Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆರೋಗ್ಯ ಸಲಹೆಗಳು: ಜ್ವರ ಬಂದಾಗ ಸ್ನಾನ ಮಾಡಬಹುದೇ? ಸ್ನಾನ ಮಾಡಿದರೆ ಏನಾಗುತ್ತೆ ಗೊತ್ತಾ?

Fever Care Tips: ಅನೇಕ ಜನರು ಜ್ವರ ಬಂದಾಗ ಸ್ನಾನ ಮಾಡುವುದನ್ನು ತಪ್ಪಿಸುತ್ತಾರೆ. ಈ ಸಮಯದಲ್ಲಿ ಸ್ನಾನ ಮಾಡಿದರೆ ಸಮಸ್ಯೆ ಉಲ್ಬಣಿಸುತ್ತದೆ ಎಂಬ ತಪ್ಪು ಕಲ್ಪನೆ ಅನೇಕರಲ್ಲಿದೆ. ಆದರೆ, ಜ್ವರ ಬಂದರೆ ಸ್ನಾನ ಮಾಡಬೇಕಾ, ಮಾಡಬಾರದಾ ಎಂಬುದರ ಬಗ್ಗೆ ಹಲವರಿಗೆ ತಿಳಿದಿಲ್ಲ.

ಆರೋಗ್ಯ ಸಲಹೆಗಳು: ಜ್ವರ ಬಂದಾಗ ಸ್ನಾನ ಮಾಡಬಹುದೇ? ಸ್ನಾನ ಮಾಡಿದರೆ ಏನಾಗುತ್ತೆ ಗೊತ್ತಾ?
ಜ್ವರ ಬಂದಾಗ ಸ್ನಾನ ಮಾಡಬಹುದೇ?
Follow us
ಸಾಧು ಶ್ರೀನಾಥ್​
|

Updated on:Nov 01, 2023 | 3:41 PM

ವಿಭಿನ್ನ ಹವಾಮಾನ ಪರಿಸ್ಥಿತಿಗಳು ತ್ವರಿತವಾಗಿ ಅನಾರೋಗ್ಯಕ್ಕೆ ಕಾರಣವಾಗಬಹುದು. ಪ್ರಸ್ತುತ ಹಗಲಿನಲ್ಲಿ ಬಿಸಿಯಾಗಿರುತ್ತದೆ ಮತ್ತು ರಾತ್ರಿಯಲ್ಲಿ ತಂಪಾಗಿರುತ್ತದೆ. ಮತ್ತೊಂದೆಡೆ ವಾಯು ಮಾಲಿನ್ಯವೂ ಹೆಚ್ಚುತ್ತಿದೆ. ಇವೆಲ್ಲವೂ ಆರೋಗ್ಯದ ಮೇಲೆ ಋಣಾತ್ಮಕ ಪರಿಣಾಮ ಬೀರುತ್ತವೆ. ಇಂತಹ ವಾತಾವರಣದಿಂದ ವೈರಲ್ ಜ್ವರ ದಾಳಿ ಮಾಡುತ್ತದೆ. ಇದರಿಂದ ಜ್ವರ, ಮೂಗು ಕಟ್ಟುವಿಕೆ, ಗಂಟಲು ನೋವು, ಆಲಸ್ಯ ಮತ್ತು ದೌರ್ಬಲ್ಯ ಮುಂತಾದ ಲಕ್ಷಣಗಳು ಕಂಡುಬರುತ್ತವೆ. ಇನ್ನೊಂದೆಡೆ ಡೆಂಗ್ಯೂ ಅಂತಹ ಜ್ವರಗಳು ಹೆಚ್ಚುತ್ತಿದೆ.

ಅನೇಕ ಜನರು ಜ್ವರ ಬಂದಾಗ ಸ್ನಾನ ಮಾಡುವುದನ್ನು ತಪ್ಪಿಸುತ್ತಾರೆ. ಈ ಸಮಯದಲ್ಲಿ ಸ್ನಾನ ಮಾಡಿದರೆ ಸಮಸ್ಯೆ ಉಲ್ಬಣಿಸುತ್ತದೆ ಎಂಬ ತಪ್ಪು ಕಲ್ಪನೆ ಅನೇಕರಲ್ಲಿದೆ. ಆದರೆ, ಜ್ವರ ಬಂದರೆ ಸ್ನಾನ ಮಾಡಬೇಕಾ, ಮಾಡಬಾರದಾ ಎಂಬುದರ ಬಗ್ಗೆ ಹಲವರಿಗೆ ತಿಳಿದಿಲ್ಲ. ಆರೋಗ್ಯ ತಜ್ಞರು ಹೇಳುವುದೇನೆಂದರೆ ಜ್ವರ, ನೆಗಡಿ, ಕೆಮ್ಮಿನಂತಹ ಸಮಸ್ಯೆಗಳು ಬಂದಾಗ ಪ್ರತಿದಿನ ಸ್ನಾನ ಮಾಡಬೇಕು.

