ಕಿಡ್ನಿ ಆರೋಗ್ಯ ಕಾಪಾಡಿಕೊಳ್ಳಲು ಹಾಗೂ ಮಧುಮೇಹದಿಂದ ದೂರ ಇರಲು ಈ ಆಹಾರ ಪದ್ಧತಿಯೇ ಸಾಕು

Best Dietary Practices Kidney Health: ಕಿಡ್ನಿ ಸಮಸ್ಯೆ ತಡೆಗಟ್ಟಲು ಒಂದಷ್ಟು ಪಥ್ಯ ಕ್ರಮಗಳು ಇವೆಯಾದರೂ ಕಿಡ್ನಿಯ ಕಾರ್ಯಕ್ಷಮತೆಗೆ ಅನುಗುಣವಾಗಿ ಅವು ಬದಲಾಗುತ್ತವೆ. ಆದರೆ, ಅವುಗಳ ಮೂಲ ಉದ್ದೇಶ ಒಂದೇ.

ಕಿಡ್ನಿ ಆರೋಗ್ಯ ಕಾಪಾಡಿಕೊಳ್ಳಲು ಹಾಗೂ ಮಧುಮೇಹದಿಂದ ದೂರ ಇರಲು ಈ ಆಹಾರ ಪದ್ಧತಿಯೇ ಸಾಕು
ಸಂಗ್ರಹ ಚಿತ್ರ
Follow us
Skanda
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Feb 23, 2021 | 10:00 PM

ಮಾತು ಬಲ್ಲವನಿಗೆ ಜಗಳವಿಲ್ಲ, ಊಟ ಬಲ್ಲವನಿಗೆ ರೋಗವಿಲ್ಲ ಎಂಬ ಮಾತೊಂತಿದೆ. ನಾವಾಡುವ ಒಳ್ಳೆಯ ಮಾತು ನಮ್ಮನ್ನು ಹೇಗೆ ಕಾಪಾಡುತ್ತದೋ, ನಾವು ತಿನ್ನುವ ಉತ್ತಮ ಊಟ ಸಹ ಅನಾರೋಗ್ಯಗಳಿಂದ ನಮ್ಮ ದೇಹವನ್ನು ರಕ್ಷಿಸುತ್ತದೆ. ಅದರೆ, ಇತ್ತೀಚಿನ ವರ್ಷಗಳಲ್ಲಿ ಜನರು ಕೆಲಸದ ಒತ್ತಡ, ಬಾಯಿ ರುಚಿ ಸೇರಿದಂತೆ ಬೇರೆ ಬೇರೆ ಕಾರಣಗಳಿಗಾಗಿ ಆಹಾರ ಕ್ರಮವನ್ನೇ ಬದಲಾಯಿಸಿಕೊಂಡಿದ್ದಾರೆ. ಕೆಲವರಂತೂ ಸಮಯ ಸಿಕ್ಕರೆ ಊಟ ಎಂಬಂತೆ ನಿರ್ಲಕ್ಷ್ಯ ತೋರುತ್ತಾರೆ. ಆದರೆ, ಇವೆಲ್ಲದರ ಪರಿಣಾಮ ತಕ್ಷಣಕ್ಕೆ ಗೊತ್ತಾಗದಿದ್ದರೂ ದೇಹಕ್ಕೆ ವಯಸ್ಸಾಗುತ್ತಿದ್ದಂತೆಯೇ ವಿವಿಧ ಸಮಸ್ಯೆಗಳು ಆವರಿಸಿಕೊಂಡು ಕಾಡಲಾರಂಭಿಸುತ್ತವೆ.

ನಿಮ್ಮ ದೇಹದಲ್ಲಿ ಯಾವ ಅಂಗ ಮುಖ್ಯ ಎಂದು ಕೇಳಿದರೆ ಹೇಳುವುದು ಕಷ್ಟ. ಏಕೆಂದರೆ, ಆರೋಗ್ಯವಾಗಿ ಬದುಕಲು ಪ್ರತಿಯೊಂದು ಅಂಗಗಳೂ ಸರಿಯಾಗಿ ಕಾರ್ಯ ನಿರ್ವಹಿಸಬೇಕು. ಆ ಪೈಕಿ ಕೆಲ ಅಂಗಗಳು ಇಡೀ ದೇಹವನ್ನೇ ನಿಯಂತ್ರಿಸುತ್ತಿರುತ್ತವೆ. ಅದರಲ್ಲಿ ಕಿಡ್ನಿಯೂ ಒಂದು. ಕಿಡ್ನಿ ನಮ್ಮ ದೇಹದಲ್ಲಿನ ರಕ್ತ ಶುದ್ಧೀಕರಣ ಮಾಡಲು, ಅನುಪಯುಕ್ತ ಉತ್ಪನ್ನಗಳನ್ನು ಬೇರ್ಪಡಿಸಲು, ಹಾರ್ಮೋನ್​ ಉತ್ಪಾದಿಸಲು, ಸಮತೋಲನ ಕಾಪಾಡಲು ಮತ್ತು ರಕ್ತದೊತ್ತಡ ಕಾಪಾಡಲು ಅತ್ಯಂತ ಸಹಕಾರಿ ಅಂಗ.

