ಸ್ತನ ಕ್ಯಾನ್ಸರ್ ಎನ್ನುವುದು ಸ್ತನಗಳ ಜೀವಕೋಶಗಳಲ್ಲಿ ರೂಪುಗೊಳ್ಳುವ ಕ್ಯಾನ್ಸರ್ ಆಗಿದೆ. ಅಮೆರಿಕಾದಲ್ಲಿ ಚರ್ಮದ ಕ್ಯಾನ್ಸರ್ ನಂತರ ಸ್ತನ ಕ್ಯಾನ್ಸರ್ ಮಹಿಳೆಯರಲ್ಲಿ ಅತಿಹೆಚ್ಚು ಕಾಣಿಸಿಕೊಳ್ಳುತ್ತಿರುವ ಕ್ಯಾನ್ಸರ್ ಆಗಿದೆ. ಸ್ತನ ಕ್ಯಾನ್ಸರ್ ಉಂಟಾದರೆ, ಚಿಕಿತ್ಸೆ ನೀಡಿ ಬದುಕುಳಿಯುವ ಪ್ರಮಾಣ ಬೇರೆ ಕ್ಯಾನ್ಸರ್ಗಿಂತಲೂ ಹೆಚ್ಚಿದೆ. ಈ ಕಾಯಿಲೆಗೆ ಸಂಬಂಧಿಸಿದ ಸಾವಿನ ಸಂಖ್ಯೆಯು ಕಡಿಮೆಯಾಗುತ್ತಿದೆ. ಸ್ತನ ಕ್ಯಾನ್ಸರ್ ಬಗ್ಗೆ ಅನೇಕರಲ್ಲಿ ಹಲವು ತಪ್ಪು ಕಲ್ಪನೆಗಳಿವೆ. ಆ ಬಗ್ಗೆ ಮಾಹಿತಿ ಇಲ್ಲಿದೆ.
ಸ್ತನ ಕ್ಯಾನ್ಸರ್ನ ರೋಗಲಕ್ಷಣಗಳು:
– ಸ್ತನದಲ್ಲಿ ಗಡ್ಡೆ ಉಂಟಾಗುವುದು.
– ಸ್ತನದ ಗಾತ್ರ, ಆಕಾರದಲ್ಲಿ ಬದಲಾವಣೆ.
– ಎದೆಯ ಮೇಲಿನ ಚರ್ಮದ ಬದಲಾವಣೆಗಳು.
– ಜೋತುಬಿದ್ದ ಮೊಲೆತೊಟ್ಟುಗಳು.
– ಸ್ತನದ ಚರ್ಮದ ಸುತ್ತಲಿನ ಚರ್ಮದ ಸಿಪ್ಪೆಸುಲಿಯುವಿಕೆ.
– ಕಿತ್ತಳೆಯ ಸಿಪ್ಪೆಯಂತೆ ನಿಮ್ಮ ಎದೆಯ ಮೇಲೆ ಆರೆಂಜ್ ಬಣ್ಣ ಮೂಡುವುದು.
ಇದನ್ನೂ ಓದಿ: ನಿಮ್ಮ ದೇಹದಲ್ಲಿ ಕಂಡುಬರುವ ಈ ಲಕ್ಷಣಗಳು ಕ್ಯಾನ್ಸರ್ನ ಆರಂಭಿಕ ಚಿಹ್ನೆಗಳಾಗಿರಬಹುದು
ವಿಶ್ವ ಆರೋಗ್ಯ ಸಂಸ್ಥೆ (WHO) ಪ್ರಕಾರ, 2020ರಲ್ಲಿ ಜಗತ್ತಿನಾದ್ಯಂತ 6,85,000 ಜನರು ಸ್ತನ ಕ್ಯಾನ್ಸರ್‌ನಿಂದ ಸಾವನ್ನಪ್ಪಿದ್ದಾರೆ. 23 ಲಕ್ಷ ಜನರಲ್ಲಿ ಸ್ತನ ಕ್ಯಾನ್ಸರ್ ಪತ್ತೆಯಾಗಿದೆ. ಹಾಗೇ, ಈ ಕ್ಯಾನ್ಸರ್‌ನಿಂದ ಗುಣಮುಖರಾಗುತ್ತಿರುವವರ ಸಂಖ್ಯೆಯೂ ಹೆಚ್ಚಾಗುತ್ತಿದೆ.
