Ayurvedic Herb Brahmi: ಬ್ರಾಹ್ಮೀ ಎಲೆಯಲ್ಲಿರುವ ಔಷಧೀಯ ಗುಣ ತಿಳಿಯಿರಿ; ನೆನಪಿನ ಶಕ್ತಿ ಹೆಚ್ಚಿಸಿಕೊಳ್ಳಲು ಉತ್ತಮ ಔಷಧ

| Updated By: Skanda

Updated on: Jul 05, 2021 | 8:17 AM

ಬ್ರಾಹ್ಮೀ ಎಲೆಯಲ್ಲಿರುವ ಔಷಧೀಯಗುಣ ಆರೋಗ್ಯಕ್ಕೆ ಉತ್ತಮ ಪ್ರಯೋಜನಕಾರಿ. ನೆನಪಿನ ಶಕ್ತಿ ಹೆಚ್ಚಿಸಲು ಸಹಾಯ ಮಾಡುತ್ತದೆ.

Ayurvedic Herb Brahmi: ಬ್ರಾಹ್ಮೀ ಎಲೆಯಲ್ಲಿರುವ ಔಷಧೀಯ ಗುಣ ತಿಳಿಯಿರಿ; ನೆನಪಿನ ಶಕ್ತಿ ಹೆಚ್ಚಿಸಿಕೊಳ್ಳಲು ಉತ್ತಮ ಔಷಧ
ಬ್ರಾಹ್ಮೀ ಎಲೆ
Follow us on

ಆಯುರ್ವೇದ ಗಿಡಮೂಲಿಕೆಗಳಲ್ಲಿ ಬ್ರಾಹ್ಮೀ ಎಲೆ ಆರೋಗ್ಯಕ್ಕೆ ಅತ್ಯಂತ ಪ್ರಯೋಜನಕಾರಿ. ನೆನಪಿನ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಇದು ಸಹಾಯಕವಾಗಿದೆ. ಮಕ್ಕಳಲ್ಲಿ ಬುದ್ಧಿಶಕ್ತಿಯನ್ನು ಹೆಚ್ಚಿಸಲು ಇದು ಸಹಾಯಕಾರಿ ಆಗಿರುವುದರಿಂದ ಹೆಚ್ಚು ಬ್ರಾಹ್ಮೀ ಎಲೆಯನ್ನು ಸೇವಿಸುತ್ತಾರೆ. ಬ್ರಾಹ್ಮೀ ಎಲೆಯ ಪುಡಿಯನ್ನು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸುವುರಿಂದ ಆರೋಗ್ಯಕ್ಕೆ ಹೆಚ್ಚಿನ ಪ್ರಯೋಜನವಿದೆ. ಮೆದುಳು ಸಕ್ರಿಯವಾಗಿ ಕೆಲಸ ನಿರ್ವಹಿಸಲು ಇದು ಸಹಾಯ ಮಾಡುತ್ತದೆ. ಹಾಗಿರುವಾಗ ಬ್ರಾಹ್ಮೀ ಎಲೆ ಸೇವನೆಯಿಂದ ಆರೋಗ್ಯಕ್ಕೆ ಎಷ್ಟೆಲ್ಲಾ ಪ್ರಯೋಜನಗಳಿವೆ ಎಂಬುದರ ಕುರಿತಾಗಿ ತಿಳಿಯೋಣ.

ಹೆಚ್ಚಿನ ಜನರು ಎದುರಿಸುತ್ತಿರುವ ಸಮಸ್ಯೆ ಮಾನಸಿಕ ಒತ್ತಡ ಅಥವಾ ದೇಹದಲ್ಲಿ ರಕ್ತದೊತ್ತಡದ ಸಮಸ್ಯೆ. ಇದು ದೇಹದಲ್ಲಿನ ಹಾರ್ಮೋನ್​ಗಳನ್ನು ನಿಯಂತ್ರಿಸುತ್ತದೆ. ಇದರಿಂದ ಮನಸ್ಸು ಶಾಂತಗೊಳ್ಳಲು ಸಹಾಯಕಾರಿಯಾಗಿದೆ. ಮೆದುಳು ಸಕ್ರಿಯವಾಗಿ ಕೆಲಸ ನಿರ್ವಹಿಸುವಂತೆ ಮಾಡಲು ಬ್ರಾಹ್ಮೀ ಎಲೆ ಸಹಾಯಕಾರಿಯಾಗಿದೆ. ಮೆದುಳಿನ ಕೋಶಗಳ ಮೇಲೆ ಹೆಚ್ಚಿನ ಪರಿಣಾಮವನ್ನು ಬೀರುತ್ತದೆ. ಇದು ಅಂಗಾಂಶಗಳನ್ನು ಪುನರ್​ನಿರ್ಮಿಸಲು ಸಹಾಯ ಮಾಡುತ್ತದೆ

