
ದೇಹದಲ್ಲಿ ನಮ್ಮ ಯಕೃತ್ತು( Liver) ಅಥವಾ ಲಿವರ್ ಅನ್ನು ಆರೋಗ್ಯವಾಗಿಟ್ಟುಕೊಳ್ಳುವುದು ಬಹಳ ಮುಖ್ಯ. ಅದರಲ್ಲಿಯೂ ಇತ್ತೀಚಿನ ದಿನಗಳಲ್ಲಿ ನಮ್ಮ ಜೀವನಶೈಲಿಯಲ್ಲಿ ಮಾಡಿಕೊಂಡಂತಹ ಬದಲಾವಣೆಗಳು ಮತ್ತು ಆಹಾರ ಪದ್ಧತಿಯಿಂದಾಗಿ, ನಮ್ಮ ಯಕೃತ್ತು ವಿವಿಧ ರೀತಿಯ ಸಮಸ್ಯೆಗಳಿಂದ ಬಳಲಬಹುದು. ನಮ್ಮ ಆಹಾರ ಪದ್ಧತಿ (Diet) ಕಳಪೆಯಾಗಿದ್ದಾಗ ಲಿವರ್ ಹಾಳಾಗಿ ನಾನಾ ರೀತಿಯ ಸಮಸ್ಯೆಗಳಾಗುತ್ತದೆ. ಅದರಲ್ಲಿಯೂ ಫ್ಯಾಟಿ ಲಿವರ್ (Fatty Liver) ಅಥವಾ ಕೊಬ್ಬಿನ ಯಕೃತ್ತಿನ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಅತಿಯಾದ ಮದ್ಯಪಾನ ಮತ್ತಿತರ ಕಾರಣಗಳಿಂದ ಈ ರೀತಿ ಸಮಸ್ಯೆ ಉಂಟಾಗಬಹುದು. ಆದರೆ ಆಯುರ್ವೇದ ಔಷಧಗಳು ಯಕೃತ್ತನ್ನು ಆರೋಗ್ಯವಾಗಿಡುವಲ್ಲಿ ಬಹಳ ಪರಿಣಾಮಕಾರಿಯಾಗಿದ್ದು, ನಮ್ಮ ಲಿವರ್ ಅಥವಾ ಯಕೃತ್ತನ್ನು ಆರೋಗ್ಯವಾಗಿಡಲು ಪತಂಜಲಿಯ (Patanjali) ಹಲವಾರು ಔಷಧಿಗಳು ಸಹಾಯ ಮಾಡುತ್ತದೆ.
ಇತ್ತೀಚಿನ ದಿನಗಳಲ್ಲಿ ಕೊಬ್ಬಿನ ಯಕೃತ್ತು ಅಥವಾ ಫ್ಯಾಟಿ ಲಿವರ್ ಸಮಸ್ಯೆ ವೇಗವಾಗಿ ಹೆಚ್ಚುತ್ತಿದೆ. ಇದಕ್ಕೆ ಮುಖ್ಯ ಕಾರಣ ಬದಲಾಗುತ್ತಿರುವ ನಮ್ಮ ಜೀವನಶೈಲಿ ಮತ್ತು ನಾವು ರೂಢಿಸಿಕೊಂಡಿರುವ ಕಳಪೆ ಆಹಾರ ಪದ್ಧತಿ. ಇದೆಲ್ಲದರ ಜೊತೆಗೆ ವ್ಯಾಯಾಮ ಮಾಡದಿರುವುದು ಕೂಡ ಕೊಬ್ಬಿನ ಯಕೃತ್ತಿಗೆ ಕಾರಣವಾಗಬಹುದು. ನಿಮಗೂ ಫ್ಯಾಟಿ ಲಿವರ್ ಸಮಸ್ಯೆ ಇದ್ದರೆ, ನೀವು ಅದಕ್ಕೆ ಕೆಲವು ವಿಶೇಷ ಕ್ರಮಗಳನ್ನು ತೆಗೆದುಕೊಳ್ಳಬಹುದು. ಇದರಲ್ಲಿ ಆಯುರ್ವೇದ ಔಷಧಿಗಳ ಸೇವನೆಯೂ ಸೇರಿದೆ. ನಿಮಗೆ ಅಗತ್ಯವಿರುವಂತೆ ಆಯುರ್ವೇದ ಔಷಧಿಗಳ ಸೇವನೆ ಮಾಡುವುದರಿಂದ ಯಕೃತ್ತು ಆರೋಗ್ಯವಾಗಿರುತ್ತದೆ ಮತ್ತು ಇವುಗಳಿಂದ ಯಾವುದೇ ರೀತಿಯ ಅಡ್ಡಪರಿಣಾಮಗಳು ಇರುವುದಿಲ್ಲ. ಇದಕ್ಕೆ ಪೂರಕವಾಗಿ ಪತಂಜಲಿ ಸಂಸ್ಥೆ ಹಲವಾರು ಔಷಧಿಗಳನ್ನು ಬಿಡುಗಡೆ ಮಾಡಿದೆ. ಇದರಲ್ಲಿ ಕೆಲವು ಔಷಧಿಗಳನ್ನು ಬಳಸುವುದರಿಂದ, ಯಕೃತ್ತಿನ ಆರೋಗ್ಯ ಚೆನ್ನಾಗಿರುತ್ತದೆ.