ಆದರೆ, ಬಹುತೇಕರಲ್ಲಿ ಕಿಡ್ನಿ ಬಲುಬೇಗನೆ ಶಕ್ತಿ ಕಳೆದುಕೊಳ್ಳುವುದು, ಸಮಸ್ಯೆಗೆ ಒಳಗಾಗುವುದು ಹಾಗೂ ವಿಫಲವಾಗುವುದು ಕಂಡುಬರುತ್ತದೆ. ಕೆಲ ವರದಿಗಳ ಪ್ರಕಾರ ಜಗತ್ತಿನ ಶೇ 10ರಷ್ಟು ಯುವಜನರಲ್ಲಿ ಕಿಡ್ನಿ ಸಮಸ್ಯೆ ಕಾಣಿಸಿಕೊಳ್ಳುತ್ತದೆ ಎನ್ನಲಾಗಿದೆ. ಇದಕ್ಕೆ ಹಲವು ಕಾರಣಗಳಿದ್ದು, ಅದರಲ್ಲಿ ಮಧುಮೇಹವೂ ಒಂದು ಪ್ರಮುಖ ಕಾರಣ ಎನ್ನುವುದು ಗಮನಾರ್ಹ. ರಕ್ತದಲ್ಲಿ ಸಕ್ಕರೆ ಅಂಶ ಅತಿಯಾಗಿ ಹೆಚ್ಚಾದರೆ ಅದು ರಕ್ತನಾಳಗಳನ್ನು ಊನ ಮಾಡುವುದರ ಜೊತೆಜೊತೆಗೆ ಕಿಡ್ನಿಗೂ ತೊಂದರೆ ಮಾಡುತ್ತದೆ. ಇದೇ ಕಾರಣಗಳಿಂದ ಮೂವರಲ್ಲಿ ಒಬ್ಬ ಯುವಕ ಕಿಡ್ನಿ ಸಮಸ್ಯೆ ಹೊಂದಿರುವುದು ಸಾಮಾನ್ಯವಾಗುತ್ತಿದೆ ಎಂದು ಕೆಲ ವೈದ್ಯಕೀಯ ವರದಿಗಳು ಹೇಳಿವೆ.

ಈ ಸಮಸ್ಯೆಗಳನ್ನು ತಡೆಗಟ್ಟಲು ಒಂದಷ್ಟು ಪಥ್ಯ ಕ್ರಮಗಳು ಇವೆಯಾದರೂ ಕಿಡ್ನಿಯ ಕಾರ್ಯಕ್ಷಮತೆಗೆ ಅನುಗುಣವಾಗಿ ಅವು ಬದಲಾಗುತ್ತವೆ. ಆದರೆ, ಅವುಗಳ ಮೂಲ ಉದ್ದೇಶ ಒಂದೇ ಆಗಿದ್ದು ರಕ್ತದಲ್ಲಿ ಸಕ್ಕರೆ ಅಂಶ ಕಡಿಮೆ ಮಾಡುವುದು, ಅನುಪಯುಕ್ತ ಅಂಶಗಳನ್ನು ನಿಯಂತ್ರಿಸುವುದು ಹಾಗೂ ಖನಿಜಾಂಶಗಳನ್ನು ಹೆಚ್ಚಿಸುವುದಾಗಿದೆ. ಸಾಧಾರಣವಾಗಿ ವೈದ್ಯರ ಸಲಹೆ ಪ್ರಕಾರ ಕಿಡ್ನಿ ಸಮಸ್ಯೆ ಹೊಂದಿರುವವರು ಪ್ರತಿನಿತ್ಯ ಗರಿಷ್ಠ 2 ಸಾವಿರ ಮಿಲಿ ಗ್ರಾಂ ಸೋಡಿಯಂ ಮತ್ತು ಪೊಟಾಶಿಯಂ ಹಾಗೂ 800 ರಿಂದ 1,000 ಮಿಲಿ ಗ್ರಾಂ ಫಾಸ್ಫರಸ್​ ಸೇವಿಸಬಹುದಷ್ಟೇ. ಅದಕ್ಕಿಂತ ಹೆಚ್ಚಿನ ಅಂಶ ದೇಹವನ್ನು ಹೊಕ್ಕರೆ ತೊಂದರೆ ಹೆಚ್ಚಾಗುವ ಸಾಧ್ಯತೆ ಅಧಿಕವಿದೆ. ಇನ್ನು ಆರೋಗ್ಯಕರ ಕಿಡ್ನಿ ಹೊಂದಿರುವವರು 4,700 ಮಿಲಿ ಗ್ರಾಂ ಪೊಟ್ಯಾಶಿಯಂ, 2,300 ಮಿಲಿ ಗ್ರಾಂ ಸೋಡಿಯಂ ಹಾಗೂ 1,250 ಗ್ರಾಂ ಫಾಸ್ಫರಸ್​ ಸೇವಿಸಬಹುದು ಎಂದು ವೈದ್ಯರು ಹೇಳುತ್ತಾರೆ.

