National Watermelon Day 2023: ಇಂದು ರಾಷ್ಟ್ರೀಯ ಕಲ್ಲಂಗಡಿ ದಿನ, ಹಣ್ಣಿಗೂ ದಿನ ಮೀಸಲಿಡಲು ಇಲ್ಲಿದೆ ಕಾರಣ?

| Updated By: ಆಯೇಷಾ ಬಾನು

Updated on: Aug 03, 2023 | 8:34 AM

1615 ರಲ್ಲಿ 'ಕಲ್ಲಂಗಡಿ' ಎಂಬ ಪದವು ಮೊದಲ ಬಾರಿಗೆ ಇಂಗ್ಲಿಷ್ ನಿಘಂಟಿನಲ್ಲಿ ಕಂಡು ಬಂದಿತ್ತು. ಈಶಾನ್ಯ ಆಫ್ರಿಕಾದಲ್ಲಿ 5000 ವರ್ಷಗಳ ಹಿಂದೆ ಮೊದಲ ಕಲ್ಲಂಗಡಿ ತಳಿ ಕಂಡು ಬಂದಿತ್ತು ಎಂದು ಹೇಳಲಾಗುತ್ತೆ.

National Watermelon Day 2023: ಇಂದು ರಾಷ್ಟ್ರೀಯ ಕಲ್ಲಂಗಡಿ ದಿನ, ಹಣ್ಣಿಗೂ ದಿನ ಮೀಸಲಿಡಲು ಇಲ್ಲಿದೆ ಕಾರಣ?
ಕಲ್ಲಂಗಡಿ
Follow us on

ಜಗತ್ತಿನಲ್ಲಿ ರುಚಿಕರವಾದ ಹಣ್ಣುಗಳ ದಿನವನ್ನೂ ಆಚರಿಸಲಾಗುತ್ತೆ. 92 ಪ್ರತಿಶತದಷ್ಟು ನೀರನ್ನು ಹೊಂದಿರುವ ರಸಭರಿತ, ದಾಹ, ದೇಹಕ್ಕೆ ತಂಪೆನಿಸುವ ಕಲ್ಲಂಗಡಿ ಹಣ್ಣಿಗೆ(Watermelon) ಪ್ರತಿ ವರ್ಷ ಆಗಸ್ಟ್ 3 ರಂದು ರಾಷ್ಟ್ರೀಯ ಕಲ್ಲಂಗಡಿ ದಿನವನ್ನು ಆಚರಿಸಲಾಗುತ್ತದೆ(National Watermelon Day 2023). ಈಶಾನ್ಯ ಆಫ್ರಿಕಾದಲ್ಲಿ 5000 ವರ್ಷಗಳ ಹಿಂದೆ ಮೊದಲ ಕಲ್ಲಂಗಡಿ ತಳಿ ಕಂಡು ಬಂದಿತ್ತು ಎಂದು ಹೇಳಲಾಗುತ್ತೆ.

ಆರೋಗ್ಯ ಹೆಚ್ಚಿಸುವ ಕಲ್ಲಂಗಡಿ ಹಣ್ಣು ಬೆಳೆಯಲು ಬೆಚ್ಚನೆಯ ವಾತಾವರಣ ಬೇಕು. ಇವುಗಳನ್ನು ಹೆಚ್ಚಾಗಿ ತಮಿಳುನಾಡು, ಕರ್ನಾಟಕ, ಆಂಧ್ರಪ್ರದೇಶ, ಒರಿಸ್ಸಾ, ಪಶ್ಚಿಮ ಬಂಗಾಳ ಮತ್ತು ರಾಜಸ್ಥಾನದಲ್ಲಿ ವರ್ಷವಿಡೀ ಬೆಳೆಯುತ್ತಾರೆ.

