Motion Sickness: ಪ್ರಯಾಣಿಸುವಾಗ ಆರೋಗ್ಯ ಸಮಸ್ಯೆ ಕಾಡುತ್ತಾ, ಔಷಧ ತೆಗೆದುಕೊಳ್ಳದೆಯೇ ತಡೆಗಟ್ಟುವುದು ಹೇಗೆ?

| Updated By: ಅಕ್ಷತಾ ವರ್ಕಾಡಿ

Updated on: Jul 24, 2024 | 7:02 PM

ಪ್ರಯಾಣ ಮಾಡುವಾಗ ಕಂಡು ಬರುವ ಅಸ್ವಸ್ಥತೆಗಳಿಂದ ಕೆಲವರು ದೂರ ದೂರ ಚಲಿಸುವುದಕ್ಕೆ ಹೆದರುತ್ತಾರೆ. ಅವರಿಗೆ ಪ್ರವಾಸ ಅಷ್ಟು ಹಿತಕರವಾಗಿರುವುದಿಲ್ಲ, ತಲೆತಿರುಗುವಿಕೆ, ಕೈಗಳು ಬೆವರಿ ಒದ್ದೆಯಾಗುವುದು, ವಾಂತಿಯೊಂದಿಗೆ ವಾಕರಿಕೆ, ಹೊಟ್ಟೆಯಲ್ಲಿ ಸಂಕಟ ಉಂಟಾಗುತ್ತದೆ. ಹಾಗಾದರೆ ಈ ರೋಗಲಕ್ಷಣಗಳನ್ನು ತಡೆಯುವುದು ಅಥವಾ ಕಡಿಮೆ ಮಾಡುವುದು ಹೇಗೆ? ಇಲ್ಲಿದೆ ಸರಳ ಉಪಾಯಗಳು.

Motion Sickness: ಪ್ರಯಾಣಿಸುವಾಗ ಆರೋಗ್ಯ ಸಮಸ್ಯೆ ಕಾಡುತ್ತಾ, ಔಷಧ ತೆಗೆದುಕೊಳ್ಳದೆಯೇ ತಡೆಗಟ್ಟುವುದು ಹೇಗೆ?
Follow us on

ಪ್ರವಾಸ ಮಾಡುವುದು ಎಂದರೆ ಯಾರಿಗೆ ಇಷ್ಟವಿಲ್ಲ ಹೇಳಿ? ಆದರೆ ಪ್ರಯಾಣ ಮಾಡುವಾಗ ಕಂಡು ಬರುವ ಅಸ್ವಸ್ಥತೆಗಳಿಂದ ಕೆಲವರು ದೂರ ದೂರ ಚಲಿಸುವುದಕ್ಕೆ ಹೆದರುತ್ತಾರೆ. ಅವರಿಗೆ ಪ್ರವಾಸ ಅಷ್ಟು ಹಿತಕರವಾಗಿರುವುದಿಲ್ಲ, ತಲೆತಿರುಗುವಿಕೆ, ಕೈಗಳು ಬೆವರಿ ಒದ್ದೆಯಾಗುವುದು, ವಾಂತಿಯೊಂದಿಗೆ ವಾಕರಿಕೆ, ಹೊಟ್ಟೆಯಲ್ಲಿ ಸಂಕಟ ಉಂಟಾಗುತ್ತದೆ. ಹಾಗಾದರೆ ಈ ರೋಗಲಕ್ಷಣಗಳನ್ನು ತಡೆಯುವುದು ಅಥವಾ ಕಡಿಮೆ ಮಾಡುವುದು ಹೇಗೆ? ಇಲ್ಲಿದೆ ಸರಳ ಉಪಾಯಗಳು.

ಪ್ರಯಾಣ ಮಾಡುವಾಗ ಕಂಡು ಬರುವ ಅಸ್ವಸ್ಥತೆಯನ್ನು ತಡೆಗಟ್ಟುವುದು ಹೇಗೆ?

ನೀವು ಪ್ರಯಾಣ ಮಾಡುವಾಗ ರೋಗಲಕ್ಷಣಗಳು ತೀವ್ರವಾಗುವ ಮೊದಲು ಅಂದರೆ ಅಸ್ವಸ್ಥತೆ ಗಮನಕ್ಕೆ ಬಂದ ತಕ್ಷಣ ನಿಮ್ಮ ಗಮನವನ್ನು ಬೇರೆಡೆಗೆ ಸೆಳೆಯಲು ಪ್ರಯತ್ನಿಸಲು ವೈದ್ಯರು ಹೇಳುತ್ತಾರೆ. ಆದರೆ ಅವುಗಳ ಜೊತೆಗೆ ಕೆಲವು ಸರಳ ಮಾಹಿತಿ ಇಲ್ಲಿದೆ.

