ದೇಹದ ಮೇಲೆ ಮಚ್ಚೆ ಇರುವವರು ಅದೃಷ್ಟವಂತರೇ?

ಹಸ್ತ ರೇಖೆಯ ಶಾಸ್ತ್ರದಲ್ಲಿ ವ್ಯಕ್ತಿಯ ದೇಹದ ಮೇಲಿರುವ ಮಚ್ಚೆಯನ್ನು ನೋಡಿ ಭವಿಷ್ಯವನ್ನು ಹೇಳುತ್ತಾರೆ. ಸಾಮಾನ್ಯವಾಗಿ ದೇಹದ ಭಾಗಗಳಲ್ಲಿ ಕಂಡುಬರುವ ಕಪ್ಪು ಮಚ್ಚೆ ಅದೃಷ್ಟವನ್ನು ತಂದು ಕೊಡುತ್ತದೆ ಎಂಬ ನಂಬಿಕೆ ಇದೆ.

ದೇಹದ ಮೇಲೆ ಮಚ್ಚೆ ಇರುವವರು ಅದೃಷ್ಟವಂತರೇ?
ಸಾಂದರ್ಭಿಕ ಚಿತ್ರ
Updated By: shruti hegde

Updated on: Aug 02, 2021 | 8:00 AM

ಸಾಮಾನ್ಯವಾಗಿ ದೇಹದ ಭಾಗಗಳಲ್ಲಿ ಕಂಡುಬರುವ ಕಪ್ಪು ಮಚ್ಚೆ ಅದೃಷ್ಟವನ್ನು ತಂದು ಕೊಡುತ್ತದೆ ಎಂಬ ನಂಬಿಕೆ ಇದೆ. ಮನುಷ್ಯರ ಭವಿಷ್ಯವನ್ನು ಹುಟ್ಟಿದ ದಿನಾಂಕ ಮತ್ತು ಸಮಯದ ಆಧಾರದ ಮೇಲೆ ಹೇಳಲಾಗುವುದರಿಂದ ಹಸ್ತ ರೇಖೆಯ ಶಾಸ್ತ್ರದಲ್ಲಿ ವ್ಯಕ್ತಿಯ ದೇಹದ ಮೇಲಿರುವ ಮಚ್ಚೆಯನ್ನು ನೋಡಿ ಭವಿಷ್ಯವನ್ನು ಹೇಳುತ್ತಾರೆ.

ಸಾಮಾನ್ಯವಾಗಿ ಮಹಿಳೆಯರಿಗೆ ತುಟಿಗಳ ಮೇಲೆ ಕಪ್ಪು ಮಚ್ಚೆ ಕಂಡು ಬರುವುದರಿಂದ ಜೀವನದಲ್ಲಿ ಹೆಚ್ಚು ಸಂತೋಷವಾಗಿರುತ್ತಾರೆ ಎಂದು ನಂಬಲಾಗಿದೆ. ಹಾಗಿರುವಾಗ ಪುರುಷರಿಗೆ ಕಪ್ಪು ಮಚ್ಚೆ ಇರುವುದು ಅದೃಷ್ಟ ತರುತ್ತದೆಯೇ ಎಂಬುದನ್ನು ತಿಳಿಯೋಣ.

ಎರಡು ಹುಬ್ಬುಗಳ ಮಧ್ಯೆ ಮಚ್ಚೆ ಹೊಂದಿರುವವರು ಹೆಚ್ಚು ಸ್ವಾಭಿಮಾನಿಗಳಾಗಿರುತ್ತಾರೆ. ಜತೆಗೆ ಹೆಚ್ಚು ಅದೃಷ್ಟವಂತರು ಎಂದು ಹೇಳಲಾಗಿದೆ.

ಬಲಗಣ್ಣಿನೊಳಗೆ ಮಚ್ಚೆಯನ್ನು ಹೊಂದಿರುವವರು ಅಪಾರ ಸ್ನೇಹ ಬಳಗವನ್ನು ಸಂಪಾದಿಸುತ್ತಾರೆ. ಜತೆಗೆ ಸ್ನೇಹಿತರು, ಸಂಬಂಧಿಕರಿಂದ ಖ್ಯಾತಿ ಪಡೆಯುತ್ತಾರೆ.

ಪುರುಷರಿಗೆ ಬಲ ಭುಜದ ಮೇಲೆ ಮಚ್ಚೆ ಇರುವುದು ಒಳ್ಳೆಯದು ಎಂದು ಹೇಳುತ್ತಾರೆ. ಯಾವುದೇ ಅತಿದೊಡ್ಡ ಸಮಸ್ಯೆಯನ್ನು ಅವರು ಎದುರಿಸುವ ಪರಿಸ್ಥಿತಿ ಬರುವುದಿಲ್ಲ.

ಪುರುಷರಿಗೆ ಎದೆಯ ಭಾಗದಲ್ಲಿ ಕಪ್ಪು ಮಚ್ಚೆಯಿದ್ದರೆ ಆತ ಜೀವನದಲ್ಲಿ ಸಾರ್ಧಕತೆಯನ್ನು ಪಡೆಯುತ್ತಾನೆ.

ಮೂಗಿನ ಮೇಲೆ ಮಚ್ಚೆ ಇರುವವರು ಹೆಚ್ಚು ರೋಗಗಳ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ.

ಮೂಗಿನ ಬಲಭಾಗದಲ್ಲಿ ಮಚ್ಚೆ ಹೊಂದಿದವರು ಯಾವುದೇ ಕೆಲಸವನ್ನು ಪೂರ್ಣಗೊಳಿಸುತ್ತಾರೆ ಮತ್ತು ಹಿಡಿದ ಕೆಲಸವು ಯಶಸ್ವಿಯಾಗುತ್ತದೆ.

ಇದನ್ನೂ ಓದಿ:

ಒಂದು ತಿಂಗಳ ಕಾಲ ಸುರಿದ ಮಳೆಯಿಂದ ಈರುಳ್ಳಿ ಬೆಳೆಗೆ ಹಾನಿ; ನೇರಳೆ‌ ಮಚ್ಚೆ ರೋಗದಿಂದ ಕಂಗಾಲಾದ ಚಿತ್ರದುರ್ಗದ ರೈತರು

ಹಲ್ಲುಗಳ ನಡುವೆ ಅಂತರವಿದೆ ಎಂದು ತಲೆ ಕೆಡಿಸಿಕೊಂಡಿದ್ದೀರಾ? ಈ ಸುದ್ದಿ ಓದಿ

Published On - 7:57 am, Mon, 2 August 21