ಜೀವನದಲ್ಲಿ ಎಷ್ಟು ಬಾರಿ ರಕ್ತದಾನ ಮಾಡಬಹುದು ಎಂಬುದು ತಿಳಿದಿದೆಯೇ?

ರಕ್ತದಾನ ಮಹಾದಾನಗಳಲ್ಲಿ ಒಂದು. ಆರೋಗ್ಯವಂತ ವ್ಯಕ್ತಿ ರಕ್ತದಾನ ಮಾಡುವುದರಿಂದ ಮತ್ತೊಬ್ಬರ ಜೀವ ಉಳಿಸಿದ ಪುಣ್ಯದ ಜೊತೆಗೆ ಆರೋಗ್ಯವನ್ನು ಚೆನ್ನಾಗಿ ಇಟ್ಟುಕೊಳ್ಳಬಹುದಾಗಿದೆ. ಆದರೆ ಕೆಲವರಿಗೆ ಈ ವಿಷಯದ ಕುರಿತು ನಾನಾ ರೀತಿಯ ಅನುಮಾನಗಳಿರುತ್ತದೆ. ಅಂದರೆ ರಕ್ತದಾನ ಎಷ್ಟು ಬಾರಿ ಮಾಡಬೇಕು? ಯಾರು ಮಾಡಬಹುದು? ರಕ್ತದಾನ ಬೇರೆಯವರಿಗೆ ಕೊಟ್ಟರೆ ನಮಗೆ ಲಾಭವಿದೆಯೇ? ಹೀಗೆ ನೂರಾರು ಪ್ರಶ್ನೆಗಳಿರುತ್ತವೆ. ಈ ಕುರಿತಾದ ಗೊಂದಲಗಳಿಗೆ ಉತ್ತರ ಇಲ್ಲಿದೆ.

ಜೀವನದಲ್ಲಿ ಎಷ್ಟು ಬಾರಿ ರಕ್ತದಾನ ಮಾಡಬಹುದು ಎಂಬುದು ತಿಳಿದಿದೆಯೇ?
ರಕ್ತದಾನ
Image Credit source: Getty Images

Updated on: May 26, 2025 | 4:16 PM

ಒಬ್ಬರ ಜೀವ ಉಳಿಸುವುದು ಸುಲಭವಲ್ಲ ಅದಕ್ಕಾಗಿಯೇ ರಕ್ತದಾನವನ್ನು (Blood Donation) ಮಹಾದಾನ ಅಥವಾ ಅತಿ ಶ್ರೇಷ್ಠವಾದ ದಾನ ಎಂದು ಹೇಳಲಾಗುತ್ತದೆ. ಅದಲ್ಲದೆ ರಕ್ತದ ಅವಶ್ಯಕತೆ ಯಾರಿಗೆ ಯಾವಾಗ ಇರುತ್ತದೆ ಎಂಬುದನ್ನು ಹೇಳಲು ಸಾಧ್ಯವೇ ಇಲ್ಲ. ನಿತ್ಯವೂ ನೂರಾರು ರೋಗಿಗಳಿಗೆ ರಕ್ತದ ಅವಶ್ಯಕತೆ ಇದ್ದೇ ಇರುತ್ತದೆ. ಹಾಗಾಗಿ ರಕ್ತವನ್ನು ದಾನ ಮಾಡುವುದರಿಂದ ಒಬ್ಬ ರೋಗಿಯ ಜೀವ ಉಳಿಸಿದ ಪುಣ್ಯ ಲಭ್ಯವಾಗುತ್ತದೆ. ಆದರೆ ಒಬ್ಬ ವ್ಯಕ್ತಿ ಜೀವನದಲ್ಲಿ ಎಷ್ಟು ಬಾರಿ ರಕ್ತದಾನ ಮಾಡಬಹುದು? ಇದರಿಂದ ಯಾವ ರೀತಿಯ ಆರೋಗ್ಯ (health Tips) ಪ್ರಯೋಜನಗಳಿವೆ ಎಂಬುದನ್ನು ತಿಳಿದುಕೊಳ್ಳಿ.

