Women health: ಮುಟ್ಟಿನ ಸಂದರ್ಭದಲ್ಲಿ ಮೂಡ್ ಸ್ವಿಂಗ್ ಆಗುತ್ತದೆಯೇ? ಕಾರಣ ತಿಳಿಯಿರಿ

| Updated By: preethi shettigar

Updated on: Dec 09, 2021 | 7:20 AM

ಪ್ರೀ ಮೆನ್ಸ್ಟ್ರುವಲ್ ಸಿಂಡ್ರೋಮ್ ರೋಗಲಕ್ಷಣಗಳು ಹೆಚ್ಚಿನ ಮಹಿಳೆಯರಲ್ಲಿ ಮುಟ್ಟಿನ ಸಮಯದಲ್ಲಿ ಕಾಣಿಸಿಕೊಳ್ಳುತ್ತವೆ. ಈ ಸಮಯದಲ್ಲಿ ಮಹಿಳೆಯರಿಗೆ ಎದೆಯಲ್ಲಿ ಊತ, ತಲೆನೋವು, ಬೆನ್ನು ನೋವು, ಗ್ಯಾಸ್ಟ್ರಿಕ್, ಜೊತೆಗೆ ಚಾಕೊಲೇಟ್ ತಿನ್ನುವ ಬಯಕೆ ಇತ್ಯಾದಿ ಇರುತ್ತದೆ.

Women health: ಮುಟ್ಟಿನ ಸಂದರ್ಭದಲ್ಲಿ ಮೂಡ್ ಸ್ವಿಂಗ್ ಆಗುತ್ತದೆಯೇ? ಕಾರಣ ತಿಳಿಯಿರಿ
ಪ್ರಾತಿನಿಧಿಕ ಚಿತ್ರ
Follow us on

ಋತುಚಕ್ರವು ಮಹಿಳೆಯರಲ್ಲಿ ಆಗುವ ನೈಸರ್ಗಿಕ ಬದಲಾವಣೆ. ಮುಟ್ಟಿನ (Periods) ಸಮಯದಲ್ಲಿ ಮಹಿಳೆಯರು ವಿವಿಧ ಸಮಸ್ಯೆಗಳನ್ನು ಎದುರಿಸುತ್ತಾರೆ. ಈ ಸಮಯದಲ್ಲಿ ಮಹಿಳೆಯರ ದೇಹದಲ್ಲಿನ ಹಾರ್ಮೋನುಗಳ ಬದಲಾವಣೆಯಿಂದ ಅನೇಕ ಸಮಸ್ಯೆಗಳು ಉದ್ಭವವಾಗುತ್ತದೆ. ಈ ಕಾರಣದಿಂದಲೇ ಮಹಿಳೆಯರು ಹೆಚ್ಚಾಗಿ ಒತ್ತಡಕ್ಕೆ ಒಳಗಾಗುತ್ತಾರೆ. ಇತ್ತೀಚಿನ ದಿನಗಳಲ್ಲಿ ಮಹಿಳೆಯರು ಒತ್ತಡಕ್ಕೆ ಒಳಗಾಗಲು ಎರಡು ಕಾರಣಗಳಿವೆ. ಒಂದು ಮಾನಸಿಕ ಕಾರಣದಿಂದ ಅವರು ಮುಟ್ಟು ಮತ್ತು ಅದಕ್ಕೆ ಸಂಬಂಧಿಸಿದ ಅಸ್ವಸ್ಥತೆಗಳ ಬಗ್ಗೆ ಹೆಚ್ಚು ಯೋಚಿಸುತ್ತಾರೆ. ಎರಡನೇ ಕಾರಣ ಪ್ರೀ ಮೆನ್ಸ್ಟ್ರುವಲ್ ಸಿಂಡ್ರೋಮ್ ಅಂದರೆ ಪಿಎಂಎಸ್ (PMS).

