ಕಿಡ್ನಿ ಸ್ಟೋನ್ ಆಗಿದೆಯೆಂದು ಗೊತ್ತಾಗೋದು ಹೇಗೆ?; ಈ ಲಕ್ಷಣಗಳನ್ನು ನಿರ್ಲಕ್ಷ್ಯಿಸಬೇಡಿ
Kidney Stone Symptoms: ಕಿಡ್ನಿ ಸ್ಟೋನ್ ನಿಮ್ಮ ಮೂತ್ರಪಿಂಡದಲ್ಲಿ ರೂಪುಗೊಳ್ಳುವ ಗಟ್ಟಿಯಾದ ಖನಿಜ ತುಣುಕುಗಳಾಗಿವೆ. ಕೆಲವೊಮ್ಮೆ ಅವು ನಿಮ್ಮ ಮೂತ್ರದ ಮೂಲಕ ನಿಮ್ಮ ದೇಹದಿಂದ ನಿರ್ಗಮಿಸುವಷ್ಟು ಚಿಕ್ಕದಾಗಿರುತ್ತವೆ. ಆದರೆ ಅವು ತುಂಬಾ ದೊಡ್ಡದಾಗಿದ್ದರೆ, ಅವುಗಳನ್ನು ಒಡೆಯಲು ಅಥವಾ ತೆಗೆದುಹಾಕಲು ನಿಮಗೆ ಚಿಕಿತ್ಸೆ ನೀಡಬೇಕಾಗಬಹುದು.
ಕಿಡ್ನಿ ಸ್ಟೋನ್ ಮೂತ್ರದ ವ್ಯವಸ್ಥೆಗೆ ಸಂಬಂಧಿಸಿದ ಸಾಮಾನ್ಯ ಆರೋಗ್ಯ ಸಮಸ್ಯೆಯಾಗಿದೆ. ಅವುಗಳನ್ನು ನೆಫ್ರೋಲಿತ್ ಅಥವಾ ಮೂತ್ರಪಿಂಡದ ಕ್ಯಾಲ್ಕುಲಿ ಎಂದೂ ಕರೆಯುತ್ತಾರೆ. ಕಲ್ಲುಗಳು ನಿಮ್ಮ ಮೂತ್ರಪಿಂಡದಲ್ಲಿ ರೂಪುಗೊಳ್ಳುವ ಗಟ್ಟಿಯಾದ ಖನಿಜ ತುಣುಕುಗಳಾಗಿವೆ. ಕೆಲವೊಮ್ಮೆ ಅವು ನಿಮ್ಮ ಮೂತ್ರದ ಮೂಲಕ ನಿಮ್ಮ ದೇಹದಿಂದ ನಿರ್ಗಮಿಸುವಷ್ಟು ಚಿಕ್ಕದಾಗಿರುತ್ತವೆ. ಆದರೆ ಅವು ತುಂಬಾ ದೊಡ್ಡದಾಗಿದ್ದರೆ, ಅವುಗಳನ್ನು ಒಡೆಯಲು ಅಥವಾ ತೆಗೆದುಹಾಕಲು ನಿಮಗೆ ಚಿಕಿತ್ಸೆ ನೀಡಬೇಕಾಗಬಹುದು. ಆರಂಭದಲ್ಲೇ ಚಿಕಿತ್ಸೆ ನೀಡಿದರೆ ಮೂತ್ರಪಿಂಡದ ಕಲ್ಲುಗಳಿಂದ ಉಂಟಾಗುವ ಗಂಭೀರ ತೊಡಕುಗಳು ಕಡಿಮೆಯಾಗುತ್ತದೆ. ಹಾಗಾದರೆ, ನಿಮಗೆ ಕಿಡ್ನಿ ಸ್ಟೋನ್ ಆಗಿದೆ ಎಂಬುದರ ಲಕ್ಷಣಗಳೇನು?
