Health: ಧೂಮಪಾನ ನಿಮ್ಮ ಲೈಂಗಿಕ ಸಾಮರ್ಥ್ಯದ ಮೇಲೂ ಪರಿಣಾಮ ಬೀರುತ್ತೆ, ಎಚ್ಚರ!
Smoking: ಧೂಮಪಾನ ನಮ್ಮ ಆರೋಗ್ಯಕ್ಕೆ ಹಾನಿಯುಂಟು ಮಾಡುತ್ತದೆ, ಕ್ಯಾನ್ಸರ್ಗೂ ಕಾರಣವಾಗುತ್ತದೆ ಎಂಬುದು ಹಲವರಿಗೆ ಗೊತ್ತಿರುವ ಸಂಗತಿ. ಆದರೆ, ಇದು ನಮ್ಮ ಲೈಂಗಿಕ ಆರೋಗ್ಯದ ಮೇಲೆ ಕೂಡ ಪರಿಣಾಮ ಬೀರುತ್ತದೆ ಎಂಬ ಅಚ್ಚರಿಯ ವಿಷಯ ಅಧ್ಯಯನದಿಂದ ಬಯಲಾಗಿದೆ. ಇದು ನಿಜವೇ? ಈ ಬಗ್ಗೆ ತಜ್ಞರು ಏನಂತಾರೆ? ಎಂಬಿತ್ಯಾದಿ ವಿಷಯಗಳ ಬಗ್ಗೆ ಮಾಹಿತಿ ಇಲ್ಲಿದೆ.
ಅಮೆರಿಕಾದಲ್ಲಿ ಪ್ರತಿ ವರ್ಷ ಧೂಮಪಾನದಿಂದ (Smoking) 4,80,000ಕ್ಕೂ ಹೆಚ್ಚು ಸಾವುಗಳು ಸಂಭವಿಸುತ್ತವೆ. ಶ್ವಾಸಕೋಶದ ಕ್ಯಾನ್ಸರ್ಗೆ (Cancer) ಸಂಬಂಧಿಸಿದ ಸಾವುಗಳಲ್ಲಿ ಶೇ. 90ರಷ್ಟು ಸಾವಿಗೆ ಧೂಮಪಾನ ಕಾರಣವಾಗುತ್ತದೆ. ಸ್ತನ ಕ್ಯಾನ್ಸರ್‌ಗಿಂತ ಪ್ರತಿ ವರ್ಷ ಹೆಚ್ಚು ಮಹಿಳೆಯರು ಶ್ವಾಸಕೋಶದ ಕ್ಯಾನ್ಸರ್‌ನಿಂದ ಸಾಯುತ್ತಾರೆ. ಸಿಗರೇಟ್ ಸೇವನೆಯು ಪುರುಷರು ಮತ್ತು ಮಹಿಳೆಯರಲ್ಲಿ ಸಾವಿನ ಅಪಾಯವನ್ನು ಹೆಚ್ಚಿಸುತ್ತದೆ. ಈ ಧೂಮಪಾನ ನಿಮ್ಮ ಲೈಂಗಿಕ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ ಎಂಬ ವಿಷಯ ನಿಮಗೆ ಗೊತ್ತಾ?
ಧೂಮಪಾನ ಮತ್ತು ಲೈಂಗಿಕ ಆರೋಗ್ಯದ ನಡುವೆ ಸಂಬಂಧವಿದೆ ಎಂದು ನಿಮಗೆ ತಿಳಿದಿಲ್ಲದಿದ್ದರೆ ಈ ಸುದ್ದಿ ಓದಿ. ಲೈಂಗಿಕ ಆರೋಗ್ಯದ ಮೇಲೆ ಧೂಮಪಾನದ ಕೆಲವು ಋಣಾತ್ಮಕ ಪರಿಣಾಮಗಳು ಇಲ್ಲಿವೆ.
