Winter Health Tips: ಈ ತರಕಾರಿ ಜ್ಯೂಸ್​​ಗಳು ಆರೋಗ್ಯಕ್ಕೆ ಉತ್ತಮ

ಚಳಿಗಾಲದಲ್ಲಿ ಕಾಲೋಚಿತ ರೋಗಗಳ ವಿರುದ್ಧ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದು ಬಹಳ ಮುಖ್ಯವಾಗಿದೆ. ಇಲ್ಲಿ ಒಂದು ಲೋಟ ತರಕಾರಿ ಜ್ಯೂಸ್ ನಿಮ್ಮ ಆರೋಗ್ಯದ ರಕ್ಷಣೆ ಮಾಡುತ್ತದೆ. ಚಳಿಗಾಲಕ್ಕೆ ಸೂಕ್ತವಾದ ಆರೋಗ್ಯಕರ ಜ್ಯೂಸ್‌ಗಳ ಬಗ್ಗೆ ನಿಮಗೆ ತಿಳಿಸಿಕೊಡುತ್ತೇವೆ.

Winter Health Tips: ಈ ತರಕಾರಿ ಜ್ಯೂಸ್​​ಗಳು ಆರೋಗ್ಯಕ್ಕೆ ಉತ್ತಮ
ಸಾಂದರ್ಭಿಕ ಚಿತ್ರImage Credit source: Pinterest
Follow us
TV9 Web
| Updated By: ಅಕ್ಷತಾ ವರ್ಕಾಡಿ

Updated on:Dec 30, 2022 | 4:36 PM

ಚಳಿಗಾಲದಲ್ಲಿ ಆರೋಗ್ಯದ ಕಡೆ ಹೆಚ್ಚಿನ ಗಮನಹರಿಸಬೇಕಿದೆ . ಉತ್ತರ ಭಾರತದ ಭಾಗಗಳಲ್ಲಿ ಕೊರೆಯುವ ಚಳಿ ಹವಮಾನವು ಹೆಚ್ಚಿದೆ. ದೆಹಲಿ, ರಾಜಸ್ಥಾನ ಮತ್ತು ಅಕ್ಕಪಕ್ಕದ ಪ್ರದೇಶಗಳಲ್ಲಿ ತಾಪಮಾನದಲ್ಲಿ ತೀವ್ರ ಕುಸಿತ ವರದಿಯಾಗಿದೆ. ಹವಾಮಾನ ಕಚೇರಿಯು ಮುಂದಿನ ಕೆಲವು ದಿನಗಳ ವರೆಗೆ ಇದೇ ಪರಿಸ್ಥಿತಿ ಮುಂದುವರೆಯಲಿದೆ ಎಂದು ಮುನ್ಸೂಚನೆ ನೀಡಿದೆ. ಅಂತಹ ಪರಿಸ್ಥಿಯಲ್ಲಿ ಚಳಿಯಿಂದ ರಕ್ಷಿಸಿಕೊಳ್ಳಲು ಬೆಚ್ಚಗಿನ ಸ್ವೆಟರ್‌ಗಳನ್ನು ಹಾಕುವುದು, ಬಿಸಿ ಪಾನೀಯಗಳನ್ನು ಕುಡಿಯುವುದು ಸಾಮಾನ್ಯವಾಗಿದೆ. ಈ ಎಲ್ಲಾ ಕ್ರಮಗಳು ಚಳಿಯಿಂದ ನಿಮಗೆ ತ್ವರಿತ ಪರಿಹಾರವನ್ನು ನೀಡುತ್ತವೆಯಾದರೂ, ಕಾಲೋಚಿತ ರೋಗಗಳ ವಿರುದ್ಧ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವುದು ಸಹ ಮುಖ್ಯವಾಗಿದೆ. ಇಂತಹ ಸಮಯದಲ್ಲಿ ಒಂದು ಲೋಟ ತರಕಾರಿ ಜ್ಯೂಸ್ ನಿಮ್ಮ ರಕ್ಷಣೆಗೆ ಸಹಾಯ ಮಾಡುತ್ತದೆ.

