Headache v/s Migraine: ಸಾಧಾರಣ ತಲೆನೋವು ಹಾಗೂ ಮೈಗ್ರೇನ್ ನಡುವಿನ ವ್ಯತ್ಯಾಸವೇನು? ಲಕ್ಷಣಗಳೇನು?

| Updated By: ನಯನಾ ರಾಜೀವ್

Updated on: Jun 04, 2022 | 12:59 PM

Migraine: ತಲೆನೋವು(Headache) ಸಾಮಾನ್ಯ, ಆದರೆ ತಲೆನೋವಿನಲ್ಲಿ ಹಲವು ವಿಧಗಳಿವೆ. ಅದರಲ್ಲಿ ಮುಖ್ಯವಾಗಿ ಮೈಗ್ರೇನ್‌ ಎಂಬ ತಲೆನೋವು ಬಂದರೆ ಅದರಿಂದ ಪಾರಾಗುವುದು ತುಂಬಾನೇ ಕಷ್ಟ.

Headache v/s Migraine: ಸಾಧಾರಣ ತಲೆನೋವು ಹಾಗೂ ಮೈಗ್ರೇನ್ ನಡುವಿನ ವ್ಯತ್ಯಾಸವೇನು? ಲಕ್ಷಣಗಳೇನು?
Migraine
Follow us on

ತಲೆನೋವು(Headache) ಸಾಮಾನ್ಯ, ಆದರೆ ತಲೆನೋವಿನಲ್ಲಿ ಹಲವು ವಿಧಗಳಿವೆ. ಅದರಲ್ಲಿ ಮುಖ್ಯವಾಗಿ ಮೈಗ್ರೇನ್‌ ಎಂಬ ತಲೆನೋವು ಬಂದರೆ ಅದರಿಂದ ಪಾರಾಗುವುದು ತುಂಬಾನೇ ಕಷ್ಟ. ತಲೆನೋವಿನಲ್ಲಿ ಹಲವು ಬಗೆಗಳಿವೆ. ಗ್ಯಾಸ್ಟ್ರಿಕ್, ಬಿಸಿಲಲ್ಲಿ ಹೆಚ್ಚಿನ ಸುತ್ತಾಟ, ದೇಹದಲ್ಲಿ ನೀರಿನ ಅಂಶ ಕಡಿಮೆಯಾಗಿದ್ದರೆ, ಜನಸಂದಣಿ ಹೆಚ್ಚಿರುವ ಪ್ರದೇಶದಲ್ಲಿ ನೀವು ಹೆಚ್ಚು ಸಮಯ ಕಳೆದರೆ ಶುದ್ಧ ಗಾಳಿಯ ಕೊರತೆಯಿಂದಾಗಿಯೂ ತಲೆನೋವಿನ ಸಮಸ್ಯೆ ಕಾಡಬಹುದು.

ಸಾಮಾನ್ಯ ತಲೆ ನೋವಾದರೆ ಅರ್ಧ ಅಥವಾ ಒಂದು ಗಂಟೆಯಲ್ಲಿ ನಿವಾರಣೆಯಾಗುತ್ತದೆ, ಅದರಿಂದ ದೇಹದ ಇತರೆ ಭಾಗಗಳ ಮೇಲೆ ಯಾವುದೇ ರೀತಿಯ ಪರಿಣಾಮ ಉಂಟಾಗುವುದಿಲ್ಲ. ಆದರೆ ಮೈಗ್ರೇನ್ ಹಾಗಲ್ಲ, ಒಮ್ಮೆ ಕಡಿಮೆಯಾದಂತೆ ಅನಿಸಿದರೂ ಪದೇ ಪದೇ ಕಾಡುತ್ತಿರುತ್ತದೆ.

