ಒತ್ತಡವೇ ನಿಮ್ಮ ಹೃದಯದ ಅತಿದೊಡ್ಡ ಶತ್ರು; ಯಾಕೆ ಗೊತ್ತಾ?

|

Updated on: Sep 25, 2023 | 12:06 PM

Heart Health: ಅಧಿಕ ರಕ್ತದೊತ್ತಡ, ಅಧಿಕ ಕೊಲೆಸ್ಟರಾಲ್, ಮಧುಮೇಹ, ಸ್ಥೂಲಕಾಯತೆ ಮತ್ತು ದೈಹಿಕ ನಿಷ್ಕ್ರಿಯತೆ ಸೇರಿದಂತೆ ಹೃದ್ರೋಗಕ್ಕೆ ಪ್ರಮುಖ ಅಪಾಯಕಾರಿ ಅಂಶಗಳೊಂದಿಗೆ ಒತ್ತಡ ಪ್ರಮುಖ ಪಾತ್ರ ವಹಿಸುತ್ತದೆ. ಮಾನಸಿಕ ಒತ್ತಡ ನಿಮ್ಮ ಮನಸ್ಥಿತಿ, ನಿದ್ರೆ ಮತ್ತು ಹಸಿವನ್ನು ಅಡ್ಡಿಪಡಿಸಬಹುದು.

ಒತ್ತಡವೇ ನಿಮ್ಮ ಹೃದಯದ ಅತಿದೊಡ್ಡ ಶತ್ರು; ಯಾಕೆ ಗೊತ್ತಾ?
ಹೃದಯದ ಆರೋಗ್ಯ
Image Credit source: iStock
Follow us on

ಹೃದಯ ಆರೋಗ್ಯವಾಗಿದ್ದರೆ ನಮ್ಮ ದೇಹದ ಇಂಜಿನ್ ಹೆಚ್ಚು ಕಾಲ ಓಡಲು ಸಹಾಯಕವಾಗುತ್ತದೆ. ಆದರೆ, ಇತ್ತೀಚಿನ ಜೀವನಶೈಲಿ ಮತ್ತು ಆಹಾರಶೈಲಿಯಿಂದ ಹೃದಯಾಘಾತದ (Heart Attack) ಸಂಖ್ಯೆ ಹೆಚ್ಚುತ್ತಿದೆ. ಆದರೆ, ನಿಮ್ಮ ಒತ್ತಡದ ಜೀವನಶೈಲಿಯೇ ನಿಮ್ಮ ಹೃದಯದ ಅತಿದೊಡ್ಡ ಶತ್ರು ಎಂಬುದು ನಿಮಗೆ ತಿಳಿದಿದೆಯೇ? ಒತ್ತಡ ಮತ್ತು ನಿಮ್ಮ ಹೃದಯದ ನಡುವಿನ ಸಂಬಂಧ ಸಂಕೀರ್ಣವಾದುದು. ಅಧಿಕ ರಕ್ತದೊತ್ತಡ, ಅಧಿಕ ಕೊಲೆಸ್ಟ್ರಾಲ್, ಮಧುಮೇಹ, ಸ್ಥೂಲಕಾಯತೆ ಮತ್ತು ದೈಹಿಕ ನಿಷ್ಕ್ರಿಯತೆ ಸೇರಿದಂತೆ ಹೃದ್ರೋಗಕ್ಕೆ ಪ್ರಮುಖ ಅಪಾಯಕಾರಿ ಅಂಶಗಳೊಂದಿಗೆ ಒತ್ತಡ ಪ್ರಮುಖ ಪಾತ್ರ ವಹಿಸುತ್ತದೆ.

