ಆರೋಗ್ಯಕರ ಜೀವನ ಶೈಲಿಗಾಗಿ ಈ ಕೆಲವು ಆಹಾರ ಸಂಯೋಜನೆಗಳನ್ನು ತಪ್ಪಿಸಿ

ನಿಮ್ಮ ಆಹಾರ ಪದ್ಧತಿ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ನೀವು ಸೇವಿಸುವ ಆಹಾರ ಪೌಷ್ಟಿಕಾಂಶದಿಂದ ಕೂಡಿರಲಿ ಜೊತೆಗೆ ಕೆಲವು ಆಹಾರ ಸಂಯೋಜನೆಗಳು ನಿಮ್ಮ ಆರೋಗ್ಯವನ್ನು ಹಾನಿಗೊಳಿಸುತ್ತದೆ ಎಂಬುದು ನೆನಪಿನಲ್ಲಿರಲಿ.

ಆರೋಗ್ಯಕರ ಜೀವನ ಶೈಲಿಗಾಗಿ ಈ ಕೆಲವು ಆಹಾರ ಸಂಯೋಜನೆಗಳನ್ನು ತಪ್ಪಿಸಿ
ಸಂಗ್ರಹ ಚಿತ್ರ
Follow us
TV9 Web
| Updated By: shruti hegde

Updated on: Nov 08, 2021 | 7:58 AM

ನೀವು ಸೇವಿಸುವ ಆಹಾರ ವ್ಯವಸ್ಥೆಯ ಮೇಲೆ ನಿಮ್ಮ ಆರೋಗ್ಯ ಅವಲಂಬಿಸಿರುತ್ತದೆ. ಹಾಗಿರುವಾಗ ನೀವು ಸೇವಿಸುವ ಆಹಾರದ ಬಗ್ಗೆ ಹೆಚ್ಚು ಗಮನವಹಿಸುವುದು ಮುಖ್ಯ. ನಿಮ್ಮ ಆಹಾರ ಪದ್ಧತಿ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ನೀವು ಸೇವಿಸುವ ಆಹಾರ ಪೌಷ್ಟಿಕಾಂಶದಿಂದ ಕೂಡಿರಲಿ ಜೊತೆಗೆ ಕೆಲವು ಆಹಾರ ಸಂಯೋಜನೆಗಳು ನಿಮ್ಮ ಆರೋಗ್ಯವನ್ನು ಹಾನಿಗೊಳಿಸುತ್ತದೆ ಎಂಬುದು ನೆನಪಿನಲ್ಲಿರಲಿ.

ಆಯುರ್ವೇದ ತಜ್ಞರಾದ ಡಾ. ದೀಕ್ಷಾ ಕೆಲವು ಹೊಂದಾಣಿಕೆಯಾಗದ ಆಹಾರ ಸಂಯೋಜನೆಯ ಬಗ್ಗೆ ತಿಳಿಸಿದ್ದಾರೆ. ಅವರ ಪ್ರಕಾರ, ಮೀನು ಮತ್ತು ಹಾಲು ಸೇರಿರುವ ಆಹಾರ ಸಂಯೋಜನೆಗಳು ಆರೋಗ್ಯಕ್ಕೆ ಅಷ್ಟು ಒಳ್ಳೆಯದಲ್ಲ. ಇದೇ ರೀತಿ ಕೆಲವು ಸಲಹೆಗಳನ್ನು ಇನ್ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿದ್ದಾರೆ. ಬಿಸಿ ಮಾಡಿದ ಜೇನುತುಪ್ಪದಂತಹ ಆಹಾರ ಸಂಯೋಜನೆಗಳು ದೇಹದ ಆರೋಗ್ಯದ ಮೇಲೆ ಕೆಲವು ಪರಿಣಾಮಗಳನ್ನು ಬೀರುತ್ತದೆ. ರಾತ್ರಿಯಲ್ಲಿ ಮೊಸರು ತಿನ್ನುವುದು ಸಹ ಅನಾರೋಗ್ಯಕರ ಎಂದು ತಜ್ಞರು ಹೇಳಿದ್ದಾರೆ.

