Winter Health: ಚಳಿಗಾಲದಲ್ಲಿ ನಿಮ್ಮ ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ?
ಊಟ ಮಾಡುವಾಗ ಎಂಜಾಯ್ ಮಾಡಿ. ಆದರೆ ಅದರ ಜೊತೆ ಹೆಚ್ಚು ಸೇವಿಸದಂತೆ ನಿಮ್ಮನ್ನು ಕಂಟ್ರೋಲ್ ಮಾಡಿಕೊಳ್ಳಲು ಕಲಿಯಿರಿ. ಸಕ್ಕರೆಯ ಬದಲು ತಾಜಾ ಹಣ್ಣಿನ ತಿರುಳು, ಖರ್ಜೂರ, ಅಂಜೂರದ ಹಣ್ಣುಗಳು, ಜೇನುತುಪ್ಪ ಅಥವಾ ಬೆಲ್ಲದಂತಹ ಆರೋಗ್ಯಕರ ಪರ್ಯಾಯಗಳನ್ನು ಬಳಸಿ.

ಚಳಿಗಾಲದಲ್ಲಿ ನಾಲಿಗೆ ರುಚಿ ಜಾಸ್ತಿ. ರುಚಿರುಚಿಯಾಗಿ ತಿನ್ನಬೇಕು ಎನಿಸುವುದು ಸಾಮಾನ್ಯ. ಕೊಬ್ಬಿನ ಮತ್ತು ಅಲ್ಟ್ರಾ ಸಂಸ್ಕರಿಸಿದ ಆಹಾರಗಳ ಅತಿಯಾದ ಸೇವನೆಯ ಈ ಸಮಯದಲ್ಲಿ ಹೆಚ್ಚು. ನಿಷ್ಕ್ರಿಯ ಜೀವನಶೈಲಿ ಮತ್ತು ಕೆಟ್ಟ ಆಹಾರ ಪದ್ಧತಿಗಳು ಬೊಜ್ಜಿಗೆ ಕಾರಣವಾಗಬಹುದು. ಇದು ಚಳಿಗಾಲದ ತಿಂಗಳುಗಳಲ್ಲಿ ಹಲವಾರು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಹೀಗಾಗಿ, ನ್ಯೂಟ್ರಿಷನ್ ಕನ್ಸಲ್ಟೆಂಟ್ ಡಾ. ಮೇಘನಾ ಪಾಸಿ ಅವರು ಚಳಿಗಾಲದ ಅವಧಿಯಲ್ಲಿ ಆರೋಗ್ಯವಾಗಿರುವುದು ಹೇಗೆ ಎಂಬುದರ ಕುರಿತು ಮಾಹಿತಿ ನೀಡಿದ್ದಾರೆ.
ತಿನ್ನಬೇಕು ಎನಿಸಿದರೆ ಮನೆಯಲ್ಲಿ ತಯಾರಿಸಿದ ಸಿಹಿತಿಂಡಿಗಳನ್ನು ತಿನ್ನಬಹುದು. ಇದರಲ್ಲಿ ಸಂಸ್ಕರಿಸಿದ ಸಕ್ಕರೆಗಳು, ಕೃತಕ ರುಚಿ ಅಥವಾ ಬಣ್ಣ ಇರುವುದಿಲ್ಲ. ಇದಕ್ಕೆ ಪ್ರಿಸರ್ವೇಟಿವ್ಗಳನ್ನು ಕೂಡ ಹಾಕುವುದಿಲ್ಲ. ಅಂಗಡಿಗಳಲ್ಲಿ ಸಿಗುವ ಆಹಾರದಲ್ಲಿರುವ ಹೈಡ್ರೋಜನೀಕರಿಸಿದ ತೈಲಗಳಂತಹ ಹಾನಿಕಾರಕ ಪದಾರ್ಥಗಳ ಬಳಕೆಯಿಂದ ಆರೋಗ್ಯ ಹಾಳಾಗುತ್ತದೆ ಎಂದಿದ್ದಾರೆ.
