ರಕ್ತದೊತ್ತಡ ಸಾಮಾನ್ಯ ಮಟ್ಟಕ್ಕಿಂತ ಕಡಿಮೆಯಾಗುವುದರಿಂದ ಹೈಪೊಟೆನ್ಷನ್ ಉಂಟಾಗುತ್ತದೆ. ಕಡಿಮೆ ರಕ್ತದೊತ್ತಡ ಸಮಸ್ಯೆಯಿಂದ ತಲೆಭಾರ, ಆಯಾಸ ಮತ್ತು ತಲೆತಿರುಗುವಿಕೆ, ದೃಷ್ಟಿ ದೋಷದಂತಹ ಸಮಸ್ಯೆಗಳು ಕಾಡತೊಡಗುತ್ತದೆ. ಕಡಿಮೆ ರಕ್ತದೊತ್ತಡದಿಂದ ಉಸಿರಾಟ ತೊಂದರೆಯು ಉಂಟಾಗುವ ಸಂಭವವಿರುತ್ತದೆ. ಹೀಗಿರುವಾಗ ನಿಮ್ಮ ಆಹಾರ ವ್ಯವಸ್ಥೆಯಲ್ಲಿ ಕೆಲವು ಬದಲಾವಣೆಗಳಾಗಬೇಕಿದೆ. ಈ ಕುರಿತಂತೆ ಲೋ ಬಿಪಿ ಅಥವಾ ಕಡಿಮೆ ರಕ್ತದೊತ್ತಡದಿಂದ ಉಂಟಾಗುವ ಸಮಸ್ಯೆಯಿಂದ ಪರಿಹಾರ ಪಡೆಯಲು ಕೆಲವು ವಿಧದ ಆಹಾರ ಪದ್ಧತಿಗಳು ಹೀಗಿವೆ.
ಉಪ್ಪು
ನಮ್ಮ ರಕ್ತದೊತ್ತಡವನ್ನು ಹೆಚ್ಚಿಸಲು ಉಪ್ಪು ಸಹಾಯ ಮಾಡುತ್ತದೆ. ಕಡಿಮೆ ರಕ್ತದೊತ್ತಡ ಸಮಸ್ಯೆಯನ್ನು ಅನುಭವಿಸುತ್ತಿದ್ದರೆ ಮಧ್ಯಮ ಪ್ರಮಾಣದಲ್ಲಿ ಸೋಡಿಯಂ ಸೇವನೆಯನ್ನು ಹೆಚ್ಚಿಸಬೇಕಾಗುತ್ತದೆ.
ನೀರು
ದ್ರವ ರೂಪದ ಆಹಾರವನ್ನು ಸೇವಿಸಬೇಕು. ನೀರು ಅಥವಾ ಹಣ್ಣುಗಳ ಜ್ಯೂಸ್ಅನ್ನು ಸೇವಿಸುವದರಿಂದ ನಿರ್ಜಲೀಕರಣವನ್ನು ಎದರಿಸಲು ಸಹಾಯ ಮಾಡುತ್ತದೆ. ವೈದ್ಯರ ಪ್ರಕಾರ ಕಡಿಮೆ ಬಿಪಿ ಸಮಸ್ಯೆ ಹೊಂದಿರುವವರು ದಿನಕ್ಕೆ ಕನಿಷ್ಟ 8 ಕಪ್ ನೀರನ್ನಾದರೂ ಸೇವಿಸಲೇಬೇಕು. ಆರೋಗ್ಯಕ್ಕೆ ಹಾನಿ ಉಂಟು ಮಾಡುವ ಆಲ್ಕೋಹಾಲ್ ಅಥವಾ ಮದ್ಯ ಸೇವನೆಯನ್ನು ತ್ಯಜಿಸಬೇಕು.
