Effects of Nail Polish on Health: ನಿಮಗಿದು ಗೊತ್ತಾ! ನೈಲ್ ಪಾಲಿಶ್​ ಹಚ್ಚಿದರೆ ಮಾರಕ ರೋಗ ಬರುತ್ತಂತೆ, ಅದು ಹೇಗೆ?​

Effects of Nail Polish on Health: ಮಹಿಳೆಯರು ತಮ್ಮ ಅಂದವನ್ನು ಮತ್ತಷ್ಟು ಹೆಚ್ಚಿಸಿಕೊಳ್ಳಲು ಮೇಕಪ್, ಲಿಪ್​ಸ್ಟಿಕ್​​​, ನೈಲ್ ಪಾಲಿಶ್​ ಅಂತಹ ಕೃತಕ ಸೌಂದರ್ಯವರ್ಧಕಗಳಿಗೆ ಸುಲಭವಾಗಿ ಶರಣಾಗುತ್ತಾರೆ. ಆದರೆ ಇವು ತಮ್ಮ ಆರೋಗ್ಯದ ಮೇಲೆ ಎಷ್ಟು ಪರಿಣಾಮ ಬೀರುತ್ತೆ ಎಂಬ ಬಗ್ಗೆ ಅವರಿಗೆ ಅರಿವು ಇರುವುದಿಲ್ಲ. ಅದರಲ್ಲೂ ನೈಲ್ ಪಾಲಿಶ್​ ಹಚ್ಚುವುದರಿಂದ ಮಾರಣಾಂತಿಕ ಕ್ಯಾನ್ಸರ್ ಬರಬಹುದಂತೆ. ಇದರ ಸಮ್ಮುಖದಲ್ಲಿ ನಮ್ಮ ಹೆಣ್ಮಕ್ಕಳಿಗೆ ನೈಲ್ ಪಾಲಿಶ್ ಎಷ್ಟು ಮಾರಕ, ಅದರಿಂದ ಕ್ಯಾನ್ಸರ್ ಬರಬಹುದಾ ಎಂಬ ಅಂಶಗಳ ಬಗ್ಗೆ ಯಾವುದೇ ಬಣ್ಣ ಹಚ್ಚದೆ ನೇರ ಮಾತುಗಳಲ್ಲಿ ಇಲ್ಲಿ ತಿಳಿಯಹೇಳಲಾಗಿದೆ. ಓದಿಕೊಳ್ಳಿ.

Effects of Nail Polish on Health: ನಿಮಗಿದು ಗೊತ್ತಾ! ನೈಲ್ ಪಾಲಿಶ್​ ಹಚ್ಚಿದರೆ ಮಾರಕ ರೋಗ ಬರುತ್ತಂತೆ, ಅದು ಹೇಗೆ?​
ನೀವು ಹಚ್ಚುವ ನೈಲ್ ಪಾಲಿಶ್​ನಲ್ಲಿದೆ ಕ್ಯಾನ್ಸರ್​ ಉಂಟುಮಾಡುವ ಅಂಶ
Follow us
|

Updated on: Sep 28, 2024 | 12:00 PM

Nail polish and health factors: ನೀಳ ಕೈಗಳು, ಸುಂದರ ಉಗುರುಗಳು – ಇದರ ಕಾಂಬಿನೇಶನ್ನೇ ಎಷ್ಟು ಚೆನ್ನಾಗಿರುತ್ತದೆ ಅಲ್ಲವಾ!? ಇನ್ನು ಇದಕ್ಕೆ ರಂಗುರಂಗಿನ ಬಣ್ಣ ಅಂದರೆ ನೈಲ್ ಪಾಲಿಶ್​​​ ಹಚ್ಚಿದರಂತೂ ಎಂತಹವರನ್ನು ಮಂತ್ರಮುಗ್ಧರಾಗಿ ಸೆಳೆದುಬಿಡುತ್ತದೆ. ಅಂತಹ ಚಿತ್​​ಚೋರ್​​​ ಕೈಗಳ ಅಂದ ಹೆಚ್ಚಿಸಲೆಂದೇ ಹೆಂಗಳೆಯರು ಸಾವಿರಾರು ರೂಪಾಯಿ ಖರ್ಚು ಮಾಡಿ ಬಣ್ಣ ಬಣ್ಣದ ನೈಲ್ ಪಾಲಿಶ್​ಗಳನ್ನು ಹಚ್ಚುತ್ತಾರೆ. ಅದಾದ ಮೇಲೆ ಹಮ್ಮುಬಿಮ್ಮಿನಿಂದ ಪ್ರದರ್ಶಿಸುತ್ತಾರೆ. ಆದರೆ ಹಾಗೆ ಉಗುರುಗಳಿಗೆ ಹಚ್ಚುವ ಈ ನೈಲ್ ಪಾಲಿಶ್​ ಎಂಬ ಮಾರಕ ರಸಾಯನಿಕವು ಅವರ ಜೀವವನ್ನೇ ಹಾಳು ಮಾಡುವಷ್ಟು ವಿಷ ತುಂಬಿದಿಂದ ಕೂಡಿದೆ ಎಂಬುದನ್ನು ಅರಿತುಕೊಳ್ಳುವ ಜರೂರತ್ತುಇದೆ. ನೈಲ್ ಪಾಲಿಶ್, ಜೆಲ್ ಪಾಲಿಶ್, ನಕಲಿ ಉಗುರುಗಳು ಹಾಗೂ ಇತರೆ ಉಗುರು ಸೌಂದರ್ಯೋತ್ಪನ್ನಗಳನ್ನು ತಯಾರಿಸಲು ಬಳಸುವ ರಾಸಾಯನಿಕ ಪದಾರ್ಥಗಳು ಆರೋಗ್ಯಕ್ಕೆ ಕಂಟಕಪ್ರಾಯವಾಗಿವೆ.

