AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Dizziness: ಆಗಾಗ ತಲೆ ಸುತ್ತುತ್ತದೆಯೇ?; ನಿರ್ಲಕ್ಷ್ಯ ಮಾಡಿದರೆ ಪ್ರಾಣಕ್ಕೇ ಅಪಾಯ

ಆಗಾಗ ತಲೆ ಸುತ್ತುತ್ತದೆಯೇ? ಅದನ್ನು ನೀವು ನಿರ್ಲಕ್ಷ್ಯ ಮಾಡುತ್ತೀರಾ? ಹಾಗಾದರೆ, ಇನ್ನೊಮ್ಮೆ ತಲೆ ಸುತ್ತಿದರೆ ಕೂಡಲೆ ವೈದ್ಯರ ಬಳಿ ಹೋಗಿ ತಪಾಸಣೆ ಮಾಡಿಸಿಕೊಳ್ಳಿ. ಏಕೆಂದರೆ, ನಿಮ್ಮ ನಿರ್ಲಕ್ಷ್ಯದಿಂದ ಪ್ರಾಣಕ್ಕೇ ಅಪಾಯ ಉಂಟಾಗಬಹುದು, ಎಚ್ಚರ!

Dizziness: ಆಗಾಗ ತಲೆ ಸುತ್ತುತ್ತದೆಯೇ?; ನಿರ್ಲಕ್ಷ್ಯ ಮಾಡಿದರೆ ಪ್ರಾಣಕ್ಕೇ ಅಪಾಯ
ಸಾಂದರ್ಭಿಕ ಚಿತ್ರ Image Credit source: iStock
ಸುಷ್ಮಾ ಚಕ್ರೆ
|

Updated on: Feb 13, 2024 | 5:00 PM

Share

ಇಡೀ ಜಗತ್ತೇ ನಿಮ್ಮ ಸುತ್ತಲೂ ಸುತ್ತುತ್ತಿದೆ ಎಂದು ನಿಮಗೆ ಅನಿಸುತ್ತದೆಯೇ? ಕೆಳಗೆ ಬಿದ್ದೇ ಬಿಡುತ್ತೇವೆ ಎಂದು ನಿಮಗೆ ಭಯವಾಗುತ್ತದೆಯೇ? ನೀವು ಎದ್ದು ನಿಂತರೂ ಸಹ ತಲೆತಿರುಗುತ್ತದೆಯೇ? ಈ ರೀತಿ ತಲೆ ತಿರುಗುವುದು ಸಾಮಾನ್ಯ ಆರೋಗ್ಯ ಸಮಸ್ಯೆಯೆಂಬುದು ಸತ್ಯ. ಇದು ಪ್ರಪಂಚದಾದ್ಯಂತ ಲಕ್ಷಾಂತರ ಜನರ ಮೇಲೆ ಪರಿಣಾಮ ಬೀರುತ್ತಿರುವ ಸಮಸ್ಯೆಯಾಗಿದೆ. ಆದರೆ ನಿರಂತರವಾಗಿ ಈ ರೀತಿ ತಲೆತಿರುಗುವಿಕೆ ಉಂಟಾದರೆ ಅದನ್ನು ನಿರ್ಲಕ್ಷ್ಯ ಮಾಡುವಂತಿಲ್ಲ. ಇತ್ತೀಚಿನ ಅಧ್ಯಯನದ ಪ್ರಕಾರ, ತಲೆ ತಿರುಗುವಿಕೆ ಸಾವಿನ ಅಪಾಯವನ್ನು ಕೂಡ ಉಂಟುಮಾಡಬಹುದು.

ತಲೆತಿರುಗುವಿಕೆ ಮತ್ತು ಸಾವಿನ ನಡುವಿನ ಸಂಪರ್ಕ:

