AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Yoga: ಲಘು ಆಹಾರ ತಿಂದರೂ ಜೀರ್ಣವಾಗುತ್ತಿಲ್ಲವೇ? ಊಟದ ಬಳಿಕ ಈ ಆಸನಗಳನ್ನು ಮಾಡಿ

ಏನು ತಿಂದರೂ ಜೀರ್ಣವಾಗುವುದಿಲ್ಲ, ಹೊಟ್ಟೆ ಉಬ್ಬಿರುವ ಅನುಭವ ಸಾಕಷ್ಟು ಮಂದಿ ಅನುಭವಿಸುತ್ತಿದ್ದಾರೆ. ಇದು ವ್ಯಕ್ತಿಯಲ್ಲಿ ಜೀರ್ಣಾಂಗ ವ್ಯವಸ್ಥೆಯ ಕಾರ್ಯನಿರ್ವಹಣೆಯನ್ನು ಅವಲಂಬಿಸಿರುತ್ತದೆ.

Yoga: ಲಘು ಆಹಾರ ತಿಂದರೂ ಜೀರ್ಣವಾಗುತ್ತಿಲ್ಲವೇ? ಊಟದ ಬಳಿಕ ಈ ಆಸನಗಳನ್ನು ಮಾಡಿ
Yoga
TV9 Web
| Updated By: ನಯನಾ ರಾಜೀವ್|

Updated on: Sep 01, 2022 | 9:58 AM

Share

ಏನು ತಿಂದರೂ ಜೀರ್ಣವಾಗುವುದಿಲ್ಲ, ಹೊಟ್ಟೆ ಉಬ್ಬಿರುವ ಅನುಭವ ಸಾಕಷ್ಟು ಮಂದಿ ಅನುಭವಿಸುತ್ತಿದ್ದಾರೆ. ಇದು ವ್ಯಕ್ತಿಯಲ್ಲಿ ಜೀರ್ಣಾಂಗ ವ್ಯವಸ್ಥೆಯ ಕಾರ್ಯನಿರ್ವಹಣೆಯನ್ನು ಅವಲಂಬಿಸಿರುತ್ತದೆ. ಕೆಲವರು ಯಾವ ರೀತಿಯ ಆಹಾರವನ್ನು ತೆಗೆದುಕೊಂಡರೂ ಅದು ಸುಲಭವಾಗಿ ಜೀರ್ಣವಾಗುತ್ತದೆ, ಕೆಲವರು ಲಘು ಆಹಾರ ಸೇವಿಸಿದರೂ ಜೀರ್ಣಕ್ರಿಯೆ ಸಮಸ್ಯೆಯಿಂದ ಬಳಲುತ್ತಿರುತ್ತಾರೆ.

ತಿಂದ ನಂತರ ಆಹಾರ ಜೀರ್ಣವಾಗಲು ಕೆಲವು ಆಸನಗಳನ್ನು ಮಾಡಿದರೆ ಸಮಸ್ಯೆ ಪರಿಹಾರವಾಗುತ್ತದೆ ಎಂದು ತಜ್ಞರು ಸಲಹೆ ನೀಡುತ್ತಾರೆ. ಸಾಮಾನ್ಯವಾಗಿ, ತಿಂದ ತಕ್ಷಣ ದೇಹಕ್ಕೆ ಆಯಾಸವನ್ನುಂಟು ಮಾಡುವ ಕೆಲಸಗಳನ್ನು ಮಾಡಬಾರದು, ತಿಂದ ತಕ್ಷಣ ಆಸನಗಳನ್ನು ಮಾಡಬಾರದು ಎಂದು ಹಲವರು ಹೇಳುತ್ತಾರೆ. ಆದರೆ ತಿಂದ ನಂತರ ಕೆಲವು ರೀತಿಯ ಆಸನಗಳನ್ನು ಮಾಡಿದರೆ ಜೀರ್ಣಾಂಗ ವ್ಯವಸ್ಥೆ ಸರಿಯಾಗಿ ಕೆಲಸ ಮಾಡಿ ಏನು ತಿಂದಿದ್ದೀರಿ ಎಂದು ತಕ್ಷಣ ತಿಳಿಯುತ್ತದೆ ಎನ್ನುತ್ತಾರೆ ತಜ್ಞರು.

