ಕಾಂತಿಯನ್ನು ಹೆಚ್ಚಿಸಿಕೊಳ್ಳಲು ಯುವತಿಯರು ಒಂದಲ್ಲಾ ಒಂದು ರೀತಿಯ ಔಷಧಗಳನ್ನು ಹುಡುಕುತ್ತಲೇ ಇರುತ್ತಾರೆ. ನಮ್ಮ ಸುತ್ತಮುತ್ತಲೇ ಸಿಗುವ ಅದೆಷ್ಟೋ ಹಣ್ಣುಗಳು ನಮ್ಮ ಆರೋಗ್ಯವನ್ನು ಸುಧಾರಿಸುತ್ತದೆ. ಹಾಗೆಯೇ ನಾವೆಲ್ಲರೂ ಇಷ್ಟಪಡುವ ದ್ರಾಕ್ಷಿ ಹಣ್ಣಿನ(Grapes) ಬೀಜವೂ ಸಹ ಆರೋಗ್ಯಕ್ಕೆ(Health) ತುಂಬಾ ಪ್ರಯೋಜನಕಾರಿ. ದ್ರಾಕ್ಷಿ ಬೀಜದ(Grapeseed) ಎಣ್ಣೆಯಲ್ಲಿ ಒಮೆಗಾ ಕೊಬ್ಬಿನಾಮ್ಲಗಳು ಮತ್ತು ವಿಟಮಿನ್ ಇ ಇರುತ್ತದೆ. ಇದು ಚರ್ಮದ ಕಾಂತಿಯನ್ನು ಹೆಚ್ಚಿಸಿಕೊಳ್ಳಲು ಸಹಾಯ ಮಾಡುತ್ತದೆ.
ಇದರಲ್ಲಿರುವ ಉತ್ಕರ್ಷಣ ನಿರೋಧಕ ಗುಣಗಳು ಚರ್ಮವನ್ನು ಸುಂದರವಾಗಿಡಲು ಸಹಾಯ ಮಾಡುತ್ತದೆ. ಚರ್ಮದಲ್ಲಿನ ತುರಿಕೆ, ಮೊಡವೆ ಸೇರಿದಂತೆ ಅದೆಷ್ಟೋ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸಹಾಯಕವಾಗಿದೆ. ದಾಕ್ಷಿ ಬೀಜದ ಎಣ್ಣೆ ಆರೋಗ್ಯಕ್ಕೆ ಎಷ್ಟೆಲ್ಲಾ ಪ್ರಯೋಜನಕಾರಿ ಎಂಬುದನ್ನು ತಿಳಿದುಕೊಳ್ಳಿ.
ಮೊಡವೆ ನಿವಾರಣೆ
ದ್ರಾಕ್ಷಿ ಬೀಜದ ಎಣ್ಣೆಯಲ್ಲಿ ಲಿನೋಲಿಕ್ ಆಮ್ಲವಿದೆ. ಒಮೆಗಾ-6 ಕೊಬ್ಬಿನಾಮ್ಲವಿದೆ. ಮುಖದಲ್ಲಿ ಸಣ್ಣ ಸಣ್ಣ ರಂಧ್ರಗಳು ಕಂಡು ಬರುವ ಸಮಸ್ಯೆಗೆ ನಿವಾರಣೆಯಾಗಿ ದ್ರಾಕ್ಷಿ ಹಣ್ಣಿನ ಬೀಜಗಳಿಂದ ತಯಾರಿಸಿದ ಎಣ್ಣೆಯನ್ನು ಬಳಸಬಹುದು.
ಹಾನಿಕಾರಕ ಕಿರಣಗಳಿಂದ ರಕ್ಷಣೆ
ದ್ರಾಕ್ಷಿ ಬೀಜದಲ್ಲಿ ಕ್ಯಾರೊಟಿನ್, ವಿಟಮಿನ್ ಸಿ, ಡಿ, ಇ ಮತ್ತು ಪಾಲಿಫಿನಾಲ್ ಅಂಶವಿರುತ್ತದೆ. ಈ ಎಲ್ಲಾ ಸಂಯುಕ್ತಗಳು ಉತ್ಕರ್ಷಣ ನಿರೋಧಕ ಸಾಮರ್ಥ್ಯಗಳನ್ನು ಹೊಂದಿವೆ. ಇದು ನಿಮ್ಮ ಚರ್ಮವನ್ನು ಹಾನಿಕಾರಕ ಕಿರಣಗಳಿಂದ ರಕ್ಷಿಸುತ್ತದೆ. ಸ್ವತಂತ್ರ ರಾಡಿಕಲ್ಸ್ಗಳಿಂದ ಉಂಟಾಗುವ ಹಾನಿಯಿಂದ ರಕ್ಷಿಸುತ್ತದೆ.
ಚರ್ಮವನ್ನು ತೇವಗೊಳಿಸುತ್ತದೆ
ದ್ರಾಕ್ಷಿ ಬೀಜದ ಎಣ್ಣೆಯಲ್ಲಿ ವಿಟಮಿನ್ ಇ ಸಮೃದ್ಧವಾಗಿರುತ್ತದೆ. ಇದರಲ್ಲಿರುವ ಜೀವಸತ್ವಗಳು ಚರ್ಮದ ಹೊರ ಪದರವನ್ನು ಮೃದುಗೊಳಿಸುತ್ತದೆ. ಚರ್ಮದ ಕಾಂತಿಯನ್ನು ಹೆಚ್ಚಿಸಿಕೊಳ್ಳುವ ಮೂಲಕ ಹಾನಿಕಾರಕ ಧೂಳಿನಿಂದ ಚರ್ಮದ ಸುರಕ್ಷತೆ ಮಾಡಿಕೊಳ್ಳಬಹುದು.
ಸುಕ್ಕುಗಳನ್ನು ಕಡಿಮೆ ಮಾಡುತ್ತದೆ
ದ್ರಾಕ್ಷಿ ಬೀಜದ ಎಣ್ಣೆಯಲ್ಲಿ ಪಾಲಿಫಿನಾಲ್ಗಳಿವೆ. ವಯಸ್ಸಾದಂತೆ ಕಾಣಿಸುವ ಚರ್ಮ, ಸುಕ್ಕುಗಳನ್ನು ತಡೆಯಲು ಇದು ಸಹಾಯಕಾರಿಯಾಗಿದೆ. ಕೊಬ್ಬಿನಾಮ್ಲಗಳ ಜತೆಗೆ ಪಾಲಿಫಿನಾಲ್ಗಳು ರಕ್ತಪರಿಚಲನೆಯನ್ನು ಸುಧಾರಿಸುತ್ತದೆ. ಬಾಡಿದ ಮುಖ, ಚರ್ಮದ ಸುಕ್ಕನ್ನು ತೆಗೆದು ಹಾಕಲು ಸಹಾಯಕವಾಗಿದೆ.
ಇದನ್ನೂ ಓದಿ:
ಇಬ್ಬರು ರೈತರ ನಡುವಿನ ಜಗಳದಲ್ಲಿ ದ್ರಾಕ್ಷಿ ಗಿಡ ನಾಶ; ಕಳೆನಾಶಕ ಸಿಂಪಡಿಸಿ ಬೆಳೆಗೆ ಹಾನಿ ಮಾಡಿರುವ ಆರೋಪ