ತಲೆ ನೆತ್ತಿ ಭಾಗ ನೋವು, ಹಿಂಭಾಗದಲ್ಲಿ ನೋವು ಕಾಣಿಸಿಕೊಳ್ಳುವುದು, ಕೆಲವು ಮಾನಸಿಕ ಒತ್ತಡದಿಂದ ಬರುವಂಥದ್ದು ಹೀಗೆ ವಿವಿಧ ರೀತಿಯಲ್ಲಿ ತಲೆನೋವು ಕಾಣಿಸಿಕೊಳ್ಳುತ್ತವೆ. ಸಾಮಾನ್ಯ ತಲೆನೋವಿನಂತೆಯೇ ಪ್ರಾರಂಭವಾಗುವ ಮೈಗ್ರೇನ್ ನಿಧಾನವಾಗಿ ತನ್ನ ಪ್ರಾಬಲ್ಯವನ್ನು ಹೆಚ್ಚಿಸಿಕೊಳ್ಳುತ್ತಾ ತಲೆಯ ನಡುವಿನಿಂದ ಕೊಂಚ ಎಡಭಾಗದಲ್ಲಿ ಅಥವಾ ಕೊಂಚ ಬಲಭಾಗದಲ್ಲಿ ಕೇಂದ್ರೀಕರಿಸಿದಂತೆ ನೋವು (Pain) ಪ್ರಾರಂಭವಾಗುತ್ತದೆ.

ಕೊಂಚ ಹೊತ್ತಿಗೇ ಈ ನೋವು ಎಷ್ಟು ಪ್ರಬಲವಾಗುತ್ತದೆ ಎಂದರೆ ಮೆದುಳು ಗ್ರಹಿಸುವ ದೃಷ್ಟಿ, ಶ್ರವಣ, ಯೋಚನಾಶಕ್ತಿ ಮೊದಲಾದ ಎಲ್ಲಾ ಶಕ್ತಿಗಳನ್ನು ಈ ನೋವು ಆವರಿಸಿ ಬಿಡುತ್ತದೆ. ನೋವು ನಿವಾರಕ ಮಾತ್ರೆ, ಉತ್ತಮ ನಿದ್ರೆ, ವಿಶ್ರಾಂತಿ ಪಡೆಯುವ ಮೂಲಕ ಕಡಿಮೆ ಮಾಡಿಕೊಳ್ಳಬಹುದು. ಆದರೆ ಮೈಗ್ರೇನ್ ತಲೆನೋವು ಅಥವಾ ಅರೆ ತಲೆನೋವು ಸಾಮಾನ್ಯವಾಗಿ ಅಷ್ಟು ಬೇಗ ನಿವಾರಣೆ ಆಗುವಂಥದ್ದಲ್ಲ.

ದೃಢ ನಿರ್ಧಾರದಿಂದ ಜೀವನ ಶೈಲಿಯಲ್ಲಿ ಕೆಲವು ಬದಲಾವಣೆಗಳು ಮತ್ತು ಪೌಷ್ಟಿಕಯುಕ್ತ ಆಹಾರ ಪದ್ಧತಿಯು ನಿಮ್ಮದಾಗಿದ್ದರೆ ಮೈಗ್ರೇನ್ ತಲೆನೋವನ್ನು ನಿಯಂತ್ರಣಕ್ಕೆ ತರುವ ಸಾಧ್ಯತೆಗಳಿವೆ.

ಮೈಗ್ರೇನ್ ಲಕ್ಷಣಗಳೇನು?
ನಿದ್ರಾಹೀನತೆ
ಸುಸ್ತು
ಕುತ್ತಿಗೆ ಭಾಗದಲ್ಲಿ ನೋವು
ಗೊಂದಲ

ಇವುಗಳನ್ನ ಸೇವಿಸಿ ಮೈಗ್ರೇನ್ ದೂರ ಮಾಡಿ

ಪ್ರತಿದಿನ ಕನಿಷ್ಠ ಐದು ಒಣಗಿದ ಬೀಜಗಳು ಅಥವಾ ಪಾಲಾಕ್​ ಸೋಪ್ಪಿನಂತಹ ಬೇಯಿಸಿದ ಹಸಿರು ಎಲೆಗಳನ್ನು ತಿನ್ನುವುದು. ಪ್ರತಿದಿನ 32 ಒಣ ಬೀಜಗಳು ಮತ್ತು ಹಸಿರು ಜ್ಯೂಸ್ ಕುಡಿಯಿರಿ. ಧಾನ್ಯಗಳು, ಪಿಷ್ಟ ತರಕಾರಿಗಳು, ಎಣ್ಣೆ, ಮಾಂಸಾಹಾರ, ಮುಖ್ಯವಾಗಿ ಡೈರಿ ಉತ್ಪನ್ನಗಳು ಮತ್ತು ಕೆಂಪು ಮಾಂಸ ಸೇವನೆಯನ್ನು ನಿಯಂತ್ರಣದಲ್ಲಿಡುವುದು.

