National Almond Day: ಒಂದು ದಿನಕ್ಕೆ ಎಷ್ಟು ಬಾದಾಮಿ ತಿಂದರೆ ಒಳ್ಳೆಯದು ತಿಳಿದಿದೆಯಾ?
National Almond Day: ಬಾದಮಿಯನ್ನು ನಿಯಮಿತಾಗಿ ಸೇವನೆ ಮಾಡುವುದರಿಂದ ಹೃದಯವನ್ನು ಆರೋಗ್ಯವನ್ನು ಕಾಪಾಡಿಕೊಳ್ಳುವುದರ ಜೊತೆಗೆ ರಕ್ತದೊತ್ತಡವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬಹುದು. ಜೊತೆಗೆ ಇದು ರೋಗ ನಿರೋಧಕಶಕ್ತಿಯನ್ನು ಬಲಪಡಿಸುವ ಮೂಲಕ ದೇಹವನ್ನು ವಿವಿಧ ರೋಗಗಳಿಂದ ರಕ್ಷಿಸುತ್ತದೆ. ಈ ರೀತಿ ಮಾನವನಿಗೆ ಇದರಿಂದ ಹೆಚ್ಚು ಪ್ರಯೋಜನ ಇರುವುದರಿಂದ ಇದಕ್ಕೆ ವಿಶ್ವದಾದ್ಯಂತ ಬೇಡಿಕೆ ಹೆಚ್ಚು. ಹಾಗಾಗಿ ಪೌಷ್ಟಿಕಾಂಶಗಳ ಆಗರವಾದ ಬಾದಾಮಿಗಾಗಿ ಒಂದು ದಿನ ಮೀಸಲಿಡಲಾಗಿದೆ. ಪ್ರತಿವರ್ಷ ಫೆ. 16ರಂದು ವಿಶ್ವದ ನಾನಾಕಡೆ ಬಾದಾಮಿ ದಿನ ಆಚರಿಸಲಾಗುತ್ತದೆ.

ಬಾದಾಮಿ ಆರೋಗ್ಯಕ್ಕೆ ಎಷ್ಟು ಪ್ರಯೋಜನಕಾರಿ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಪೋಷಕಾಂಶಗಳ ಖಜಾನೆಯಾಗಿರುವ ಬಾದಮಿಯನ್ನು ಅನೇಕ ಜನರು ಪ್ರತಿದಿನ ಸೇವನೆ ಮಾಡುತ್ತಾರೆ. ಪ್ರೋಟೀನ್, ಆರೋಗ್ಯಕರ ಕೊಬ್ಬುಗಳು, ಫೈಬರ್, ಜೀವಸತ್ವಗಳು ಮತ್ತು ಖನಿಜಗಳಿಂದ ಸಮೃದ್ಧವಾಗಿರುವ ಬಾದಮಿಯನ್ನು ನಿಯಮಿತಾಗಿ ಸೇವನೆ ಮಾಡುವುದರಿಂದ ಹೃದಯವನ್ನು ಆರೋಗ್ಯವನ್ನು ಕಾಪಾಡಿಕೊಳ್ಳುವುದರ ಜೊತೆಗೆ ರಕ್ತದೊತ್ತಡವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬಹುದು. ಜೊತೆಗೆ ಇದು ರೋಗ ನಿರೋಧಕಶಕ್ತಿಯನ್ನು ಬಲಪಡಿಸುವ ಮೂಲಕ ದೇಹವನ್ನು ವಿವಿಧ ರೋಗಗಳಿಂದ ರಕ್ಷಿಸುತ್ತದೆ. ಈ ರೀತಿ ಮಾನವನಿಗೆ ಇದರಿಂದ ಹೆಚ್ಚು ಪ್ರಯೋಜನ ಇರುವುದರಿಂದ ಇದಕ್ಕೆ ವಿಶ್ವದಾದ್ಯಂತ ಬೇಡಿಕೆ ಹೆಚ್ಚು. ಹಾಗಾಗಿ ಪೌಷ್ಟಿಕಾಂಶಗಳ ಆಗರವಾದ ಬಾದಾಮಿಗಾಗಿ ಒಂದು ದಿನ ಮೀಸಲಿಡಲಾಗಿದೆ. ಪ್ರತಿವರ್ಷ ಫೆ. 16ರಂದು ವಿಶ್ವದ ನಾನಾಕಡೆ ಬಾದಾಮಿ ದಿನ ಆಚರಿಸಲಾಗುತ್ತದೆ.