ಬಹುಮುಖ್ಯವಾಗಿ ಕಿಡ್ನಿ ಸಮಸ್ಯೆ ಉಳ್ಳವರು ಈ ಆಹಾರಗಳಿಂದ ದೂರವಿದ್ದಷ್ಟೂ ಉತ್ತಮ 1. ಸಂಸ್ಕರಿಸಿದ ಮಾಂಸ ಮಾಂಸವನ್ನು ಸಂಸ್ಕರಿಸಲು ಅನೇಕ ವಿಧಾನಗಳನ್ನು ಅನುಸರಿಸಲಾಗುತ್ತದೆ. ಅದು ಮಾಂಸದ ರುಚಿ ಹೆಚ್ಚಿಸುವುದಾದರೂ ಕಿಡ್ನಿಗೆ ಅತಿ ಹೆಚ್ಚಿನ ಸಮಸ್ಯೆ ನೀಡಬಲ್ಲದು. ಅದರಲ್ಲಿ ಸೋಡಿಯಂ ಅಂಶ ಕೂಡ ಹೆಚ್ಚಾಗಿರುವುದರಿಂದ ಸಾಧ್ಯವಾದಷ್ಟು ದೂರವಿದ್ದರೆ ನಿಮ್ಮ ಕಿಡ್ನಿ ಆರೋಗ್ಯಕ್ಕೆ ಒಳ್ಳೆಯುದು.

2. ಪೊಟ್ಯಾಶಿಯಂ ಅಂಶ ಹೆಚ್ಚಿರುವ ಹಣ್ಣು ನಿಮಗೆ ಕಿಡ್ನಿ ಸಮಸ್ಯೆ ಇದೆ ಎಂದಾದಲ್ಲಿ ಪೊಟ್ಯಾಶಿಯಂ ಅಂಶ ನಿಯಂತ್ರಿಸುವುದು ಅತಿ ಮುಖ್ಯ. ಹೀಗಾಗಿ ಪೊಟ್ಯಾಶಿಯಂ ಅಂಶ ಹೆಚ್ಚಿರುವ ಆಹಾರ ಅದರಲ್ಲೂ ಹಣ್ಣುಗಳಿಂದ ದೂರವಿದ್ದರೆ ಒಳ್ಳೆಯದು. ಬಾಳೆಹಣ್ಣು, ಕಿವಿ ಹಣ್ಣು ಮತ್ತು ಕಿತ್ತಳೆ ಹಣ್ಣುಗಳಲ್ಲಿ ಪೊಟ್ಯಾಶಿಯಂ ಅಂಶ ಹೆಚ್ಚಿರುವುದರಿಂದ ಅದನ್ನು ಸೇವಿಸದಿರಿ.

3. ಡ್ರೈ ಫ್ರೂಟ್ಸ್​ ಡ್ರೈ ಫ್ರೂಟ್ಸ್​ ನಮ್ಮ ದೇಹಕ್ಕೆ ಶಕ್ತಿ ತುಂಬುತ್ತದೆ. ಅಪರೂಪದ ಅಂಶಗಳನ್ನು ಪೂರೈಸುತ್ತದೆ ಎಂಬುದೇನೋ ನಿಜ. ಆದರೆ, ಈ ಡ್ರೈ ಫ್ರೂಟ್ಸ್​ಗಳಿಂದ ನೀರಿನಂಶವನ್ನು ತೆಗೆಯುವುದರಿಂದ ಅದು ಕಿಡ್ನಿ ಸಮಸ್ಯೆ ಉಳ್ಳವರಿಗೆ ತೊಂದರೆ ಉಂಟುಮಾಡಬಲ್ಲದು. ಜೊತೆಗೆ, ಸಕ್ಕರೆಯಂಶವೂ ಅಧಿಕವಿರುವುದರಿಂದ ಮಧುಮೇಹವಿದ್ದರೆ ಮತ್ತಷ್ಟು ತೊಂದರೆಗೆ ಕಾರಣವಾಗಬಲ್ಲದು.

