ಪ್ರತಿ ವರ್ಷ ಡಿಸೆಂಬರ್ 31 ರಂದು ಅನೌಪಚಾರಿಕವಾಗಿ ರಾಷ್ಟ್ರೀಯ ಶಾಂಪೇನ್ ದಿನ(National Champagne Day) ವನ್ನು ಆಚರಿಸಲಾಗುತ್ತದೆ. ವರ್ಷದ ಕೊನೆಯ ದಿನದಂದು ಸ್ನೇಹಿತರು, ಬಂಧು, ಬಳಗ ಎಲ್ಲಾ ಒಟ್ಟಾಗಿ ಸೇರಿ ಶಾಂಪೇನ್ ಕುಡಿದು ಸಂಭ್ರಮದಿಂದ ಆಚರಿಸಲಾಗುತ್ತದೆ. ಶಾಂಪೇನ್ ಎಂದರೆ ಸ್ಪಾರ್ಕ್ಲ್ ವೈನ್ ಎಂದರ್ಥ. ಅಂದರೆ, ಸರಳ ಪದಗಳಲ್ಲಿ ಹೇಳುವುದಾದರೆ ಶಾಂಪೇನ್ ಬಾಟಲಿಯನ್ನು ವೈನ್‌ನಿಂದ ತುಂಬಿಸಲಾಗುತ್ತದೆ ಮತ್ತು ಈ ವೈನ್ ಸ್ಪಾರ್ಕ್ಲ್ ವೈನ್ ಆಗಿದೆ. ಇದನ್ನು ವಿಶೇಷವಾಗಿ ತಯಾರಿಸಲಾಗುತ್ತದೆ. ಈ ಕಾರಣದಿಂದಾಗಿ, ಉದಾಹರಣೆಗೆ ಸಮಾರಂಭಗಳಲ್ಲಿ ಶಾಂಪೇನ್ ಬಾಟಲಿಯನ್ನು ಅಲುಗಾಡಿಸಿದಾಗ ಮತ್ತು ತೆರೆದಾಗ ಸಾಕಷ್ಟು ನೊರೆಗಳು ಬರುತ್ತದೆ.
ಶಾಂಪೇನ್ ಫ್ರಾನ್ಸ್, ಪ್ಯಾರಿಸ್‌ನ ಈಶಾನ್ಯದ ಮೂಲ ಸ್ಥಳವಾಗಿದೆ. ಯಾಕೆಂದರೆ ಶಾಂಪೇನ್ಗೆ ಬೇಕಾಗುವ ದ್ರಾಕ್ಷಿಯನ್ನು ಉತ್ಪಾದಿಸಲು ಸೂಕ್ತವಾದ ತಾಪಮಾನ ಮತ್ತು ಮಣ್ಣನ್ನು ಈ ಪ್ರದೇಶ ಹೊಂದಿದೆ. ಸ್ಪಾರ್ಕ್ಲ್ ವೈನ್ ತಯಾರಿಸಲು, ಮೊದಲು ವಿವಿಧ ರೀತಿಯ ದ್ರಾಕ್ಷಿಗಳ ರಸವನ್ನು ಹೊರತೆಗೆಯಲಾಗುತ್ತದೆ ಮತ್ತು ಅದಕ್ಕೆ ಕೆಲವು ಪದಾರ್ಥಗಳನ್ನು ಬೆರೆಸುವ ಮೂಲಕ ಹುದುಗಿಸಿ ಇಡಲಾಗುತ್ತದೆ. ಷಾಂಪೇನ್ ಪ್ರದೇಶದಲ್ಲಿ ಶಾಂಪೇನ್ ಉತ್ಪಾದನೆಗೆ ಫ್ರೆಂಚ್ ಕಾನೂನು ಕೇವಲ ಎಂಟು ವಿಧದ ದ್ರಾಕ್ಷಿಯನ್ನು ಬಳಸಲು ಮಾತ್ರ ಅನುಮತಿ ನೀಡಿದೆ. ಪ್ರಾಥಮಿಕವಾಗಿ, ಶಾಂಪೇನ್ಗೆ ಮೂರು ದ್ರಾಕ್ಷಿಗಳನ್ನು ಬಳಸಲಾಗುತ್ತದೆ ಚಾರ್ಡೋನ್ನೆ, ಪಿನೋಟ್ ನಾಯ್ರ್ ಮತ್ತು ಪಿನೋಟ್ ಮೆಯುನಿಯರ್.