1615 ರಲ್ಲಿ ‘ಕಲ್ಲಂಗಡಿ’ ಎಂಬ ಪದವು ಮೊದಲ ಬಾರಿಗೆ ಇಂಗ್ಲಿಷ್ ನಿಘಂಟಿನಲ್ಲಿ ಕಂಡು ಬಂದಿತ್ತು. ಇನ್ನು ಈ ರಾಷ್ಟ್ರೀಯ ಕಲ್ಲಂಗಡಿ ದಿನವನ್ನು ಯಾವಾಗ, ಯಾರು, ಏಕೆ ಸ್ಥಾಪಿಸಿದರು ಎಂಬ ಬಗ್ಗೆ ಹೆಚ್ಚು ಮಾಹಿತಿ ಇಲ್ಲ. ಆದರೂ ಆಚರಿಸಲಾಗುತ್ತೆ. ಕೆಲವರು ಇದನ್ನು ಕಲ್ಲಂಗಡಿ ಬೆಳೆಯುವ ರೈತರು ಪ್ರಾರಂಭಿಸಿದರು ಎಂದರೆ. ಇತರರು ಇದು ರಾಷ್ಟ್ರೀಯ ಕಲ್ಲಂಗಡಿ ಮಂಡಳಿಯ ರಚನೆ ಎಂದು ಹೇಳುತ್ತಾರೆ. ಆದ್ರೆ ನಿಖರ ಮಾಹಿತಿ ಇಲ್ಲ. ಜೀವಶಾಸ್ತ್ರಜ್ಞರು ಮತ್ತು ಸಸ್ಯಶಾಸಜ್ಞರ ಪ್ರಕಾರ ಕಲ್ಲಂಗಡಿ ದಕ್ಷಿಣ ಆಫ್ರಿಕಾದ ಕಾಡಿನಲ್ಲಿ ಬೆಳದ ಬಳ್ಳಿಯಾಗಿದೆ. ನಂತರ ಅಲ್ಲಿನ ಸ್ಥಳೀಯ ಜನರು ಇದನ್ನು ಬೆಳೆಯಲು ಆರಂಭಿಸಿದರು.

ಇದನ್ನೂ ಓದಿ: 2000 ವರ್ಷಗಳ ಹಿಂದಿನ ಮಮ್ಮಿ ದೇಹ ನೋಡಿ ಅಚ್ಚರಿಗೊಂಡ ತಜ್ಞರು; ದೇಹದೊಳಗೆ 100 ಕಲ್ಲಂಗಡಿ ಬೀಜಗಳು ಪತ್ತೆ!

17ನೇ ಶತಮಾನದಲ್ಲಿ ಇದು ದಕ್ಷಿಣ ಯುನೈಟೆಡ್ ಸ್ಟೆಟ್ಸ್ ನಾದ್ಯಂತ ಸಾಮಾನ್ಯವಾಗಿ ಬೆಳೆಯುವ ಬೆಳೆಯಾಗಿತ್ತು. ವರದಿಗಳ ಪ್ರಕಾರಗಳ ಉತ್ತರ ಕರೋಲಿನದಲ್ಲಿ 37ನೇ ವರ್ಷದ ಕಲ್ಲಂಗಡಿ ಉತ್ಸವವು ಐತಿಹಾಸಿಕ ಪಟ್ಟಣವಾದ ಹರ್ಟ್ ಫೊರ್ಡ್ ಕೌಂಟಿ ಪಟ್ಟಣದಲ್ಲಿ ನಾಲ್ಕು ದಿನಗಳ ಕಾಲ ವಿಜೃಂಭಣೆಯಿಂದ ನಡೆಯುತ್ತದೆ. ನಾಟಿಯಿಂದ ಕೊಯ್ಲು ಮಾಡುವವರೆಗೆ ಒಂದು ಕಲ್ಲಂಗಡಿ ಹಣ್ಣನ್ನು ಬೆಳೆಯಲು ಸುಮಾರು 90 ದಿನಗಳು ಬೇಕು. ಇದು ಅತಿ ಸುಲಭವಾಗಿ ಬೆಳೆಯುವ ಬೆಳೆಯಾಗಿದ್ದು ರೈತರಿಗೆ ಹೆಚ್ಚು ಲಾಭವನ್ನು ತಂದುಕೊಡುವ ಹಣ್ಣು. ಈ ಹಣ್ಣಿಗೆ ಜಗತ್ತಿನಾದ್ಯಂತ ಬೇಡಿಕೆ ಹೆಚ್ಚು.

ಅದರಲ್ಲೂ ಬೇಸಿಗೆ ಕಾಲದಲ್ಲಿ ಕಲ್ಲಂಗಡಿ ಹಣ್ಣಿಗೆ ವಿಶೇಷವಾದ ಬೇಡಿಕೆಯಿರುತ್ತದೆ. ಕೆಂಪು ಕಲ್ಲಂಗಡಿ ಹಣ್ಣನ್ನು ಜನ ಇಷ್ಟಪಟ್ಟು ತಿನ್ನುತ್ತಾರೆ. ಹಳದಿ ಬಣ್ಣದ ಕಲ್ಲಂಗಡಿ ಸ್ವಲ್ಪ ಕಡಿಮೆ. ತೂಕ ನಷ್ಟಕ್ಕೆ ಮತ್ತು ಜೀರ್ಣಕ್ರಿಯೆಗೆ ಕಲ್ಲಂಗಡಿ ಹಣ್ಣು ತುಂಬಾ ಪ್ರಯೋಜನಕಾರಿ.

ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