Vitamin B12 Deficiency: ವಿಟಮಿನ್ ಬಿ 12 ಕೊರತೆಯು ವ್ಯಕ್ತಿತ್ವದ ಮೇಲೆ ಅಡ್ಡ ಪರಿಣಾಮಬೀರಬಹುದು, ಅದರ ಲಕ್ಷಣಗಳು ಹೀಗಿವೆ

ವಿಟಮಿನ್ ಬಿ 12 ಜರೂರತ್ತು ಮಾನವ ದೇಹಕ್ಕೆ ಬಹಳ ಮುಖ್ಯವಾಗಿದೆ. ಅದರ ಕೊರತೆಯಾದರೆ, ದೇಹದಲ್ಲಿನ ಅನೇಕ ಕಾರ್ಯಗಳ ಮೇಲೆ ಅದು ಅಡ್ಡ ಪರಿಣಾಮ ಬೀರುತ್ತದೆ. ಅದರ ಕೊರತೆಯಿಂದಾಗಿ ವ್ಯಕ್ತಿತ್ವದಲ್ಲಿ ಏರುಪೇರು ಆಗುವ ಸಂಭವವಿದೆ. ಈ ಕುರಿತಾದ ಅಧ್ಯಯನ ಏನು ಹೇಳುತ್ತದೆ? ಬನ್ನೀ ತಿಳಿಯೋಣ.

Vitamin B12 Deficiency: ವಿಟಮಿನ್ ಬಿ 12 ಕೊರತೆಯು ವ್ಯಕ್ತಿತ್ವದ ಮೇಲೆ ಅಡ್ಡ ಪರಿಣಾಮಬೀರಬಹುದು, ಅದರ ಲಕ್ಷಣಗಳು ಹೀಗಿವೆ
ವಿಟಮಿನ್ ಬಿ 12 ಕೊರತೆಯು ವ್ಯಕ್ತಿತ್ವದ ಮೇಲೆ ಅಡ್ಡ ಪರಿಣಾಮಬೀರಬಹುದು, ಅದರ ಲಕ್ಷಣಗಳು ಹೀಗಿವೆ
Follow us
TV9 Web
| Updated By: ಸಾಧು ಶ್ರೀನಾಥ್​

Updated on: Oct 07, 2022 | 4:11 PM

Vitamin B12 Deficiency: ವಿಟಮಿನ್ ಬಿ 12 ಜರೂರತ್ತು ಮಾನವ ದೇಹಕ್ಕೆ ಬಹಳ ಮುಖ್ಯವಾಗಿದೆ. ಅದರ ಕೊರತೆಯಾದರೆ, ದೇಹದಲ್ಲಿನ ಅನೇಕ ಕಾರ್ಯಗಳ ಮೇಲೆ ಅದು ಅಡ್ಡ ಪರಿಣಾಮ ಬೀರುತ್ತದೆ. ಅದರ ಕೊರತೆಯಿಂದಾಗಿ ವ್ಯಕ್ತಿತ್ವದಲ್ಲಿ ಏರುಪೇರು ಆಗುವ ಸಂಭವವಿದೆ. ಈ ಕುರಿತಾದ ಅಧ್ಯಯನ ಏನು ಹೇಳುತ್ತದೆ? ಬನ್ನೀ ತಿಳಿಯೋಣ.

ವಿಟಮಿನ್ ಬಿ 12 – ಇದು ನೀರಿನಲ್ಲಿ ಕರಗುವ ವಿಟಮಿನ್. ಇದು ಮಾನವ ದೇಹಕ್ಕೆ ಅತ್ಯವಶ್ಯಕವಾಗಿದೆ. ಕೆಂಪು ರಕ್ತ ಕಣಗಳ ಉತ್ಪತ್ತಿ ಮತ್ತು DNA ಸಂಶ್ಲೇಷಣೆಯಲ್ಲಿ ವಿಟಮಿನ್ ಬಿ 12 ಅಗತ್ಯವಿದೆ. ವಿಟಮಿನ್ ಬಿ 12 ಕೊರತೆ ಎದುರಾದರೆ ದೇಹದಲ್ಲಿನ ಅನೇಕ ಕಾರ್ಯಗಳ ಮೇಲೆ ಅದು ಅಡ್ಡ ಪರಿಣಾಮ ಬೀರುತ್ತದೆ. ವಿಟಮಿನ್ ಬಿ 12 ಕೊರತೆಯನ್ನು ಸೂಚಿಸುವಂತಹ ಅನೇಕ ಗುಣಲಕ್ಷಣಗಳು ಇವೆ. ದೇಹದಲ್ಲಿ ವಿಟಮಿನ್ ಬಿ 12 ಮಟ್ಟವು ಕಡಿಮೆಯಾದಾಗ ಒಬ್ಬ ವ್ಯಕ್ತಿಯು ತುಂಬಾ ದಣಿಯುತ್ತಾನೆ. ಸದಾ ಆಲಸಿ ಆಗಿರುತ್ತಾನೆ. ಅಂತಹ ಜನರು ಸಾಮಾನ್ಯವಾಗಿ ವಾಕರಿಕೆ ಮತ್ತು ಅತಿಸಾರದ ಸಮಸ್ಯೆಯಿಂದ ತೊಂದರೆ ಅನುಭವಿಸುತ್ತಾರೆ.

