Migraine and Headache Awareness Month 2021: ಜೀವನಶೈಲಿಯಲ್ಲಿನ ಬದಲಾವಣೆಯೇ ಮೈಗ್ರೇನ್​ನಿಂದ ನಿಮ್ಮನ್ನು ದೂರವಾಗಿಸುತ್ತದೆ

| Updated By: preethi shettigar

Updated on: Jun 09, 2021 | 8:27 AM

ಮೈಗ್ರೇನ್ ಇರುವವರು ತಕ್ಷಣ ವೈದ್ಯರ ಸಲಹೆ ಪಡೆಯುವುದು ಸೂಕ್ತ . ತಲೆನೋವು ಮತ್ತು ಮೈಗ್ರೇನ್ ಎರಡು ಕೂಡ ಬೇರೆ ಬೇರೆ ಆರೋಗ್ಯದ ಸ್ಥಿಮಿತತೆಯನ್ನು ಹಾಳು ಮಾಡುವಲ್ಲಿ ಇವುಗಳ ಪಾತ್ರ ದೊಡ್ಡದಿದೆ.

Migraine and Headache Awareness Month 2021: ಜೀವನಶೈಲಿಯಲ್ಲಿನ ಬದಲಾವಣೆಯೇ ಮೈಗ್ರೇನ್​ನಿಂದ ನಿಮ್ಮನ್ನು ದೂರವಾಗಿಸುತ್ತದೆ
ಮೈಗ್ರೇನ್​ (ಸಂಗ್ರಹ ಚಿತ್ರ)
Follow us on

ಆಗಾಗ್ಗೆ ಬರುವ ತಲೆನೋವು ಮತ್ತು ಮೈಗ್ರೇನ್‌ನಂತಹ ಸಮಸ್ಯೆಯು ನಮ್ಮನ್ನು ಹೈರಾಣಾಗಿಸುತ್ತದೆ. ಸಾಮಾನ್ಯವಾಗಿ ಬರುವ ತಲೆ ನೋವು ಹೆಚ್ಚು ಸಮಯ ಉಳಿಯುವುದಿಲ್ಲ. ಇದನ್ನು ಮಾತ್ರೆಯ ಮೂಲಕವೋ ಅಥವಾ ನೋವನ್ನು ದೂರ ಮಾಡುವ ಬಾಮ್​ಗಳ ಮೂಲಕವೋ ಸರಿಪಡಿಸಿಕೊಳ್ಳಬಹುದು. ಆದರೆ ಮೈಗ್ರೇನ್ ತಲೆಯ ಒಂದು ಭಾಗಕ್ಕೆ ಮಾತ್ರ ಹೆಚ್ಚು ನೋವನ್ನು ನೀಡುತ್ತದೆ. ಹೀಗಾಗಿ ಇದನ್ನು ಅರ್ಧ ತಲೆನೋವು ಎಂದು ಕೂಡ ಕರೆಯುತ್ತಾರೆ. ಇದು ಹೆರಿಡಿಟಿಯಿಂದಲೋ ಅಥವಾ ಅಧಿಕ ಒತ್ತಡದಿಂದಲೋ ಕಾಣಿಸಿಕೊಳ್ಳಲಿದ್ದು, ಪರಿಹಾರಕ್ಕಾಗಿ ಜನರು ಹಾತೋರೆಯುತ್ತಿದ್ದಾರೆ. ಮೈಗ್ರೇನ್ ಇರುವವರು ತಕ್ಷಣ ವೈದ್ಯರ ಸಲಹೆ ಪಡೆಯುವುದು ಸೂಕ್ತ . ತಲೆನೋವು ಮತ್ತು ಮೈಗ್ರೇನ್ ಎರಡು ಕೂಡ ಬೇರೆ ಬೇರೆ ಆರೋಗ್ಯದ ಸ್ಥಿಮಿತತೆಯನ್ನು ಹಾಳು ಮಾಡುವಲ್ಲಿ ಇವುಗಳ ಪಾತ್ರ ದೊಡ್ಡದಿದೆ. ಅಲ್ಲದೆ ಇದು ನಮ್ಮ ಜೀವನಶೈಲಿಯ ಮೇಲೆ ಯಾವ ರೀತಿ ಪರಿಣಾಮಕಾರಿಯಾಗಿದೆ ಎನ್ನುವುದನ್ನು ತಿಳಿದುಕೊಳ್ಳುವುದು ಕೂಡ ಅಗತ್ಯ.

