National Cashew Day: ಗೋಡಂಬಿ ಯಾವ ದೇಶದ್ದು ಗೊತ್ತಾ? ಗೋಡಂಬಿ ದಿನ ಏಕೆ ಆಚರಿಸುತ್ತಾರೆ?

ವಿಶ್ವದ ಅತಿ ದೊಡ್ಡ ಗೋಡಂಬಿ ಮರ 81 ಸಾವಿರ ಚದರ ಅಡಿ ಎತ್ತರದಲ್ಲಿದೆ ಮತ್ತು ಅದು ಬ್ರೆಜಿಲ್‌ನ ರಿಯೊ ಗ್ರಾಂಡೆ ದೊ ನಾರ್ಟೆಯಲ್ಲಿದೆ. ಲ್ಯಾಟಿನ್‌ ಅಮೆರಿಕನ್ನರು ಗೋಡಂಬಿ ಹಣ್ಣಿನ ಪಾನೀಯವನ್ನು ತಯಾರಿಸುತ್ತಾರೆ. ಗೋಡಂಬಿ ಮೂಲ ಈಶಾನ್ಯ ಬ್ರೆಜಿಲ್‌ ಆಗಿದ್ದರೂ, ಪೋರ್ಚ್‌ಗೀಸರು 1560 ಮತ್ತು 1565 ರ ನಡುವೆ ಭಾರತ ದೇಶದ ಗೋವಾಕ್ಕೆ ಗೋಡಂಬಿ ಸಸ್ಯವನ್ನು ತಂದರು ಹಾಗೂ ಗೋವಾದಿಂದ ಇದು ಆಗ್ನೇಯ ಏಷ್ಯಾ ಮತ್ತು ಅಂತಿಮವಾಗಿ ಆಫ್ರಿಕಾದಲ್ಲಿ ಹರಡಿತು ಎನ್ನಲಾಗಿದೆ.

National Cashew Day: ಗೋಡಂಬಿ ಯಾವ ದೇಶದ್ದು ಗೊತ್ತಾ? ಗೋಡಂಬಿ ದಿನ ಏಕೆ ಆಚರಿಸುತ್ತಾರೆ?
ಗೋಡಂಬಿ ದಿನ
Follow us
ಆಯೇಷಾ ಬಾನು
|

Updated on: Nov 23, 2023 | 7:38 AM

ಕಾಜು ಬರ್ಫಿ, ಖೀರ್, ಹಲ್ವಾ ಹೀಗೆ ಸಿಹಿತಿಂಡಿಗಳನ್ನು ತಿನ್ನುವಾಗ ಆಗಾಗ ಬಾಯಿಗೆ ಸಿಕ್ಕಿ ಟೇಸ್ಟ್ ಹೆಚ್ಚಿಸುವ ಗೋಡಂಬಿ (Cashew nut) ಅಂದ್ರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ. ಹುರಿದು ತಿನ್ನೋದು. ಹುರಿಯದೇ ತಿನ್ನೋದು. ಪಾಯಸಕ್ಕೆ ಹಾಕಿ ತಿನ್ನೋದು, ಹೀಗೆ ಹಲವು ಬಗೆಯಲ್ಲಿ ಜನ ಇಷ್ಟು ಪಟ್ಟು ಗೋಡಂಬಿಯನ್ನು ಸೇವಿಸುತ್ತಾರೆ. ಅಲ್ಲದೆ ಇದರ ಆರೋಗ್ಯ ಪ್ರಯೋಜನಗಳು ಕೂಡ ಹೆಚ್ಚು. ಇನ್ನು ವಿಶೇಷವೆಂದರೆ ಗೋಡಂಬಿಗಾಗಿಯೂ ಒಂದು ದಿನವನ್ನು ಮೀಸಲಿಡಲಾಗಿದೆ. ಪ್ರತಿ ವರ್ಷ ನವೆಂಬರ್ 23ರಂದು ಅಮೆರಿಕದಲ್ಲಿ ಗೋಡಂಬಿ ದಿನವನ್ನು ಆಚರಿಸಲಾಗುತ್ತದೆ (National Cashew Day).