ವಿಟಮಿನ್ ಬಿ 12 ಕೊರತೆಯ ಲಕ್ಷಣಗಳು:

ವಿಟಮಿನ್ ಬಿ 12 ಕೊರತೆಗೆ ಸಂಬಂಧಿಸಿದ ಸಾಮಾನ್ಯ ಲಕ್ಷಣಗಳು ಚರ್ಮ ಬಣ್ಣಗೆಡುವುದು, ನಾಲಿಗೆ ಕೆಂಪಾಗುವುದು, ಬಾಯಿ ಹುಣ್ಣು ಆಗುವುದು, ಅಸ್ತವ್ಯಸ್ತವಾಗುವ ನಡಿಗೆ, ಕಣ್ಣಿನ ದೃಷ್ಟಿ ದುರ್ಬಲವಾಗುವುದು, ಕಿರಿಕಿರಿಯಾಗುವುದು ಮತ್ತು ಖಿನ್ನತೆ ಎದುರಾಗುವುದು. ವಯಸ್ಸಾದ ಮಂದಿ ಹೆಚ್ಚಾಗಿ ವಿಟಮಿನ್ ಬಿ 12 ಕೊರತೆಯನ್ನು ಹೊಂದುತ್ತಾರೆ. ವಿಟಮಿನ್ ಬಿ 12 ಅವಶ್ಯಕತೆಯು ವ್ಯಕ್ತಿಯಿಂದ ವ್ಯಕ್ತಿಗೆ, ವಯಸ್ಸು ಮತ್ತು ಲಿಂಗವನ್ನು ಅವಲಂಬಿಸಿ ಬದಲಾಗುತ್ತದೆ.

ಕೊರತೆಯ ಲಕ್ಷಣಗಳು ಅಸಾಮಾನ್ಯ ಮತ್ತು ಹೆಚ್ಚಾಗಿ ಕಂಡುಬರುವುದಿಲ್ಲ:

ವಿಟಮಿನ್ ಕೊರತೆ ನರರೋಗಗಳ ಜೊತೆ ಕಂಡುಬರುತ್ತದೆ. ವಿಟಮಿನ್ ಬಿ 12 ಕೊರತೆಯು ಹಲವಾರು ನರರೋಗದಂತಹ ಅಡ್ಡಪರಿಣಾಮಗಳಿಗೆ ಕಾರಣವಾಗಬಹುದು. 2018 ರಲ್ಲಿ ಕೈಗೊಂಡಿದ್ದ ಅಧ್ಯಯನದ ಪ್ರಕಾರ 55 ವರ್ಷ ವಯಸ್ಸಿನ ವ್ಯಕ್ತಿಗೆ ಮನೋವೈದ್ಯಕೀಯವಾಗಿ ಅಭಿವ್ಯಕ್ತಿ, ಮೆದುಳಿನ ಶಕ್ತಿ ಕ್ಷೀಣಿಸುವುದು, ತೀವ್ರ ರಕ್ತಹೀನತೆ ಮತ್ತು ವಿಟಮಿನ್ ಬಿ 12 ಕೊರತೆಯಿಂದಾಗಿ ಕೂದಲು ಅಕಾಲಿಕವಾಗಿ ಬಿಳಿಯಾಗುವುದು ಸಾಮಾನ್ಯ ಗುಣಲಕ್ಷಣಗಳು ಎನ್ನಬಹುದು. ಆರಂಭದಲ್ಲಿ ಬೇಜವಾಬ್ದಾರಿಯಿಂದ, ಗಂಭೀರವಾಗಿ ಮಾತನಾಡಬಹದು. ಅವರ ಜ್ಞಾಪಕಶಕ್ತಿ ಹದಗೆಟ್ಟಬಹುದು, ವ್ಯಕ್ತಿತ್ವವೇ ಬದಲಾಗಬಹುದು ಎಂದು ಅಧ್ಯಯನ ವರದಿ ಹೇಳಿದೆ.

ವಿಟಮಿನ್ ಬಿ 12 ಕೊರತೆಯು ದೇಹದ ಮೇಲೆ ಏನು ಪರಿಣಾಮ ಬೀರುತ್ತದೆ?