ಮೈಗ್ರೇನ್ ಮತ್ತು ತಲೆನೋವು ಜಾಗೃತಿ ತಿಂಗಳಾಗಿ ಜೂನ್
ಜೂನ್ ಅನ್ನು ಮೈಗ್ರೇನ್ ಮತ್ತು ತಲೆನೋವಿನ ಜಾಗೃತಿ ತಿಂಗಳು ಎಂದು ಆಚರಿಸಲಾಗುತ್ತದೆ. 2012 ರಲ್ಲಿ, ರಾಷ್ಟ್ರೀಯ ತಲೆನೋವು ಪ್ರತಿಷ್ಠಾನವು ಮೈಗ್ರೇನ್ ಮತ್ತು ತಲೆನೋವು ಜಾಗೃತಿ ವಾರವನ್ನು , ಜಾಗೃತಿ ತಿಂಗಳಿಗೆ ವಿಸ್ತರಿಸಲು ನಿರ್ಧರಿಸಿತು. ಅದರಂತೆ ಜೂನ್ ತಿಂಗಳಲ್ಲಿ, ಮೈಗ್ರೇನ್ ಮತ್ತು ತಲೆನೋವಿನಿಂದ ಬಳಲುತ್ತಿರುವ ಜನರ ಆರೋಗ್ಯ, ಸೌಕರ್ಯ ಮತ್ತು ಅವರನ್ನು ಖುಷಿಯಾಗಿಡುವ ನಿಟ್ಟಿನಲ್ಲಿನ ಪ್ರಯತ್ನದ ಬಗ್ಗೆ ಜಾಗೃತಿ ಮೂಡಿಸುವ ಗುರಿಯನ್ನು ಹೊಂದಿದೆ. ಈ ವರ್ಷದ ಮೈಗ್ರೇನ್ ಮತ್ತು ತಲೆನೋವು ಜಾಗೃತಿ ತಿಂಗಳ ಆಶಯ ನಮ್ಮ ಬಗ್ಗೆ ನಾವು ಹೆಚ್ಚು ಕಾಳಜಿ ವಹಿಸುವ ಕಾಲ ಬಂದಿದೆ ಎಂಬುವುದಾಗಿದೆ.

ಮೈಗ್ರೇನ್​ಗಾಗಿ ಪ್ರಸ್ತುತ ಇಂತಹದ್ದೇ ಚಿಕಿತ್ಸೆ ಇದೆ ಎಂದು ಹೇಳಲು ಸಾಧ್ಯವಿಲ್ಲ. ಆದರೆ ನಾವು ಹೊಸ ಔಷಧಿಗಳನ್ನು ಕಂಡುಹಿಡಿಯುವ ಕಾರ್ಯದಲ್ಲಿ ನಿರತರಾಗಿದ್ದೇವೆ. ಈ ಬಗ್ಗೆ ಪ್ರಯೋಗಗಳು ನಡೆಯುತ್ತಿವೆ. ಆದಷ್ಟು ಬೇಗ ಮೈಗ್ರೇನ್ ನಿವಾರಣೆಗೆ ಔಷಧಿ ಬರಲಿದೆ ಎಂದು ಎಂಹೆಚ್​ಎಎಂ ಸಮಿತಿಯ ಅಧ್ಯಕ್ಷ ವೆಂಡಿ ಬೋಮ್‌ಫಾಕ್ ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ರಾಷ್ಟ್ರೀಯ ತಲೆನೋವು ಪ್ರತಿಷ್ಠಾನವು ಟ್ವೀಟ್ ಮಾಡಿದ್ದು, ಮೈಗ್ರೇನ್ ಕಾಯಿಲೆ ಅಥವಾ ತಲೆನೋವಿನ ಕಾಯಿಲೆಯಿಂದ ಬಳಲುತ್ತಿರುವ ವ್ಯಕ್ತಿಯನ್ನು ಗೌರವಿಸಲು ಮೀಸಲಿಡಲಾಗಿದೆ ಎಂದು ತಿಳಿಸಿದೆ.