ಇದನ್ನೂ ಓದಿ:  ಸ್ನಾನವನ್ನು ಯಾವಾಗ ಮಾಡಬೇಕು? ಏಕೆ ಮಾಡಬೇಕು? ಹೇಗೆ ಮಾಡಬೇಕು? ಎಲ್ಲಿ ಮಾಡಬೇಕು?

ದಿನಕ್ಕೆ ಒಂದು ಅಥವಾ ಎರಡು ಬಾರಿ ಸ್ನಾನ ಮಾಡುವುದರಿಂದ ಯಾವುದೇ ಹಾನಿಯಾಗುವುದಿಲ್ಲ. ವಾಸ್ತವವಾಗಿ, ಜ್ವರದ ಸಮಯದಲ್ಲಿ ದೇಹದ ಉಷ್ಣತೆಯು ಹೆಚ್ಚಾಗುತ್ತದೆ. ದೇಹದ ಉಷ್ಣತೆಯನ್ನು ಕಡಿಮೆ ಮಾಡಲು ಸ್ನಾನ ಮಾಡುವುದು ಅತ್ಯಗತ್ಯ. ಅಗತ್ಯವಿದ್ದರೆ, ನೀವು ತಲೆ ಸ್ನಾನವನ್ನು ಸಹ ತೆಗೆದುಕೊಳ್ಳಬಹುದು.

ಜ್ವರದಿಂದ ಮುಕ್ತಿ ಪಡೆಯಲು ಔಷಧವನ್ನೂ ಸೇವಿಸಬೇಕು. ಜ್ವರದ ಜೊತೆಗೆ ಶೀತ-ಗಂಟಲು ನೋವು ಮುಂತಾದ ಸಮಸ್ಯೆಗಳಿದ್ದರೆ ವೈದ್ಯರನ್ನು ಸಂಪರ್ಕಿಸಬೇಕು. ಸರಿಯಾದ ಆಹಾರ ಕ್ರಮವನ್ನೂ ತೆಗೆದುಕೊಳ್ಳಬೇಕು. ರೋಗನಿರೋಧಕ ಶಕ್ತಿಯನ್ನು ಬಲಪಡಿಸಲು ಈ ಸಮಯದಲ್ಲಿ ವಿಟಮಿನ್ ಸಿ ಸಮೃದ್ಧವಾಗಿರುವ ಆಹಾರವನ್ನು ಸೇವಿಸಬೇಕು. ಮೀನು, ಮೊಟ್ಟೆ, ಮಾಂಸ, ಹಣ್ಣುಗಳು ಮತ್ತು ತರಕಾರಿಗಳಂತಹ ಆಹಾರಗಳಲ್ಲಿ ವಿಟಮಿನ್ ಸಿ ಸಮೃದ್ಧವಾಗಿದೆ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್  ಮಾಡಿ