4. ಪ್ಯಾಕ್​ ಮಾಡಿದ ತಿನಿಸು, ಫಾಸ್ಟ್​​ಫುಡ್, ಸ್ನ್ಯಾಕ್ಸ್​ ಪ್ಯಾಕ್​ ಮಾಡಿದ ತಿನಿಸು, ಇನ್​ಸ್ಟಂಟ್​ ಆಹಾರ ಹಾಗೂ ಫಾಸ್ಟ್​ಫುಡ್ ಆರೋಗ್ಯಕ್ಕೆ ಒಳ್ಳೆಯದಲ್ಲವೇ ಅಲ್ಲ. ಪಿಜ್ಜಾ, ನೂಡಲ್ಸ್​, ಚಿಪ್ಸ್​ ಇತ್ಯಾದಿ ಆಹಾರಗಳು ನಿಮ್ಮ ನಾಲಗೆಗೆ ಎಷ್ಟೇ ಇಷ್ಟವಿದ್ದರೂ ಕಿಡ್ನಿಯ ಆರೋಗ್ಯಕ್ಕಾಗಿ ಇದನ್ನು ನೀವು ತ್ಯಜಿಸಲೇಬೇಕು.

5. ಹಣ್ಣಿನ ಜ್ಯೂಸ್​ ಮೇಲ್ನೋಟಕ್ಕೆ ಹಣ್ಣಿನ ಜ್ಯೂಸ್​ ದೇಹಕ್ಕೆ ಭಾರೀ ಒಳ್ಳೆಯದು, ಕಿಡ್ನಿ ಸಮಸ್ಯೆ ಉಳ್ಳವರಿಗೆ ದ್ರವಾಹಾರ ಅತ್ಯುತ್ತಮ ಎಂದು ನಿಮಗನ್ನಿಸಬಹುದು. ಆದರೆ, ಕಿಡ್ನಿ ಸಮಸ್ಯೆ ಹಾಗೂ ಮಧುಮೇಹವಿದ್ದವರು ಹಣ್ಣಿನ ಜ್ಯೂಸ್​ ದೂರವಿಡುವುದೇ ಉತ್ತಮ. ಸಕ್ಕರೆಯ ಅಂಶ ಹಾಗೂ ಪೊಟ್ಯಾಶಿಯಂ ಅಂಶ ಹೆಚ್ಚಿರುವ ಸಾಧ್ಯತೆ ಕಾರಣಕ್ಕಾಗಿ ಅವುಗಳನ್ನು ಸೇವಿಸದೇ ಇರುವುದೇ ಉತ್ತಮ.

6. ಆಲೂಗಡ್ಡೆ ಹಾಗೂ ಕೆಲ ಹಸಿರು ಸೊಪ್ಪಿನ ತರಕಾರಿಗಳು ಆಲೂಗಡ್ಡೆ ಹಾಗೂ ಕೆಲ ಹಸಿರು ಸೊಪ್ಪಿನ ತರಕಾರಿಗಳಲ್ಲಿ ಪೊಟ್ಯಾಶಿಯಂ ಅಂಶ ಹೇರಳವಾಗಿರುತ್ತದೆ. ಮೊದಲೇ ತಿಳಿಸಿದಂತೆ ಪೊಟ್ಯಾಶಿಯಂ ಅಂಶ ನಿಮ್ಮ ಕಿಡ್ನಿಗೆ ಮತ್ತಷ್ಟು ಒತ್ತಡ ಉಂಟು ಮಾಡುವ ಸಾಧ್ಯತೆ ಇರುವುದರಿಂದ ಅವುಗಳನ್ನು ದೂರವಿಡುವುದೇ ಉತ್ತಮ.

ಇದನ್ನೂ ಓದಿ: ದೀರ್ಘಕಾಲದ ತಲೆನೋವು ಪರಿಹಾರಕ್ಕೆ ಇಲ್ಲಿವೆ ಸಿಂಪಲ್​ ಟಿಪ್ಸ್​

ಇದನ್ನೂ ಓದಿ: ಮೈಗ್ರೇನ್​ನಿಂದ ಬಳಲುತ್ತಿದ್ದೀರಾ? ನೋವು ಬಾರದಂತೆ ಹೀಗೆ ಮುನ್ನೆಚ್ಚರಿಕೆ ವಹಿಸಿ.. ಉತ್ತಮ ಚಿಕಿತ್ಸೆ ಪಡೆದುಕೊಳ್ಳಿ

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್