ಫ್ರೀಜರ್​ನಲ್ಲಿ ಈ ಆಹಾರ ಪದಾರ್ಥಗಳನ್ನು ಎಂದಿಗೂ ಇಡಬೇಡಿ? ಅಡ್ಡಪರಿಣಾಮಗಳ ಬಗ್ಗೆ ಇರಲಿ ಎಚ್ಚರ

| Updated By: preethi shettigar

Updated on: Nov 22, 2021 | 12:21 PM

ಫ್ರೀಜರ್ ಆಹಾರವನ್ನು ಐಸ್​ನಂತೆ ಗಟ್ಟಿಯಾಗಿಸುತ್ತದೆ. ಇದು ಆರೋಗ್ಯಕ್ಕೆ ಅಷ್ಟು ಸಮಂಜಸವಲ್ಲ. ಹೀಗಾಗಿ ಸಂದರ್ಭಗಳು ಏನೇ ಇರಲಿ, ನೀವು ಈ ಕೆಳಕಂಡ ಆಹಾರವನ್ನು ಫ್ರೀಜರ್‌ನಲ್ಲಿ ಇಡುವುದನ್ನು ಆದಷ್ಟು ತಪ್ಪಿಸಿ.

ಫ್ರೀಜರ್​ನಲ್ಲಿ ಈ ಆಹಾರ ಪದಾರ್ಥಗಳನ್ನು ಎಂದಿಗೂ ಇಡಬೇಡಿ? ಅಡ್ಡಪರಿಣಾಮಗಳ ಬಗ್ಗೆ ಇರಲಿ ಎಚ್ಚರ
ಸಂಗ್ರಹ ಚಿತ್ರ
Follow us on

ಸಾಮಾನ್ಯವಾಗಿ ರಾತ್ರಿ ಮಾಡಿದ ಆಹಾರ ಅಥವಾ ಕೆಲವು ಹಸಿ ತರಕಾರಿಗಳನ್ನು ಹಾಳಾಗದಂತೆ ಕಾಪಾಡಿಕೊಳ್ಳಲು ಅವುಗಳನ್ನು ಫ್ರಿಡ್ಜ್​ನಲ್ಲಿ ಇಡುವ ಅಭ್ಯಾಸ ರೂಢಿಯಲ್ಲಿದೆ. ಆದರೆ ನೀವು ಎಚ್ಚರಿಕೆಯಿಂದ ಮುಂದುವರಿಯಬೇಕು. ಏಕೆಂದರೆ ಕೆಲವು ಆಹಾರಗಳು ಫ್ರಿಡ್ಜ್​ನಲ್ಲಿಟ್ಟರೆ ಅದರಲ್ಲೂ ಫ್ರೀಜರ್​ನಲ್ಲಿಟ್ಟರೆ ( Freezer)  ಇನ್ನಿತರ ವಸ್ತುಗಳೊಂದಿಗೆ ಬೆರೆತು ಆರೋಗ್ಯಕ್ಕೆ ಹಾನಿಕಾರವಾಗುವ ಸಾಧ್ಯತೆ ಇದೆ. ಫ್ರೀಜರ್ ಆಹಾರವನ್ನು ಐಸ್​ನಂತೆ ಗಟ್ಟಿಯಾಗಿಸುತ್ತದೆ. ಇದು ಆರೋಗ್ಯಕ್ಕೆ ಅಷ್ಟು ಸಮಂಜಸವಲ್ಲ. ಹೀಗಾಗಿ ಸಂದರ್ಭಗಳು ಏನೇ ಇರಲಿ, ನೀವು ಈ ಕೆಳಕಂಡ ಆಹಾರವನ್ನು ಫ್ರೀಜರ್‌ನಲ್ಲಿ ಇಡುವುದನ್ನು ಆದಷ್ಟು ತಪ್ಪಿಸಿ.