ನಿಮ್ಮ ದೃಷ್ಠಿ ದೂರದಲ್ಲಿರುವ ವಸ್ತುವಿನ ಮೇಲಿರಲಿ:

ಪ್ರಯಾಣ ಮಾಡುವಾಗ ಮುಂಭಾಗದಲ್ಲಿ ಕುಳಿತು ರಸ್ತೆಯ ದಿಕ್ಕಿಗೆ ಮುಖ ಮಾಡಿ. ನಿಮ್ಮ ದೃಷ್ಠಿ ದೂರದಲ್ಲಿರುವ ಸ್ಥಿರ ವಸ್ತುವಿನ ಮೇಲೆ ಕೇಂದ್ರೀಕರಿಸಲು ಪ್ರಯತ್ನಿಸಿ. ತಜ್ಞರ ಪ್ರಕಾರ, ಈ ರೀತಿ ಮಾಡುವುದರಿಂದ ಪ್ರಯಾಣ ಮಾಡುವಾಗ ಕಂಡು ಬರುವ ಅನಾರೋಗ್ಯಕರ ಲಕ್ಷಣಗಳನ್ನು ಕಡಿಮೆ ಮಾಡಬಹುದು.

ಉಪ್ಪು ಬಳಕೆಯಾಗಿರುವ ಆಹಾರವನ್ನು ಸೇವಿಸಿ:

ಉಪ್ಪನ್ನು ಬಳಕೆ ಮಾಡಿರುವ ಲಘು ತಿಂಡಿಯನ್ನು ಸೇವನೆ ಮಾಡುವುದರಿಂದ ಪ್ರಯಾಣಿಸುವಾಗ ಕಂಡು ಬರುವಂತಹ ವಾಕರಿಕೆಯನ್ನು ಕಡಿಮೆ ಮಾಡಬಹುದು ಎಂದು ವೈದ್ಯರು ಹೇಳುತ್ತಾರೆ. ಆದರೆ ಎಣ್ಣೆಯುಕ್ತ ಆಹಾರಗಳು ಆಮ್ಲೀಯತೆಗೆ ಕಾರಣವಾಗಬಹುದು, ಇದನ್ನು ಜೀರ್ಣಿಸಿಕೊಳ್ಳಲು ಕಷ್ಟವಾಗುವುದರಿಂದ ರೋಗಲಕ್ಷಣವನ್ನು ಉಲ್ಬಣಗೊಳಿಸುತ್ತದೆ. ಹಾಗಾಗಿ ಏಕದಳ ಧಾನ್ಯಗಳು, ಸೇಬು, ರೊಟ್ಟಿ ಈ ರೀತಿಯ ಆಹಾರಗಳನ್ನು ಸೇವಿಸಿ.

ಸಾಕಷ್ಟು ನೀರು ಕುಡಿಯಿರಿ:

ವಾಕರಿಕೆ ಅಥವಾ ವಾಂತಿಯನ್ನು ನಿಗ್ರಹಿಸಲು ಅತ್ಯಂತ ಪ್ರಯೋಜನಕಾರಿಯಾದ ಮಾರ್ಗವೆಂದರೆ ಅದು ನೀರು ಕುಡಿಯುವುದು. ಇದರ ಜೊತೆಗೆ ಶುಂಠಿ ಬೆರಸಿದಂತಹ ಪಾನೀಯಗಳನ್ನು ಕುಡಿಯುತ್ತಲೇ ಇರಿ. ಆದರೆ ಕಾಫಿ ಮತ್ತು ಸೋಡಾಗಳಂತಹ ಪಾನೀಯಗಳನ್ನು ಕುಡಿಯ ಬೇಡಿ, ಅದು ನಿರ್ಜಲೀಕರಣಕ್ಕೆ ಕಾರಣವಾಗುತ್ತದೆ, ಇದರಿಂದಾಗಿ ವಾಕರಿಕೆ ಮತ್ತಷ್ಟು ಹೆಚ್ಚಾಗುತ್ತದೆ.

ಇದನ್ನೂ ಓದಿ: ಪಾಪ್​ಕಾರ್ನ್​ ಬ್ರೇನ್ ಎಂದರೇನು? ಈ ಕಾಯಿಲೆ ಬಗ್ಗೆ ನೀವು ತಿಳಿಯಲೇಬೇಕು

ನಿಮ್ಮ ಗಮನವನ್ನು ಬೇರೆಡೆಗೆ ಸೆಳೆಯಿರಿ:

ನಿಮಗೆ ವಾಂತಿ, ವಾಕರಿಕೆ ಅಥವಾ ಇನ್ನಿತರ ಅಸ್ವಸ್ಥತೆ ಕಂಡು ಬಂದಲ್ಲಿ ನಿಮ್ಮ ಮನಸ್ಸನ್ನು ಆ ಭಾವನೆಯಿಂದ ದೂರವಿರಿಸಲು ಸಂಗೀತ ಕೇಳಿ ಅಥವಾ ಸಂಭಾಷಣೆ ಮಾಡಿ ಆ ಮೂಲಕ ನಿಮ್ಮ ಗಮನವನ್ನು ಬೇರೆಡೆಗೆ ಸೆಳೆಯಲು ಪ್ರಯತ್ನಿಸಿ. ಅಧ್ಯಯನಗಳ ಪ್ರಕಾರ, ಸಂಗೀತ ಕೇಳುವುದರಿಂದ ವಾಂತಿ ಬರುವ ಸಾಧ್ಯತೆ ಹೆಚ್ಚಾಗಿರುತ್ತದೆ. ಆದರೆ ಕೆಲವರಿಗೆ ಸಂಗೀತ ಕೇಳುವುದರಿಂದ, ಪ್ರಯಾಣ ಮಾಡುವಾಗ ಕಂಡು ಬರುವ ಅಸ್ವಸ್ಥತೆ ಕಡಿಮೆಯಾಗುತ್ತದೆ.

ಅರೋಮಾಥೆರಪಿ:

ಪುದೀನಾದಂತಹ ಕೆಲವು ಸುಗಂಧ ಭರಿತ ಎಲೆಗಳು ಚಲನೆಯಲ್ಲಿ ಕಂಡು ಬರುವ ಅನಾರೋಗ್ಯಕರ ಲಕ್ಷಣಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇಂತಹ ಎಲೆಗಳಲ್ಲಿರುವ ಪರಿಮಳವು ವಾಕರಿಕೆಯನ್ನು ನಿವಾರಿಸುತ್ತದೆ.

ಗಿಡಮೂಲಿಕೆಗಳು:

ಶುಂಠಿ ಮತ್ತು ಕ್ಯಾಮೊಮೈಲ್ ನಂತಹ ಗಿಡಮೂಲಿಕೆಗಳು, ಪ್ರಯಾಣಿಸುವಾಗ ಕಂಡು ಬರುವ ಅಸ್ವಸ್ಥತೆ ಮತ್ತು ವಾಕರಿಕೆಯನ್ನು ನಿವಾರಿಸುವ ಉತ್ತಮ ಮಾರ್ಗಗಳಲ್ಲಿ ಒಂದಾಗಿದೆ. ನೀವು ಅವುಗಳನ್ನು ನೇರವಾಗಿ ಬಳಸಬಹುದು ಅಥವಾ ಈ ಗಿಡಮೂಲಿಕೆಗಳಿಂದ ತಯಾರಿಸಿದ ಅನೇಕ ಔಷಧಗಳು ಕೂಡ ಸುಲಭವಾಗಿ ಲಭ್ಯವಿವೆ, ಅವುಗಳನ್ನು ನಿಮ್ಮ ಪ್ರಯಾಣದ ಮೊದಲು ನೀವು ತೆಗೆದುಕೊಳ್ಳಬಹುದು. ಅಲ್ಲದೆ ಹೊಟ್ಟೆ ಹುಣ್ಣು ನೋವು, ಆಮ್ಲದ ಕಿರಿಕಿರಿ ಮತ್ತು ಅಜೀರ್ಣವನ್ನು ಶಮನಗೊಳಿಸಲು ಮೂಲೇತಿ ಬೇರು ತುಂಬಾ ಸಹಾಯಕವಾಗಿದೆ. ವಾಕರಿಕೆ ಮತ್ತು ವಾಂತಿಯನ್ನು ನಿವಾರಿಸಲು ಇದು ಸಹ ಉಪಯುಕ್ತವಾಗಿದೆ.

ನಿಮ್ಮ ಫೋನ್ ನಿಂದ ದೂರವಿರಿ:

ಪ್ರಯಾಣ ಮಾಡುವಾಗ ಪುಸ್ತಕಗಳು ಅಥವಾ ಪಠ್ಯಗಳನ್ನು ಓದಲು ನಿಮಗೆ ತೊಂದರೆಯಾಗಬಹುದು. ಜೊತೆಗೆ ನೀವು ಹೆಚ್ಚು ಮೊಬೈಲ್ ನನ್ನು ಬಳಸಬಾರದು. ಇಂತಹ ಅಸ್ವಸ್ಥತೆಯು ಒಳ ಕಿವಿ ಮತ್ತು ಕಣ್ಣುಗಳ ನಡುವಿನ ಸಂವೇದನಾ ಸಂಪರ್ಕಕಡಿತದಿಂದಾಗಿ ಕಂಡುಬರುತ್ತದೆ ಹಾಗಾಗಿ ನಮ್ಮ ಹತ್ತಿರವಿರುವ ಯಾವ ವಸ್ತುವಿನ ಬಗ್ಗೆಯೂ ಗಮನ ಹರಿಸದಿರುವುದು ಒಳ್ಳೆಯದು. ಏಕೆಂದರೆ ಅದು ನಿಮ್ಮ ರೋಗಲಕ್ಷಣಗಳನ್ನು ಇನ್ನಷ್ಟು ಹದಗೆಡಿಸುತ್ತದೆ.

ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 7:01 pm, Wed, 24 July 24