ರಕ್ತಕ್ಕೆ ರಕ್ತ ಬದಲಿಯಾಗಬಹುದೇ ಹೊರತು ಇದನ್ನು ಕೃತಕವಾಗಿ ತಯಾರಿಸಲು ಸಾಧ್ಯ ಇಲ್ಲ. ಹಾಗಾಗಿ ಒಬ್ಬ ಆರೋಗ್ಯವಂತ ವ್ಯಕ್ತಿ ವರ್ಷಕ್ಕೊಮ್ಮೆಯಾದರೂ ರಕ್ತದಾನ ಮಾಡುವ ಮೂಲಕ ಕೇವಲ ವ್ಯಕ್ತಿಯ ಜೀವ ಉಳಿಸುವುದು ಮಾತ್ರವಲ್ಲ, ಈ ರೀತಿಯ ಅಭ್ಯಾಸ ಆರೋಗ್ಯಕ್ಕೂ ಬಹಳ ಪ್ರಯೋಜನಕಾರಿಯಾಗಬಹುದು. ಆದರೆ ಕೆಲವರಿಗೆ ಈ ಬಗ್ಗೆ ಹಲವು ರೀತಿಯ ಅನುಮಾನಗಳಿರುತ್ತದೆ. ಅಂದರೆ ರಕ್ತದಾನ ಎಷ್ಟು ಬಾರಿ ಮಾಡಬೇಕು? ಯಾರು ಮಾಡಬಹುದು? ರಕ್ತದಾನ ಬೇರೆಯವರಿಗೆ ಕೊಟ್ಟರೆ ನಮಗೆ ಲಾಭವಿದೆಯೇ? ಹೀಗೆ ನೂರಾರು ಪ್ರಶ್ನೆಗಳಿರುತ್ತವೆ. ಈ ಕುರಿತಾದ ಗೊಂದಲಗಳಿಗೆ ಉತ್ತರ ಇಲ್ಲಿದೆ.

ಎಷ್ಟು ಬಾರಿ ರಕ್ತದಾನ ಮಾಡಬಹುದು?

ಈ ವಿಷಯದ ಕುರಿತು ಸ್ತ್ರೀ ರೋಗ ತಜ್ಞೆ ಡಾ. ಬಾಹುಬಲಿ ಅಸ್ಕಿ ಅವರು ನೀಡಿರುವ ಮಾಹಿತಿಯ ಪ್ರಕಾರ, ಒಬ್ಬ ಆರೋಗ್ಯವಂತ ಯುವಕ ಅಥವಾ ಯುವತಿ ಆರು ತಿಂಗಳಿಗೊಮ್ಮೆ ರಕ್ತದಾನ ಮಾಡಬಹುದಾಗಿದೆ. ಇನ್ನು ಕೆಲವರು ಮೂರು ತಿಂಗಳಿಗೊಮ್ಮೆ ಮಾಡುತ್ತಾರೆ. ಆದರೆ ಸಾಧ್ಯವಾದಲ್ಲಿ ವರ್ಷಕ್ಕೆ ಒಮ್ಮೆಯಾದರೂ ರಕ್ತದಾನ ಮಾಡುವುದು ಆರೋಗ್ಯಕ್ಕೆ ಬಹಳ ಒಳ್ಳೆಯದು. ಇನ್ನು ಒಬ್ಬ ವ್ಯಕ್ತಿಯಿಂದ 470 ಮಿಲಿಲೀಟರ್ ರಕ್ತವನ್ನು ಮಾತ್ರ ತೆಗೆದುಕೊಳ್ಳಲಾಗುತ್ತದೆ. ಹಾಗಾಗಿ ರಕ್ತದಾನ ಮಾಡಿ ಒಬ್ಬರ ಜೀವ ಉಳಿಸಿ ಎಂದಿದ್ದಾರೆ.

ಇದನ್ನೂ ಓದಿ
ಮುಟ್ಟಿದರೆ ಮುನಿಯುವ ಈ ಗಿಡದಲ್ಲಿದೆ ಹಲವು ಪ್ರಯೋಜನ
ಗರ್ಭಾವಸ್ಥೆಯಲ್ಲಿ ಪತಿಯ ಬೆಂಬಲ ಹೇಗಿರಬೇಕು?
ಬೆಳಗ್ಗೆ ಬೇಗ ಏಳಬೇಕು ಎಂದು ಅಲಾರಾಂ ಇಡುವವರು ಈ ಸ್ಟೋರಿ ತಪ್ಪದೆ ಓದಿ
ಈ ಒಂದು ಗಿಡದ ಎಲೆ ದೇಹ ಆರೋಗ್ಯಕ್ಕೆ ರಕ್ಷಣಾ ಕವಚ

ರಕ್ತದಾನ ಯಾರಿಗೆ ಒಳ್ಳೆಯದಲ್ಲ?