ಆರೋಗ್ಯಕರ ಸಕ್ಕರೆ ಪರ್ಯಾಯಗಳನ್ನು ಪ್ರಯತ್ನಿಸಿ:
ಸಕ್ಕರೆಯ ಬದಲು ತಾಜಾ ಹಣ್ಣಿನ ತಿರುಳು, ಖರ್ಜೂರ, ಅಂಜೂರದ ಹಣ್ಣುಗಳು, ಜೇನುತುಪ್ಪ ಅಥವಾ ಬೆಲ್ಲದಂತಹ ಆರೋಗ್ಯಕರ ಪರ್ಯಾಯಗಳನ್ನು ಬಳಸಿ. ಒಂದು ಚಿಟಿಕೆ ದಾಲ್ಚಿನ್ನಿ, ಏಲಕ್ಕಿ, ಕೇಸರಿ ಅಥವಾ ಜಾಯಿಕಾಯಿಯೊಂದಿಗೆ ನಿಮ್ಮ ಭಕ್ಷ್ಯಗಳ ಮಾಧುರ್ಯವನ್ನು ಹೆಚ್ಚಿಸಿ.
ಇದನ್ನೂ ಓದಿ: Winter Skin Care: ಚಳಿಗಾಲದಲ್ಲಿ ತ್ವಚೆಯ ಆರೈಕೆ ಹೀಗಿರಲಿ; ಒಣ ಚರ್ಮಕ್ಕೆ ಮನೆಮದ್ದು ಇಲ್ಲಿದೆ
ಧಾನ್ಯಗಳನ್ನು ಬಳಸಿ:
ಮೈದಾ ಹಿಟ್ಟಿನ ಬಳಕೆಯನ್ನು ಕಡಿಮೆ ಮಾಡಿ. ಗೋಧಿ ಹಿಟ್ಟು ಅಥವಾ ರಾಗಿ ಹಿಟ್ಟನ್ನು ಬಳಸಿ. ಇದು ದೇಹಕ್ಕೆ ಫೈಬರ್ ನೀಡುವುದು ಮಾತ್ರವಲ್ಲದೆ ನಿಮ್ಮ ಆಹಾರದಲ್ಲಿ ಹೆಚ್ಚುವರಿ ಜೀವಸತ್ವಗಳು ಮತ್ತು ಖನಿಜಗಳನ್ನು ಸೇರಿಸುತ್ತದೆ.
ನಟ್ಸ್ ತಿನ್ನಿ:
ಬಾದಾಮಿ, ವಾಲ್‌ನಟ್ಸ್, ಪಿಸ್ತಾ, ಅಗಸೆ ಬೀಜಗಳು, ಸೂರ್ಯಕಾಂತಿ ಬೀಜಗಳು ಮತ್ತು ಎಳ್ಳು ಬೀಜಗಳಂತಹ ಸೀಡ್ಸ್ ಮತ್ತು ನಟ್ಸ್ಗಳನ್ನು ತಿನ್ನುವ ಮೂಲಕ ನಿಮ್ಮ ಆಹಾರದ ಪೌಷ್ಟಿಕಾಂಶದ ಮೌಲ್ಯವನ್ನು ಹೆಚ್ಚಿಸಿ. ಇವು ಉತ್ತಮ ಪ್ರಮಾಣದ ಪ್ರೋಟೀನ್‌ಗಳು ಮತ್ತು ಹೃದಯಕ್ಕೆ ಆರೋಗ್ಯಕರ ಕೊಬ್ಬನ್ನು ಒದಗಿಸುತ್ತವೆ.