ನೋಡುಗರಿಗೆ ಕೈಗಳು ಸುಂದರವಾಗಿ ಕಾಣಬೇಕೆಂದು ಉಗುರಿನ ಆರೋಗ್ಯದ ಬಗ್ಗೆ ಗಮನ ಹರಿಸುವವರ ಸಂಖ್ಯೆ ಸದಾ ಏರುಮುಖದಲ್ಲೇ ಇರುತ್ತದೆ. ಅಂದರೆ ಉಗುರು ಸ್ನಿಗ್ಧ ಸೌಂದರ್ಯದಿಂದ ಅದರಪಾಡಿಗೆ ಅದು ಇರಲಿ ಎಂದು ಬಯಸುವ ಹೆಂಗೆಳೆಯರ ಸಂಖ್ಯೆ ಸದಾ ಕೆಳಮುಖವಾಗಿಯೇ ಇರುತ್ತದೆ. ಹೆಂಗೆಳೆಯರ ಗುಣವೇ ಅಂತಹುದು… ಮೆನಿಕ್ಯೂರ್‌, ಪೆಡಿಕ್ಯೂರ್‌ ಎಂದು ಉಗುರುಗಳ ಆರೋಗ್ಯ ಕಾಪಾಡಿಕೊಳ್ಳುವತ್ತ ಗಮನ ನೀಡುತ್ತಾರೆ. ಇದರ ಜೊತೆಗೆ ಬಣ್ಣ ಬಣ್ಣದ ನೈಲ್ ಪಾಲಿಶ್​ಗಳನ್ನು ಹಚ್ಚಿ ಅಂದವಾಗಿ ಕಾಣಿಸಿಕೊಳ್ಳುವ ಬಗ್ಗೆ ಹೆಚ್ಚು ಯೋಚಿಸುವವರಿದ್ದಾರೆ.

ಆದರೆ ಈ ಉಗುರಿನ ಬಣ್ಣಕ್ಕೆ ಬಳಸುವ ರಾಸಾಯನಿಕಗಳು ನಾನಾ ಆರೋಗ್ಯ ಸಮಸ್ಯೆಗಳನ್ನು ತಂದೊಡ್ಡುತ್ತವೆ. ಈ ಉಗುರುಗಳಿಗೆ ಹಚ್ಚುವ ಬಣ್ಣ ಕ್ರಮೇಣವಾಗಿ ಆಹಾರದ ಜೊತೆ ಸೇರಿ ಹೊಟ್ಟೆಗೆ ಸೇರುತ್ತದೆ. ಇದರಿಂದ ನೈಲ್ ಪಾಲಿಶ್ ನಲ್ಲಿರುವ ಮಾರಕ ರಾಸಾಯನಿಕ ಅಂಶಗಳು ಆರೋಗ್ಯದ ಮೇಲೆ ಕೆಟ್ಟ ಪರಿಣಾಮವನ್ನು ಬೀರುತ್ತದೆ. ಅಷ್ಟೇ ಅಲ್ಲದೆ ಕ್ಯಾನ್ಸರ್​ನಂತಹ ಮಾರಣಾಂತಿಕ ಕಾಯಿಲೆಗೂ ಕಾರಣವಾಗುತ್ತದೆ ಎಂಬ ಆಘಾತಕಾರಿ ಅಂಶ ಇತ್ತೀಚೆಗೆ ದೃಢಪಟ್ಟಿದೆ.