ಪ್ರೀ ಮೆನ್ಸ್ಟ್ರುವಲ್ ಸಿಂಡ್ರೋಮ್ ರೋಗಲಕ್ಷಣಗಳು ಹೆಚ್ಚಿನ ಮಹಿಳೆಯರಲ್ಲಿ ಮುಟ್ಟಿನ ಸಮಯದಲ್ಲಿ ಕಾಣಿಸಿಕೊಳ್ಳುತ್ತವೆ. ಈ ಸಮಯದಲ್ಲಿ ಮಹಿಳೆಯರಿಗೆ ಎದೆಯಲ್ಲಿ ಊತ, ತಲೆನೋವು, ಬೆನ್ನು ನೋವು, ಗ್ಯಾಸ್ಟ್ರಿಕ್, ಜೊತೆಗೆ ಚಾಕೊಲೇಟ್ ತಿನ್ನುವ ಬಯಕೆ ಇತ್ಯಾದಿ ಇರುತ್ತದೆ. ಅಷ್ಟೇ ಅಲ್ಲ ಮೊಡವೆ, ಆಯಾಸ, ನಿದ್ರಾಹೀನತೆ, ಶಕ್ತಿಯ ಕೊರತೆ, ಖಿನ್ನತೆ ಮತ್ತು ಮೂಡ್ ಸ್ವಿಂಗ್ ಲಕ್ಷಣಗಳೂ ಕಾಣಿಸಿಕೊಳ್ಳಬಹುದು. ಅದರಲ್ಲೂ ಆಗಾಗ ಮೂಡ್ ಸ್ವಿಂಗ್ಸ್ ಉಂಟಾಗುವುದು ಮಹಿಳೆಯರ ಮೇಲೆ ನಕಾರಾತ್ಮಕ ಸಮಸ್ಯೆ ಉಂಟು ಮಾಡುತ್ತದೆ. ಹೀಗಾಗಿ ಇದಕ್ಕೆ ಕಾರಣ ಏನು ಎಂಬ ತಿಳಿಯುವುದು ಸೂಕ್ತ.

ಮೂಡ್ ಸ್ವಿಂಗ್
ವಾಸ್ತವವಾಗಿ ಮುಟ್ಟಿನ ಸಮಯದಲ್ಲಿ ಮಹಿಳೆಯರಲ್ಲಿ ಉಂಟಾಗುವ ಒತ್ತಡದಿಂದ ಮೆದುಳಿನಲ್ಲಿನ ಪಿಟ್ಯುಟರಿ ಮತ್ತು ಅಂಡಾಶಯದ ನಡುವಿನ ಸಂಪರ್ಕವು ತೊಂದರೆಗೊಳಗಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ವಾಕ್ ಮಾಡಿ ಅಥವಾ ಸ್ನೇಹಿತರೊಂದಿಗೆ ಕಾಲ ಕಳೆಯಿರಿ. ಸಾಮಾನ್ಯವಾಗಿ ಪಿರಿಯಡ್ಸ್ ಸಮಯದಲ್ಲಿ ಮೂಡ್ ಸ್ವಿಂಗ್​ ಪ್ರಮುಖವಾಗಿ ಕಂಡುಬರುತ್ತವೆ. ಇದರಿಂದ ಅನೇಕ ಸಮಸ್ಯೆಗಳು ಎದುರಾಗುತ್ತದೆ.

ಕೋಪ
ಮುಟ್ಟು ತುಂಬಾ ಅಹಿತಕರವಾಗಿದ್ದು, ಈ ದಿನಗಳಲ್ಲಿ ಹಾರ್ಮೋನುಗಳು ಅನೇಕ ರೀತಿಯಲ್ಲಿ ಏರಿಳಿತಗೊಳ್ಳುತ್ತವೆ. ಈ ಕಾರಣದಿಂದಾಗಿ ಭಾವನೆಗಳು ಬದಲಾಗುತ್ತವೆ ಮತ್ತು ಕೋಪಕ್ಕೆ ಕಾರಣವಾಗುತ್ತದೆ. ಆದರೆ ಈ ದಿನಗಳಲ್ಲಿ ನೀವು ಯಾರ ಮೇಲೆ ಕೋಪಗೊಳ್ಳುತ್ತೀರೋ ಅವರ ವಿಷಯದಲ್ಲಿ ಹೆಚ್ಚು ತಾಳ್ಮೆಯಿಂದಿರಬೇಕು.

