ಮೊಳಕೆಯೊಡೆದ ಆಲೂಗಡ್ಡೆ ಸೇವನೆ ಮಾಡುವುದು ತುಂಬಾ ಅಪಾಯಕಾರಿ, ತಜ್ಞರು ಹೇಳುವುದೇನು?

ಬಹುತೇಕ ಪ್ರತಿ ಅಡುಗೆ ಮನೆಯಲ್ಲಿಯೂ ಆಲೂಗಡ್ಡೆ ಇದ್ದೇ ಇರುತ್ತದೆ. ಆದರೆ ಕೆಲವು ದಿನಗಳ ನಂತರ ಆಲೂಗಡ್ಡೆ ಮೊಳಕೆಯೊಡೆಯುತ್ತದೆ. ಅನೇಕ ಜನರು ಅವುಗಳನ್ನು ತೆಗೆದು ಅಡುಗೆಗೆ ಬಳಸುತ್ತಾರೆ. ಇದನ್ನು ಮಾಡುವುದು ತುಂಬಾ ಅಪಾಯಕಾರಿ ಎಂದು ಸಂಶೋಧನೆಗಳಿಂದ ತಿಳಿದು ಬಂದಿದೆ. ಈ ರೀತಿ ಮೊಳಕೆ ಬಂದ ಆಲೂಗಡ್ಡೆಯನ್ನು ಸೇವನೆ ಮಾಡಿದರೆ ಜೀವಕ್ಕೆ ಅಪಾಯವಿದೆ ಎಂದು ಬೆಂಗಳೂರು ಮೂಲದ ವೈದ್ಯ ಡಾ. ದೀಪಕ್ ಆರಾಧ್ಯ ಎಚ್ಚರಿಸಿದ್ದಾರೆ. ಹಾಗಾದರೆ ಇದನ್ನು ಯಾಕೆ ಸೇವನೆ ಮಾಡಬಾರದು? ಇದರಿಂದ ಯಾವ ರೀತಿಯ ಸಮಸ್ಯೆಗಳು ಉಂಟಾಗುತ್ತದೆ ಎಂಬುದನ್ನು ತಿಳಿದುಕೊಳ್ಳಿ.

ಮೊಳಕೆಯೊಡೆದ ಆಲೂಗಡ್ಡೆ ಸೇವನೆ ಮಾಡುವುದು ತುಂಬಾ ಅಪಾಯಕಾರಿ, ತಜ್ಞರು ಹೇಳುವುದೇನು?
ಸಾಂದರ್ಭಿಕ ಚಿತ್ರ
Follow us
ಪ್ರೀತಿ ಭಟ್​, ಗುಣವಂತೆ
| Updated By: ಅಕ್ಷಯ್​ ಪಲ್ಲಮಜಲು​​

Updated on: Nov 06, 2024 | 2:55 PM

ತರಕಾರಿ ಸೇವನೆ ಮಾಡುವವರಿಗೆ ಸಾಮಾನ್ಯವಾಗಿ ಆಲೂಗಡ್ಡೆ ಇಷ್ಟವಾಗುತ್ತದೆ. ಇದರಲ್ಲಿ ಪೊಟ್ಯಾಸಿಯಮ್ ಸಮೃದ್ಧವಾಗಿದೆ. ಇದು ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡುತ್ತದೆ. ಆದರೆ ಇದನ್ನು ಎಣ್ಣೆಯಲ್ಲಿ ಹುರಿದು ತಿನ್ನುವುದು ಒಳ್ಳೆಯದಲ್ಲ. ಬೇಯಿಸಿ ತಿನ್ನುವುದು ಉತ್ತಮ ಎಂದು ಹೇಳಲಾಗುತ್ತದೆ. ಅದಲ್ಲದೆ ಆಲೂಗಡ್ಡೆಯಿಂದ ವಿವಿಧ ರೀತಿಯ ಖಾದ್ಯಗಳನ್ನು ತಯಾರಿಸಬಹುದು. ಹಾಗಾಗಿಯೇ ಆಲೂಗಡ್ಡೆಯನ್ನು ಸಾಂಬಾರ್ ಮಾಡುವುದರಿಂದ ಹಿಡಿದು ಫ್ರೆಂಚ್ ಫ್ರೈಸ್ ಮಾಡುವ ವರೆಗೆ ಬಳಸಲಾಗುತ್ತದೆ. ಆದರೆ ಮಾರುಕಟ್ಟೆಯಿಂದ ಆಲೂಗಡ್ಡೆ ಖರೀದಿಸುವಾಗ ಕೆಲವು ಮುನ್ನೆಚ್ಚರಿಕೆಗಳನ್ನು ವಹಿಸಬೇಕಾಗುತ್ತದೆ. ಇಲ್ಲದಿದ್ದರೆ, ಇದು ನಿಮ್ಮ ಆರೋಗ್ಯಕ್ಕೆ ಅಪಾಯ ತರಬಹುದು ಎಂದು ಆರೋಗ್ಯ ತಜ್ಞರು ಹೇಳುತ್ತಾರೆ.