ನೈಲ್​ ಪಾಲಿಶ್​ಗಳು ನಮ್ಮ ಆರೋಗ್ಯಕ್ಕೆ ಎಷ್ಟು ಹಾನಿಕಾರಕ ಎಂಬ ಬಗ್ಗೆ ಸೋಶಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ ಸೂಫಿಯಾ ಈ ಪೋಸ್ಟ್​ನಲ್ಲಿ ವಿವರಿಸಿದ್ದಾರೆ, ಗಮನಿಸಿ:

ತಜ್ಞರು ಹೇಳೋದೇನು?

ಸೌಂದರ್ಯ ವರ್ಧಕಗಳನ್ನು ಉತ್ಪಾದಿಸುವ ಉದ್ಯಮಗಳಿಗೆ ಕೆಲವು ಕಠಿಣ ನಿಯಮಗಳನ್ನು ವಿಧಿಸುವ ಅಗತ್ಯವಿದೆ. ಆರೋಗ್ಯಕ್ಕೆ ಹಾನಿಕಾರಕ ಎಂದು ತಿಳಿದಿದ್ದರೂ ಕೆಲವು ಪ್ರಾಡೆಕ್ಟ್​ಗಳಲ್ಲಿ ತುಂಬಾ ಡೇಂಜರೆಸ್ ಕೆಮಿಕಲ್ಸ್​ಗಳನ್ನು ಬಳಸಲಾಗುತ್ತಿದೆ. 10 ನಿಮಿಷದಲ್ಲಿ ಕೂದಲಿಗೆ ಬಣ್ಣ ಹಾಕುವುದು, ಬೆಳ್ಳಗಿನ ತ್ವಚೆಗೆ ಈ ಕ್ರೀಮ್ ಹಚ್ಚುವುದು, ಹಾಗೆಯೇ ನೈಲ್ ಪಾಲಿಶ್​ಗಳು ನಿಧಾನವಾಗಿ ನಮ್ಮ ಇಡೀ ಆರೋಗ್ಯವನ್ನು ಹಾಳು ಮಾಡುವಂತಹ ಅಂಶಗಳನ್ನು ಹೊಂದಿವೆ. ಹಾಗಾಗಿ ಇದರಿಂದ ದೂರ ಉಳಿಯುವುದು ಒಳಿತು. ಅದರ ಬದಲು ಕೈಗೆಟುಕುವ ಅಂತರದಲ್ಲಿ ನೈಸರ್ಗಿಕವಾಗಿ ಸಿಗುವ ಹಾಗೂ ಮನೆಯಲ್ಲೇ ಇರುವ ಅರಿಶಿಣ, ಮೊಸರು, ಕಡಲೆ ಹಿಟ್ಟು ಇತ್ಯಾದಿಗಳಿಂದ ನಮ್ಮ ಸೌಂದರ್ಯವನ್ನು ಕಾಪಾಡಿಕೊಳ್ಳಬಹುದು ಎಂದು ಫಿಟ್ ನೆಸ್ ಪ್ರಿಯೆ ಇಶಾ ಅವರು ಟಿವಿ9 ಡಿಜಿಟಲ್ ನೊಂದಿಗೆ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಇನ್ನು ಗುಜರಾತಿನ ಸೂರತ್‌ ನಗರದ ಚರ್ಮರೋಗ ತಜ್ಞೆ ಡಾ ನಿಷ್ಠಾ ಪಟೇಲ್ ಅವರು ನೈಲ್ ಪಾಲಿಶ್ ಹಲವಾರು ವಿಷಕಾರಿ ರಾಸಾಯನಿಕಗಳನ್ನು ಒಳಗೊಂಡಿರು . ನೈಲ್ ಪಾಲಿಶ್​​ನಲ್ಲಿರುವ ಟೊಲುಯೆನ್ (toluene) ಎಂಬ ಅಂಶವು ತಲೆನೋವು ಮತ್ತು ತಲೆಸುತ್ತುವಿಕೆಗೆ ಕಾರಣವಾಗುತ್ತೆ. ಅಲ್ಲದೆ, ನೈಲ್​ ಪಾಲಿಶ್​​ನಿಂದ ಕ್ಯಾನ್ಸರ್​ ಕೂಡ ಬರಬಹುದು ಎಂದು ಕೆಲ ಸಂಶೋಧನೆಗಳು ಸಾಬೀತುಪಡಿಸಿವೆ ಎಂದು  ಹೇಳುತ್ತಾರೆ.