ಕೆಫೀನ್
ಕಾಫಿ ಅಥವಾ ಕೆಫೀನ್ ಚಹಾವು ಹೃದಯದ ರಕ್ತನಾಳದ ವ್ಯವಸ್ಥೆಯನ್ನು ಸುಧಾರಿಸುತ್ತದೆ. ಹೃದಯ ಬಡಿತವನ್ನು ಹೆಚ್ಚಿಸುತ್ತದೆ. ಕೆಫೀನ್ ಸೇವನೆಯು ಅಲ್ಪಾವಧಿಯಲ್ಲಿಯೇ ಹೆಚ್ಚು ಪ್ರಯೋಜನಕಾರಿಯಾಗಿದೆ ಎಂದು ಸಾಬೀತುಪಡಿಸಲಾಗಿದೆ.
ವಿಟಮಿನ್ ಬಿ12 ಪೌಷ್ಟಿಕಾಂಶವುಳ್ಳ ಆಹಾರ
ದೇಹದಲ್ಲಿ ವಿಟಮಿನ್ ಬಿ12 ಕೊರತೆಯು ರಕ್ತಹೀನತೆಗೆ ಕಾರಣವಾಗುತ್ತದೆ. ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ. ಆದ್ದರಿಂದ ವಿಟಮಿನ್ ಬಿ12 ಸಮೃದ್ಧವಾಗಿರುವ ಆಹಾರಗಳಾದ ಧಾನ್ಯಗಳನ್ನು ಸೇವಿಸುವ ಅಭ್ಯಾಸ ಮಾಡಿಕೊಳ್ಳಿ. ಮಾಂಸಹಾರಿಗಳಾಗಿದ್ದರೆ ಮಾಂಸವನ್ನು ಸೇವಿಸುವುದರಿಂದ ವಿಟಮಿನ್ ಬಿ12 ಪೌಷ್ಟಿಕಾಂಶವನ್ನು ಪಡೆಯಬಹುದಾಗಿದೆ.
ಪ್ರೊಟೀನ್ಯುಕ್ತ ಆಹಾರ
ದೇಹಕ್ಕೆ ಪ್ರೊಟೀನ್ ಇಲ್ಲದಿರುವುದು ರಕ್ತಹೀನತೆಗೆ ಕಾರಣವಾಗುತ್ತದೆ. ದೈನಂದಿನ ಆಹಾರದಲ್ಲಿ ಬೀನ್ಸ್, ಸಿಟ್ರಸ್ ಹಣ್ಣುಗಳು, ಸೊಪ್ಪು, ಮೊಟ್ಟೆ ಈತರಹದ ಆಹಾರ ಸೇವನೆ ನಿಮ್ಮದಾಗಿರಲಿ. ಲೋ ಬಿಪಿ ಅಥವಾ ಕಡಿಮೆ ಬಿಪಿ ಸಮಸ್ಯೆ ಹೊಂದಿರುವವರು ಅತಿವೇಗದಿಂದ ಊಟ ಮಾಡುವುದನ್ನು ತಪ್ಪಿಸಬೇಕು. ಜತೆಗೆ ಒಂದೇ ಬಾರಿ ಹೊಟ್ಟೆ ತುಂಬಿ ಬಿಗಿಯುವಷ್ಟು ಊಟ ಮಾಡುವುದಕ್ಕಿಂತ ಸ್ವಲ್ಪವೇ ಆಹಾರವನ್ನು ನಿಧಾನವಾಗಿ ಸೇವಿಸಿ. ಆಹಾರವು ಜೀರ್ಣವಾಗಲು ಸಹಾಯವಾಗುತ್ತದೆ.
ಇದನ್ನೂ ಓದಿ:
World Hypertension Day 2021: ವಿಶ್ವ ಹೈಪರ್ಟೆನ್ಶನ್ ದಿನದ ಉದ್ದೇಶವೇನು? ಅಧಿಕ ರಕ್ತದೊತ್ತಡ ನಿಯಂತ್ರಣ ಹೇಗೆ?
Apple watch | ರಕ್ತದೊತ್ತಡ, ಆಲ್ಕೋಹಾಲ್ ಮಟ್ಟ, ಗ್ಲುಕೋಸ್ ಅಳೆಯುವ ಫೀಚರ್ ಜತೆಗೆ ಬರಲಿದೆ ಆಪಲ್ ವಾಚ್