Depression: ನೀವು ಖಿನ್ನತೆಯಲ್ಲಿದ್ದೀರಿ ಎಂದು ಸೂಚಿಸುವ ಲಕ್ಷಣಗಳಿವು
ನೀವು ಸದಾ ಬೇಸರದಿಂದಿರುವುದು, ಅಸಹಾಯಕತೆ, ದುಃಖ ಇಮ್ಮಳಿಸಿ ಬರುವುದು ಇವೆಲ್ಲವೂ ಖಿನ್ನತೆಯ ಲಕ್ಷಣವಾಗಿರಬಹುದು
ನೀವು ಸದಾ ಬೇಸರದಿಂದಿರುವುದು, ಅಸಹಾಯಕತೆ, ದುಃಖ ಇಮ್ಮಳಿಸಿ ಬರುವುದು ಇವೆಲ್ಲವೂ ಖಿನ್ನತೆಯ ಲಕ್ಷಣವಾಗಿರಬಹುದು. ಇದ್ದಕ್ಕಿದ್ದಂತೆ ಯಾರದೋ ಮೇಲೆ ಕೋಪ ತೋರಿಸುವುದು, ಏರು ಧ್ವನಿಯಲ್ಲಿ ಮಾತನಾಡುವುದು, ಹೆಚ್ಚು ಮಾತನಾಡುವುದು ಅಥವಾ ಮಾತನಾಡದೇ ಇರುವುದು ಇವೆಲ್ಲವೂ ಖಿನ್ನತೆಯ ಲಕ್ಷಣವಾಗಿರಬಹುದು. ಖಿನ್ನತೆ ಎಂಬುದು ಮನೋವ್ಯಾದಿ. ಕೆಲಸದ ಒತ್ತಡವು ಕೂಡ ಖಿನ್ನತೆಯನ್ನು ಹೆಚ್ಚಿಸುತ್ತದೆ.
ಖಿನ್ನತೆಯ ಲಕ್ಷಣಗಳ ಬಗ್ಗೆ ತಿಳಿಯಿರಿ ಬಳಲಿಕೆ ಮತ್ತು ಏಕಾಗ್ರತೆ ಕೊರತೆ ಅತಿಯಾದ ಬಳಲಿಕೆಯೂ ಖಿನ್ನತೆಯ ಲಕ್ಷಣವಾಗಿದೆ. ಶೇ.90ರಷ್ಟು ಖಿನ್ನತೆಯಲ್ಲಿರುವವರು ಆಯಾಸದಲ್ಲಿರುತ್ತಾರೆ ಎಂದು ಸಂಶೋಧನೆ ಹೇಳಿದೆ. ನಿದ್ದೆ ಮಾಡಿದರೂ ಆಯಾಸ ಮಾಯವಾಗುವುದಿಲ್ಲ. ದೈನಂದಿನ ಚಟುವಟಿಕೆಗಳಲ್ಲಿಯೂ ನಿರಾಸಕ್ತಿ. ದೈಹಿಕ ಕೆಲಸಗಳೂ ಕಷ್ಟಕರವಾಗಲಿವೆ. ಏಕಾಗ್ರತೆಯ ಕೊರತೆ ಬಾಧಿಸಲಿದೆ. ಯಾರೊಂದಿಗೂ ಭಾವುಕವಾಗಿ ಮಾತನಾಡಲು ಹಿಂದೇಟು, ಸಮಸ್ಯೆ ಹೇಳಿಕೊಳ್ಳಲು ಮುಜುಗರ ಅನುಭವಿಸಲಿದ್ದಾರೆ.
ವಿಪರೀತ ಕೋಪ ಏಕಾಏಕಿ ಕೋಪ ಹೆಚ್ಚಾಗುವುದು ಅತಿಯಾದ ದುಃಖ, ಏರು ಧ್ವನಿಯಲ್ಲಿ ವಾದ ಮಾಡುವುದು, ತಾಳ್ಮೆಯನ್ನು ಕಳೆದುಕೊಳ್ಳುವುದು, ಯಾರು ಏನೇ ಮಾತನಾಡಿದರೂ ಕಿರಿಕಿರಿ ಅನಿಸುವುದು, ತಾಳ್ಮೆ ಕಳೆದುಕೊಂಡ ಮನಸ್ಥಿತಿ. ಸದಾ ಕಿರಿಕಿರಿ ಅನುಭವಿಸುವುದು ಖಿನ್ನತೆಯ ಲಕ್ಷಣ. ಚಿಕ್ಕ ಚಿಕ್ಕ ವಿಷಯಗಳಿಗೆ ಗರಂ ಆಗುವುದು. ನಿಮ್ಮ ಮೇಲೆ ನೀವೇ ಕೋಪ ಮಾಡಿಕೊಳ್ಳುವುದೂ ಕೂಡ ಖಿನ್ನತೆಯ ಲಕ್ಷಣವಾಗಿದೆ.