ಸಾಮಾನ್ಯವಾಗಿ ರಕ್ತ ಪಡೆಯುವುದಕ್ಕಿಂತ ಮೊದಲು ವೈದ್ಯರು ವ್ಯಕ್ತಿಯನ್ನು ಪರೀಕ್ಷಿಸುತ್ತಾರೆ. ಆರೋಗ್ಯವಂತ ವ್ಯಕ್ತಿಯಿಂದ ಮಾತ್ರ ರಕ್ತ ತೆಗೆದುಕೊಳ್ಳಲಾಗುತ್ತದೆ. ಆದರೆ ಕೆಲವರು ರಕ್ತದಾನ ಮಾಡಲು ಅರ್ಹರಾಗಿರುವುದಿಲ್ಲ. ಇನ್ನು ಗರ್ಭಿಣಿ ಮತ್ತು ಹಾಲುಣಿಸುವ ಮಹಿಳೆಯರು, ಅಂತೆಯೇ, ರಕ್ತಹೀನತೆಯ ಸಮಸ್ಯೆ ಇರುವವರಿಂದ ರಕ್ತ ತೆಗೆದುಕೊಳ್ಳುವುದಿಲ್ಲ. ಏಕೆಂದರೆ ಅವರಲ್ಲಿ ಹಿಮೋಗ್ಲೋಬಿನ್ ಮಟ್ಟ ಕಡಿಮೆ ಇರುತ್ತದೆ. ಇದರ ಹೊರತಾಗಿ ಗಂಭೀರ ಕಾಯಿಲೆಯಿಂದ ಚೇತರಿಸಿಕೊಂಡವರಿಂದ, ಯಾವುದೇ ಪ್ರಮುಖ ಶಸ್ತ್ರಚಿಕಿತ್ಸೆಗೆ ಒಳಗಾದವರಿಂದ ರಕ್ತವನ್ನು ಪಡೆಯುವುದಿಲ್ಲ.

ಇದನ್ನೂ ಓದಿ: Blood Donation: ಟ್ಯಾಟೂ ಇದ್ದರೆ ರಕ್ತವನ್ನು ಏಕೆ ದಾನ ಮಾಡಬಾರದು?

ರಕ್ತದಾನ ಮಾಡುವುದರಿಂದ ಸಿಗುವ ಪ್ರಯೋಜನಗಳೇನು?

  • ಹೃದಯದ ಆರೋಗ್ಯ ಕಾಪಾಡಲು ರಕ್ತದಾನ ಸಹಾಯ ಮಾಡುತ್ತದೆ. ಕೆಲವು ಅಧ್ಯಯನಗಳಿಂದ ತಿಳಿದು ಬಂದ ಮಾಹಿತಿ ಅನುಸಾರ, ನಿಯಮಿತವಾಗಿ ರಕ್ತದಾನ ಮಾಡುವ ವ್ಯಕ್ತಿಗಳಿಗೆ ಹೃದಯಾಘಾತವಾಗುವ ಸಂಭವ ಉಳಿದವರಿಗಿಂತ ಕಡಿಮೆಯಾಗಿದೆ.
  • ರಕ್ತದಲ್ಲಿ ಕಬ್ಬಿಣದ ಅಂಶ ಹೆಚ್ಚಾದಂತೆಲ್ಲಾ ಯಕೃತ್ತು ಹಲವಾರು ಕಾಯಿಲೆಗಳಿಗೆ ತುತ್ತಾಗಬಹುದು. ಕೆಲವೊಮ್ಮೆ ಕ್ಯಾನ್ಸರ್, ಹೆಪಟೈಟಿಸ್ ಸಿ ಮತ್ತು ಇತರ ಯಕೃತ್ ನ ಸೋಂಕುಗಳು ಎದುರಾಗಬಹುದು. ಆದರೆ ರಕ್ತದಾನದ ಮಾಡಿದಾಗ ದೇಹದಲ್ಲಿ ಕಬ್ಬಿಣದ ಅಂಶ ಸಮತೋಲನದಲ್ಲಿರುತ್ತದೆ ಹಾಗೂ ಈ ಮೂಲಕ ಯಕೃತ್ ಗೂ ಹೊರೆ ಯಾಗುವುದಿಲ್ಲ.
  • ಸಾಮಾನ್ಯವಾಗಿ ನಿಯಮಿತವಾಗಿ ರಕ್ತದಾನ ಮಾಡುವುದರಿಂದ ಮಾನಸಿಕ ನೆಮ್ಮದಿ ಸಿಗುವುದಲ್ಲದೆ ಉದ್ವೇಗ, ಒತ್ತಡ, ಮನಸಿನ ತಳಮಳ ಹಾಗೂ ಖಿನ್ನತೆ ದೂರವಾಗುತ್ತದೆ.

ಸೂಚನೆ: ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ. ಇದು ಯಾವುದೇ ರೀತಿಯಲ್ಲಿ ಅರ್ಹ ವೈದ್ಯಕೀಯ ಸಲಹೆಗೆ ಪರ್ಯಾಯವಲ್ಲ. ಹೆಚ್ಚಿನ ಮಾಹಿತಿಗಾಗಿ ಯಾವಾಗಲೂ ತಜ್ಞರನ್ನು ಅಥವಾ ನಿಮ್ಮ ವೈದ್ಯರನ್ನು ಸಂಪರ್ಕಿಸುವುದನ್ನು ಮರೆಯಬೇಡಿ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