ಹರಿದ್ವಾರದಲ್ಲಿರುವ ಪತಂಜಲಿ ಸಂಶೋಧನಾ ಸಂಸ್ಥೆ ನಡೆಸಿದ ಅಧ್ಯಯನವು ಪತಂಜಲಿ ಲಿವ್ ಅಮೃತ್ ಮಾತ್ರೆಗಳು, ದಿವ್ಯ ಕಾಸಿಮ್ ಭಸ್ಮ ಮತ್ತು ಬೆಲ್ ಮುರಬ್ಬಾ ಯಕೃತ್ತಿನ ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿ ಎಂದು ಬಹಿರಂಗಪಡಿಸಿದೆ. ಹೆಚ್ಚುವರಿಯಾಗಿ, ನೀವು ದಿವ್ಯ ಗೋಧನ್ ಆರ್ಕ್ ಮತ್ತು ದಿವ್ಯ ಪುನರ್ನವರಿಷ್ಟವನ್ನು ಸಹ ತೆಗೆದುಕೊಳ್ಳಬಹುದು. ದಿವ್ಯ ಲಿವ್ ಅಮೃತ್ ಟ್ಯಾಬ್ಲೆಟ್ (Divya Liv Amrit Tablet) ಕೊಬ್ಬಿನ ಯಕೃತ್ತಿಗೆ ತುಂಬಾ ಪರಿಣಾಮಕಾರಿಯಾಗಿದೆ. ಇವುಗಳ ಜೊತೆಗೆ, ಸೋರೆಕಾಯಿ ರಸವನ್ನು ಕುಡಿಯುವುದು ಮತ್ತು ಜಾಮೂನ್ ಹಣ್ಣುಗಳ ಸೇವನೆ ಕೂಡ ಯಕೃತ್ತಿನ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ.
ಇದನ್ನೂ ಓದಿ: ಫ್ಯಾಟಿ ಲಿವರ್ ಸಮಸ್ಯೆ ಹೆಚ್ಚುತ್ತಿರಲು ಕಾರಣವೇನು? ಇದನ್ನು ತಡೆಯಲು ವೈದ್ಯರು ನೀಡಿರುವ ಸಲಹೆ ಇಲ್ಲಿದೆ
ಲಿವ್ ಅಮೃತ್ ಮಾತ್ರೆಗಳು ಮತ್ತು ದಿವ್ಯ ಸರ್ವಕಲ್ಪ ಕ್ವಾತ್ ಕೊಬ್ಬಿನ ಯಕೃತ್ತು, ತೀವ್ರ ಯಕೃತ್ತಿನ ಕಾಯಿಲೆಯ ಸಂದರ್ಭಗಳಲ್ಲಿಯೂ ಬಹಳ ಪ್ರಯೋಜನಕಾರಿ. ಕೊಬ್ಬಿನ ಯಕೃತ್ತು ಎರಡನೇ ಹಂತವನ್ನು ತಲುಪಿದರೆ, ವೈದ್ಯರ ಮೇಲ್ವಿಚಾರಣೆಯಲ್ಲಿ ಔಷಧಿಗಳನ್ನು ತೆಗೆದುಕೊಳ್ಳುವುದು ಸೂಕ್ತ. ವೈದ್ಯರು ಔಷಧಿಗಳ ಡೋಸೇಜ್ ಮತ್ತು ಯಾವ ಸಮಯದಲ್ಲಿ ತೆಗೆದುಕೊಳ್ಳಬೇಕು ಎಂಬುದನ್ನು ನಿರ್ಧರಿಸುತ್ತಾರೆ. ಈ ಮಾತ್ರೆಗಳು ನಿಮಗೆ ಸಾಧ್ಯವಾದಷ್ಟು ಬೇಗ ಪರಿಹಾರ ನೀಡುತ್ತದೆ. ನಿಮ್ಮ ಸ್ಥಿತಿಯನ್ನು ಅವಲಂಬಿಸಿ, ವೈದ್ಯರು ಔಷಧಿಗಳನ್ನು ಆಯ್ಕೆ ಮಾಡುತ್ತಾರೆ ಮತ್ತು ನಿರ್ದಿಷ್ಟ ಅವಧಿಗೆ ಅನುಗುಣವಾಗಿ ಅವುಗಳನ್ನು ತೆಗೆದುಕೊಳ್ಳಲು ಸಲಹೆ ನೀಡುತ್ತಾರೆ. ಅನೇಕ ತೀವ್ರವಾದ ಯಕೃತ್ತಿನ ಕಾಯಿಲೆಗಳಿಗೂ ಸಹ ಆಯುರ್ವೇದ ಔಷಧಿಗಳಿಂದ ಚಿಕಿತ್ಸೆ ಲಭ್ಯವಿದೆ.
ಸೂಚನೆ: ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ. ಇದು ಯಾವುದೇ ರೀತಿಯಲ್ಲಿ ಅರ್ಹ ವೈದ್ಯಕೀಯ ಸಲಹೆಗೆ ಪರ್ಯಾಯವಲ್ಲ. ಹೆಚ್ಚಿನ ಮಾಹಿತಿಗಾಗಿ ಯಾವಾಗಲೂ ತಜ್ಞರನ್ನು ಅಥವಾ ನಿಮ್ಮ ವೈದ್ಯರನ್ನು ಸಂಪರ್ಕಿಸುವುದನ್ನು ಮರೆಯಬೇಡಿ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