ಇನ್ನು ನವದೆಹಲಿಯ ಚರ್ಮರೋಗ ತಜ್ಞೆ ಡಾ ದೀಪಾಲಿ ಭಾರದ್ವಾಜ್ ಅವರ ಪ್ರಕಾರ ನೈಲ್ ಪಾಲಿಶ್​ಗಳಲ್ಲಿ​ ಹಾನಿಕಾರಕ ರಾಸಾಯನಿಕಗಳನ್ನು ಬಳಸಲಾಗುತ್ತೆ. ಹಾಗಾಗಿ ಸದಾ ಬಣ್ಣ ಬಣ್ಣದ ನೈಲ್ ಪಾಲಿಶ್​ ಹಚ್ಚಲು ಹಾತೊರೆಯುವರು ನೇಲ್ ಪಾಲಿಶ್​ ಹಚ್ಚುವುದನ್ನು ಕಡಿಮೆ ಮಾಡೋದು ಒಳಿತು ಎಂಬ ಉಚಿತ ಸಲಹೆ ನೀಡಿದ್ದಾರೆ.

ಮಾರುಕಟ್ಟೆಗಳಲ್ಲಿ ನೂರಾರು ಬಗೆಯ ಕಾಸ್ಮೆಟಿಕ್ ಉತ್ಪನ್ನಗಳು ಲಭ್ಯವಿವೆ. ಎಷ್ಟೇ ಬ್ರಾಂಡೆಡ್ ನೈಲ್ ಪಾಲಿಶ್ ಹಚ್ಚಿದರೂ ಅವು ಆರೋಗ್ಯದ ಮೇಲೆ ತನ್ನದೇ ಆದ ರೀತಿಯಲ್ಲಿ ಕೆಟ್ಟ ಪ್ರಭಾವವನ್ನು ಬೀರುತ್ತವೆ. ನೈಲ್ ಪಾಲಿಶ್​ನಲ್ಲಿ ಕಂಡುಬರುವ ಟ್ರೈ ಫಿನಾಯಿಲ್ ಫಾಸ್ಪೇಟ್ (Tri Phenyl Phosphate) ಎನ್ನುವ ರಸಾಯನಿಕ ಅಂಶವನ್ನು ಸಾಮಾನ್ಯವಾಗಿ ಬೆಂಕಿ ನಂದಿಸಲು ಬಳಸುತ್ತಾರೆ! ಇದು ಸ್ವಲ್ಪ ಪ್ರಮಾಣದಲ್ಲಿ ಉಗುರುಗಳಿಗೆ ಹಚ್ಚುವ ಬಣ್ಣದಲ್ಲಿ ಬಳಕೆ ಮಾಡಲಾಗುತ್ತೆ.

ಎಚ್ಚರವಿರಲಿ! ಕ್ಯಾನ್ಸರ್​ಗೆ ಕಾರಣವಾಗುತ್ತೆ ನೈಲ್ ಪಾಲಿಶ್

ಆರೋಗ್ಯ ತಜ್ಞರ ಪ್ರಕಾರ ನೈಲ್ ಪಾಲಿಶ್ ಹಾಕಿಕೊಂಡ ನಂತರ ತಕ್ಷಣಕ್ಕೆ ಆ ಕೈಗಳಳಿಂದಲೇ  ಊಟ ಮಾಡಲಿಲ್ಲ ಎಂದೇ ಇಟ್ಟುಕೊಂಡರೂ ಉಗುರುಗಳ ಮೂಲಕ ಮತ್ತು ಚರ್ಮದ ಮೂಲಕ ಈ ಹಾನಿಕಾರಕ ರಸಾಯನಿಕಗಳು ಕಾಲಾಂತರದಲ್ಲಿ ದೇಹ ಸೇರುವ ಅಪಾಯ ಇದ್ದೇ ಇರುತ್ತದೆ. ದೇಹದಲ್ಲಿ ಥೈರಾಯ್ಡ್ ಹಾರ್ಮೋನುಗಳ ಬದಲಾವಣೆ, ಅತಿ ಹೆಚ್ಚು ಈಸ್ಟ್ರೋಜನ್ ಹಾರ್ಮೋನ್ ಉತ್ಪತ್ತಿಯಾಗುವುದು, ಅಂಡಾಶಯದ ಕ್ಯಾನ್ಸರ್ ಸೇರಿದಂತೆ ಇನ್ನೂ ಅನೇಕ ಆರೋಗ್ಯ ಸಮಸ್ಯೆಗಳು ನೇಲ್ ಪಾಲಿಶ್​ನಿಂದ ಬರುವ ಸಾಧ್ಯತೆಗಳು ಹೆಚ್ಚು.