ಹೃದಯಾಘಾತಕ್ಕೆ ಮಾನಸಿಕ ಒತ್ತಡವು ಬಹಳ ಅಪಾಯಕಾರಿ ಅಂಶವಾಗಿದೆ ಎಂದು ‘ಇಂಟರ್‌ಹಾರ್ಟ್’ ಅಧ್ಯಯನವು ತಿಳಿಸಿದೆ. ನೀವು ಒತ್ತಡದ ಪರಿಸ್ಥಿತಿಗೆ ಒಳಗಾದಾಗ ಹೋರಾಡಬೇಕು ಅಥವಾ ಓಡಿಹೋಗಬೇಕು ಎಂಬ ಹಂತಕ್ಕೆ ತಲುಪುತ್ತೀರಿ. ಹಾರ್ವರ್ಡ್ ಹೆಲ್ತ್ ಪ್ರಕಾರ, ನಿಮ್ಮ ದೇಹವು ಕಾರ್ಟಿಸೋಲ್ ಮತ್ತು ಎಪಿನ್ಫ್ರಿನ್ (ಅಡ್ರಿನಾಲಿನ್) ರೀತಿಯ ರಾಸಾಯನಿಕಗಳನ್ನು ಬಿಡುಗಡೆ ಮಾಡುತ್ತದೆ. ಅದು ನಿಮ್ಮ ದೇಹವನ್ನು ಕ್ರಿಯೆಗೆ ಸಿದ್ಧಪಡಿಸುತ್ತದೆ.

ಇದನ್ನೂ ಓದಿ: Heart Attack: ಯುವಜನರಲ್ಲಿ ಹೃದಯಾಘಾತಕ್ಕೆ ಕಾರಣವೇನು?; ನೀವೂ ಈ ತಪ್ಪು ಮಾಡಬೇಡಿ

ನಿಮ್ಮ ಮುಂದೆ ಇರುವ ಕಾರಿಗೆ ಬೆಂಕಿ ಹೊತ್ತಿಕೊಂಡರೆ ತಕ್ಷಣ ನೀವು ನಿಮ್ಮ ಕಾರಿನಿಂದ ಹಾರಿ ಓಡಿಹೋಗಲು ಸಿದ್ಧರಾಗಿರುತ್ತೀರಿ. ಆದರೆ, ನೀವು ಟ್ರಾಫಿಕ್‌ನಲ್ಲಿ ಸಿಲುಕಿರುವಾಗ ಈ ರೀತಿಯಾದರೆ ಅದಕ್ಕೆ ಪ್ರತಿಕ್ರಿಯೆಯು ಬೇರೆ ರೀತಿಯದ್ದೇ ಆಗಿರುತ್ತದೆ. ಹೀಗಾಗಿ, ಮಾನಸಿಕ ಒತ್ತಡವು ನಿಮ್ಮ ಹೃದಯದ ಕಾರ್ಯವನ್ನು ಟ್ರಾಫಿಕ್ ರೀತಿ ಜಾಮ್ ಮಾಡಿಬಿಡುತ್ತದೆ. ನೀವು ಅದರಿಂದ ಹೇಗೆ ಬಚಾವಾಗುತ್ತೀರಿ ಎಂಬುದರ ಆಧಾರದ ಮೇಲೆ ನಿಮ್ಮ ಹೃದಯದಕ್ಕೆ ಆಗುವ ಹಾನಿ ಎಷ್ಟು ಎಂಬುದು ಅವಲಂಬಿತವಾಗಿರುತ್ತದೆ.

ಮಾನಸಿಕ ಒತ್ತಡ ನಿಮ್ಮ ಮನಸ್ಥಿತಿ, ನಿದ್ರೆ ಮತ್ತು ಹಸಿವನ್ನು ಅಡ್ಡಿಪಡಿಸಬಹುದು. ನಿಮ್ಮ ದೈನಂದಿನ ದಿನಚರಿಯ ಮೇಲೆ ಪರಿಣಾಮ ಬೀರುವುದರ ಜೊತೆಗೆ ಈ ಅತಿಯಾದ ಭಾವನಾತ್ಮಕ ಒತ್ತಡವು ಹೃದಯದ ರಕ್ತನಾಳದ ಕಾಯಿಲೆಯನ್ನು ಹೆಚ್ಚು ಮಾಡುತ್ತದೆ ಎಂದು ಅಧ್ಯಯನಗಳು ತಿಳಿಸಿವೆ.

