AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಒಂದು ಕಿಡ್ನಿ ಇರುವ ಮಗು ಆರೋಗ್ಯವಾಗಿರಲು ಸಾಧ್ಯವೇ? ಪೋಷಕರೇ ಈ ವಿಷಯ ನೆನಪಿಟ್ಟುಕೊಳ್ಳಿ

ಹುಟ್ಟುವ ಮಗುವಿಗೆ ಎರಡು ಮೂತ್ರಪಿಂಡಗಳಿರುತ್ತದೆ. ಆದರೆ ಕೆಲವೊಮ್ಮೆ ಮಗು ಹುಟ್ಟುವಾಗಲೇ ಒಂದು ಮೂತ್ರಪಿಂಡ ಅಥವಾ ಕಿಡ್ನಿಯೊಂದಿಗೆ ಜನಿಸುತ್ತದೆ. ಇಂತಹ ಸಂದರ್ಭಗಳಲ್ಲಿ ಪೋಷಕರು ಚಿಂತೆಗೀಡಾಗುತ್ತಾರೆ. ಆದರೆ ಆರೋಗ್ಯ ತಜ್ಞರು ಒಂದೇ ಕಿಡ್ನಿ ಇರುವ ಮಗು ಜನಿಸಿದಾಗ ಸಾಮಾನ್ಯವಾಗಿ ಭಯ ಪಡುವ ಅವಶ್ಯಕತೆ ಇಲ್ಲ ಎನ್ನುತ್ತಾರೆ. ಆದರೂ ಅವರ ತಲೆಯಲ್ಲಿ ತಮ್ಮ ಮಗು ಮುಂದೆ ಆರೋಗ್ಯವಾಗಿರಲು ಸಾಧ್ಯವೇ, ಆ ಮಗುವಿನ ಜೀವನ ಹೇಗೆ ನಡೆಯಬಹುದು ಹೀಗೆ ಸಾವಿರ ಪ್ರಶ್ನೆಗಳು ಉದ್ಭವವಾಗುತ್ತದೆ. ಇಂತಹ ಸಂದೇಹಗಳಿಗೆ ತಜ್ಞರು ನೀಡಿರುವ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.

ಒಂದು ಕಿಡ್ನಿ ಇರುವ ಮಗು ಆರೋಗ್ಯವಾಗಿರಲು ಸಾಧ್ಯವೇ? ಪೋಷಕರೇ ಈ ವಿಷಯ ನೆನಪಿಟ್ಟುಕೊಳ್ಳಿ
Single Kidney In Children
ಪ್ರೀತಿ ಭಟ್​, ಗುಣವಂತೆ
|