ನೈಲ್ ಪಾಲಿಶ್​ನಲ್ಲಿ ಒಂದೋ, ಎರಡೋ ಬಗೆಯ ರಾಸಾಯನಿಕ ಅಂಶಗಳನ್ನು ಸೇರಿಸಿರುವುದಿಲ್ಲ. ಬದಲಿಗೆ ನೈಲ್ ಪಾಲಿಶ್​ಗಳ ಗಾಢ ಬಣ್ಣಕ್ಕೆ, ಹೊಳಪು ಬರಲು, ಬಹುಕಾಲ ಉಗುರುಗಳ ಮೇಲೆ ಇರುವಂತೆ ಮಾಡಲು ಅವುಗಳಿಗೆ ಅನುಕೂಲವಾಗುವಂತೆ ಬೇರೆ ಬೇರೆ ಬಗೆಯ ರಾಸಾಯನಿಕ ಅಂಶಗಳನ್ನು ಬಳಸಲಾಗುತ್ತೆ. ಅದರಲ್ಲಿ ಒಂದಾದ ನ್ಯೂರೋಟಾಕ್ಸಿನ್ (Neurotoxin) ಎಂಬ ರಸಾಯನಿಕ ಅಂಶ ನಮ್ಮ ನರಮಂಡಲದ ಮೇಲೆ ಪ್ರಭಾವ ಬೀರುತ್ತದೆ.

ಭ್ರೂಣ ಬೆಳವಣಿಗೆಗೆ ತೊಂದರೆ ಮಾಡುತ್ತೆ  ಗರ್ಭಿಣಿಯರು ಬಳಸುವ ನೈಲ್ ಪಾಲಿಶ್!

ನೈಲ್ ಪಾಲಿಶ್​ನಲ್ಲಿ ಕಂಡುಬರುವ ಟಾಲಿನ್ ಎನ್ನುವ ಅಂಶವು ಗರ್ಭಾವಸ್ಥೆಯ ಸಮಯದಲ್ಲಿ ಭ್ರೂಣದ ಅಭಿವೃದ್ಧಿಯಲ್ಲಿ ತೊಂದರೆ ಉಂಟು ಮಾಡುತ್ತದೆ. ಅವಧಿಗೂ ಮುನ್ನ ಹೆರಿಗೆ, ಪುಟ್ಟ ಮಕ್ಕಳಲ್ಲಿ ಅರಿವಿನ ಸಮಸ್ಯೆಯಂತಹ ಗಂಭೀರ ಸಮಸ್ಯೆಗಳಿಗೆ ಟಾಲಿನ್​ ಎಂಬ ಕೆಟ್ಟ ರಸಾಯನಿಕ ಅಂಶ ಪ್ರಭಾವಬೀರುತ್ತೆ.

ಉಗುರುಗಳ ಮೇಲೆ ದೀರ್ಘಕಾಲದವರೆಗೆ ಬಣ್ಣ ಉಳಿಯುವಂತೆ ಮಾಡಲು ಹಾಗೂ ನೈಲ್ ಪಾಲಿಶ್ ಗಟ್ಟಿಯಾಗಿ ಕೂರಲು ಫಾರ್ಮಾಲ್ಡಿಹೈಡ್ ಎನ್ನುವ ರಾಸಾಯನಿಕ ಅಂಶವನ್ನು ನೈಲ್ ಪಾಲಿಶ್​ಗಳಲ್ಲಿ ಬಳಸಲಾಗುತ್ತೆ. ಆಶ್ಚರ್ಯವೆಂದರೆ ಈ ಅಂಶವು ಮನುಷ್ಯನ ದೇಹದ ಜೀವಕೋಶಗಳಲ್ಲಿಯೂ ಸಹಜವಾಗಿ ಉತ್ಪತ್ತಿಯಾಗುತ್ತೆ. ಆದರೆ ಇದರ ರಾಸಾಯನಿಕ ರೂಪ ಆರೋಗ್ಯಕ್ಕೆ ಬಹಳ ಕೆಟ್ಟದ್ದು ಎಂಬುದನ್ನು ಮನಗಾಣಬೇಕು ಎಂದು ತಜ್ಞರು ಎಚ್ಚರಿಸುತ್ತಾರೆ. ನೈಲ್ ಪಾಲಿಶ್​ನಲ್ಲಿ ಬಳಕೆ ಮಾಡುವ ಈ ಅಂಶವು ಕ್ಯಾನ್ಸರ್ ಸಮಸ್ಯೆಯನ್ನು ಉಂಟು ಮಾಡುವ ಸಾಧ್ಯತೆ ಇರುತ್ತದೆ. ಅದರಲ್ಲೂ ವಿಶೇಷವಾಗಿ ಶ್ವಾಸಕೋಶದ ಕ್ಯಾನ್ಸರ್ ಸಮಸ್ಯೆಗೆ ಕಾರಣವಾಗಬಹುದು. ಇನ್ನು, ಫಾರ್ಮಾಲ್ಡಿಹೈಡ್ ಅಂಶದಿಂದಾಗಿ ಕೆಲವರಿಗೆ ಅಲರ್ಜಿಗಳಾಗಿರುವ ಉದಾಹರಣೆಗಳಿವೆ.