ಗೋಡಂಬಿ ಮರದಲ್ಲಿ ಬೆಳೆಯುತ್ತೆ. ಈ ಮರದ ಮೂಲ ಸ್ಥಳ ಈಶಾನ್ಯ ಬ್ರೆಜಿಲ್‌. ಉಷ್ಣವಲಯದ ಹವಾಮಾನದಲ್ಲಿ ಗೋಡಂಬಿಯನ್ನು ಹೆಚ್ಚಾಗಿ ಬೆಳೆಯಲಾಗುತ್ತದೆ. ಗೋಡಂಬಿ ಮರ 32 ಅಡಿ ಎತ್ತರದಷ್ಟು ಬೆಳೆಯುತ್ತದೆ. ಹೂವುಗಳು ಸಣ್ಣದಾಗಿರುತ್ತವೆ, ತಿಳಿ ಹಸಿರು ಬಣ್ಣವನ್ನು ಪ್ರಾರಂಭಿಸಿ ನಂತರ ಕೆಂಪು ಬಣ್ಣಕ್ಕೆ ತಿರುಗುತ್ತದೆ. ಹೂವುಗಳು ಐದು ತೆಳ್ಳಗಿನ ದಳಗಳನ್ನು ಹೊಂದಿರುತ್ತದೆ. ವಿಶ್ವದ ಅತಿ ದೊಡ್ಡ ಗೋಡಂಬಿ ಮರ 81 ಸಾವಿರ ಚದರ ಅಡಿ ಎತ್ತರದಲ್ಲಿದೆ ಮತ್ತು ಅದು ಬ್ರೆಜಿಲ್‌ನ ರಿಯೊ ಗ್ರಾಂಡೆ ದೊ ನಾರ್ಟೆಯಲ್ಲಿದೆ. ಲ್ಯಾಟಿನ್‌ ಅಮೆರಿಕನ್ನರು ಗೋಡಂಬಿ ಹಣ್ಣಿನ ಪಾನೀಯವನ್ನು ತಯಾರಿಸುತ್ತಾರೆ. ಗೋಡಂಬಿ ಮೂಲ ಈಶಾನ್ಯ ಬ್ರೆಜಿಲ್‌ ಆಗಿದ್ದರೂ, ಪೋರ್ಚ್‌ಗೀಸರು 1560 ಮತ್ತು 1565 ರ ನಡುವೆ ಭಾರತ ದೇಶದ ಗೋವಾಕ್ಕೆ ಗೋಡಂಬಿ ಸಸ್ಯವನ್ನು ತಂದರು ಹಾಗೂ ಗೋವಾದಿಂದ ಇದು ಆಗ್ನೇಯ ಏಷ್ಯಾ ಮತ್ತು ಅಂತಿಮವಾಗಿ ಆಫ್ರಿಕಾದಲ್ಲಿ ಹರಡಿತು ಎನ್ನಲಾಗಿದೆ.

ಗೋಡಂಬಿ ಅಮೆರಿಕಾಗೆ ಬಂದದ್ದೇಗೆ?