ಅನಾರೋಗ್ಯಕರ ಆಹಾರ ಸಂಯೋಜನೆಗಳ ಪಟ್ಟಿ

ಹಾಲು ಮತ್ತು ಮೀನು ಎರಡು ಆಹಾರಗಳು ಹೊಂದಿಕೆಯಾಗದ ಕಾರಣ ಹಾಲನ್ನು ಮೀನಿನೊಂದಿಗೆ ಸೇವಿಸಬಾರದು. ಹಾಲು ತಂಪಾದ ಆಹಾರ ಮತ್ತು ಮೀನು ಬಿಸಿಯಾಗಿರುತ್ತದೆ. ಇವೆರಡನ್ನು ಸಂಯೋಜಿಸುವುದು ರಕ್ತವನ್ನು ವಿಟಿಯೇಟ್ ಮಾಡುತ್ತದೆ. ಜೊತೆಗೆ ಉಪ್ಪು ಮತ್ತು ಹಾಲನ್ನು ಸಹ ಒಟ್ಟಿಗೆ ಸೇವಿಸಬಾರದು ಎಂದು ತಜ್ಞರು ಸಲಹೆ ನೀಡುತ್ತಾರೆ.

ಬಾಳೆ ಹಣ್ಣು ಬಾಳೆ ಹಣ್ಣನ್ನು ಹಾಲು, ಮೊಸರು ಅಥವಾ ಮಜ್ಜಿಗೆಯೊಂದಿಗೆ ತಿನ್ನಬಾರದು. ಈ ಎರಡು ಸಂಯೋಜನೆಗಳು ಜೀರ್ಣಕ್ರಿಯೆಯನ್ನು ಕಡಿಮೆ ಮಾಡುತ್ತದೆ. ಈ ಎರಡು ಸಂಯೋಜನೆಗಳು ಶೀತ, ನೆಗಡಿ, ಕೆಮ್ಮು ಮತ್ತು ಅಲರ್ಜಿ ಸಮಸ್ಯೆಗೆ ಕಾರಣವಾಗಬಹುದು.

ಮೊಸರು ಮೊಸರನ್ನು ರಾತ್ರಿಯಲ್ಲಿ ಸೇವಿಸಬಾರದು. ಆಯುರ್ವೇದದ ಪ್ರಕಾರ ಮೊಸರನ್ನು ಸಾಮಾನ್ಯವಾಗಿ ಶರತ್ಕಾರ, ಬೇಸಿಗೆ ಮತ್ತು ವಸಂತಕಾಲದಲ್ಲಿ ತಿರಸ್ಕರಿಸಲಾಗುತ್ತದೆ.

ತುಪ್ಪ ಮತ್ತು ಜೇನು ತುಪ್ಪ ತುಪ್ಪ ಮತ್ತು ಜೇನು ತುಪ್ಪವನ್ನು ಸಮಾನ ಪ್ರಮಾಣದಲ್ಲಿ ಮಿಶ್ರಣ ಮಾಡಿ. ಏಕೆಂದರೆ ಅವು ದೇಹದಲ್ಲಿ ವಿರುದ್ಧ ಪ್ರತಿಕ್ರಿಯೆಗಳನ್ನು ಹೊಂದಿರುತ್ತವೆ. ಹಾಗಾಗಿ ಉರಿಯೂತವನ್ನು ಕಡಿಮೆ ಮಾಡಲು, ಚರ್ಮದ ಅಸ್ವಸ್ಥತೆಗಳನ್ನು ತಪ್ಪಿಸಲು ತಪ್ಪು ಆಹಾರ ಸಮಯೋಜನೆಗಳನ್ನು ಸೇವಿಸಬೇಡಿ ಎಂದು ತಜ್ಞರಾದ ದೀಕ್ಷಾ ಸಲಹೆ ನೀಡುತ್ತಾರೆ.

ಇದನ್ನೂ ಓದಿ:

Health Tips: ಸೀತಾಫಲ ಹಣ್ಣು ಆರೋಗ್ಯಕ್ಕೆ ಎಷ್ಟು ಉತ್ತಮ ಗೊತ್ತೇ?

Health Tips: ಗಂಟಲು ನೋವೇ? ಇಲ್ಲಿದೆ ಮನೆಮದ್ದು