ಅಮೆರಿಕಾದಾದ್ಯಂತ 9,000 ವಯಸ್ಕರ ಗುಂಪಿನ ಮೇಲೆ ನಡೆಸಿದ ಅಧ್ಯಯನವು ತಲೆತಿರುಗುವಿಕೆ ಮತ್ತು ಮರಣದ ನಡುವಿನ ಸಂಬಂಧವನ್ನು ತಿಳಿಸಿದೆ. ಹಾನಿಕರವಲ್ಲದ ರೋಗಲಕ್ಷಣದೊಂದಿಗೆ ಸಂಬಂಧಿಸಿದ ಆರೋಗ್ಯದ ಅಪಾಯಗಳ ಬಗ್ಗೆ ಅವರು ಕಂಡುಹಿಡಿದದ್ದು ಆಶ್ಚರ್ಯಕರವಾಗಿದೆ. ತಲೆತಿರುಗುವಿಕೆಯನ್ನು ಅನುಭವಿಸಿದ ವ್ಯಕ್ತಿಗಳು ಹೃದಯರಕ್ತನಾಳದ ಕಾಯಿಲೆಗಳು, ಮಧುಮೇಹ ಮತ್ತು ಕ್ಯಾನ್ಸರ್ ಸೇರಿದಂತೆ ವಿವಿಧ ಕಾರಣಗಳಿಂದ ಸಾವಿನ ಹೆಚ್ಚಿನ ಅಪಾಯವನ್ನು ಎದುರಿಸುತ್ತಾರೆ ಎಂಬ ಸಂಗತಿ ಬೆಳಕಿಗೆ ಬಂದಿದೆ.

ಇದನ್ನೂ ಓದಿ: ದೇಹದಲ್ಲಿ ಇಂತಹ ಲಕ್ಷಣಗಳು ಕಂಡುಬಂದರೆ ಜೀವಕ್ಕೆ ಅಪಾಯ

ರೋಗಲಕ್ಷಣದ ತಲೆತಿರುಗುವಿಕೆ ನಿರ್ದಿಷ್ಟವಾಗಿ ಮಧುಮೇಹದಿಂದ ಉಂಟಾಗುವ ಸಾವಿಗೆ ಸಂಬಂಧಿಸಿದೆ. ಈ ಹಿಂದೆ ಕಡೆಗಣಿಸಲ್ಪಟ್ಟ ಸಂಪರ್ಕದ ಮೇಲೆ ಕೂಡ ಬೆಳಕು ಚೆಲ್ಲುತ್ತದೆ. ಎಲ್ಲಾ ರೀತಿಯ ತಲೆತಿರುಗುವಿಕೆ ಒಂದೇ ರೀತಿಯ ಅಪಾಯವನ್ನು ಉಂಟುಮಾಡುವುದಿಲ್ಲ. ಹೀಗಾಗಿ, ತಲೆತಿರುಗಿದ ಕೂಡಲೆ ಆತಂಕ ಪಡಬೇಕಾಗಿಲ್ಲ.

ತಲೆತಿರುಗುವಿಕೆ ನಮ್ಮ ಆರೋಗ್ಯಕ್ಕೆ ಏಕೆ ಅಪಾಯಕಾರಿ?:

ಬಾಹ್ಯ ನರರೋಗ ಮತ್ತು ಮೈಕ್ರೋಆಂಜಿಯೋಪತಿ ಪ್ರೇರಿತ ರಕ್ತಕೊರತೆಯ ಬದಲಾವಣೆಗಳಂತಹ ಆರೋಗ್ಯ ಸಮಸ್ಯೆಗಳು ಅಸಮತೋಲನದ ಸಂವೇದನೆಗೆ ಕಾರಣವಾಗಬಹುದು. ಇದು ಸಾವಿನ ಅಪಾಯಕ್ಕೆ ಕಾರಣವಾಗುತ್ತದೆ ಎಂದು ಅಧ್ಯಯನವೊಂದು ತಿಳಿಸಿದೆ.

ಇದನ್ನೂ ಓದಿ: ನೀವು ವಿಪರೀತ ತಲೆ ನೋವಿನಿಂದ ಬಳಲುತ್ತಿದ್ದೀರಾ, ಮನೆಯಲ್ಲೇ ಪರಿಹಾರ ಕಂಡುಕೊಳ್ಳಿ

ನೀವು ಆಗಾಗ ತಲೆತಿರುಗುವಿಕೆಯನ್ನು ಅನುಭವಿಸಿದರೆ, ನಿಲ್ಲಲು ತ್ರಾಣ ಇಲ್ಲದಿದ್ದರೆ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಬಹಳ ಮುಖ್ಯ. ಅವರು ಈ ಸಮಸ್ಯೆಗೆ ಸೂಕ್ತವಾದ ಚಿಕಿತ್ಸೆಯನ್ನು ನೀಡಬಹುದು.

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