“ಕ್ಯಾಸೋ” ಎಂಬ ಪದವು ಪೋರ್ಚುಗೀಸ್ ಪದ “ಕಾಜು” ಅಥವಾ “ಅಕಾಜು” ನಿಂದ ಹುಟ್ಟಿಕೊಂಡಿದೆ. ಇದು ಟ್ಯೂಪಿಯನ್ ಪದ “ಅಕಾಜು” ನಿಂದ ಬಂದಿದೆ, ಇದರರ್ಥ ಸ್ವಯಂ-ಉತ್ಪಾದಿಸುವ ಬೀಜ. ಗೋಡಂಬಿಯು ಇತರೆ ಎಲ್ಲಾ ಬೀಜಗಳಲ್ಲಿ ವಿಶಿಷ್ಟವಾಗಿದೆ. ಏಕೆಂದರೆ ಗೋಡಂಬಿ ಹಣ್ಣುಗಳ ಕೆಳಭಾಗದಿಂದ ಬಾಲದಂತೆ ಹೊರಹೊಮ್ಮುತ್ತವೆ. 1558 ರಲ್ಲಿ ಬ್ರೆಜಿಲ್‌ನಲ್ಲಿ ಯುರೋಪಿಯನ್ನರು ಗೋಡಂಬಿಯನ್ನು ಕಂಡುಹಿಡಿದರು. ಆಗ ಗೋಡಂಬಿಯಲ್ಲಿ ಚರ್ಮದ ಕಿರಿಕಿರಿಯನ್ನು ಉಂಟುಮಾಡುವ ಅನಾಕಾರ್ಡಿಕ್ ಆಮ್ಲದ ಉಪಸ್ಥಿತಿಯಿಂದಾಗಿ ಅವರು ಆರಂಭದಲ್ಲಿ ಅವುಗಳನ್ನು ತಿನ್ನಲಾಗದು ಎಂದು ಪರಿಗಣಿಸಿದರು. ಆದಾಗ್ಯೂ, ಪೋರ್ಚುಗೀಸರು, ಟುಪಿ-ಇಂಡಿಯನ್ನರನ್ನು ಗಮನಿಸಿದ ನಂತರ, ಕೆಟ್ಟ ಅಂಶವನ್ನು ತೆಗೆದುಹಾಕಲು ಬೀಜಗಳನ್ನು ಹುರಿದು ತಿನ್ನಲು ಕಲಿತರು. ಇದರಿಂದ ಗೋಡಂಬಿಯ ರುಚಿಕರವಾದ ಪರಿಮಳವನ್ನು ಕಂಡುಕೊಂಡರು. ಅವರು ವೈನ್ ಉತ್ಪಾದಿಸಲು ಗೋಡಂಬಿ ಹಣ್ಣನ್ನು ಬಳಸಿದರು. ಗೋಡಂಬಿಯನ್ನು ನಂತರ 1560 ರಲ್ಲಿ ಭಾರತದ ಗೋವಾಕ್ಕೆ ಪೋರ್ಚುಗೀಸ್ ಮಿಷನರಿಗಳು ಪರಿಚಯಿಸಿದರು ಮತ್ತು ಅದರ ಜನಪ್ರಿಯತೆಯು ಆಗ್ನೇಯ ಏಷ್ಯಾ ಮತ್ತು ಆಫ್ರಿಕಾದಾದ್ಯಂತ ವೇಗವಾಗಿ ಹರಡಿತು. 1905 ರಲ್ಲಿ, ಗೋಡಂಬಿಯನ್ನು ಯುನೈಟೆಡ್ ಸ್ಟೇಟ್ಸ್‌ಗೆ ಪರಿಚಯಿಸಲಾಯಿತು ಮತ್ತು ಅಮೆರಿಕನ್ನರು ಗೋಡಂಬಿಯಿಂದ ವಿಶಿಷ್ಟ ರುಚಿಯನ್ನು ಕಂಡುಕೊಂಡು ಅದರಿಂದ ರುಚಿಕರ ತಿನಿಸುಗಳನ್ನು ಮಾಡಲು ಆರಂಭಿಸಿದರು. ಅಲ್ಲಿಂದ ಅವುಗಳ ಬೇಡಿಕೆಯು ಗಗನಕ್ಕೇರಿತು.

ಇದನ್ನೂ ಓದಿ: Soaked Cashew Benefits: ಹಾಲಿನಲ್ಲಿ ನೆನೆಸಿದ ಗೋಡಂಬಿ ತಿನ್ನಬೇಕು, ತೂಕ ಹೆಚ್ಚಿಸಲು ಇದು ಉತ್ತಮ