Published On - 3:37 pm, Wed, 1 November 23

ಬೆಂಗಳೂರಿನಲ್ಲಿ ರಾಯಲ್ ಎನ್ಫೀಲ್ಡ್ ಬುಲೆಟ್ ಓಡಿಸಿದ ಪುಟ್ಟ ಬಾಲಕ!
ಬೆಂಗಳೂರಿನಲ್ಲಿ ರಾಯಲ್ ಎನ್ಫೀಲ್ಡ್ ಬುಲೆಟ್ ಓಡಿಸಿದ ಪುಟ್ಟ ಬಾಲಕ!
ಕೊಲೆಯಾದ ನಿವೃತ್ತ ಐಪಿಎಸ್​​ ಓಂಪ್ರಕಾಶ್​ ಫಾರ್ಮ್ ಹೌಸ್ ಹೇಗಿದೆ ನೋಡಿ...!
ಕೊಲೆಯಾದ ನಿವೃತ್ತ ಐಪಿಎಸ್​​ ಓಂಪ್ರಕಾಶ್​ ಫಾರ್ಮ್ ಹೌಸ್ ಹೇಗಿದೆ ನೋಡಿ...!
ಯುಎಸ್ ಉಪಾಧ್ಯಕ್ಷ ಜೆಡಿ. ವ್ಯಾನ್ಸ್ ಕುಟುಂಬಕ್ಕೆ ಶಾಸ್ತ್ರೀಯ ನೃತ್ಯದ ಸ್ವಾಗತ
ಯುಎಸ್ ಉಪಾಧ್ಯಕ್ಷ ಜೆಡಿ. ವ್ಯಾನ್ಸ್ ಕುಟುಂಬಕ್ಕೆ ಶಾಸ್ತ್ರೀಯ ನೃತ್ಯದ ಸ್ವಾಗತ
VIDEO: ಮೊದಲು ಕಿತ್ತಾಟ... ಆಮೇಲೆ ಸ್ನೇಹಹಸ್ತ: ಇದು ವಿರಾಟ್ ಕೊಹ್ಲಿ
VIDEO: ಮೊದಲು ಕಿತ್ತಾಟ... ಆಮೇಲೆ ಸ್ನೇಹಹಸ್ತ: ಇದು ವಿರಾಟ್ ಕೊಹ್ಲಿ
ಹುಲಿಯನ್ನೇ ಅಟ್ಟಾಡಿಸಿದ ಒಂಟಿ ಸಲಗ: ಅಪರೂಪದ ವಿಡಿಯೋ ವೈರಲ್​
ಹುಲಿಯನ್ನೇ ಅಟ್ಟಾಡಿಸಿದ ಒಂಟಿ ಸಲಗ: ಅಪರೂಪದ ವಿಡಿಯೋ ವೈರಲ್​
VIDEO: ಅಣ್ಣನ ಬ್ಯಾಟಿಂಗ್ ಎಂಟ್ರಿಗೆ ಬಿಕ್ಕಳಿಸಿ ಅತ್ತ ತಮ್ಮ
VIDEO: ಅಣ್ಣನ ಬ್ಯಾಟಿಂಗ್ ಎಂಟ್ರಿಗೆ ಬಿಕ್ಕಳಿಸಿ ಅತ್ತ ತಮ್ಮ
‘ನಾನು ಶಿವನ ಭಕ್ತ, ಅದಕ್ಕಾಗಿ ಇಲ್ಲಿಗೆ ಬಂದೆ’; ಮಹಾಕಾಳೇಶ್ವರ ದೇವಾಲಯ ಭೇಟಿ
‘ನಾನು ಶಿವನ ಭಕ್ತ, ಅದಕ್ಕಾಗಿ ಇಲ್ಲಿಗೆ ಬಂದೆ’; ಮಹಾಕಾಳೇಶ್ವರ ದೇವಾಲಯ ಭೇಟಿ
ಕೆಸರಿನಲ್ಲಿ ಹೂತ ಕಾರು, ಟಿಟಿ: ಜಮ್ಮು ಕಾಶ್ಮೀರ ಮೇಘಸ್ಫೋಟದ ಪರಿಣಾಮ ನೋಡಿ
ಕೆಸರಿನಲ್ಲಿ ಹೂತ ಕಾರು, ಟಿಟಿ: ಜಮ್ಮು ಕಾಶ್ಮೀರ ಮೇಘಸ್ಫೋಟದ ಪರಿಣಾಮ ನೋಡಿ
ನಿನ್ನ ಕೋಚ್ ಕೂಡ ಗೊತ್ತು ಕಣೋ... ಎಲ್ಲೆ ಮೀರಿದ ಕಿರಿಕ್ ಕೊಹ್ಲಿ
ನಿನ್ನ ಕೋಚ್ ಕೂಡ ಗೊತ್ತು ಕಣೋ... ಎಲ್ಲೆ ಮೀರಿದ ಕಿರಿಕ್ ಕೊಹ್ಲಿ
VIDEO: RCB ಅಭಿಮಾನಿಗಳ ಗಮನಕ್ಕೆ: ನೀವು ಸುಳ್ಳಿಗೆ ಮರುಳಾಗಿದ್ದೀರಿ
VIDEO: RCB ಅಭಿಮಾನಿಗಳ ಗಮನಕ್ಕೆ: ನೀವು ಸುಳ್ಳಿಗೆ ಮರುಳಾಗಿದ್ದೀರಿ