ಚುರುಕಾಗಿ ಬೇಯಿಸಿ:
ಹುರಿಯುವುದು, ಬೇಯಿಸುವುದು, ಆವಿಯಲ್ಲಿ ಬೇಯಿಸುವುದು ಅಥವಾ ಗ್ರಿಲ್ಲಿಂಗ್ ಮಾಡುವಂತಹ ಆರೋಗ್ಯಕರ ಅಡುಗೆ ವಿಧಾನಗಳನ್ನು ಅನುಸರಿಸಿ. ಕರಿದ ಪದಾರ್ಥಗಳನ್ನು ಕಡಿಮೆ ಮಾಡಿ. ಆವಿಯಲ್ಲಿ ಬೇಯಿಸಿದ ಮೊಮೊಗಳು, ಬೇಯಿಸಿದ ಸಮೋಸಾಗಳು, ಸುಟ್ಟ ತರಕಾರಿಗಳು ಮತ್ತು ಪನೀರ್ ಪ್ಲೇಟರ್‌ನಂತಹ ಭಕ್ಷ್ಯಗಳನ್ನು ಹೆಚ್ಚು ಸೇವಿಸಿ.
ಹಣ್ಣುಗಳನ್ನು ಸೇವಿಸಿ:
ಸಿಹಿತಿಂಡಿಗಳು ಮತ್ತು ಕರಿದ ತಿಂಡಿಗಳ ಬದಲು ಸೇಬು, ಪೇರಳೆ, ದಾಳಿಂಬೆ ಮತ್ತು ಕಿತ್ತಳೆಗಳಂತಹ ತಾಜಾ ಹಣ್ಣುಗಳನ್ನು ತಿನ್ನಿ. ಇವು ದೇಹಕ್ಕೆ ಅಗತ್ಯವಾದ ಪೋಷಕಾಂಶಗಳನ್ನು ಸಹ ನೀಡುತ್ತವೆ.
ಇದನ್ನೂ ಓದಿ: Seasonal Sleeping: ಈ 4 ಕಾರಣಗಳಿಂದಾಗಿ ಚಳಿಗಾಲದಲ್ಲಿ ಹೆಚ್ಚು ನಿದ್ರೆ ಬರುತ್ತದೆ!
ಊಟ ಮಾಡುವಾಗ ಎಚ್ಚರವಿರಲಿ:
ಊಟ ಮಾಡುವಾಗ ಎಂಜಾಯ್ ಮಾಡಿ. ಆದರೆ ಅದರ ಜೊತೆ ಹೆಚ್ಚು ಸೇವಿಸದಂತೆ ನಿಮ್ಮನ್ನು ಕಂಟ್ರೋಲ್ ಮಾಡಿಕೊಳ್ಳಲು ಕಲಿಯಿರಿ. ರುಚಿಯಾಗಿದೆ ಎಂದು ಅತಿಯಾಗಿ ಸೇವಿಸಬೇಡಿ. ನಿಮ್ಮ ದೇಹದ ಹಸಿವು ಮತ್ತು ಹೊಟ್ಟೆ ತುಂಬಿದ ಸೂಚನೆಗಳಿಗೆ ಗಮನ ಕೊಡಿ. ಗಮನವಿಟ್ಟು ತಿನ್ನುವುದು ಅತಿಯಾಗಿ ತಿನ್ನುವುದನ್ನು ತಡೆಯಲು ಮತ್ತು ಆಹಾರದೊಂದಿಗೆ ಆರೋಗ್ಯಕರ ಸಂಬಂಧವನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ.
ಹೈಡ್ರೇಟೆಡ್ ಆಗಿರಿ:
ದಿನವಿಡೀ ಸಾಕಷ್ಟು ನೀರು ಕುಡಿಯುವುದು ಬಹಳ ಮುಖ್ಯ. ಇದು ಹಸಿವನ್ನು ಕಡಿಮೆ ಮಾಡುತ್ತದೆ. ಹಾಗೇ, ತಿಂದ ಆಹಾರವನ್ನು ಜೀರ್ಣಿಸಿಕೊಳ್ಳಲು ಸಹಾಯ ಮಾಡುತ್ತದೆ.
ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