ಅಯ್ಯೋ ನೈಲ್​ ಪಾಲಿಶ್​​ನಿಂದ ಇಷ್ಟೆಲ್ಲಾ ಸಮಸ್ಯೆಗಳಿವೆಯಾ ಎಂಬ ಕಾರಣಕ್ಕೆ ನೀವು ಸಂಪೂರ್ಣವಾಗಿ ನೈಲ್ ಪಾಲಿಶ್​ ಹಚ್ಚುವುದನ್ನು ನಿಲ್ಲಿಸಬೇಕು ಎಂದೇನೂ ಇಲ್ಲ. ನೈಲ್ ಪಾಲಿಶ್ ಚೂಸ್ ಮಾಡುವಾಗ ಕೆಲವು ವಿಚಾರಗಳನ್ನು ಗಮನದಲ್ಲಿರಲಿ.

ನವದೆಹಲಿಯ ಮಣಿಪಾಲ್ ಆಸ್ಪತ್ರೆಯ ಚರ್ಮರೋಗ ತಜ್ಞರಾದ ಡಾ ಗುಂಜನ್ ವರ್ಮಾ ಅವರು ಹೇಳುವಂತೆ ನೈಲ್ ಪಾಲಿಶ್ ಅಥವಾ ಯಾವುದೇ ಕಾಸ್ಮೆಟಿಕ್ಸ್ ಖರೀದಿಸುವ ಮೊದಲು ಅವುಗಳ ವಿವರಗಳನ್ನು ಓದಬೇಕು ಮತ್ತು ಅದರ ಡಬ್ಬದಲ್ಲಿ ಬರುವ ಕೆಲವು ರೀತಿಯ ಪ್ರಮಾಣಪತ್ರವನ್ನು ಓದಿ ಮನನ ಮಾಡಿಕೊಳ್ಳಬೇಕು. ನಂತರ, ನಿಮ್ಮ ಚರ್ಮದ ಅಗತ್ಯಗಳಿಗೆ ಅನುಗುಣವಾಗಿ, ನೈಲ್ ಪಾಲಿಶ್​ ಅನ್ನು ಆಯ್ಕೆ ಮಾಡಿಕೊಳ್ಳಬಹುದು.

ನೈಲ್ ಪಾಲಿಶ್​ ಆಯ್ಕೆ ಮಾಡುವಾಗ ಈ ಅಂಶಗಳನ್ನು ಗಮನಿಸಿ

  • ನೈಲ್ ಪಾಲಿಶ್ ಖರೀದಿಸುವಾಗ ಅದರ ಲೇಬಲ್​ ಹಾಗೂ ತಯಾರಿಕಾ ವಿವರಗಳನ್ನು ಓದುವುದು ಮುಖ್ಯ. ಈ ಮೂಲಕ ಅದರಲ್ಲಿ ಬಳಸಲಾದ ರಾಸಾಯನಿಕಗಳ ಬಗ್ಗೆ ತಿಳಿದುಬರುತ್ತದೆ. ಹೆಚ್ಚು ಹಾನಿಕಾರ ಅಂಶಗಳಿದ್ದರೆ ಅದರಿಂದ ದೂರವಿರಿ.
  • ಫಾರ್ಮಾಲ್ಡಿಹೈಡ್ ಅಥವಾ ಟಾಲಿನ್ ಅನ್ನು ಒಳಗೊಂಡಿರುವ ಹೆಚ್ಚಿನ ಅಂಶ ನೈಲ್ ಪಾಲಿಶ್​ನಲ್ಲಿ ಕಂಡುಬಂದರೆ. ಆದಷ್ಟು ಖರೀದಿಸದೇ ಇದ್ದರೆ ಒಳ್ಳೆಯದು
  • ಗಾಢವಾದ ವಾಸನೆ ಇರುವ ನೈಲ್ ಪಾಲಿಶ್ ಖರೀದಿಸುವುದನ್ನು ತಪ್ಪಿಸಿ.
  • ಸುರಕ್ಷಿತ ಮತ್ತು ಪರಿಸರ ಸ್ನೇಹಿ ಅಂಶಗಳನ್ನು ಹೊಂದಿರುವ ನೈಲ್ ಪಾಲಿಷ್‌ ಬಳಸುವುದು ಉತ್ತಮ.

ನಿಮ್ಮ ಉಗುರುಗಳನ್ನು ಸುರಕ್ಷಿತವಾಗಿರಿಸುವುದು ಹೇಗೆ?

