Weight Loss Tips: ತೂಕ ಇಳಿಸಿಕೊಳ್ಳಲು ಬೆಳ್ಳುಳ್ಳಿಯನ್ನು ಈ ರೀತಿಗಳಲ್ಲಿ ಸೇವಿಸಬಹುದು
Health Tips: ನೀವು ದಿನನಿತ್ಯ ಬಳಸುವ ಅಡುಗೆ ಪದಾರ್ಥಗಳಲ್ಲಿ ದೇಹದ ಹೆಚ್ಚುವರಿ ಕೊಬ್ಬನ್ನು ನಿವಾರಿಸುವ ಶಕ್ತಿಯಿರುತ್ತದೆ. ಅವುಗಳಲ್ಲಿ ಬೆಳ್ಳುಳ್ಳಿ ಆರೋಗ್ಯಕ್ಕೆ ಉತ್ತಮ.
ತೂಕ ಇಳಿಸಿಕೊಳ್ಳುವುದು ಸುಲಭದ ಕೆಲಸವಲ್ಲ. ದೇಹದಲ್ಲಿನ ಹೆಚ್ಚುವರಿ ಕೊಬ್ಬನ್ನು ಕರಗಿಸಲು ಸಾಕಷ್ಟು ಸಮಯ ಬೇಕಾಗುತ್ತದೆ. ಹೀಗಿರುವಾಗ ನೀವು ದಿನನಿತ್ಯ ಬಳಸುವ ಅಡುಗೆ ಪದಾರ್ಥಗಳಲ್ಲಿ ದೇಹದ ಹೆಚ್ಚುವರಿ ಕೊಬ್ಬನ್ನು ನಿವಾರಿಸುವ ಶಕ್ತಿಯಿರುತ್ತದೆ. ಅವುಗಳಲ್ಲಿ ಬೆಳ್ಳುಳ್ಳಿ ಆರೋಗ್ಯಕ್ಕೆ ಉತ್ತಮ. ಇದರಲ್ಲಿ ಹಲವಾರು ಪೋಷಕಾಂಶಗಳಿರುತ್ತದೆ. ವಿಟಮಿನ್ ಬಿ6 ಮತ್ತು ಸಿ, ಫೈಬರ್, ಕ್ಯಾಲ್ಸಿಯಂ, ಪ್ರೋಟೀನ್ ಮತ್ತು ಮ್ಯಾಂಗನೀಸ್ ಕಂಡು ಬರುತ್ತದೆ. ಇದು ದೇಹದಲ್ಲಿ ತೂಕವನ್ನು ಕಡಿಮೆ ಮಾಡುವುದರ ಜತೆಗೆ ರೋಗ ನೀರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯಕವಾಗಿದೆ.
ನಿಮ್ಮ ಆಹಾರದಲ್ಲಿ ಬೆಳ್ಳುಳ್ಳಿಯನ್ನು ಸೇವಿಸುವುದು ಶಕ್ತಿಯ ಮಟ್ಟವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಇದು ದೇಹದ ಆರೋಗ್ಯವನ್ನು ದುರ್ಬಲಗೊಳಿಸುವ ವಿಷವನ್ನು ತೆಗೆದು ಹಾಕಲು ಸಹಾಯಕವಾಗಿದೆ. ನೀವು ತೂಕ ನಷ್ಟಕ್ಕಾಗಿ ಪ್ರಯತ್ನಿಸುತ್ತಿದ್ದರೆ ಬೆಳ್ಳುಳ್ಳಿಯನ್ನು ಯಾವ ವಿಧದಲ್ಲಿ ಸೇವಿಸಬಹುದು ಎಂಬ ಮಾಹಿತಿ ಈ ಕೆಳಗಿನಂತಿದೆ.
ನಿಂಬೆ ರಸದೊಂದಿಗೆ ಬೆಳ್ಳುಳ್ಳಿ ಉಗುರು ಬೆಚ್ಚಗಿನ ನೀರನ್ನು ತೆಗೆದುಕೊಳ್ಳಿ. ಅದಕ್ಕೆ ಒಂದು ಚಮಚ ನಿಂಬೆ ರಸ ಮತ್ತು 1 ರಿಂದ 2 ಬೆಳ್ಳಿಯನ್ನು ಸೇರಿಸಿ. ಇದರ ಜತೆಗೆ 1 ಲವಂಗವನ್ನು ಪುಡಿ ಮಾಡಿ ವಿಶ್ರಣ ಮಾಡಿ. ಇದಕ್ಕೆ ಅರ್ಧ ಚಮಚ ನಿಂಬೆ ರಸವನ್ನು ಸೇರಿಸಿ ಕುಡಿಯಬಹುದು.
ಬೆಳ್ಳುಳ್ಳಿ ಜತೆ ಜೇನು ತುಪ್ಪ 2 ರಿಂದ 2 ಲವಂಗವನ್ನು ಚೆನ್ನಾಗಿ ಪುಡಿ ಮಾಡಿ ಅದನ್ನು ಜೇನು ತುಪ್ಪದೊಂದಿಗೆ ಮಿಶ್ರಣ ಮಾಡಿ. ಅದಕ್ಕೆ ಒಂದು ಬೆಳ್ಳುಳ್ಳಿಯನ್ನು ಚಿಕ್ಕ ಹೋಳುಗಳಾನ್ನಾಗಿ ಮಾಡಿ ಮಿಶ್ರಣ ಮಾಡಿದ ಬಳಿಕ ಅದನ್ನು ಸೇವಿಸಬಹುದು.
ಶುಂಠಿ, ಬೆಳ್ಳುಳ್ಳಿ ಮತ್ತು ನಿಂಬೆ ಚಹಾ 1 ರಿಂದ 2 ಲವಂಗ ಬೆಳ್ಳುಳ್ಳಿ ತೆಗೆದುಕೊಳ್ಳಿ. ಇದಕ್ಕೆ ಒಂದು ಸಣ್ಣ ಚೂರು ಶುಂಠಿಯನ್ನು ಸೇರಿಸಿ. ಅವುಗಳನ್ನು ನುಣ್ಣಗೆ ಪೇಸ್ಟ್ ಮಾಡಿ. ಆ ಪೇಸ್ಟ್ಗೆ ಸುಮಾರು ಎರಡು ಗ್ಲಾಸ್ ನೀರನ್ನು ಸೇರಿಸಿ ಚೆನ್ನಾಗಿ ಕುದಿಸಿ. ಬಳಿಕ ತಯಾರಾದ ಶುಂಠಿ, ಬೆಳ್ಳುಳ್ಳಿ ಮತ್ತು ನಿಂಬೆ ಮಿಶ್ರಣದ ಚಹಾವನ್ನು ಸೇವಿಸಬಹುದು.
ಇದನ್ನೂ ಓದಿ:
Health Tips: ಆ್ಯಂಟಿಆಕ್ಸಿಡೆಂಟ್ಗಳಿಂದ ಸಮೃದ್ಧವಾಗಿರುವ ಈ 5 ತರಕಾರಿಗಳ ಬಗ್ಗೆ ನೀವು ತಿಳಿದುಕೊಳ್ಳಲೇಬೇಕು
Health Tips: ಬಾಳೆ ಎಲೆಯ ಮೇಲೆ ಊಟ ಮಾಡುವ ಅಭ್ಯಾಸ ಇದೆಯೇ? ಆರೋಗ್ಯಕರ ಪ್ರಯೋಜನಗಳ ಬಗ್ಗೆ ತಿಳಿಯಿರಿ
(Know about garlic health benefits and its helps to weight loss)