ಇದನ್ನೂ ಓದಿ: ರೆಡ್ ವೈನ್ ಕುಡಿಯುವುದು ಆರೋಗ್ಯಕ್ಕೆ ನಿಜವಾಗಿಯೂ ಪ್ರಯೋಜನಕಾರಿಯೇ? ಇಲ್ಲಿದೆ ಮಾಹಿತಿ
ಶಾಂಪೇನ್ ಪಾಲಿಫಿನಾಲ್ ಉತ್ಕರ್ಷಣ ನಿರೋಧಕಗಳನ್ನು ಹೊಂದಿದ್ದು, ಹೃದಯದ ಆರೋಗ್ಯವನ್ನು ಕಾಪಾಡುವಲ್ಲಿ ಸಹಾಯಕವಾಗಿದೆ. ರಕ್ತದಿಂದ ನೈಟ್ರಿಕ್ ಆಮ್ಲವನ್ನು ತೆಗೆದುಹಾಕುವುದನ್ನು ನಿಧಾನಗೊಳಿಸುವ ಮೂಲಕ ಇದು ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹಾಯಕವಾಗಿದೆ. ಜೊತೆಗೆ ಪಾರ್ಶ್ವವಾಯುವಿನ ಅಪಾಯದಿಂದ ನಿಮ್ಮನ್ನು ಕಾಪಾಡುತ್ತದೆ.
ಸಾಮಾನ್ಯವಾಗಿ ಒಂದು ಲೋಟ ಕೆಂಪು ಅಥವಾ ಬಿಳಿ ವೈನ್ 135 ರಿಂದ 200 ಕ್ಯಾಲೋರಿಗಳನ್ನು ಹೊಂದಿದ್ದರೆ, ಇದು ಪ್ರತಿ ಗ್ಲಾಸ್‌ಗೆ ಕೇವಲ 65 ಕ್ಯಾಲೊರಿಗಳನ್ನು ಹೊಂದಿದೆ.
ಯೂನಿವರ್ಸಿಟಿ ಆಫ್ ರೀಡಿಂಗ್‌ನ ಅಧ್ಯಯನವು ಪ್ರತಿ ವಾರ ಒಂದರಿಂದ ಮೂರು ಗ್ಲಾಸ್ ಶಾಂಪೇನ್ ಕುಡಿಯುವುದರಿಂದ ಮೆದುಳಿನ ಆರೋಗ್ಯವನ್ನು ಹೆಚ್ಚಿಸುತ್ತದೆ ಎಂದು ತಿಳಿಸಿದೆ.
ಶಾಂಪೇನ್ ಉತ್ಕರ್ಷಣ ನಿರೋಧಕಗಳೊಂದಿಗೆ ಚರ್ಮವನ್ನು ಕಾಂತಿಯುತಗೊಳಿಸುತ್ತದೆ. ಜೊತೆಗೆ ಇದರಲ್ಲಿನ ಟಾರ್ಟಾರಿಕ್ ಆಮ್ಲವು ಚರ್ಮದ ಟೋನ್ ಹೊರಹಾಕಲು ಸಹಾಯ ಮಾಡುತ್ತದೆ ಎಂದು ಚರ್ಮರೋಗ ತಜ್ಞ ಮರಿನಾ ಪೆರೆಡೊ ಹೇಳುತ್ತಾರೆ.
ವಾಸ್ತವವಾಗಿ, ಇದು ಕೆಂಪು ವೈನ್‌ನಂತೆಯೇ ನಿಮ್ಮ ಹೃದಯಕ್ಕೆ ಒಳ್ಳೆಯದು. ಯೂನಿವರ್ಸಿಟಿ ಆಫ್ ರೀಡಿಂಗ್ ಅಧ್ಯಯನವು ದಿನಕ್ಕೆ ಎರಡು ಗ್ಲಾಸ್ ಶಾಂಪೇನ್ ನಿಮ್ಮ ಹೃದಯ ಮತ್ತು ರಕ್ತಪರಿಚಲನೆಗೆ ಸಹಾಯಕ ಮತ್ತು ಹೃದಯರಕ್ತನಾಳದ ಕಾಯಿಲೆ ಮತ್ತು ಸ್ಟ್ರೋಕ್‌ನಿಂದ ಬಳಲುತ್ತಿರುವವರ ಅಪಾಯಗಳನ್ನು ಕಡಿಮೆ ಮಾಡುತ್ತದೆ ಎಂದು ತಿಳಿಸಿದೆ.
ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:
Published On - 10:05 am, Sat, 31 December 22