ಅತಿಯಾಗಿ ತಿನ್ನುವುದು ಮತ್ತು ಸರಿಯಾದ ಆಹಾರ ಕ್ರಮವನ್ನು ಅನುಸರಿಸದಿರುವುದು ಬೊಜ್ಜು ಸಮಸ್ಯೆಗೆ ಕಾರಣವಾಗುತ್ತದೆ. ಆ್ಯಸಿಡಿ ರಿಫ್ಲೆಕ್ಸ್, ಗ್ಯಾಸ್, ಹೊಟ್ಟೆ ಉಬ್ಬಿದಂತಾಗುವುದು, ಅಜೀರ್ಣದಂತಹ ಲಕ್ಷಣಗಳು ಕಾಡುತ್ತವೆ. ಅವು ವಾಕರಿಕೆ ಮತ್ತು ನಿದ್ರಾಹೀನತೆಯನ್ನು ಸಹ ಉಂಟುಮಾಡುತ್ತವೆ. ಅಂತಿಮವಾಗಿ ತೂಕ ಹೆಚ್ಚಾಗಲು ಕಾರಣವಾಗಬಹುದು.

ಊಟದ ನಂತರ ಕೆಲವು ಯೋಗಾಸನಗಳನ್ನು ಮಾಡಿದರೆ ಉತ್ತಮ ಜೀರ್ಣಕ್ರಿಯೆ, ಶಾಂತಿಯುತ ನಿದ್ರೆ ಮತ್ತು ತೂಕ ನಷ್ಟದಂತಹ ಪ್ರಯೋಜನಗಳನ್ನು ನೀವು ಪಡೆಯುತ್ತೀರಿ ಎಂದು ಯೋಗ ತಜ್ಞರು ಹೇಳುತ್ತಾರೆ.

ಊಟದ ನಂತರ ಮಾಡಬೇಕಾದ ಯೋಗಾಸನಗಳು

ವಜ್ರಾಸನ: ವಜ್ರಾಸನವನ್ನು ಮಾಡುವುದರಿಂದ ಮಧ್ಯಾಹ್ನ, ರಾತ್ರಿ ಊಟ ಅಥವಾ ಏನಾದರೂ ತಿಂದ ನಂತರ ಆಹಾರ ಬೇಗನೆ ಜೀರ್ಣವಾಗುತ್ತದೆ. ಇದು ಮಲಬದ್ಧತೆಯನ್ನೂ ನಿವಾರಿಸುತ್ತದೆ. ಹೊಟ್ಟೆ ಉಬ್ಬರದಂತಹ ಸಮಸ್ಯೆಗಳನ್ನು ನಿವಾರಿಸುತ್ತದೆ. ಈ ಆಸನ ಮಾಡುವುದರಿಂದ ಒತ್ತಡವೂ ಕಡಿಮೆಯಾಗುತ್ತದೆ.

ಸುಪ್ತ ಬದ್ಧ ಕೋನಾಸನ: ಈ ಆಸನವು ದೇಹದ ಒಳ ತೊಡೆಗಳು ಮತ್ತು ಮೊಣಕಾಲುಗಳನ್ನು ವಿಸ್ತರಿಸುತ್ತದೆ. ಪ್ಯಾರಾಸಿಂಪಥೆಟಿಕ್ ನರಮಂಡಲವನ್ನು ಹೆಚ್ಚಿಸುವ ಮೂಲಕ ಜೀರ್ಣಕ್ರಿಯೆಯನ್ನು ಸಕ್ರಿಯಗೊಳಿಸುತ್ತದೆ. ಇದು ಆಯಾಸ ಮತ್ತು ನಿದ್ರಾಹೀನತೆಯನ್ನು ಸಹ ನಿವಾರಿಸುತ್ತದೆ.

ಊರ್ಧ್ವ ಪ್ರಸಾರಿತ ಪದ್ಮಾಸನ: ಈ ಆಸನವನ್ನು ಅಭ್ಯಾಸ ಮಾಡುವುದರಿಂದ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳನ್ನು ನಿವಾರಿಸಲು ಮತ್ತು ಜೀರ್ಣಕ್ರಿಯೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಅಲ್ಲದೆ ಈ ಆಸನವು ಸ್ನಾಯುಗಳನ್ನು ಬಲಪಡಿಸುತ್ತದೆ. ಬೆನ್ನುಮೂಳೆಯನ್ನು ಹಿಗ್ಗಿಸುತ್ತದೆ ಮತ್ತು ಬಲಪಡಿಸುತ್ತದೆ. ಯಕೃತ್ತು ಮತ್ತು ಮೂತ್ರಪಿಂಡಗಳನ್ನು ಉತ್ತೇಜಿಸುತ್ತದೆ. ಅಂಗಗಳ ಕಾರ್ಯವನ್ನು ನಿಯಂತ್ರಿಸುತ್ತದೆ.