ಇದನ್ನೂ ಓದಿ: Health Tips: ಧೂಮಪಾನಕ್ಕಿಂತಲೂ ಕುಳಿತುಕೊಳ್ಳುವ ಜೀವನಶೈಲಿ ಅಪಾಯಕಾರಿಯೇ? ಇಲ್ಲಿದೆ ತಜ್ಙರ ಎಚ್ಚರಿಕೆ
ನಿಮಿರುವಿಕೆ ಸಮಸ್ಯೆ:
ಸಿಗರೇಟಿನಲ್ಲಿರುವ ನಿಕೋಟಿನ್ ನಮ್ಮ ದೇಹದ ಅಂಗಗಳಾದ್ಯಂತ ರಕ್ತದ ಹರಿವನ್ನು ತಡೆಯುವ ಸಾಮರ್ಥ್ಯವನ್ನು ಹೊಂದಿದೆ ಎಂದು ಅಧ್ಯಯನಗಳು ಸೂಚಿಸುತ್ತವೆ. ಇದರಿಂದ ಪುರುಷರಲ್ಲಿ ನಿಮಿರುವಿಕೆ ಕಡಿಮೆಯಾಗುತ್ತದೆ.
ಸ್ತನ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ:
ಧೂಮಪಾನವು ಸ್ತನ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸಬಹುದು ಮತ್ತು ಸ್ತನದ ಕುಗ್ಗುವಿಕೆಗೆ ಕಾರಣವಾಗಬಹುದು ಎಂದು ಬಯಲಾಗಿದೆ.
ವೀರ್ಯಾಣು ಸಂಖ್ಯೆಯನ್ನು ಕಡಿಮೆ ಮಾಡುತ್ತದೆ:
ಧೂಮಪಾನವು ವೀರ್ಯದ ಪ್ರಮಾಣ ಮತ್ತು ವೀರ್ಯದ ಸಂಖ್ಯೆಯನ್ನು ಕಡಿಮೆ ಮಾಡುತ್ತದೆ. ಇದು ದೇಹದ ಫಲವತ್ತತೆಯನ್ನು ದುರ್ಬಲಗೊಳಿಸುತ್ತದೆ.
ಇದನ್ನೂ ಓದಿ: Mouth Cancer: ಧೂಮಪಾನ ಮಾಡದವರಿಗೂ ಬಾಯಿಯ ಕ್ಯಾನ್ಸರ್ ಬರಲು ಕಾರಣ ಇಲ್ಲಿದೆ
ಮೊಟ್ಟೆಯ ಗುಣಮಟ್ಟದ ಮೇಲೆ ಪರಿಣಾಮ ಬೀರುತ್ತದೆ:
ಧೂಮಪಾನವು ಅಂಡಾಶಯದ ಮೀಸಲು ಸವಕಳಿಯನ್ನು ವೇಗಗೊಳಿಸುತ್ತದೆ ಎಂದು ಸಂಶೋಧನೆ ತಿಳಿಸುತ್ತದೆ. ಇದು ಉತ್ಪತ್ತಿಯಾಗುವ ಮೊಟ್ಟೆಗಳ ಗುಣಮಟ್ಟ ಮತ್ತು ಪ್ರಮಾಣದ ಮೇಲೆ ಪರಿಣಾಮ ಬೀರುತ್ತದೆ.
ಅಕಾಲಿಕ ಋತುಬಂಧ:
ಅಕಾಲಿಕ ಋತುಬಂಧವು ಹಲವಾರು ಆರೋಗ್ಯ ಅಪಾಯಗಳಿಗೆ ಸಂಬಂಧಿಸಿದೆ. ಧೂಮಪಾನಿಗಳಲ್ಲದವರಿಗಿಂತ ಧೂಮಪಾನ ಮಾಡುವ ಮಹಿಳೆಯರು 50 ವರ್ಷಕ್ಕಿಂತ ಮೊದಲು ಋತುಬಂಧವನ್ನು ಅನುಭವಿಸುವ ಸಾಧ್ಯತೆಯಿದೆ ಎಂದು ಸಂಶೋಧನೆ ತಿಳಿಸಿದೆ.
ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