ಅಮೇರಿಕನ್ ಹಾರ್ಟ್ ಅಸೋಸಿಯೇಷನ್ (AHA) ಪ್ರಕಾರ, ದೀರ್ಘಕಾಲದ ಒತ್ತಡವು ಹೃದ್ರೋಗಕ್ಕೆ ಕಾರಣವಾಗಬಹುದು. ಇದು ಅಮೆರಿಕಾದಲ್ಲಿ ಸಾವಿನ ಪ್ರಮುಖ ಕಾರಣವಾಗಿದೆ. ಅಧಿಕ ರಕ್ತದೊತ್ತಡ ಮತ್ತು ಉರಿಯೂತ ಸೇರಿದಂತೆ ವಿವಿಧ ಕಾರ್ಯವಿಧಾನಗಳ ಮೂಲಕ ಒತ್ತಡವು ನೇರವಾಗಿ ಹೃದಯರಕ್ತನಾಳದ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.

ಇದನ್ನೂ ಓದಿ: ಕ್ಯಾನ್ಸರ್, ಹೃದಯದ ಸಮಸ್ಯೆಗಳ ನಿಯಂತ್ರಣಕ್ಕೆ ಬಾರ್ಲಿ ಬಳಸಿ

ಒತ್ತಡವನ್ನು ನಿಭಾಯಿಸುವುದು ಹೇಗೆ?:

ದೈಹಿಕ ಚಟುವಟಿಕೆ: ನಿಯಮಿತ ವ್ಯಾಯಾಮವು ಒತ್ತಡವನ್ನು ಕಡಿಮೆ ಮಾಡಲು ಮತ್ತು ಒಟ್ಟಾರೆ ಹೃದಯರಕ್ತನಾಳದ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ.

ಆರೋಗ್ಯಕರ ಆಹಾರ: ಸ್ಯಾಚುರೇಟೆಡ್ ಮತ್ತು ಟ್ರಾನ್ಸ್ ಕೊಬ್ಬುಗಳು, ಕೊಲೆಸ್ಟ್ರಾಲ್ ಮತ್ತು ಸೋಡಿಯಂ ಅಂಶ ಕಡಿಮೆ ಇರುವ ಸಮತೋಲಿತ ಆಹಾರವನ್ನು ತಿನ್ನುವುದು ಹೃದಯದ ಆರೋಗ್ಯವನ್ನು ಹೆಚ್ಚಿಸುತ್ತದೆ.

ವಿಶ್ರಾಂತಿ: ದೀರ್ಘ ಉಸಿರಾಟ, ಧ್ಯಾನ ಮತ್ತು ಸ್ನಾಯುವಿನ ವಿಶ್ರಾಂತಿಯಂತಹ ಅಭ್ಯಾಸಗಳು ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಸಾಮಾಜಿಕ ಬೆಂಬಲ: ಉತ್ತಮ ಸಾಮಾಜಿಕ ಸಂಪರ್ಕಗಳನ್ನು ಕಾಪಾಡಿಕೊಳ್ಳುವುದು, ಸ್ನೇಹಿತರು ಮತ್ತು ಕುಟುಂಬದಿಂದ ಬೆಂಬಲವನ್ನು ಪಡೆಯುವುದು ಒತ್ತಡವನ್ನು ನಿರ್ವಹಿಸಲು ಪ್ರಯೋಜನಕಾರಿಯಾಗಿದೆ.

ಮನಶ್ಯಾಸ್ತ್ರಜ್ಞರ ಸಹಾಯ: ಒತ್ತಡವು ನಿಮ್ಮ ಮಾನಸಿಕ ಆರೋಗ್ಯದ ಮೇಲೆ ಗಮನಾರ್ಹವಾಗಿ ಪರಿಣಾಮ ಬೀರುತ್ತಿದ್ದರೆ, ಮನಶಾಸ್ತ್ರಜ್ಞರಿಂದ ಸಮಾಲೋಚನೆ ಪಡೆಯುವುದು ಅಗತ್ಯ.

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:05 pm, Mon, 25 September 23