Dementia: ಮರೆವು ಹೆಚ್ಚಾಗುತ್ತಿದೆ ಎನಿಸಿದರೆ ಪ್ರತಿದಿನ ಅಡುಗೆ ಮಾಡಿ ಸಮಸ್ಯೆಯಿಂದ ಹೊರಬನ್ನಿ

| Updated By: ಅಕ್ಷತಾ ವರ್ಕಾಡಿ

Updated on: Oct 16, 2024 | 11:49 AM

ನಮ್ಮ ಸಾವಿರಾರು ಯೋಚನೆಗಳು ನಮಗೆ ತಿಳಿದೋ ತಿಳಿಯದೆಯೋ ಮನಸ್ಸಿನ ಮೇಲೆ ಪರಿಣಾಮ ಬೀರುತ್ತವೆ. ಇದರಿಂದ ನಮ್ಮ ಆರೋಗ್ಯ ಹಾಳಾಗುತ್ತದೆ. ಸಾಮಾನ್ಯವಾಗಿ ಮನಸ್ಸು ಭಾರವಾದಾಗ, ದೇಹವೂ ದಣಿಯುತ್ತದೆ. ಆದ್ದರಿಂದ ನೀವು ಆರೋಗ್ಯವಾಗಿರಲು ಮೊದಲು ದೇಹ ಮತ್ತು ಮನಸ್ಸಿನಿಂದ ವಿಷಯವನ್ನು ಹೊರಹಾಕಿ ಶಾಂತ ಸ್ಥಿತಿಗೆ ಬರಬೇಕು. ಇಲ್ಲವಾದಲ್ಲಿ ನಾನಾ ರೀತಿಯ ಆರೋಗ್ಯ ಸಮಸ್ಯೆಗಳು ಕಂಡುಬರುತ್ತದೆ. ಅದರಲ್ಲಿ ಮರೆವಿನ ಸಮಸ್ಯೆಯೂ ಒಂದು. ಇದರಿಂದ ಹೊರಬರುವುದು ಹೇಗೆ? ಇಲ್ಲಿದೆ ಮಾಹಿತಿ.

Dementia: ಮರೆವು ಹೆಚ್ಚಾಗುತ್ತಿದೆ ಎನಿಸಿದರೆ ಪ್ರತಿದಿನ ಅಡುಗೆ ಮಾಡಿ ಸಮಸ್ಯೆಯಿಂದ ಹೊರಬನ್ನಿ
Follow us on

ದಿನನಿತ್ಯದ ಕೆಲಸದ ಒತ್ತಡ, ಕುಟುಂಬದ ಚಿಂತೆ. ಹೀಗೆ ಸಾವಿರಾರು ಯೋಚನೆಗಳು ನಮಗೆ ತಿಳಿದೋ ತಿಳಿಯದೆಯೋ ನಮ್ಮ ಮನಸ್ಸಿನ ಮೇಲೆ ಪರಿಣಾಮ ಬೀರುತ್ತವೆ. ಇದರಿಂದ ನಮ್ಮ ಆರೋಗ್ಯ ಹಾಳಾಗುತ್ತದೆ. ಸಾಮಾನ್ಯವಾಗಿ ಮನಸ್ಸು ಭಾರವಾದಾಗ, ದೇಹವೂ ದಣಿಯುತ್ತದೆ. ಆದ್ದರಿಂದ ನೀವು ಆರೋಗ್ಯವಾಗಿರಲು ಮೊದಲು ದೇಹ ಮತ್ತು ಮನಸ್ಸಿನಿಂದ ವಿಷಯವನ್ನು ಹೊರಹಾಕಿ ಶಾಂತ ಸ್ಥಿತಿಗೆ ಬರಬೇಕು. ಇಲ್ಲವಾದಲ್ಲಿ ನಾನಾ ರೀತಿಯ ಆರೋಗ್ಯ ಸಮಸ್ಯೆಗಳು ಕಂಡುಬರುತ್ತದೆ. ಅದರಲ್ಲಿ ಮರೆವಿನ ಸಮಸ್ಯೆಯೂ ಒಂದು. ಇದರಿಂದ ಹೊರಬರುವುದು ಹೇಗೆ? ಇಲ್ಲಿದೆ ಮಾಹಿತಿ.