1. ಹಾಲು
ಡೈರಿ ಹಾಲು ಫ್ರೀಜರ್‌ನಲ್ಲಿ ಸಂಗ್ರಹಿಸಿದಾಗ  ಸೋಡಾ ಅಥವಾ ಬಿಯರ್‌ನಂತೆ ವಿಸ್ತರಿಸುತ್ತದೆ. ಹಾಲಿನಲ್ಲಿ ಶೇ. 87 ರಷ್ಟು ನೀರು ಇರುವುದೇ ಅದಕ್ಕೆ ಕಾರಣ. ಡೈರಿ ಹಾಲು ಹೆಪ್ಪುಗಟ್ಟಿದಾಗ, ಅದರ ರಚನೆಯು ಮಹತ್ತರವಾಗಿ ಬದಲಾಗಬಹುದು. ಹೆಪ್ಪುಗಟ್ಟಿದ ಹಾಲನ್ನು ಕರಗಿಸಿದಾಗ, ಅದು ತುಂಡುಗಳಾಗಿ ಮತ್ತು ನೀರಿನ ಭಾಗಗಳಾಗಿ ಬದಲಾಗುವ ಸಾಧ್ಯತೆ ಇದೆ. ಹಾಲಿನಲ್ಲಿ ಕೊಬ್ಬಿನ ಅಂಶ ಹೆಚ್ಚಾದಷ್ಟೂ ಹಾಲು ವಿಭಿನ್ನವಾಗಿರುತ್ತದೆ.

2. ಸೌತೆಕಾಯಿ
ಸೌತೆಕಾಯಿಗಳನ್ನು ಫ್ರೀಜರ್‌ನಲ್ಲಿ ಇರಿಸಿದಾಗ, ಅವುಗಳ ರುಚಿ ಸಾಕಷ್ಟು ವಿಭಿನ್ನವಾಗಿರುತ್ತದೆ. ಸೌತೆಕಾಯಿಗಳ ರಚನೆಯ ಮೇಲೂ ಪರಿಣಾಮ ಬೀರುತ್ತದೆ ಮತ್ತು ಕರಗಿದಾಗ ಇದು ತೇವವಾಗಬಹುದು.

3 ಮೊಟ್ಟೆ
ಮೊಟ್ಟೆಗಳನ್ನು ಫ್ರೀಜರ್‌ನಲ್ಲಿ ಸಂಗ್ರಹಿಸುವ ಮೂಲಕ ನೀವು ಅಕ್ಷರಶಃ ಹಾಳುಮಾಡುತ್ತೀರಿ. ಮೊಟ್ಟೆಗಳನ್ನು (ಶೆಲ್‌ನೊಂದಿಗೆ) ಫ್ರೀಜರ್‌ನಲ್ಲಿ ಸಂಗ್ರಹಿಸಿದಾಗ ನೀರಿನ ಅಂಶವು ಹೊರಪದರವನ್ನು ಬಿರುಕುಗೊಳಿಸಲು ಕಾರಣವಾಗುತ್ತದೆ. ಇದು ಅನೇಕ ಬ್ಯಾಕ್ಟೀರಿಯಾಗಳಿಗೆ ಗುರಿಯಾಗುತ್ತದೆ. ನೀವು ಫ್ರೀಜರ್‌ನಲ್ಲಿ ಮೊಟ್ಟೆಗಳನ್ನು ಸಂಗ್ರಹಿಸಲು ಬಯಸಿದರೆ, ಗಾಳಿಯಾಡದ ಕಂಟೇನರ್‌ನಲ್ಲಿ ಇಡಬಹುದು. ಇದು ಖಂಡಿತವಾಗಿಯೂ ಬ್ಯಾಕ್ಟೀರಿಯಾವನ್ನು ಸ್ವಲ್ಪ ಸಮಯದವರೆಗೆ ಕಡಿಮೆ ಮಾಡುತ್ತದೆ. ಆದರೆ, ಇದನ್ನು ಯಾವಾಗ ಬಳಸಬೇಕು ಎಂಬುದರ ಮೇಲೆ ಗಮನವಿಡಿ

4. ಹಣ್ಣುಗಳು
ಹಣ್ಣುಗಳನ್ನು ಫ್ರೀಜರ್‌ನಲ್ಲಿ ಇರಿಸಿದರೆ, ಅವುಗಳ ಪೌಷ್ಟಿಕಾಂಶದ ಮಟ್ಟ ಕಡಿಮೆಯಾಗುತ್ತದೆ. ಅಷ್ಟೇ ಅಲ್ಲ, ಹಣ್ಣುಗಳನ್ನು ಫ್ರೀಜರ್‌ನಲ್ಲಿ ಇರಿಸಿದಾಗ ಅದು ಒಳಗಿನಿಂದ ಒಣಗುತ್ತದೆ ಮತ್ತು ಅವುಗಳ ರುಚಿಯ ಮೇಲೆ ಪರಿಣಾಮ ಬೀರುತ್ತದೆ.