ಉಗುರುಗಳನ್ನು ಹೇಗೆ ಕಾಳಜಿ ವಹಿಸಬೇಕು ಎಂಬುದರ ಕುರಿತು ತಜ್ಞರು ಕೆಲ ಸಲಹೆಗಳನ್ನು ನೀಡಿದ್ದಾರೆ. ಸಮಾನ್ಯವಾಗಿ ಉದ್ದ ಉಗುರುಗಳನ್ನು ಬೆಳೆಸುವವರು ನೈಲ್ ಪಾಲಿಶ್​ ಜೊತೆಗೆ ಸ್ವಚ್ಛತೆಯನ್ನೂ ಗಮನ ಇಡಬೇಕು. ಉಗುರುಗಳಿದ್ದರೆ ಅದರಲ್ಲಿ ಕೊಳೆ ಕೂರುವಂತಹ ಸಾಧ್ಯತೆಗಳು ಹೆಚ್ಚಿರುತ್ತವೆ. ಹೀಗಾಗಿ ಕೈ ಸ್ವಚ್ಛತೆ ಬಗ್ಗೆ ಹೆಚ್ಚಿನ ಗಮನ ಇಡಬೇಕು.

ಪ್ರತಿ ದಿನ ಮಾಯಿಶ್ಚರೈಸ್​​ ಮಾಡಿ

ನಿಮ್ಮ ತ್ವಚೆಯಂತೆಯೇ ನಿಮ್ಮ ಉಗುರುಗಳಿಗೂ ಮಾಯಿಶ್ಚರೈಸ್​​​ ಬೇಕು. ಉಗುರುಗಳು ಮತ್ತು ಹೊರಪೊರೆಗಳನ್ನು ಆರ್ದಗೊಳಿಸಲು (ತೇವವಾಗಿರಿಸಲು) ಕ್ರೀಮ್ ಅಥವಾ ಕೊಬ್ಬರಿ ಎಣ್ಣೆಯನ್ನು ಬಳಸಿ.

ಉಗುರುಗಳನ್ನು ಟ್ರಿಮ್ ಮಾಡಿ, ಸ್ವಚ್ಛವಾಗಿಡಿ

ನಿಮ್ಮ ಉಗುರುಗಳನ್ನು ಟ್ರಿಮ್ ಮಾಡಿ ಮತ್ತು ಅವು ಮುರಿಯದಂತೆ ಅಥವಾ ಸೀಳುಬಿಡದಂತೆ ನೋಡಿಕೊಳ್ಳಿ.

ಉಗುರುಗಳನ್ನು ಬಾಯಿಂದ ಕಚ್ಚಬೇಡಿ

ಬಾಯಿಂದ ಉಗುರುಗಳನ್ನು ಕಚ್ಚುವುದರಿಂದ ಉಗುರುಗಳು ದುರ್ಬಲಗೊಳ್ಳುತ್ತವೆ ಮತ್ತು ಹಾನಿಗೊಳಗಾಗುತ್ತವೆ.

ಮನೆಗೆಲಸದ ವೇಳೆ ಗ್ಲೌಸ್ ಧರಿಸಿ

ಉಗುರುಗಳು ಹೆಚ್ಚು ಕಾಲ ನೀರಿನಲ್ಲಿ ಮಿಂದಿರುವುದರಿಂದ ಅಥವಾ ಆಗಾಗ ಸೋಪ್​​ ತಾಕುವುದರಿಂದ ಅವು ಪಡೆಸಾಗುತ್ತವೆ/ದುರ್ಬಲಗೊಳ್ಳುತ್ತವೆ. ಹೀಗಾಗಿ ಮನೆ ಕೆಲಸಗಳನ್ನು ಮಾಡುವಾಗ ಅವುಗಳ ರಕ್ಷಣೆಗಾಗಿ ಕೈಗಳಿಗೆ ಗ್ಲೌಸ್ ಬಳಸಿ.

ಸಮತೋಲನ ಆಹಾರವನ್ನು ಸೇವಿಸಿ

ಬಲವಾದ ಮತ್ತು ಆರೋಗ್ಯಕರವಾದ ಉಗುರುಗಳಿಗಾಗಿ ವಿಟಮಿನ್ ಇ ಮತ್ತು ಒಮೆಗಾ -3 ಕೊಬ್ಬಿನಾಮ್ಲಗಳಂತಹ ಪೋಷಕಾಂಶಗಳನ್ನು ತಿನ್ನಬೇಕು ಎಂದು ತಜ್ಞರು ಹೇಳುತ್ತಾರೆ.