ಮಾರ್ಜಾಲಾಸನ: ಈ ಆಸನವು ಸೊಂಟ, ಬೆನ್ನು ಮತ್ತು ಹೊಟ್ಟೆಯ ಸ್ನಾಯುಗಳನ್ನು ಹಿಗ್ಗಿಸುತ್ತದೆ. ಇದು ಜಠರಗರುಳಿನ ಪ್ರದೇಶ ಸೇರಿದಂತೆ ಅಂಗಗಳನ್ನು ಉತ್ತೇಜಿಸುತ್ತದೆ. ಪರಿಣಾಮವಾಗಿ, ಜೀರ್ಣಾಂಗ ವ್ಯವಸ್ಥೆಯು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತದೆ.

ತಾಡಾಸನ: ತಿಂದ ನಂತರ ಮಾಡುವ ಅತ್ಯುತ್ತಮ ಆಸನ ಇದಾಗಿದೆ. ಹೊಟ್ಟೆ ತುಂಬಿದ್ದರೂ ಭಯವಿಲ್ಲದೆ ಮಾಡಬಹುದು. ಇದು ಜೀರ್ಣಕ್ರಿಯೆಯನ್ನು ಸುಲಭಗೊಳಿಸುತ್ತದೆ. ಚಯಾಪಚಯವನ್ನು ಹೆಚ್ಚಿಸುತ್ತದೆ.

ಈ ಮೇಲಿನ ಲೇಖನವು ಟಿವಿ9ನ ಅಧಿಕೃತ ಮಾಹಿತಿಯಾಗಿರುವುದಿಲ್ಲ, ಸಾಮಾನ್ಯ ಮಾಹಿತಿಯನ್ನು ಒಳಗೊಂಡಿರುತ್ತದೆ.

ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆಶಿ ತಂಡದ ಡಿನ್ನರ್​​ ಮೀಟಿಂಗ್​​ ಬಗ್ಗೆ ಸೋಮಶೇಖರ್​​ ಬಿಗ್​​ ಅಪ್ಡೇಟ್​​
ಡಿಕೆಶಿ ತಂಡದ ಡಿನ್ನರ್​​ ಮೀಟಿಂಗ್​​ ಬಗ್ಗೆ ಸೋಮಶೇಖರ್​​ ಬಿಗ್​​ ಅಪ್ಡೇಟ್​​
ಕಾಂಗ್ರೆಸ್​ನ ನೂರಕ್ಕೂ ಹೆಚ್ಚು ಶಾಸಕರು ಡಿಕೆಶಿ ತೆಕ್ಕೆಗೆ?
ಕಾಂಗ್ರೆಸ್​ನ ನೂರಕ್ಕೂ ಹೆಚ್ಚು ಶಾಸಕರು ಡಿಕೆಶಿ ತೆಕ್ಕೆಗೆ?
ಕಷ್ಟಪಟ್ಟಿದ್ದ ಡಿಕೆಶಿಗೆ ಕೊನೆಗೂ ಫಲ, ಅಧಿವೇಶನದ ಬಳಿಕ ಶುಭಸುದ್ದಿ?
ಕಷ್ಟಪಟ್ಟಿದ್ದ ಡಿಕೆಶಿಗೆ ಕೊನೆಗೂ ಫಲ, ಅಧಿವೇಶನದ ಬಳಿಕ ಶುಭಸುದ್ದಿ?
‘ಕರ್ನಾಟಕ ಸಹೋದರನ ಮನೆ, ಕನ್ನಡವೇ ಸತ್ಯ, ಕನ್ನಡವೇ ನಿತ್ಯ: ಬಾಲಯ್ಯ
‘ಕರ್ನಾಟಕ ಸಹೋದರನ ಮನೆ, ಕನ್ನಡವೇ ಸತ್ಯ, ಕನ್ನಡವೇ ನಿತ್ಯ: ಬಾಲಯ್ಯ
ಸ್ಕೈಡೈವ್ ಮಾಡುವಾಗ ವಿಮಾನದ ರೆಕ್ಕೆಗೆ ಸಿಲುಕಿದ ಪ್ಯಾರಾಚೂಟ್
ಸ್ಕೈಡೈವ್ ಮಾಡುವಾಗ ವಿಮಾನದ ರೆಕ್ಕೆಗೆ ಸಿಲುಕಿದ ಪ್ಯಾರಾಚೂಟ್