ಚಳಿಗಾಲದಲ್ಲಿ ತರಕಾರಿ ಜ್ಯೂಸ್ ಕುಡಿಯಬಹುದೇ?

ಚಳಿಗಾಲವು ಹಲವಾರು ಆರೋಗ್ಯ ಸಮಸ್ಯೆಗಳನ್ನು ತರುತ್ತವೆ. ಕೆಮ್ಮು, ಶೀತ, ಜ್ವರ ಈ ಋತುವಿನಲ್ಲಿ ಸಾಮಾನ್ಯವಾದವುಗಳಾಗಿವೆ. ಆದ್ದರಿಂದ ಪ್ರಪಂಚದಾದ್ಯಂತ ಆರೋಗ್ಯ ತಜ್ಞರು ನಿಮ್ಮ ದೇಹದಲ್ಲಿನ ರಕ್ಷಣಾ ಕಾರ್ಯವಿಧಾನವನ್ನು ನಿಯಂತ್ರಿಸಲು ರೋಗನಿರೋಧಕ ಸಕ್ತಿಯನ್ನು ಹೆಚ್ಚಿಸಲು ಸಲಹೆ ನೀಡುತ್ತಾರೆ. ನ್ಯೂಟ್ರಿಷ್ಯನಿಸ್ಟ್ ಹಾಗೂ ಆರೋಗ್ಯ ತರಬೇತುದಾರರಾದ ಶಿಲ್ಪ ಅರೋರ ಹೇಳುತ್ತಾರೆ, ರೋಗ ನಿರೋಧಕ ಶಕ್ತಿ ಒಂದು ದಿನದಲ್ಲಿ ನಿರ್ಮಾಣವಾಗುವುದಿಲ್ಲ. ಅದಕ್ಕೆ ಆರೋಗ್ಯಕರ ಜೀವನಶೈಲಿ ಮತ್ತು ಒಳಗಿನಿಂದ ನಮ್ಮನ್ನು ಪೋಷಿಸಲು ಪೌಷ್ಠಿಕ ಆಹಾರದ ಅಗತ್ಯವಿದೆ ಮತ್ತು ಋತುಮಾನದಲ್ಲಿ ಅಗತ್ಯವಾದ ಪೋಷಕಾಂಶಗಳಿಂದ ಸಮೃದ್ಧವಾಗಿರುವ ಹಣ್ಣುಗಳು ಮತ್ತು ತರಕಾರಿಗಳು ಸಿಗುತ್ತವೆ ಮತ್ತು ಇವುಗಳು ಒಟ್ಟಾರೆ ಆರೋಗ್ಯವನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ.

ತರಕಾರಿ ಜ್ಯೂಸ್‌ಗಳ ಆರೋಗ್ಯ ಪ್ರಯೋಜನಗಳು:

ಹೈಡ್ರೇಷನ್‌ನ್ನು ಉತ್ತೇಜಿಸುತ್ತದೆ:

ಉತ್ತಮ ಆರೋಗ್ಯಕ್ಕೆ ಜಲಸಂಚಯನವು(ಹೈಡ್ರೇಷನ್) ಕೀಲಿಯಾಗಿದೆ. ದೇಹದಲ್ಲಿ ನೀರಿನ ಸಮತೋಲನವನ್ನು ಕಾಪಾಡಿಕೊಳ್ಳುವುದು ಚಯಾಪಚಯಚಯವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ ಮತ್ತು ದಿನವಿಡೀ ನಿಮ್ಮನ್ನು ಶಕ್ತಿಯುತವಾಗಿರಿಸುತ್ತದೆ.

ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ:

ಮೊದಲೇ ಹೇಳಿದಂತೆ, ಚಳಿಗಾಲದ ತರಕಾರಿಗಳಾದ ಕ್ಯಾರೆಟ್, ಬೀಟ್ರೂಟ್ ಇತ್ಯಾದಿಗಳು ಅಗತ್ಯವಾದ ಜೀವಸತ್ವಗಳು, ಖನಿಜಗಳು, ಆ್ಯಂಟಿಆಕ್ಸಿಡೆಂಟ್ ಮತ್ತು ಹೆಚ್ಚಿನ ಪೋಷಕಾಂಶಗಳಿಂದ ತುಂಬಿರುತ್ತದೆ. ಈ ಪೋಷಕಾಂಶಗಳು ನಿಮ್ಮ ದೇಹವನ್ನು ಯಾವುದೇ ರೀತಿಯ ಉರಿಯೂತದಿಂದ ತಡೆಯಲು ಸಹಾಯ ಮಾಡುತ್ತದೆ. ಕೆಮ್ಮು, ಶೀತ ಮತ್ತು ಹೆಚ್ಚಿನವುಗಳ ವಿರುದ್ಧ ರೋಗನಿರೋಧಕ ಶಕ್ತಿಯನ್ನು ಮತ್ತಷ್ಟು ಹೆಚ್ಚಿಸುತ್ತದೆ.

ಕರುಳನ್ನು ಶುದ್ಧೀಕರಿಸುತ್ತದೆ:

ತರಕಾರಿಗಳು ಪೈಬರ್‌ನಿಂದ ಸಮೃದ್ಧವಾಗಿದೆ. ಇದು ಜೀರ್ಣಕ್ರಿಯೆ, ಕರುಳಿನ ಚಲನೆ ಮತ್ತು ಒಟ್ಟಾರೆ ಚಯಾಪಚಯವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ, ಈ ಅಂಶಗಳು ನಿಮ್ಮ ಕರುಳನ್ನು ಸ್ವಚ್ಛಗೊಳಿಸಲು ಮತ್ತು ಅದನ್ನು ಆರೋಗ್ಯವಾಗಿಡಲು ಸಹಾಯ ಮಾಡುತ್ತದೆ.

ತೂಕ ನಿಯಂತ್ರಣ:

ಸರಿಯಾದ ಜೀರ್ಣಕ್ರಿಯೆ ಮತ್ತು ಹೆಚ್ಚುವರಿ ಕ್ಯಾಲೋರಿಗಳನ್ನು ಹೊರಹಾಕಲು ನಮಗೆ ಸಹಾಯ ಮಾಡುತ್ತದೆ. ಆದ್ದರಿಂದ, ಚಳಿಗಾಲದಲ್ಲಿ ತೂಕವನ್ನು ನಿರ್ವಹಿಸಲು ತಜ್ಞರು ಯಾವಾಗಲೂ ತರಕಾರಿ ಜ್ಯೂಸ್ ಕುಡಿಯಲು ಸಲಹೆ ನೀಡುತ್ತಾರೆ,

ತ್ವಚೆಯ ಆರೋಗ್ಯವನ್ನು ಉತ್ತೇಜಿಸುತ್ತದೆ:

ಚಳಿಗಾಲದಲ್ಲಿ ಸಾಮಾನ್ಯವಾಗಿ ನಮ್ಮ ತ್ವಚೆ ಒಣಗುತ್ತದೆ. ಹಾಗಾಗಿ ನೀವು ಸೇವಿಸುವ ಆಹಾರದಲ್ಲಿ ತರಕಾರಿ ಜ್ಯೂಸ್‌ನ್ನು ಸೇರಿಸುವುದರಿಂದ ಇದು ದೇಹದ ವಿಷವನ್ನು ಹೊರಹಾಕಲು ಸಹಾಯ ಮಾಡುತ್ತದೆ ಮತ್ತು ಆರೋಗ್ಯಕರ ಹೊಳೆಯುವ ಚರ್ಮವನ್ನು ನೀಡುತ್ತದೆ.