5. ಪಾಸ್ತಾ
ಉಳಿದಿರುವ ಅಥವಾ ಬೇಯಿಸಿದ ಪಾಸ್ತಾವನ್ನು ಫ್ರೀಜರ್‌ನಲ್ಲಿ ಇಡುವುದರಿಂದ ಅದರ ರುಚಿ ಕೆಡುತ್ತದೆ ಅಥವಾ ಆರೋಗ್ಯಕ್ಕೆ ಹಾನಿಯುಂಟು ಮಾಡುತ್ತದೆ. ಸಂಪೂರ್ಣವಾಗಿ ಬೇಯಿಸಿದ ಪಾಸ್ತಾವನ್ನು ಮತ್ತೆ ಕಾಯಿಸಿದಾಗ ಮೆತ್ತಗಾಗುತ್ತದೆ. ಬಹುಶಃ ನೀವು ಬೇಯಿಸಿದ ಪಾಸ್ತಾವನ್ನು ಫ್ರಿಜರ್​ನಲ್ಲಿ ಇರಿಸಬಹುದು. ಆದರೆ ಬಿಸಿಮಾಡಿದಾಗಲೂ ಅದು ಗಟ್ಟಿಯಾಗಿರಬಹುದು. ಆದ್ದರಿಂದ ಇದನ್ನು ಗಮನಿಸಿ.

7. ಟೊಮೆಟೊ ಸಾಸ್
ಪೇಸ್ಟ್​ನಿಂದ ನೀರು ಬೇರ್ಪಡುವ ಮತ್ತೊಂದು ಉದಾಹರಣೆ ಇದಾಗಿದೆ. ನೀವು ಟೊಮೆಟೊ ಸಾಸ್ ಅನ್ನು ಫ್ರೀಜರ್‌ನಲ್ಲಿ ಇರಿಸಿದಾಗ, ಅದರ ಗುಣಮಟ್ಟ ಹಾಳಾಗುತ್ತದೆ. ಆದ್ದರಿಂದ, ಫ್ರೀಜರ್​ನಲ್ಲಿ ಟೊಮೆಟೊ ಸಾಸ್ ಅನ್ನು ಸಂಗ್ರಹಿಸದಿರುವುದು ಒಳ್ಳೆಯದು.

8. ಆಲೂಗಡ್ಡೆ
ಆಲೂಗಡ್ಡೆ ನೀರಿನ ಅಂಶದಲ್ಲಿ ಸಮೃದ್ಧವಾಗಿವೆ ಎಂದು ತಿಳಿದುಬಂದಿದೆ. ಅಲ್ಲದೆ, ನೀವು ಫ್ರೀಜರ್​ನಲ್ಲಿ ಬೇಯಿಸಿದ ಆಲೂಗಡ್ಡೆಗಳನ್ನು ಶೇಖರಿಸಿಡಲು ಯೋಜಿಸುತ್ತಿದ್ದರೆ, ಅವುಗಳನ್ನು ಇನ್ನೂ ಇರಿಸಬಹುದು. ಆದರೆ ಹಾಗೆ ಇಡುವ ಬದಲಾಗಿ ಲೋಹದ ಬೋಗುಣಿಯಲ್ಲಿ ಇಡಿ.

ಇದನ್ನೂ ಓದಿ:
ಆರೋಗ್ಯಕರ ಜೀವನ ಶೈಲಿಗಾಗಿ ಈ ಕೆಲವು ಆಹಾರ ಸಂಯೋಜನೆಗಳನ್ನು ತಪ್ಪಿಸಿ

Health Tips: ಜ್ಞಾಪಕ ಶಕ್ತಿ ಕಡಿಮೆಯಾಗುತ್ತಿದೆಯೇ? ಆಹಾರ ಕ್ರಮದ ಬಗ್ಗೆ ಇರಲಿ ಎಚ್ಚರ

Published On - 11:52 am, Mon, 22 November 21