*ಇದು ಮೆದುಳಿನ ಹಿಪೋಕ್ಯಾಂಪಸ್​ ಭಾಗದ ಮೇಲೆ ಹೆಚ್ಚಿನ ಪರಿಣಾಮವನ್ನು ಬೀರುತ್ತದೆ. ಇದು ಬುದ್ಧಿವಂತಿಕೆ, ಏಕಾಗ್ರತೆ ಮತ್ತು ಸ್ಮರಣೆಯ ಶಕ್ತಿಯನ್ನು ಹೆಚ್ಚಿಸುತ್ತದೆ.

*ಆರೋಗ್ಯಕರ ಜೀವನವನ್ನು ನಡೆಸಲು ಬ್ರಾಹ್ಮೀ ಎಲೆಯ ಸೇವನೆ ಸಹಾಯ ಮಾಡುತ್ತದೆ. ಇದು ಅಗತ್ಯವಾದ ಉತ್ಕರ್ಷಣ ನಿರೋಧಕಗಳಿಂದ ತುಂಬಿರುತ್ತದೆ. ಜತೆಗೆ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ

*ಸಂಧಿವಾತ, ಉರಿಯೂತದಂತಹ ಸಮಸ್ಯೆಗೆ ಪರಿಹಾರವಾಗಿ ಬ್ರಾಹ್ಮೀ ಎಲೆಗಳನ್ನು ಸೇವಿಸುತ್ತಾರೆ. ಗ್ಯಾಸ್ಟ್ರಿಕ್​ ಸಮಸ್ಯೆಯನ್ನು ಪರಿಹರಿಸುತ್ತದೆ ಮತ್ತು ಕರುಳಿನ ಸಿಂಡ್ರೋಮ್​ಗೆ ಚಿಕಿತ್ಸೆ ನೀಡಲು ಅತ್ಯಂತ ಪ್ರಯೋಜನಕಾರಿಯಾಗಿದೆ

*ಮಧುಮೇಹಿಗಳಲ್ಲಿನ ರಕ್ತದ ಮಟ್ಟವನ್ನು ನಿಯಂತ್ರಿಸಲು ಬ್ರಾಹ್ಮೀ ಎಲೆಗಳ ಸೇವನೆ ಸಹಾಯ ಮಾಡುತ್ತದೆ. ಜತೆಗೆ ಕೂದಲು ಉದುರುವ ಸಮಸ್ಯೆಯಿಂದ ಪರಿಹಾರವನ್ನು ಕಂಡುಕೊಳ್ಳಬಹುದು

ಬ್ರಾಹ್ಮೀ ಎಲೆಯಲ್ಲಿರುವ ಔಷಧೀಯಗುಣ ಆರೋಗ್ಯಕ್ಕೆ ಉತ್ತಮ ಪ್ರಯೋಜನಕಾರಿ. ನೆನಪಿನ ಶಕ್ತಿ ಹೆಚ್ಚಿಸಲು ಸಹಾಯ ಮಾಡುವ ಈ ಎಲೆಗಳ ಕಷಾಯ ಮಾಡಿ ಸವಿಯುತ್ತಾರೆ. ಸೇವಿಸಲು ರುಚಿಕರವಾಗಿಯೂ ಹಾಗೂ ಔಷಧೀಯ ಗುಣಗಳನ್ನು ಹೊಂದಿರುವ ಬ್ರಾಹ್ಮೀ ಎಲೆಗಳ ಪ್ರಯೋಜನ ಪಡೆಯಿರಿ.

ಇದನ್ನೂ ಓದಿ:

ಹೊತ್ತು ಗೊತ್ತಿಲ್ಲದೆ ನಿದ್ದೆ ಮಾಡುವುದು ಒಳ್ಳೆಯದಲ್ಲ; ಮಲಗುವ ವಿಧಾನವನ್ನು ಹೀಗೆ ರೂಪಿಸಿಕೊಳ್ಳಿ

Health Tips: ಕೊರೊನಾ ಸೋಂಕಿನ ಮಧ್ಯೆ ಮತ್ತೆ ನೆನಪಾಯಿತು ಈ ಗಿಡ! ‘ನೆಲನೆಲ್ಲಿ’ ಸಸ್ಯದಲ್ಲಿ ಅಡಗಿದೆ ಔಷಧೀಯ ಗುಣ