Updated on: Nov 01, 2025 | 3:10 PM

Share

ಸಾಮಾನ್ಯವಾಗಿ ಹುಟ್ಟುವ ಮಗುವಿಗೆ ಎರಡು ಮೂತ್ರಪಿಂಡಗಳಿರುತ್ತದೆ. ಆದರೆ ಇದು ಎಲ್ಲ ಮಕ್ಕಳಿಗೂ ಅನ್ವಯವಾಗುವುದಿಲ್ಲ. ಹೌದು, ವಿಶ್ವ ಆರೋಗ್ಯ ಸಂಸ್ಥೆ ಹೇಳುವ ಪ್ರಕಾರ, ವಿಶ್ವದಾದ್ಯಂತ ಸಾವಿರ ಮಕ್ಕಳಲ್ಲಿ ಒಂದು ಮಗು ಎರಡು ಮೂತ್ರಪಿಂಡಗಳ ಬದಲಿಗೆ ಒಂದೇ ಕಿಡ್ನಿ (Kidney) ಅಥವಾ ಮೂತ್ರಪಿಂಡದೊಂದಿಗೆ ಜನಿಸುತ್ತದೆ. ಈ ಪರಿಸ್ಥಿತಿಯಲ್ಲಿ ಮಗು ಜನಿಸಿದಾಗ ಪೋಷಕರು ಸಹಜವಾಗಿ ಚಿಂತಿತರಾಗುತ್ತಾರೆ. ಅದು ತಪ್ಪಲ್ಲ. ಆದರೆ ಆರೋಗ್ಯ (Health) ತಜ್ಞರು ಒಂದೇ ಕಿಡ್ನಿ ಇರುವ ಮಗು ಜನಿಸಿದಾಗ ಸಾಮಾನ್ಯವಾಗಿ ಭಯ ಪಡುವ ಅವಶ್ಯಕತೆ ಇಲ್ಲ ಎನ್ನುತ್ತಾರೆ. ಆದರೂ ಮಕ್ಕಳು ಜನಿಸಿದಾಗ ಪೋಷಕರ ತಲೆಯಲ್ಲಿ ತಮ್ಮ ಮಗು ಆರೋಗ್ಯವಾಗಿರಲು ಸಾಧ್ಯವೇ, ಮುಂದೆ ಆ ಮಗುವಿನ ಜೀವನ ಹೇಗೆ ನಡೆಯಬಹುದು ಹೀಗೆ ಸಾವಿರ ಪ್ರಶ್ನೆಗಳು ಉದ್ಭವವಾಗುತ್ತದೆ. ಇಂತಹ ಸಂದೇಹಗಳಿಗೆ ತಜ್ಞರು ನೀಡಿರುವ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.

ಮಕ್ಕಳ ಶಸ್ತ್ರಚಿಕಿತ್ಸಕ ಮತ್ತು ಪೀಡಿಯಾಟ್ರಿಕ್ ಮೂತ್ರಶಾಸ್ತ್ರಜ್ಞ ಡಾ. ಸಂದೀಪ್ ಕುಮಾರ್ ಸಿನ್ಹಾ ಅವರು ಹೇಳುವ ಪ್ರಕಾರ, ಒಂದೇ ಕಿಡ್ನಿಯೊಂದಿಗೆ ಜನಿಸಿದ ಮಗುವೂ ಸಾಮಾನ್ಯ ಜೀವನವನ್ನು ನಡೆಸಬಹುದು ಎಂದು ಹೇಳುತ್ತಾರೆ. ಆದರೆ ಕೆಲವು ನಿಯಮಿತ ತಪಾಸಣೆ ಮತ್ತು ಮುನ್ನೆಚ್ಚರಿಕೆಗಳೊಂದಿಗೆ ಇದು ಸಾಧ್ಯವಾಗುತ್ತದೆ. ಜೊತೆಗೆ ಮಗುವಿನ ಆಹಾರಕ್ರಮಕ್ಕೆ ಸರಿಯಾದ ಗಮನ ನೀಡಿದರೆ ಮತ್ತು ನಿಯಮಿತ ವೈದ್ಯಕೀಯ ಪರೀಕ್ಷೆಗಳನ್ನು ನಡೆಸಿದರೆ, ಯಾವುದೇ ಅಪಾಯವಿರುವುದಿಲ್ಲ. ಅದರಲ್ಲಿಯೂ ಇತ್ತೀಚಿನ ದಿನಗಳಲ್ಲಿ, ಅನೇಕ ಸುಧಾರಿತ ತಂತ್ರಗಳು (ಗರ್ಭಾವಸ್ಥೆಯಲ್ಲಿ ಅಲ್ಟ್ರಾಸೌಂಡ್) ಲಭ್ಯವಿದೆ, ಇದು ಜನನದ ಮೊದಲು ಸ್ಥಿತಿಯನ್ನು ಪತ್ತೆಹಚ್ಚಲು ಸಹಾಯ ಮಾಡುತ್ತದೆ, ಮಾತ್ರವಲ್ಲ ವೈದ್ಯರನ್ನು ಸಂಪರ್ಕಿಸಿ ಮುಂಚಿತವಾಗಿ ಸರಿಯಾದ ಚಿಕಿತ್ಸೆ ಮುಂದುವರಿಸಲು ಅನುವು ಮಾಡಿಕೊಡುತ್ತದೆ.