ಮತ್ತಷ್ಟು ಪ್ರೀಮಿಯಂ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ಹೊಸ ಸಿನಿಮಾ ತಂಡಗಳಿಗೆ ಕಿವಿ ಮಾತು ಹೇಳಿದ ಸತೀಶ್ ನೀನಾಸಂ
ಹೊಸ ಸಿನಿಮಾ ತಂಡಗಳಿಗೆ ಕಿವಿ ಮಾತು ಹೇಳಿದ ಸತೀಶ್ ನೀನಾಸಂ
ರಾಜ್ಯದಲ್ಲಿ ಈಗ ಚುನಾವಣೆ ನಡೆದರೆ ಬಿಜೆಪಿ ಸುಲಭವಾಗಿ ಗೆಲ್ಲುತ್ತದೆ: ಜಗದೀಶ್
ರಾಜ್ಯದಲ್ಲಿ ಈಗ ಚುನಾವಣೆ ನಡೆದರೆ ಬಿಜೆಪಿ ಸುಲಭವಾಗಿ ಗೆಲ್ಲುತ್ತದೆ: ಜಗದೀಶ್
ಚನ್ನಪಟ್ಟಣ ಕ್ಷೇತ್ರಕ್ಕೆ ಅಭ್ಯರ್ಥಿ ಯಾರೆಂದು ಕೇಳಿದರೆ ಡಾ ಮಂಜುನಾಥ್ ಉತ್ತರ!
ಚನ್ನಪಟ್ಟಣ ಕ್ಷೇತ್ರಕ್ಕೆ ಅಭ್ಯರ್ಥಿ ಯಾರೆಂದು ಕೇಳಿದರೆ ಡಾ ಮಂಜುನಾಥ್ ಉತ್ತರ!
ನಿಯಮ ಮುರಿದ ಸ್ಪರ್ಧಿಗಳು, ಕಠಿಣ ಶಿಕ್ಷೆ ಕೊಟ್ಟ ಬಿಗ್​ಬಾಸ್
ನಿಯಮ ಮುರಿದ ಸ್ಪರ್ಧಿಗಳು, ಕಠಿಣ ಶಿಕ್ಷೆ ಕೊಟ್ಟ ಬಿಗ್​ಬಾಸ್
ಸಿದ್ದರಾಮಯ್ಯ ಮತ್ತು ಹರಿಯಾಣ ಸೋಲಿನ ನಡುವೆ ಸಂಬಂಧವಿಲ್ಲ: ಡಿಕೆ ಶಿವಕುಮಾರ್
ಸಿದ್ದರಾಮಯ್ಯ ಮತ್ತು ಹರಿಯಾಣ ಸೋಲಿನ ನಡುವೆ ಸಂಬಂಧವಿಲ್ಲ: ಡಿಕೆ ಶಿವಕುಮಾರ್
70ನೇ ರಾಷ್ಟ್ರೀಯ ಸಿನಿಮಾ ಪ್ರಶಸ್ತಿ ಪ್ರದಾನ ಕಾರ್ಯಕ್ರಮದ ಲೈವ್​ ನೋಡಿ..
70ನೇ ರಾಷ್ಟ್ರೀಯ ಸಿನಿಮಾ ಪ್ರಶಸ್ತಿ ಪ್ರದಾನ ಕಾರ್ಯಕ್ರಮದ ಲೈವ್​ ನೋಡಿ..
ದರ್ಶನ್​ ಜಾಮೀನು ಅರ್ಜಿ ವಿಚಾರಣೆ ಲೈವ್; ಇಂದಾದರೂ ದಾಸನಿಗೆ ಸಿಗುತ್ತಾ ಬೇಲ್?
ದರ್ಶನ್​ ಜಾಮೀನು ಅರ್ಜಿ ವಿಚಾರಣೆ ಲೈವ್; ಇಂದಾದರೂ ದಾಸನಿಗೆ ಸಿಗುತ್ತಾ ಬೇಲ್?
ಅಪ್ರಸ್ತುತವಾಗಿದ್ದರೂ ಬಸನಗೌಡ ಯತ್ನಾಳ್ ಹೆಸರು ಉಲ್ಲೇಖಿಸಿದ ಜಮೀರ್
ಅಪ್ರಸ್ತುತವಾಗಿದ್ದರೂ ಬಸನಗೌಡ ಯತ್ನಾಳ್ ಹೆಸರು ಉಲ್ಲೇಖಿಸಿದ ಜಮೀರ್
ಹರಿಯಾಣದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೋಲಾಗಿರೋದು ಶಿವಕುಮಾರ್​​ಗೆ ಗೊತ್ತಿಲ್ಲ
ಹರಿಯಾಣದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೋಲಾಗಿರೋದು ಶಿವಕುಮಾರ್​​ಗೆ ಗೊತ್ತಿಲ್ಲ
ಮೈಸೂರು ಕಾರ್ಯಕರ್ತನ ಮನೆಯಲ್ಲಿ ಸ್ಪೆಷಲ್ ದೋಸೆ ಸವಿದ ಸತೀಶ್ ಜಾರಕಿಹೊಳಿ!
ಮೈಸೂರು ಕಾರ್ಯಕರ್ತನ ಮನೆಯಲ್ಲಿ ಸ್ಪೆಷಲ್ ದೋಸೆ ಸವಿದ ಸತೀಶ್ ಜಾರಕಿಹೊಳಿ!