ಜೀವನಶೈಲಿ ಮತ್ತು ಮೈಗ್ರೇನ್
ನಮ್ಮ ಜೀವನಶೈಲಿಯು ಹೇಗಿದೆ ಎನ್ನುವುದರ ಮೇಲೆ ನಮ್ಮ ಆರೋಗ್ಯ ನಿರ್ಧಾರವಾಗುತ್ತದೆ. ಅತಿಯಾದ ಒತ್ತಡ, ಮಾನಸಿಕವಾಗಿ ನೆಮ್ಮದಿ ಇಲ್ಲದಿರುವುದು ಅನಾರೋಗ್ಯಕರ ಜೀವನಶೈಲಿಯ ಲಕ್ಷಣಗಳಾಗಿದೆ. ಇದರಿಂದಾಗಿಯೇ ಮೈಗ್ರೇನ್​ನಂತಹ ಕಾಯಿಲೆ ನಮ್ಮನ್ನು ಆವರಿಸುತ್ತದೆ. ಹೀಗಾಗಿ ಜೀವನಶೈಲಿಯಲ್ಲಿ ಆರೋಗ್ಯಕರ ಬದಲಾವಣೆಗಳನ್ನು ಮಾಡಿಕೊಳುವುದರ ಮೂಲಕ ಮೈಗ್ರೇನ್​ನಿಂದ ದೂರ ಉಳಿಯಬೇಕಿದೆ.

ನಿಮ್ಮ ಜೀವನಶೈಲಿಯಲ್ಲಿ ಈ ಕೆಳಕಂಡ ಬದಲಾವಣೆಗಳನ್ನು ಮಾಡಿಕೊಳ್ಳಿ

1. ದಿನಕ್ಕೆ ಕನಿಷ್ಠ 30 ನಿಮಿಷಗಳ ಕಾಲ ವ್ಯಾಯಾಮ ಮಾಡುವ ಅಭ್ಯಾಸ ಬೆಳೆಸಿಕೊಳ್ಳಿ

2. ಊಟ ಮಾಡದೆ ಹಾಗೆ ಇರುವುದನ್ನು ಬಿಟ್ಟು ಬಿಡಿ ಮತ್ತು ಆದಷ್ಟು ಆರೋಗ್ಯಕರ ಆಹಾರ ಸೇವಿಸಿ.

3. ನಿರ್ಜಲೀಕರಣಗೊಳ್ಳುವುದನ್ನು ತಪ್ಪಿಸಿ ಮತ್ತು ಪ್ರತಿದಿನ ಕನಿಷ್ಠ 3 ಲೀಟರ್ ನೀರನ್ನು ಕುಡಿಯಿರಿ.

4. ಆರೋಗ್ಯದಲ್ಲಿ ಏರುಪೇರಾಗುವುದನ್ನು ತಪ್ಪಿಸಲು ಒತ್ತಡ ನಿರ್ವಹಣಾ ವಿಧಾನಗಳನ್ನು ಅಭ್ಯಾಸ ಮಾಡಿ.

5. ಕನಿಷ್ಠ 6 ರಿಂದ 8 ಗಂಟೆಗಳ ನಿಯಮಿತ ನಿದ್ರೆಯ ಮಾದರಿಯನ್ನು ಅಭ್ಯಾಸ ಮಾಡಿಕೊಳ್ಳಿ.

ಇದನ್ನೂ ಓದಿ:

Health Tips: ಎಳನೀರು ಕುಡಿದು ಹಾಗೇ ಬರುವ ಅಭ್ಯಾಸ ಬಿಟ್ಟು ಬಿಡಿ; ಒಳಗಿನ ಗಂಜಿ ಸೇವಿಸಿ, ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಿ

Weight loss Tips: ತೂಕವನ್ನು ಇಳಿಸಲು ದೇಹದಂಡನೆ ಮಾಡುವುದನ್ನು ಬಿಡಿ; ಈ ಸರಳ ಆಹಾರ ಪದ್ಧತಿಯನ್ನು ಅನುಸರಿಸಿ

Published On - 8:26 am, Wed, 9 June 21