಂತೋಷದ ಭಾವನೆಗಳನ್ನು ಅನುಭವಿಸುತ್ತೇವೆ. ಈ ಡೋಪಮೈನ್ ಒಂದು ರಾಸಾಯನಿಕ ಸಂದೇಶ ವಾಹಕವಾಗಿದ್ದು, ಇದು ಮೆದುಳು ಉತ್ತಮ ಕೆಲಸಗಳನ್ನು ಮಾಡಲು ಪ್ರೇರೇಪಿಸುತ್ತದೆ. ಆದರೆ ಪ್ಲಸೀಬೊ ಪರಿಣಾಮ ಅಥವಾ ಚಿಕಿತ್ಸೆಯ ಸಮಯದಲ್ಲಿ ನೋವು ನಿವಾರಕ ಅನುಭವವು ಈ ಡೋಪಮೈನ್‌ನಿಂದ ಉಂಟಾಗುವುದಿಲ್ಲ ಎಂದು ಸಂಶೋಧಕರು ತಿಳಿಸಿದ್ದಾರೆ.
ಜರ್ಮನಿಯ ಯೂನಿವರ್ಸಿಟಿ ಹಾಸ್ಪಿಟಲ್ ಎಸ್ಸೆನ್‌ನ ಸಂಶೋಧಕರು, ಆರಂಭದಲ್ಲಿ ಪ್ಲಸೀಬೊ ಪರಿಣಾಮವನ್ನು ಉತ್ಪಾದಿಸುವಲ್ಲಿ ಹಾಗೂ ನಿರ್ವಹಿಸುವಲ್ಲಿ ಡೋಪಮೈನ್ ಯಾವುದೇ ನಿಖರವಾದ ಪಾತ್ರವು ವಹಿಸುವುದಿಲ್ಲ ಎಂದಿದ್ದಾರೆ. PLoS ಬಯಾಲಜಿ ಜರ್ನಲ್‌ನಲ್ಲಿ ಪ್ರಕಟವಾದ ಮಾಹಿತಿಯಲ್ಲಿ, ಅವರು ಅಧ್ಯಯನ ನಡೆಸಲು 168 ಆರೋಗ್ಯವಂತ ವ್ಯಕ್ತಿಗಳನ್ನು ಆಯ್ಕೆ ಮಾಡಿಕೊಂಡಿದ್ದು, ಮೂರು ಗುಂಪುಗಳಾಗಿ ವಿಂಗಡಿಸಿದ್ದಾರೆ. ಒಂದು ಗುಂಪಿಗೆ ಪಾರ್ಕಿನ್ಸನ್ ಕಾಯಿಲೆಯ ಚಿಕಿತ್ಸೆಯಲ್ಲಿ ಬಳಸಲಾಗುವ ಎಲ್ ಡೋಪಾ ಎಂಬ ಔಷಧಿಯನ್ನು ನೀಡಲಾಗಿದೆ. ಇದರಲ್ಲಿ ಡೋಪಮೈನ್ ಉತ್ಪಾದನೆಯ ಮೇಲೆ ಪರಿಣಾಮ ಬೀರುತ್ತದೆ. ಈ ಔಷಧವು ಮೆದುಳಿಗೆ ಪ್ರವೇಶಿಸಿದ ನಂತರ ಡೋಪಮೈನ್ ಆಗಿ ಬದಲಾಗುತ್ತದೆ ಎಂದು ಕಂಡುಕೊಂಡಿದ್ದಾರೆ.