ನಿಮ್ಮ ಕಿಡ್ನಿಯಲ್ಲಿ ಕಲ್ಲುಗಳು ಬೆಳೆಯುತ್ತಿದ್ದರೆ ತಿಳಿಯುವುದು ಹೇಗೆ? :
ಹಿಂಭಾಗದಲ್ಲಿ ತೀವ್ರವಾದ ನೋವು:
ಮೂತ್ರಪಿಂಡದ ಕಲ್ಲುಗಳ ಪ್ರಮುಖ ಲಕ್ಷಣವೆಂದರೆ ಬೆನ್ನು ಅಥವಾ ಬದಿಯಲ್ಲಿ ತೀವ್ರವಾದ ನೋವು. ಈ ನೋವು ಅಸಹನೀಯವಾಗಬಹುದು. ಇದು ನಿಮ್ಮ ಹೊಟ್ಟೆ ಮತ್ತು ತೊಡೆಸಂದಿನ ಜಾಗಕ್ಕೆ ಹರಡಬಹುದು.
ಇದನ್ನೂ ಓದಿ: ನಿಮ್ಮ ರಕ್ತವನ್ನು ನೈಸರ್ಗಿಕವಾಗಿ ಶುದ್ಧಗೊಳಿಸಬೇಕಾ? ಈ 8 ಆಹಾರ ಸೇವಿಸಿ
ಮೂತ್ರ ವಿಸರ್ಜನೆಯ ಸಮಯದಲ್ಲಿ ನೋವು:
ನಿಮ್ಮ ಮೂತ್ರನಾಳ ಮತ್ತು ಮೂತ್ರಕೋಶದ ನಡುವೆ ಕಲ್ಲು ಉಂಟಾದರೆ ನೀವು ಮೂತ್ರ ವಿಸರ್ಜಿಸಿದಾಗ ನಿಮಗೆ ನೋವಾಗುತ್ತದೆ. ಕೆಲವೊಮ್ಮೆ ಬರ್ನಿಂಗ್ ಅನುಭವವಾಗುತ್ತದೆ.
ಮೂತ್ರದಲ್ಲಿ ರಕ್ತ:
ಕಿಡ್ನಿ ಸ್ಟೋನ್ ಇರುವ ಜನರಲ್ಲಿ ಮೂತ್ರದಲ್ಲಿ ರಕ್ತ ಬರುವುದು ಸಾಮಾನ್ಯ ಲಕ್ಷಣವಾಗಿದೆ. ಈ ರೋಗಲಕ್ಷಣವನ್ನು ಹೆಮಟುರಿಯಾ ಎಂದೂ ಕರೆಯುತ್ತಾರೆ. ರಕ್ತವು ಕೆಂಪು, ಗುಲಾಬಿ ಅಥವಾ ಕಂದು ಬಣ್ಣದಲ್ಲಿರುತ್ತದೆ.
ವಾಂತಿ:
ಮೂತ್ರಪಿಂಡದ ಕಲ್ಲುಗಳಿರುವ ಜನರು ವಾಕರಿಕೆ ಮತ್ತು ವಾಂತಿಯ ಅನುಭವ ಉಂಟಾಗುವುದು ಸಾಮಾನ್ಯವಾಗಿದೆ. ಮೂತ್ರಪಿಂಡ ಮತ್ತು ಜಿಐ ಟ್ರಾಕ್ಟ್ ನಡುವಿನ ನರ ಸಂಪರ್ಕಗಳಿಂದಾಗಿ ಈ ರೋಗಲಕ್ಷಣಗಳು ಸಂಭವಿಸುತ್ತವೆ.
ಇದನ್ನೂ ಓದಿ: ಕಿಡ್ನಿ ಸಮಸ್ಯೆಗೆ ಆಯುರ್ವೇದದಲ್ಲಿದೆ ಪರಿಹಾರ
ಜ್ವರ ಮತ್ತು ಶೀತ:
ಜ್ವರವು ನಿಮ್ಮ ಮೂತ್ರಪಿಂಡದಲ್ಲಿ ಅಥವಾ ನಿಮ್ಮ ಮೂತ್ರನಾಳದ ಇನ್ನೊಂದು ಭಾಗದಲ್ಲಿ ಸೋಂಕು ಉಂಟಾಗಿರುವ ಸಂಕೇತವಾಗಿದೆ. ಸೋಂಕಿನೊಂದಿಗೆ ಉಂಟಾಗುವ ಜ್ವರಗಳು ಸಾಮಾನ್ಯವಾಗಿ ಚಳಿ ಅಥವಾ ನಡುಕದಿಂದ ಕೂಡಿರುತ್ತದೆ.
ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