ದುಃಖ
ದೇಹದಲ್ಲಿನ ಕಡಿಮೆ ಎಂಡಾರ್ಫಿನ್ ಮತ್ತು ಹೆಚ್ಚಿನ ಸಿರೊಟೋನಿನ್ ಕಾರಣದಿಂದಾಗಿ ಮಹಿಳೆಯರು ಖಿನ್ನತೆಗೆ ಒಳಗಾಗುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ ವಾಕಿಂಗ್ ಇತ್ಯಾದಿಗಳನ್ನು ಮಾಡಿದರೆ ಉತ್ತಮ. ವ್ಯಾಯಾಮ ಮಾಡುವುದರಿಂದ ಮುಟ್ಟಿನ ನೋವು ಕಡಿಮೆಯಾಗಿ ಮನಸ್ಸಿಗೂ ನೆಮ್ಮದಿ ಸಿಗುತ್ತದೆ.

ಕಿರಿಕಿರಿ
ಮುಟ್ಟಿನ ಕಾಲದಲ್ಲಿ ನೀವು ಸಾಕಷ್ಟು ವಿಶ್ರಾಂತಿ ಪಡೆಯದಿದ್ದಾಗ ಇದು ಮುಖ್ಯವಾಗಿ ಸಂಭವಿಸುತ್ತದೆ. ನಿದ್ರೆಯು ಮುಟ್ಟಿನ ಸಮಸ್ಯೆಯನ್ನು ನಿಭಾಯಿಸಲು ಸಹಾಯ ಮಾಡುತ್ತದೆ. ಮುಟ್ಟಿನ ಸಮಯದಲ್ಲಿ ಸಾಕಷ್ಟು ನಿದ್ದೆ ಮಾಡಿ, ಇದು ನಿಮ್ಮ ಕಿರಿಕಿರಿಯನ್ನು ಬಹಳಷ್ಟು ಕಡಿಮೆ ಮಾಡುತ್ತದೆ.

ಆತಂಕ
ಈ ದಿನಗಳಲ್ಲಿ ನೀವು ನಿಮ್ಮ ಬಗ್ಗೆ ಚಿಂತಿತರಾಗುತ್ತೀರಿ. ತಾಂತ್ರಿಕವಾಗಿ ಇದನ್ನು ಪ್ರೀ ಮೆನ್ಸ್ಟ್ರುವಲ್ ಡಿಸ್ಫೊರಿಕ್ ಡಿಸಾರ್ಡರ್ ಅಥವಾ ಪಿಎಮ್​ಡಿಡಿ(PMDD) ಎಂದು ಕರೆಯಲಾಗುತ್ತದೆ. ನಿಮ್ಮ ಮೆದುಳಿನಲ್ಲಿರುವ ಗ್ರಾಹಕಗಳು ಏರಿಳಿತಗೊಳ್ಳುವ ಹಾರ್ಮೋನುಗಳಿಗೆ ಅಸಹಜವಾಗಿ ಪ್ರತಿಕ್ರಿಯಿಸಿದಾಗ ಇದು ಮುಖ್ಯವಾಗಿ ಸಂಭವಿಸುತ್ತದೆ.

ಇದನ್ನೂ ಓದಿ:
Periods: ಮಹಿಳೆಯರ ಸಮಸ್ಯೆಗಳು ಹಲವಾರು; ಅದರಲ್ಲೊಂದು ಅನಿಯಮಿತ ಮುಟ್ಟು.. ಕಾರಣ, ಪರಿಹಾರವೇನು?

Roasted Gram: ಚಳಿಗಾಲದಲ್ಲಿ ಪ್ರತಿದಿನ ಹುರಿಗಡಲೆ ಸೇವಿಸಿ; ಆರೋಗ್ಯಕರ ಬದಲಾವಣೆ ನಿಮ್ಮಲ್ಲಿ ಅಚ್ಚರಿಯನ್ನುಂಟು ಮಾಡುತ್ತದೆ