ನಮ್ಮ ದೇಹವು ದೈನಂದಿನ ಕಾರ್ಯಚಟುವಟಿಕೆಗೆ ಅಗತ್ಯವಾದ ಪೋಷಕಾಂಶಗಳಲ್ಲಿ (Nutrients) ಕಬ್ಬಿಣವು (Iron) ಒಂದು. ಇದು ಹಿಮೋಗ್ಲೋಬಿನ್ (Hemoglobin) ಉತ್ಪತ್ತಿಗೆ ಸಹಾಯ ಮಾಡುತ್ತದೆ, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ, ಬುದ್ದಿ ಶಕ್ತಿಯನ್ನು ಹೆಚ್ಚಿಸುತ್ತದೆ. ಕಬ್ಬಿಣಾಂಶ ದೇಹಕ್ಕೆ ಆಧಾರಸ್ತಂಭವಾಗಿದ್ದರೂ, ಕಬ್ಬಿಣದ ಕೊರತೆಯು ಪ್ರಪಂಚದಾದ್ಯಂತ ಜನರಲ್ಲಿ ಕಾಡುವ ಸಾಮಾನ್ಯ ಸಮಸ್ಯೆಯಾಗಿದೆ. ಕಬ್ಬಿಣಾಂಶ ಕಡಿಮೆಯಾದರೆ ಏನಾಗುತ್ತದೆ ಎಂದು ನಿಮಗೆ ತಿಳಿದಿದೆಯಾ? ದೇಹವು ಸಾಕಷ್ಟು ಹಿಮೋಗ್ಲೋಬಿನ್ ಅನ್ನು ಉತ್ಪಾದಿಸುವುದಿಲ್ಲ, ದೇಹದಲ್ಲಿ ಆಮ್ಲಜನಕದ ಕೊರತೆ, ಹೀಗೆ ಹತ್ತು ಹಲವಾರು ಇತರ ಸಮಸ್ಯೆಗಳಿಗೆ ಕಾರಣವಾಗುತ್ತದೆ.
ಮೇಲೆ ನೀಡಿರುವ ಯಾವುದಾದರೂ ರೋಗಲಕ್ಷಣಗಳು ನಿಮ್ಮಲ್ಲಿದ್ದರೆ, ಕೂಡಲೇ ವೈದ್ಯರನ್ನು ಭೇಟಿ ಮಾಡಿ. ವೈದ್ಯರು ನೀಡಿದ ಸಲಹೆಯನ್ನು ಚಾಚು ತಪ್ಪದೆ ಪಾಲಿಸುವುದನ್ನು ಮರೆಯದಿರಿ.
ನಾವು ತಿನ್ನುವ ಆಹಾರ ನಮ್ಮ ದೇಹದ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ, ನಮ್ಮ ದೇಹವು ಸಾಕಷ್ಟು ಕಬ್ಬಿಣ ಭರಿತ ಆಹಾರವನ್ನು ಸೇವಿಸುವುದು ಮತ್ತು ಹೀರಿಕೊಳ್ಳುವುದು ಮುಖ್ಯವಾಗಿದೆ. ಈ ಕುರಿತು ಪೌಷ್ಟಿಕತಜ್ಞೆ ಲೊವ್ನೀತ್ ಬಾತ್ರಾ ಕೆಲವು ಮಾರ್ಗಗಳನ್ನು ಇಂಡಿಯಾ.ಕಾಂ ಜೊತೆ ಹಂಚಿಕೊಂಡಿದ್ದಾರೆ:
ಇದನ್ನೂ ಓದಿ: ಆರೋಗ್ಯಕರ ಹೃದಯ ಬೇಕೇ? ಈ 4 ಡಯಟ್ಗಳನ್ನು ನೀವು ಪ್ರಯತ್ನಿಸಲೇಬೇಕು
ಇವುಗಳನ್ನು ನಿಮ್ಮ ಆಹಾರದಲ್ಲಿ ಸೇರಿಸುವುದು ನಿಮ್ಮ ಕಬ್ಬಿಣದ ಅವಶ್ಯಕತೆಗಳನ್ನು ಪೂರೈಸಲು ಸಹಾಯ ಮಾಡುತ್ತದೆ ಜೊತೆಗೆ ನಿಮ್ಮ ಒಟ್ಟಾರೆ ಆರೋಗ್ಯಕ್ಕೆ ಪ್ರಯೋಜನವನ್ನು ನೀಡುತ್ತದೆ.