ಇದನ್ನೂ ಓದಿ: ಕಪ್ಪು ಚುಕ್ಕೆಗಳಿರುವ ಬಾಳೆ ಹಣ್ಣು ಆರೋಗ್ಯಕ್ಕೆ ಒಳ್ಳೆಯದು, ಅಂಥದ್ದೇನಿದೆ ಅದರಲ್ಲಿ?

ಚಳಿಗಾಲಕ್ಕೆ ತರಕಾರಿ ಜ್ಯೂಸ್ ಮಾಡುವುದು ಹೇಗೆ ?

ನೀವು ಇಂಟರ್‌ನೆಟ್ ಮೂಲಕ ಸರ್ಚ್ ಮಾಡಿದರೆ ತರಕಾರಿ ಜ್ಯೂಸ್‌ಗಳ ಅನೇಕ ಪಾಕವಿಧಾನಗಳನ್ನು ಕಾಣಬಹುದು. ಕೆಲವರು ಸರಳವಾದ ಕ್ಯಾರೆಟ್ ಜ್ಯೂಸ್ ಅಥವಾ ಬೀಟ್ರೂಟ್ ಜ್ಯೂಸ್‌ನ್ನು ಇಷ್ಟ ಪಡುತ್ತಾರೆ. ಒಂದು ಲೋಟದಲ್ಲಿ ಒಂದಕ್ಕಿಂತ ಹೆಚ್ಚು ತರಕಾರಿಗಳ ಪ್ರಯೋಜನಗಳನ್ನು ಒಳಗೊಂಡ ನ್ಯೂಟ್ರೀಷ್ಯನಿಸ್ಟ್ ನ್ಮಾಮಿ ಅಗರ್ವಾಲ್ ಅವರ ತ್ವರಿತ ಪಾಕ ವಿಧಾನವನ್ನು ನಿಮಗೆ ತಿಳಿಸಿ ಕೊಡುತ್ತೇವೆ.

ಇದನ್ನೂ ಓದಿ: ಹನಿ ಸಿಂಗ್ ಬಳಲುತ್ತಿರುವ ಬೈಪೋಲರ್ ಡಿಸಾರ್ಡರ್ ಎಂದರೇನು? ರೋಗಲಕ್ಷಣಗಳ ಕುರಿತು ಮಾಹಿತಿ ಇಲ್ಲಿವೆ

ತರಕಾರಿ ಜ್ಯೂಸ್‌ನಲ್ಲಿ ಯಾವ ಪದಾರ್ಥಗಳನ್ನು ಬಳಸಲಾಗುತ್ತದೆ?

ಈ  ಪಾಕ ವಿಧಾನಕ್ಕಾಗಿ ನಿಮಗೆ ಅರಶಿನ, ಬೀಟ್ರೂಟ್, ಕ್ಯಾರೆಟ್, ಶುಂಠಿ ಮತ್ತು ನೆಲ್ಲಿಕಾಯಿಯ ಅಗತ್ಯವಿದೆ. ನೀವು ಮಾಡಬೇಕಾಗಿರುವುದೆಂದರೆ ಎಲ್ಲಾ ಪದಾರ್ಥಗಳನ್ನು ಒಂದು ಬ್ಲೆಂಡರ್‌ನಲ್ಲಿ ಚೆನ್ನಾಗಿ ರುಬ್ಬಿ ಅದರ ರಸವನ್ನು ಕುಡಿಯಿರಿ. ರುಚಿಯನ್ನು ಹೆಚ್ಚಿಸಲು ಹಾಗೂ ಸುವಾಸನೆಗಾಗಿ ನೀವು ಒಂದು ಚಿಟಿಕೆ ಕಲ್ಲು ಉಪ್ಪು ಅಥವಾ ಚಾಟ್ ಮಸಾಲವನ್ನು ಸೇರಿಸಬಹುದು.

ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:

Published On - 4:35 pm, Fri, 30 December 22

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