ಸಾಮಾನ್ಯವಾಗಿ ಭಾರತದಲ್ಲಿ ಬಾದಾಮಿಯನ್ನು ವಿವಿಧ ರುಚಿಕರ ಸಿಹಿ ತಿಂಡಿಗಳಲ್ಲಿ ಹೆಚ್ಚಾಗಿ ಬಳಸುತ್ತಾರೆ. ಈ ಬಾದಾಮಿ ಬೆಳೆಯುವ ಮರವು ಮಧ್ಯಪ್ರಾಚ್ಯ ಹಾಗೂ ದಕ್ಷಿಣ ಏಷ್ಯಾ ಪ್ರದೇಶದ ಒಂದು ಸಸ್ಯವಾಗಿದೆ. ಇದು ಸುಮಾರು 30 ಅಡಿ ಎತ್ತರಕ್ಕೆ ಸಮನಾಗಿ ಹರಡಿಕೊಂಡು ಬೆಳೆಯುವ ಮರ. ಪ್ರಪಂಚದಲ್ಲಿ ಬೆಳೆಯಲಾಗುವ ಬಾದಾಮಿಗಳಲ್ಲಿ ಶೇ 80ರಷ್ಟು ಬಾದಾಮಿಯನ್ನು ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ಬೆಳೆಯಲಾಗುತ್ತದೆ.
ಒಂದು ದಿನಕ್ಕೆ ಎಷ್ಟು ಬಾದಾಮಿ ತಿನ್ನಬೇಕು?
ತಜ್ಞರ ಪ್ರಕಾರ ಒಬ್ಬ ವ್ಯಕ್ತಿಯು ದಿನಕ್ಕೆ 30 ರಿಂದ 50 ಗ್ರಾಂ ಬಾದಾಮಿ ತಿಂದರೆ ಸಾಕಾಗುತ್ತದೆ. ಅಂದರೆ ಒಂದು ಮುಷ್ಟಿ ಅಥವಾ 8 ರಿಂದ 10 ಬಾದಾಮಿಗಳನ್ನು ತಿನ್ನಬಹುದು. 4 ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳಿಗೆ ದಿನಕ್ಕೆ 3 ರಿಂದ 4 ಬಾದಾಮಿ ತಿನ್ನಿಸಬಹುದು. ಅದರಲ್ಲೂ ನೆನೆಸಿದ ಬಾದಮಿ ತಿಂದರೆ ಹೆಚ್ಚು ಪ್ರಯೋಜನಕಾರಿ. ಸಾಮಾನ್ಯವಾಗಿ 50 ಗ್ರಾಂ ಬಾದಾಮಿಯಲ್ಲಿ ಸುಮಾರು 300 ಗ್ರಾಂ ಕ್ಯಾಲೋರಿಗಳಿದ್ದು, 150 ಗ್ರಾಂ ಕಾರ್ಬೋಹೈಡ್ರೇಟ್, 12 ಗ್ರಾಂ ಆರೋಗ್ಯಕರ ಕೊಬ್ಬು ಮತ್ತು 6 ಗ್ರಾಂ ಪ್ರೋಟೀನ್ಗಳನ್ನು ಹೊಂದಿದೆ.
ಇದನ್ನೂ ಓದಿ: ಸೂರ್ಯಕಾಂತಿ ಬೀಜಗಳ ಸೇವನೆ ಎಷ್ಟೆಲ್ಲಾ ಆರೋಗ್ಯ ಸಮಸ್ಯೆ ನಿವಾರಣೆ ಮಾಡುತ್ತೆ ನೋಡಿ
ಬಾದಾಮಿ ತಿನ್ನಲು ಸರಿಯಾದ ಸಮಯ ಯಾವುದು?
ನೀವು ಯಾವಾಗ ಬೇಕಾದರೂ ಬಾದಮಿ ತಿನ್ನಬಹುದು. ಆದರೆ ಅದರ ಪೂರ್ಣ ಪ್ರಯೋಜನಗಳನ್ನು ಪಡೆದುಕೊಳ್ಳಲು, ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಬಾದಾಮಿ ತಿನ್ನಲು ವೈದ್ಯರು ಸಲಹೆ ನೀಡುತ್ತಾರೆ. ಅದರಲ್ಲಿಯೂ ಬಾದಾಮಿ ಸ್ವಲ್ಪ ಬಿಸಿ ಸ್ವಭಾವವನ್ನು ಹೊಂದಿರುವುದರಿಂದ, ಅದನ್ನು ರಾತ್ರಿಯಿಡಿ ನೀರಿನಲ್ಲಿ ನೆನೆಸಿಟ್ಟು ಮರುದಿನ ಬೆಳಗ್ಗೆ ತಿನ್ನುವುದು ಹೆಚ್ಚು ಸೂಕ್ತವಾಗಿದೆ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