ವಿಟಮಿನ್ ಬಿ 12 ದೇಹದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇದು ಡಿಎನ್ಎ ಸಂಶ್ಲೇಷಣೆಯಲ್ಲಿ ನೆರವಾಗುತ್ತದೆ. ಹೆಮಟೊಲಾಜಿಕ್, ನ್ಯೂರೋಲಾಜಿಕ್, ಸೈಕಿಯಾಟ್ರಿಕ್, ಜಠರಗರುಳಿನ ರೋಗ, ಚರ್ಮರೋಗ ಮತ್ತು ಹೃದಯ ರಕ್ತನಾಳ ನಾಶ- ಕೊರತೆಯೊಂದಿಗೆ ಸಂಬಂಧಿಸಿದೆ. ವಿಟಮಿನ್ ಕೊರತೆಯು ಸೀರಮ್‌ನಲ್ಲಿ ಮೀಥೈಲ್ ಮೊನಿಲ್-ಸಿಒಎ ಮತ್ತು ಹೋಮೋಸಿಸ್ಟೈನ್ ಸಂಗ್ರಹಕ್ಕೆ ಕಾರಣವಾಗುತ್ತದೆ ಎಂದು ಅಧ್ಯಯನಗಳು ತೋರಿಸುತ್ತವೆ. ಇದು ಪರಿಧಮನಿಯ ಕಾಯಿಲೆಗೆ ಅಪಾಯಕಾರಿ ಅಂಶಗಳಾಗಿವೆ.

ವಿಟಮಿನ್ ಬಿ 12 ದೇಹದಲ್ಲಿ ಹೇಗೆ ಕೆಲಸ ಮಾಡುತ್ತದೆ?

ವಿಟಮಿನ್ ಬಿ 12 ಡಿಎನ್ಎ ಸಂಶ್ಲೇಷಣೆಗೆ ಸಹಾಯ ಮಾಡುತ್ತದೆ. ಇದು ಕೆಂಪು ರಕ್ತ ಕಣಗಳು ಮತ್ತು ನರ ಕೋಶಗಳ ರಚನೆಗೆ ಸಹಾಯ ಮಾಡುತ್ತದೆ. ನಾವು ಆಹಾರವನ್ನು ಸೇವಿಸಿದಾಗ, ವಿಟಮಿನ್ ಬಿ 12 ಆಹಾರದಲ್ಲಿರುವ ಪ್ರೋಟೀನ್‌ಗಳೊಂದಿಗೆ ಹೊಟ್ಟೆಗೆ ಹೋಗುತ್ತದೆ, ಹೊಟ್ಟೆಯನ್ನು ತಲುಪಿದ ನಂತರ ಹೈಡ್ರೋಕ್ಲೋರಿಕ್ ಆಮ್ಲ ಮತ್ತು ಇತರ ಕಿಣ್ವಗಳು ಪ್ರೋಟೀನ್‌ನಿಂದ ವಿಟಮಿನ್ ಅನ್ನು ಪ್ರತ್ಯೇಕಿಸುತ್ತದೆ ಮತ್ತು ಅಲ್ಲಿಂದ ಕರುಳು ಬಿ 12 ಅನ್ನು ಹೀರಿಕೊಳ್ಳುತ್ತದೆ.

ವಿಟಮಿನ್ ಬಿ 12 ಮೂಲ ಏನು?

ವಿಟಮಿನ್ ಬಿ 12 ಮೂಲವೆಂದರೆ ಇದು ಪ್ರಾಣಿ ಉತ್ಪನ್ನಗಳಲ್ಲಿ ಹೇರಳವಾಗಿ ಕಂಡುಬರುತ್ತದೆ. ಈ ಉತ್ಪನ್ನಗಳನ್ನು ತಿನ್ನುವವರು ಅಂದರೆ ಮಾಂಸಾಹಾರಿಗಳು ವಿಟಮಿನ್ ಬಿ 12 ಅನ್ನು ಸುಲಲಿತವಾಗಿ ಪಡೆಯುತ್ತಾರೆ. ಪ್ರಾಣಿಜನ್ಯ ಉತ್ಪನ್ನಗಳಾದ ಮೀನು, ಮಾಂಸ, ಮೊಟ್ಟೆ ಮತ್ತು ಡೈರಿ ಉತ್ಪನ್ನಗಳಲ್ಲಿ ವಿಟಮಿನ್ ಬಿ12 ಸಮೃದ್ಧವಾಗಿದೆ ಎಂದು zeenews ಜಾಲತಾಣ ವರದಿ ಮಾಡಿದೆ.

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್