ಚಾಕಲೇಟ್, ಕಾಫಿ-ಟೀ ಕುಡಿಯಬೇಡಿ
ಈ ರೀತಿಯ ಆಹಾರ ಪದ್ಧತಿಯನ್ನು ರೋಗಿಯು ರೂಢಿಸಿಕೊಂಡಿದ್ದರು. ಮೂರು ತಿಂಗಳ ಬಳಿಕ ಅವರು ಮೈಗ್ರೇನ್ ಸಮಸ್ಯೆಯಿಂದ ಹೊರಬಂದಿದ್ದಾರೆ. ಬಳಿಕ ರೋಗಿಯು ಮೈಗ್ರೇನ್ ಔಷಧಿಗಳನ್ನು ತೆಗೆದುಕೊಳ್ಳುವುದನ್ನು ನಿಲ್ಲಿಸಿದ್ದಾರೆ. ಜೊತೆಗೆ ರೋಗಿಯು ಚಾಕಲೇಟ್, ಚೀಸ್, ಕೆಫೀನ್ ಮತ್ತು ಒಣಗಿದ ಹಣ್ಣುಗಳನ್ನು ಅತಿಯಾಗಿ ಸೇವಿಸುವುದನ್ನು ತಪ್ಪಿಸಿ ಜೀವನ ಶೈಲಿಯಲ್ಲಿ ಕೆಲವು ಬದಲಾವಣೆಯ ಜೊತೆಗೆ ದಿನ ಕಳೆದರು.

ಹಸಿರು ತರಕಾರಿ ಸೇವಿಸಿ
ಮನುಷ್ಯ ಈಗಾಗಲೇ ಸಮತೋಲಿತ ಆಹಾರವನ್ನು, ಹಸಿರು ಸೊಪ್ಪುಗಳನ್ನು ಸೇವಿಸುವುದರಿಂದ ಸೀರಮ್ ಬೀಟಾ-ಕ್ಯಾರೋಟಿನ್ ಪ್ರಮಾಣ ಹೆಚ್ಚಿಸಲು ಸಹಾಯಕವಾಗಿದೆ. ಅವು ಕೆಲವು ಬದಲಾವಣೆಗೆ ಕಾರಣವಾಗಿರಬಹುದು. ಅದರಲ್ಲಿಯೂ ರೋಗಿಯು ಹೆಚ್ಐವಿ ಪಾಸಿಟಿವ್ ಆಗಿದ್ದು, ಇದು ಮೈಗ್ರೇನ್ ಹೆಚ್ಚಿನ ಅಪಾಯಕ್ಕೆ ಸಂಬಂಧಿಸಿತ್ತು ಎಂದು ತಜ್ಞರು ತಿಳಿಸಿದ್ದಾರೆ. ಹಸಿರು ಸೊಪ್ಪಿನಲ್ಲಿ ಬೀಟಾ-ಕ್ಯಾರಟೀನ್ ಮತ್ತು ಇತರ ಪೋಷಕಾಂಶಗಳು ಸಮೃದ್ಧವಾಗಿರುತ್ತವೆ.

ಹಸಿಶುಂಠಿ ತಿನ್ನಿ
ತಲೆನೋವು ಪ್ರಾರಂಭವಾದ ತಕ್ಷಣವೇ ಹಸಿಶುಂಠಿ ಹಾಕಿ ಕುದಿಸಿದ ಟೀ ಕುಡಿಯುವುದು ಅಥವಾ ಹಸಿಶುಂಠಿಯ ಅಂಶವಿರುವ ಹೆಚ್ಚುವರಿ ಔಷಧಿಗಳನ್ನು ಸೇವಿಸಿದರೆ ಮೈಗ್ರೇನ್ ತಲೆನೋವು ಉಲ್ಬಣಗೊಳ್ಳದಂತೆ ತಡೆಯಬಹುದು. ಶುಂಟಿ ಕೇವಲ ಆಹಾರದ ರುಚಿಯನ್ನು ಹೆಚ್ಚಿಸುವುದು ಮಾತ್ರವಲ್ಲ, ಮೈಗ್ರೇನ್ ತಲೆನೋವು ಶಮನಗೊಳ್ಳಲೂ ಪರಿಣಾಮಕಾರಿಯಾಗಿದೆ.

 

ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