ಸ್ತನ ಕ್ಯಾನ್ಸರ್ಗೆ ಸಂಬಂಧಿಸಿದಂತೆ ಸಾಮಾನ್ಯವಾಗಿರುವ 15 ತಪ್ಪು ಕಲ್ಪನೆಗಳು ಹೀಗಿವೆ…
1. ಸ್ತನದಲ್ಲಿ ಉಂಟಾಗುವ ಗಾಯವು ಸ್ತನ ಕ್ಯಾನ್ಸರ್ಗೆ ಕಾರಣವಾಗಬಹುದು.
2. ಅಂಡರ್ ವೈರ್ ಬ್ರಾಗಳನ್ನು ಧರಿಸುವುದರಿಂದ ಸ್ತನ ಕ್ಯಾನ್ಸರ್ ಬರುತ್ತದೆ.
3. IVF ಸ್ತನ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತದೆ.
4. ನಮ್ಮ ಕುಟುಂಬದಲ್ಲಿ ಯಾರಿಗೂ ಸ್ತನ ಕ್ಯಾನ್ಸರ್ ಇರಲಿಲ್ಲವಾದ್ದರಿಂದ ನನಗೂ ಈ ರೋಗ ಬರುವುದಿಲ್ಲ.
5. ಒತ್ತಡಕ್ಕೆ ಒಳಗಾಗುವುದರಿಂದ ಸ್ತನ ಕ್ಯಾನ್ಸರ್ ಉಂಟಾಗುತ್ತದೆ.
6. ಆರೋಗ್ಯಕರ ಜೀವನಶೈಲಿಯು ಸ್ತನ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುತ್ತದೆ.
7. ಸ್ತನ ಕ್ಯಾನ್ಸರ್ ವಯಸ್ಸಾದವರಿಗೆ ಮಾತ್ರ ಬರುತ್ತದೆ.
8. ಸ್ತನದಲ್ಲಿನ ಎಲ್ಲಾ ಗಡ್ಡೆಗಳೂ ಸ್ತನ ಕ್ಯಾನ್ಸರ್ ಆಗಿ ಬದಲಾಗುತ್ತದೆ.
ಇದನ್ನೂ ಓದಿ: ಕ್ಯಾನ್ಸರ್, ಹೃದಯದ ಸಮಸ್ಯೆಗಳ ನಿಯಂತ್ರಣಕ್ಕೆ ಬಾರ್ಲಿ ಬಳಸಿ
9. ಗರ್ಭಪಾತವು ಸ್ತನ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತದೆ.
10. ಬ್ರಾದೊಳಗೆ ಮೊಬೈಲ್ ಫೋನ್ ಇಟ್ಟುಕೊಳ್ಳುವುದರಿಂದ ಕ್ಯಾನ್ಸರ್ ಬರುತ್ತದೆ.
11. ಮೊಲೆತೊಟ್ಟುಗಳ ಚುಚ್ಚುವಿಕೆಯು ಸ್ತನ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತದೆ.
12. ಸಕ್ಕರೆ ಹೆಚ್ಚು ಸೇವಿಸಿದರೆ ಸ್ತನ ಕ್ಯಾನ್ಸರ್ ಬರುತ್ತದೆ.
13. ಪುರುಷರಿಗೆ ಸ್ತನ ಕ್ಯಾನ್ಸರ್ ಬರುವುದಿಲ್ಲ.
14. ಮ್ಯಾಮೊಗ್ರಾಮ್ ಸ್ತನ ಕ್ಯಾನ್ಸರ್ ಹರಡಲು ಕಾರಣವಾಗುತ್ತದೆ.
15. ಗಡ್ಡೆ ಇಲ್ಲದಿದ್ದರೆ ಕ್ಯಾನ್ಸರ್ ಬರುವುದಿಲ್ಲ.
ಇವುಗಳೆಲ್ಲ ಸ್ತನ ಕ್ಯಾನ್ಸರ್ ಬಗ್ಗೆ ಇರುವ ತಪ್ಪುಕಲ್ಪನೆಗಳು. ಸ್ತನ ಕ್ಯಾನ್ಸರ್ಗೂ ಈ ಲಕ್ಷಣಗಳಿಗೂ ಯಾವುದೇ ಸಂಬಂಧವಿಲ್ಲ.
Published On - 3:09 pm, Tue, 26 September 23