ಹಿಂದೆ ಇಂತಹ ಸಮಸ್ಯೆ ಕೇವಲ ವಯಸ್ಸಾದವರಲ್ಲಿ ಕಂಡು ಬರುತ್ತಿತ್ತು. ಆದರೆ ಇದು ಇತ್ತೀಚಿನ ದಿನಗಳಲ್ಲಿ ಎಲ್ಲಾ ವಯೋಮಾನದವರಲ್ಲಿಯೂ ಸಾಮಾನ್ಯವಾಗಿದೆ. ಮರೆಯುವ ಈ ಸಮಸ್ಯೆಯನ್ನು ವೈದ್ಯಕೀಯ ಪರಿಭಾಷೆಯಲ್ಲಿ ಬುದ್ಧಿಮಾಂದ್ಯತೆ ಎಂದು ಕರೆಯಲಾಗುತ್ತದೆ. ವಯಸ್ಸಾದಂತೆ ರೋಗ ಹೆಚ್ಚೆಚ್ಚು ಆಕ್ರಮಣ ಮಾಡುತ್ತಿದ್ದರೂ, ಬುದ್ಧಿಮಾಂದ್ಯತೆಯ ಅಪಾಯವನ್ನು ಕಡಿಮೆ ಮಾಡಲು ಕೆಲವು ಚಟುವಟಿಕೆಗಳನ್ನು ನಿಯಮಿತವಾಗಿ ಮಾಡುವುದು ಒಳ್ಳೆಯದು. ಇದು ನಿಮಗೆ ತುಂಬಾ ಸರಳ ಎನಿಸಿದರೂ ಕೂಡ ಇದರಿಂದ ಸಿಗುವ ಫಲಿತಾಂಶ ಮಾತ್ರ ನೀವು ಊಹಿಸಲೂ ಸಾಧ್ಯವಿಲ್ಲ.

ಮನೆ ಸ್ವಚ್ಛಗೊಳಿಸುವುದು:

ಮಾನಸಿಕವಾಗಿ ಆರೋಗ್ಯವಾಗಿರಲು, ನೀವು ಮನೆಯನ್ನು ಸ್ವಚ್ಛಗೊಳಿಸುವ ಅಭ್ಯಾಸವನ್ನು ರೂಢಿಸಿಕೊಳ್ಳಬೇಕು. ಇದು ಒತ್ತಡ, ಆತಂಕ ಮತ್ತು ಖಿನ್ನತೆಯ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ. ಹೀಗೆ ಮಾಡುವುದರಿಂದ, ಮೆದುಳಿನಲ್ಲಿ ಎಂಡಾರ್ಫಿನ್ ಹಾರ್ಮೋನುಗಳ ಸ್ರವಿಸುವಿಕೆಯು ಹೆಚ್ಚಾಗುತ್ತದೆ ಮತ್ತು ಮನಸ್ಸಿಗೆ ಶಾಂತಿ ಸಿಗುತ್ತದೆ.

ಅಡುಗೆ ಮಾಡುವುದು:

ಹೊಸ ಹೊಸ ಅಡಿಗೆಯನ್ನು ಕಲಿತು ಮಾಡುವುದರಿಂದ ಹೊಟ್ಟೆ ತುಂಬುವುದಲ್ಲದೆ, ಈ ಕೆಲಸ ನಿಮ್ಮ ಮನಸ್ಸನ್ನು ಶಾಂತಗೊಳಿಸುತ್ತದೆ. ಅದನ್ನು ಯಾವ ರೀತಿ ಬೇಯಿಸಬೇಕು, ಯಾವಾಗ ಯಾವ ಮಸಾಲೆಗಳನ್ನು ಸೇರಿಸಬೇಕು ಹೀಗೆ ನಾನಾ ರೀತಿಯ ಆಲೋಚನೆ ನಿಮ್ಮ ಒತ್ತಡವನ್ನು ಕಡಿಮೆ ಮಾಡುವುದಲ್ಲದೆ ಮನಸ್ಸು ಶಾಂತವಾಗಿರಲು ಸಹಾಯ ಮಾಡುತ್ತದೆ.

ಮತ್ತಷ್ಟು ಓದಿ: ರುಚಿಕರವಾದ ಪೇರಲೆ ಚಟ್ನಿ ಮಾಡುವ ವಿಧಾನ ಇಲ್ಲಿದೆ

ತೋಟಗಾರಿಕೆ:

ಗಿಡ ನೆಡುವುದು, ಅವುಗಳ ಪಾಲನೆ ಪೋಷಣೆ ಮಾಡುವುದು ನಿಮ್ಮ ಮಾನಸಿಕ ಆರೋಗ್ಯಕ್ಕೆ ಒಳ್ಳೆಯದು. ಇದು ಒತ್ತಡವನ್ನು ಕಡಿಮೆ ಮಾಡುತ್ತದೆ. ಮನಸ್ಸು ಮತ್ತು ದೇಹವನ್ನು ಉಲ್ಲಾಸಗೊಳಿಸುತ್ತದೆ. ಪರಿಣಾಮವಾಗಿ, ಸುತ್ತಮುತ್ತಲಿನ ಆತಂಕ, ಚಿಂತೆ ಕಡಿಮೆಯಾಗಿ ಮನಸ್ಸು ನಿರಾಳವಾಗುತ್ತದೆ. ಇದರ ಜೊತೆಗೆ ಧ್ಯಾನವೂ ಕೂಡ ಪ್ರಯೋಜನಕಾರಿಯಾಗಿದೆ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