ಸರಿಯಾದ ಸಮಯದಲ್ಲಿ ಅಗತ್ಯ ಪರೀಕ್ಷೆಗಳು

ಡಾ. ಸಿನ್ಹಾ ಹೇಳುವಂತೆ ಈ ರೀತಿ ಒಂದೇ ಕಿಡ್ನಿ ಇರುವ ಮಕ್ಕಳಲ್ಲಿ, ಪ್ರತಿ ವರ್ಷ ಮೂತ್ರದಲ್ಲಿ ಪ್ರೋಟೀನ್ ಮತ್ತು ರಕ್ತದೊತ್ತಡವನ್ನು ಪರೀಕ್ಷಿಸುವುದು ಮುಖ್ಯ. ಈ ಪರೀಕ್ಷೆಗಳು ಒತ್ತಡ ಅಥವಾ ಮೂತ್ರಪಿಂಡಗಳಿಗೆ ಹಾನಿಯಾಗುವುದನ್ನು ಮೊದಲೇ ಸೂಚಿಸಬಹುದು. ಆದರೆ ಮಕ್ಕಳು ಯಾವಾಗಲೂ ನಿರ್ಬಂಧ ಅಥವಾ ಎಚ್ಚರಿಕೆಯಿಂದ ಬದುಕಬೇಕು ಎಂಬುದು ಇದರ ಅರ್ಥವಲ್ಲ. ಅವರು ಇತರ ಮಕ್ಕಳಂತೆ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬಹುದು ಮತ್ತು ಆಟವಾಡಬಹುದು. ಒಂದು ಮೂತ್ರಪಿಂಡ ಹೊಂದಿರುವ ಮಕ್ಕಳಿಗೆ ಸಾಮಾನ್ಯವಾಗಿ ಯಾವುದೇ ವಿಶೇಷ ಆಹಾರದ ಅಗತ್ಯವಿಲ್ಲ. ಆದರೆ ಮೂತ್ರಪಿಂಡಕ್ಕೆ ಹಾನಿ ಮಾಡುವ ವಿಷಯಗಳನ್ನು ತಪ್ಪಿಸಬೇಕಾಗುತ್ತದೆ.

ಇದನ್ನೂ ಓದಿ: ನೀವು ಸೇವನೆ ಮಾಡುವ ಆಹಾರದಲ್ಲಿ ಆ ಪದಾರ್ಥಗಳಿದ್ದರೆ ನಿಮ್ಮ ಮೆದುಳು, ಕರುಳು ಎರಡೂ ಸೇಫ್ ಆಗಿರುತ್ತೆ

ಮಗುವಿನ ಬೆಳವಣಿಗೆಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ

ಕೆಲವೊಮ್ಮೆ, ಒಂದು ಮೂತ್ರಪಿಂಡದೊಂದಿಗೆ ಜನಿಸುವುದು ಇತರ ಆರೋಗ್ಯ ಸಮಸ್ಯೆಗಳನ್ನು ಒಳಗೊಂಡಿರುವ ದೊಡ್ಡ ಸಿಂಡ್ರೋಮ್‌ನ ಭಾಗವಾಗಿರಬಹುದು. ಆದರೆ ಹೆಚ್ಚಿನ ಸಂದರ್ಭಗಳಲ್ಲಿ, ಇದು ಮಗುವಿನ ಬೆಳವಣಿಗೆಯ ಮೇಲೆ ಪ್ರತಿಕೂಲ ಪರಿಣಾಮ ಬೀರುವುದಿಲ್ಲ. ಜೊತೆಗೆ ಒಂದು ಮೂತ್ರಪಿಂಡ ಹೊಂದಿರುವ ಮಗು ದೈಹಿಕವಾಗಿ ದುರ್ಬಲವಾಗಿರುತ್ತದೆ ಎಂಬುದು ಇದರ ಅರ್ಥವಲ್ಲ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!