ಗೋಡಂಬಿ ಆರೋಗ್ಯ ಪ್ರಯೋಜನ

ಗೋಡಂಬಿಯಲ್ಲಿ ತಾಮ್ರ, ಮ್ಯಾಂಗನೀಸ್‌, ಮೆಗ್ನೀಷಿಯಂ ಮತ್ತು ಫಾಸ್ಪರಸ್‌ ಅಂಶಗಳಿವೆ. ಇವು ಮಾನವನ ಚಯಾಪಚಯ ಕ್ರಿಯೆಗೆ, ಹೃದಯಕ್ಕೆ ಸಂಬಂಧಿಸಿದ ರೋಗ ನಿವಾರಣೆ, ಕೊಬ್ಬಿನಂಶ ಕಡಿಮೆ ಮಾಡಲು, ಮಾಂಸಖಂಡಗಳ ದೃಢತೆಗೆ, ರಕ್ತದೊತ್ತಡ ನಿಯಂತ್ರಣ, ರಕ್ತ ಹೀನತೆ ನಿವಾರಣೆಗೆ ಹೆಚ್ಚು ಪ್ರಯೋಜನಕಾರಿಯಾಗಿವೆ. ಗೋಡಂಬಿ ಸಸ್ಯದ ಅನೇಕ ಭಾಗಗಳನ್ನು ಔಷಧೀಯ ಉದ್ದೇಶಗಳಿಗಾಗಿ ಬಳಸಲಾಗುತ್ತದೆ.

ರಾಷ್ಟ್ರೀಯ ಗೋಡಂಬಿ ದಿನದ ಮಹತ್ವ

ರಾಷ್ಟ್ರೀಯ ಗೋಡಂಬಿ ದಿನವು ಗೋಡಂಬಿಯ ವಿವಿಧ ಬಗೆ ಮತ್ತು ರುಚಿಯನ್ನು ಆಚರಿಸಲು ಮತ್ತು ಪ್ರಶಂಸಿಸಲು ಇರುವ ಸಂದರ್ಭವಾಗಿದೆ. ಗೋಡಂಬಿ ಏಷ್ಯನ್ ಮತ್ತು ಲ್ಯಾಟಿನ್ ಅಮೇರಿಕನ್ ಪಾಕಪದ್ಧತಿಯ ಅವಿಭಾಜ್ಯ ಅಂಗವಾಗಿ ಮಾರ್ಪಟ್ಟಿವೆ. ಈ ದಿನ ನಿಮ್ಮ ಊಟದಲ್ಲಿ ಗೋಡಂಬಿಯನ್ನು ಸೇರಿಸಿ ಗೋಡಂಬಿಯ ರುಚಿಯನ್ನು ಸವೆಯಿರಿ. ಆನಂದಿಸಿ. ರಾಷ್ಟ್ರೀಯ ಗೋಡಂಬಿ ದಿನವು ಗೋಡಂಬಿಯ ವಿಶಿಷ್ಟ ಗುಣಗಳನ್ನು ಎತ್ತಿ ತೋರಿಸುವ ಮತ್ತು ಅವುಗಳ ಆನಂದವನ್ನು ಉತ್ತೇಜಿಸುವ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಅವಕಾಶವನ್ನು ನೀಡುತ್ತದೆ.

ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ಪ್ರೀತಿಯಿಂದ ಸಂಭಾವನೆ ಕೊಟ್ಟರು: ಬಿಗ್ ಬಾಸ್ ಪೇಮೆಂಟ್ ಬಗ್ಗೆ ಗೌತಮಿ ಮಾತು
ಪ್ರೀತಿಯಿಂದ ಸಂಭಾವನೆ ಕೊಟ್ಟರು: ಬಿಗ್ ಬಾಸ್ ಪೇಮೆಂಟ್ ಬಗ್ಗೆ ಗೌತಮಿ ಮಾತು
ಅಮೆರಿಕ ಅಧ್ಯಕ್ಷ ಟ್ರಂಪ್​ಗೂ ಮೊದಲೇ ಪ್ರಮಾಣವಚನ ಸ್ವೀಕರಿಸಿದ ಉಪಾಧ್ಯಕ್ಷ
ಅಮೆರಿಕ ಅಧ್ಯಕ್ಷ ಟ್ರಂಪ್​ಗೂ ಮೊದಲೇ ಪ್ರಮಾಣವಚನ ಸ್ವೀಕರಿಸಿದ ಉಪಾಧ್ಯಕ್ಷ
ಅಮೆರಿಕದ 47ನೇ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್​ ಪ್ರಮಾಣ ವಚನದ ನೇರಪ್ರಸಾರ
ಅಮೆರಿಕದ 47ನೇ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್​ ಪ್ರಮಾಣ ವಚನದ ನೇರಪ್ರಸಾರ
ಮೋಕ್ಷಿತಾ ಕಿಡ್ನಾಪ್ ಕೇಸ್ ಬಗ್ಗೆ ಗೊತ್ತಾದಾಗ ಗೌತಮಿ ರಿಯಾಕ್ಷನ್ ಹೇಗಿತ್ತು?
ಮೋಕ್ಷಿತಾ ಕಿಡ್ನಾಪ್ ಕೇಸ್ ಬಗ್ಗೆ ಗೊತ್ತಾದಾಗ ಗೌತಮಿ ರಿಯಾಕ್ಷನ್ ಹೇಗಿತ್ತು?
ಟ್ರಂಪ್ ಪ್ರಮಾಣವಚನ ಸ್ವೀಕಾರಕ್ಕೆ ಕ್ಷಣಗಣನೆ; ವೇದಿಕೆ ಸುತ್ತ ಜನವೋ ಜನ
ಟ್ರಂಪ್ ಪ್ರಮಾಣವಚನ ಸ್ವೀಕಾರಕ್ಕೆ ಕ್ಷಣಗಣನೆ; ವೇದಿಕೆ ಸುತ್ತ ಜನವೋ ಜನ
ಚಾರ್ಮಾಡಿ ಘಾಟಿಯಲ್ಲಿ ಭಾರಿ ಕಾಡ್ಗಿಚ್ಚು: ನೂರಾರು ಎಕರೆ ಅರಣ್ಯಕ್ಕೆ ಬೆಂಕಿ
ಚಾರ್ಮಾಡಿ ಘಾಟಿಯಲ್ಲಿ ಭಾರಿ ಕಾಡ್ಗಿಚ್ಚು: ನೂರಾರು ಎಕರೆ ಅರಣ್ಯಕ್ಕೆ ಬೆಂಕಿ
ನನ್ನ ವಿರುದ್ಧ ವರಿಷ್ಠರಿಗೆ ಯಾರೇ ದೂರು ನೀಡಿದರೂ ಹೆದರಲ್ಲ: ಯತ್ನಾಳ್
ನನ್ನ ವಿರುದ್ಧ ವರಿಷ್ಠರಿಗೆ ಯಾರೇ ದೂರು ನೀಡಿದರೂ ಹೆದರಲ್ಲ: ಯತ್ನಾಳ್
ಮಂಗಳೂರು ಬ್ಯಾಂಕ್ ದರೋಡೆಕೋರರು ಸಿಕ್ಕಿಬಿದ್ದಿದ್ಹೇಗೆ?
ಮಂಗಳೂರು ಬ್ಯಾಂಕ್ ದರೋಡೆಕೋರರು ಸಿಕ್ಕಿಬಿದ್ದಿದ್ಹೇಗೆ?
ಫಿನಾಲೆ ವೀಕ್ ತಲುಪದೆ ಹೋಗಿದ್ದು ನನ್ನ ಪತಿಗೆ ನಿರಾಶೆ ತಂದಿದೆ: ಗೌತಮಿ ಜಾಧವ್
ಫಿನಾಲೆ ವೀಕ್ ತಲುಪದೆ ಹೋಗಿದ್ದು ನನ್ನ ಪತಿಗೆ ನಿರಾಶೆ ತಂದಿದೆ: ಗೌತಮಿ ಜಾಧವ್
ಮಂಜು ಮನೆಯವರ ಮಾತುಗಳು ಬೇಸರ ತರಿಸಿತು: ಗೌತಮಿ
ಮಂಜು ಮನೆಯವರ ಮಾತುಗಳು ಬೇಸರ ತರಿಸಿತು: ಗೌತಮಿ