ಜೀರ್ಣಶಕ್ತಿ ಕೊರತೆ ಒಂದೊಮ್ಮೆ ನಿಮಗೆ ಖಿನ್ನತೆ ಸಮಸ್ಯೆ ಕಾಡುತ್ತಿದ್ದರೆ, ಜೀರ್ಣಶಕ್ತಿ ಕೊರತೆಯೂ ಬಾಧಿಸಲಿದೆ. ನಿದ್ದೆ ಸರಿಯಾಗದೆ ಇರುವುದರಿಂದ ಜೀರ್ಣಕ್ರಿಯೆ ಮೇಲೆ ಪರಿಣಾಮ ಬೀರಲಿದೆ. ಅದು ಕರುಳು ಮತ್ತು ಹೊಟ್ಟೆಗೆ ಸಂಬಂಧಿಸಿದ ಅಸ್ವಸ್ಥತೆಗೆ ಕಾರಣವಾಗಲೂ ಬಹುದು. ವಾಕರಿಕೆ, ಹೊಟ್ಟೆ ನೋವು, ಹೊಟ್ಟೆ ಉಬ್ಬರ, ಗ್ಯಾಸ್‌ಸ್ಟ್ರಿಕ್ ಸಮಸ್ಯೆ ರೀತಿಯ ಸಮಸ್ಯೆ ಕಾಣಿಸಿಕೊಳ್ಳಲಿದೆ.
ಸಂತೋಷವಾಗಿರುವಂತೆ ನಾಟಕ ಸಂತೋಷವಾಗದಿದ್ದರೂ ಸಂತೋಷವಾಗಿದ್ದೇನೆ ಎಂಬುವಂತೆ ತೋರಿಸಿಕೊಳ್ಳುವುದು, ಸ್ನೇಹಿತರ ಜತೆಗೆ ಖುಷಿಯಲ್ಲಿಯೇ ಕಾಲ ಕಳೆಯಬಹುದು. ಜೋಕ್ ಮಾಡುತ್ತ ಖುಷಿಯಾಗಿರಬಹುದು. ಆದರೆ, ಮನೆಗೆ ಬಂದ ತಕ್ಷಣ ಅದರ ವಿರುದ್ಧವಾಗಿ ನಡೆದುಕೊಳ್ಳಬಹುದು.
ಶೂನ್ಯತೆ ಭಾವ ನಿಮ್ಮನ್ನು ಕಾಡಲಿದೆ ಎಲ್ಲವೂ ಇದ್ದು ಏನೂ ಇಲ್ಲದ ಶೂನ್ಯತೆ ಭಾವ ನಿಮ್ಮನ್ನು ಕಾಡಲಿದೆ. ಇಷ್ಟದಿಂದ ಮಾಡಬೇಕಿರುವ ಕೆಲಸ ಯಾವುದೂ ಈಡೇರುವುದಿಲ್ಲ. ಮಾಡುವ ಕೆಲಸದ ಮೇಲೆ ಆಸಕ್ತಿ ಕಳೆದುಕೊಳ್ಳುವುದು. ಹಸಿವಿನ ನಷ್ಟದ ಜತೆಗೆ ನಿದ್ರೆಯಲ್ಲಿ ಅಸ್ವತ್ಥತೆ ಕಾಣಿಸಲಿದೆ. ದೇಹದಲ್ಲಿ ತ್ರಾಣ ಇಲ್ಲದಿರುವುದು, ತಲೆಯಲ್ಲಿ ಕೆಟ್ಟ ಆಲೋಚನೆಗಳು ಬರಲಿವೆ.
ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