ಎರಡನೆಯ ಗುಂಪಿಗೆ ಸಲ್ಪಿರೈಡ್ ಅನ್ನು ನೀಡಲಾಗಿದ್ದು, ಇದು ಸೈಕೋಸಿಸ್ ಮತ್ತು ಸ್ಕಿಜೋಫ್ರೇನಿಯಾ ಚಿಕಿತ್ಸೆಗಾಗಿ ಬಳಸಲಾಗುವ ಆಂಟಿ ಸೈಕೋಟಿಕ್ ಏಜೆಂಟ್ ಆಗಿದೆ. ಇದು ಡೋಪಮೈನ್ ಹರಿವನ್ನು ನಿಗ್ರಹಿಸುವ ಮೂಲಕ ಕಾರ್ಯನಿರ್ವಹಿಸುತ್ತದೆ. ಹೀಗಾಗಿ ಮೆದುಳಿನ ರಾಸಾಯನಿಕದ ಮಟ್ಟವನ್ನು ಬದಲಾಯಿಸಲು ಪ್ರೇರಣೆ ನೀಡುತ್ತದೆ. ಡೋಪಮೈನ್-ಸಂಬಂಧಿತ ನಡವಳಿಕೆಯನ್ನು ಬದಲಾಯಿಸಲು ಈ ಎರಡೂ ಚಿಕಿತ್ಸೆಗಳು ಸಾಬೀತಾಗಿದೆ ಎಂದು ಸಂಶೋಧಕರು ಹೇಳಿದ್ದಾರೆ. ಮೂರನೇ ಗುಂಪಿಗೆ ನಿಷ್ಕ್ರಿಯ ಮಾತ್ರೆ ನೀಡಲಾಯಿತು, ಇದು ಯಾವುದೇ ಪರಿಣಾಮಗಳನ್ನು ಉಂಟುಮಾಡುವುದಿಲ್ಲ ಎಂದು ತಿಳಿಸಿದ್ದಾರೆ.
ಈ ಅಧ್ಯಯನದಲ್ಲಿ ಭಾಗವಹಿಸಿದ್ದವರಿಗೆ ಅಧ್ಯಯನದ ಹಿಂದಿನ ಉದ್ದೇಶಗಳ ಬಗ್ಗೆ ತಿಳಿಸಲಾಗಿದ್ದು, ತದನಂತರದಲ್ಲಿ ಅಧ್ಯಯನಕ್ಕೆ ಒಳಗಾಗದವರ ಎಡಗೈಯನ್ನು ಶಾಖಕ್ಕೆ ಒಡ್ಡಿಕೊಳ್ಳುವಂತೆ ಮಾಡಲಾಗಿದೆ. ಆ ಬಳಿಕ ನೋವು ನಿವಾರಕ ಕ್ರೀಮ್ ಹಾಗೂ ನೋವನ್ನು ನಿವಾರಿಸುವ ಶಾಖದಂತಹ ಚಿಕಿತ್ಸೆ ನೀಡಿ, ನೋವಿನ ರೇಟಿಂಗ್ ದಾಖಲಿಸಲಾಗಿದೆ.
ಇದನ್ನೂ ಓದಿ: ಮೂಳೆಗಳ ಆರೋಗ್ಯಕ್ಕೆ ಈ ದಹಿ ಚುರಾ ರೆಸಿಪಿ ಮಾಡಿ ಸವಿಯಿರಿ
ಈ ವೇಳೆಯಲ್ಲಿ ಪ್ಲಸೀಬೊ ಪರಿಣಾಮ ಅಥವಾ ಚಿಕಿತ್ಸೆಯಲ್ಲಿ ಡೋಪಮೈನ್ ನೇರ ಪ್ರಭಾವವನ್ನು ಬೀರಿಲ್ಲ ಎನ್ನುವುದು ಪುರಾವೆಗಳಿಂದ ಸಾಭೀತಾಗಿದೆ. ನೋವಿನ ರೇಟಿಂಗ್‌ಗಳ ಮೇಲೆ ಯಾವುದೇ ನೇರ ನೋವು ನಿವಾರಕಗಳು ಪರಿಣಾಮಗಳನ್ನು ಕಂಡುಕೊಂಡಿಲ್ಲ. ಪ್ರೊ ಅಥವಾ ಆಂಟಿ- ಡೋಪಾಮಿನರ್ಜಿಕ್ ಔಷಧಿಗಳನ್ನು ಬಳಸಿಕೊಂಡು ಹಿಂದಿನ ಪ್ರಾಯೋಗಿಕ ಅಧ್ಯಯನಗಳನ್ನು ದೃಢೀಕರಿಸುತ್ತದೆ ಎಂದಿದ್ದಾರೆ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