ಬಹುತೇಕ ಪ್ರತಿ ಅಡುಗೆ ಮನೆಯಲ್ಲಿಯೂ ಆಲೂಗಡ್ಡೆ ಇದ್ದೇ ಇರುತ್ತದೆ. ಏಕೆಂದರೆ ಅವು ಬೇಗನೆ ಹಾಳಾಗುವುದಿಲ್ಲ. ಜೊತೆಗೆ ಅವುಗಳನ್ನು ತುಂಬಾ ಸಮಯದ ವರೆಗೆ ಸಂಗ್ರಹಿಸಬಹುದಾಗಿದ್ದು ಅದಕ್ಕಾಗಿಯೇ ಅನೇಕ ಜನರು ಅವುಗಳನ್ನು ಅಗತ್ಯಕ್ಕಿಂತ ಹೆಚ್ಚು ಖರೀದಿಸಿ ಮನೆಗೆ ತರುತ್ತಾರೆ. ಆದರೆ ಕೆಲವು ದಿನಗಳ ನಂತರ ಆಲೂಗಡ್ಡೆ ಮೊಳಕೆಯೊಡೆಯುತ್ತದೆ. ಅನೇಕ ಜನರು ಅವುಗಳನ್ನು ತೆಗೆದು ಅಡುಗೆಗೆ ಬಳಸುತ್ತಾರೆ. ಇದನ್ನು ಮಾಡುವುದು ತುಂಬಾ ಅಪಾಯಕಾರಿ ಎಂದು ಸಂಶೋಧನೆಗಳಿಂದ ತಿಳಿದು ಬಂದಿದೆ. ಈ ರೀತಿ ಮೊಳಕೆ ಬಂದ ಆಲೂಗಡ್ಡೆಯನ್ನು ಸೇವನೆ ಮಾಡಿದರೆ ಜೀವಕ್ಕೆ ಅಪಾಯವಿದೆ ಎಂದು ಬೆಂಗಳೂರು ಮೂಲದ ವೈದ್ಯ ಡಾ. ದೀಪಕ್ ಆರಾಧ್ಯ ಎಚ್ಚರಿಸಿದ್ದಾರೆ. ಹಾಗಾದರೆ ಇದನ್ನು ಯಾಕೆ ಸೇವನೆ ಮಾಡಬಾರದು? ಇದರಿಂದ ಯಾವ ರೀತಿಯ ಸಮಸ್ಯೆಗಳು ಉಂಟಾಗುತ್ತದೆ ಎಂಬುದನ್ನು ತಿಳಿದುಕೊಳ್ಳಿ.

ಇದನ್ನೂ ಓದಿ : ಮುಟ್ಟಿನ ಸಮಯದಲ್ಲಿ ಹೊಟ್ಟೆಯುಬ್ಬರಕ್ಕೆ ಕಾರಣವೇನು? ತಜ್ಞರ ಮಾಹಿತಿ ಇಲ್ಲಿದೆ

ಯಾಕೆ ಸೇವನೆ ಮಾಡಬಾರದು?

ಮೊಳಕೆಯೊಡೆದ ಆಲೂಗಡ್ಡೆ ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದಲ್ಲ. ಏಕೆಂದರೆ ಈ ರೀತಿಯ ತಿಳಿ ಹಸಿರು ಆಲೂಗಡ್ಡೆಯಲ್ಲಿ ಸೋಲನೈನ್ ಮತ್ತು ಚಾಕೊನೈನ್ ಉತ್ಪತ್ತಿಯಾಗುತ್ತವೆ. ಇವುಗಳ ಸೇವನೆ ವಿಷಕಾರಿಯಾಗಬಹುದು. ಇದು ವಾಕರಿಕೆ, ವಾಂತಿ, ಅತಿಸಾರ ಮತ್ತು ಹೊಟ್ಟೆ ನೋವಿಗೆ ಕಾರಣವಾಗಬಹುದು. ಅಲ್ಲದೆ ಇದು ತಲೆನೋವು ಮತ್ತು ತಲೆ ತಿರುಗುವಿಕೆಯಂತಹ ನರವೈಜ್ಞಾನಿಕ ರೋಗಲಕ್ಷಣಗಳಿಗೆ ಕಾರಣವಾಗಬಹುದು ಎಂದು ಡಾ. ದೀಪಕ್ ಹೇಳುತ್ತಾರೆ.

ಆದ್ದರಿಂದ ಇನ್ನು ಮುಂದೆ ಅಡುಗೆ ಮಾಡುವಾಗ ಇದನ್ನು ಗಮನದಲ್ಲಿಟ್ಟುಕೊಂಡು ಆಲೂಗಡ್ಡೆಯನ್ನು ಬಳಸುವುದು ಸೂಕ್ತ. ಇಲ್ಲದಿದ್ದರೆ, ಆರೋಗ್ಯ ಸಮಸ್ಯೆಗಳು ನೀವು ಬೇಡ ಎಂದರು ಬರುತ್ತದೆ. ಹಾಗಾಗಿ ನಿಮ್ಮ ಆರೋಗ್ಯವನ್ನು ಸರಿಯಾಗಿ ಕಾಪಾಡಿಕೊಳ್ಳಿ.

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