AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕ್ಯಾನ್ಸರ್​ನಿಂದಾಗುವ ಭಾರತದ ಶೇ. 63ರಷ್ಟು ಮಹಿಳೆಯರ ಸಾವನ್ನು ತಡೆಗಟ್ಟಬಹುದು; ಅಧ್ಯಯನದಲ್ಲಿ ಏನಿದೆ?

ಭಾರತದಲ್ಲಿ ಹೆಚ್ಚಿದ ಕ್ಯಾನ್ಸರ್ ತಪಾಸಣೆ ಮತ್ತು ರೋಗನಿರ್ಣಯದ ಮೂಲಕ ಅಪಾಯಕಾರಿ ಅಂಶಗಳನ್ನು ಕಡಿಮೆ ಮಾಡಿ ಮಹಿಳೆಯರಲ್ಲಿ ಶೇ. 63ರಷ್ಟು ಕ್ಯಾನ್ಸರ್ ಸಂಬಂಧಿತ ಸಾವುಗಳನ್ನು ತಡೆಗಟ್ಟಬಹುದೆಂದು ಇತ್ತೀಚಿನ ಸಂಶೋಧನೆಯ ಮೂಲಕ ಬಹಿರಂಗಪಡಿಸಲಾಗಿದೆ.

ಕ್ಯಾನ್ಸರ್​ನಿಂದಾಗುವ ಭಾರತದ ಶೇ. 63ರಷ್ಟು ಮಹಿಳೆಯರ ಸಾವನ್ನು ತಡೆಗಟ್ಟಬಹುದು; ಅಧ್ಯಯನದಲ್ಲಿ ಏನಿದೆ?
ಸಾಂದರ್ಭಿಕ ಚಿತ್ರImage Credit source: iStock
ಸುಷ್ಮಾ ಚಕ್ರೆ
|

Updated on: Sep 29, 2023 | 1:17 PM

Share

ಭಾರತೀಯ ಮಹಿಳೆಯರಲ್ಲಿ ಕ್ಯಾನ್ಸರ್‌ನಿಂದಾಗಿ ಸಂಭವಿಸುವ ಸುಮಾರು ಶೇ. 63ರಷ್ಟು ಅಕಾಲಿಕ ಮರಣಗಳನ್ನು ತಡೆಯಲು ಸಾಧ್ಯವಿದೆ ಎಂದು ಲ್ಯಾನ್ಸೆಟ್ ಪ್ರಕಟಿಸಿರುವ ಹೊಸ ಅಧ್ಯಯನ ತಿಳಿಸಿದೆ. ಹಾಗೇ, ಸಮಯಕ್ಕೆ ಸರಿಯಾಗಿ ಕ್ಯಾನ್ಸರ್​ಗೆ ಸೂಕ್ತ ಚಿಕಿತ್ಸೆ ನೀಡುವುದರಿಂದ ಶೇ. 37ರಷ್ಟು ಜೀವಗಳನ್ನು ಉಳಿಸಬಹುದಿತ್ತು ಎಂದು ತಿಳಿಸಿದೆ.

ಲ್ಯಾನ್ಸೆಟ್ ವಿವಿಧ ವಿಭಾಗಗಳ ತಜ್ಞರನ್ನೊಳಗೊಂಡ ಆಯೋಗವೊಂದನ್ನು ರಚಿಸಿದೆ. ‘ಮಹಿಳೆಯರು, ಶಕ್ತಿ ಮತ್ತು ಕ್ಯಾನ್ಸರ್’ ಎಂಬ ಶೀರ್ಷಿಕೆಯಡಿ ಈ ಆಯೋಗ ವರದಿ ಸಲ್ಲಿಸಿದ್ದು, ಈ ವರದಿಯು ಭಾರತದಲ್ಲಿ ಮಹಿಳೆಯರ ಸುಮಾರು 6.9 ಮಿಲಿಯನ್ ಕ್ಯಾನ್ಸರ್ ಸಂಬಂಧಿತ ಸಾವುಗಳನ್ನು ತಡೆಗಟ್ಟಬಹುದಾಗಿದೆ. ಹಾಗೇ 4.03 ಮಿಲಿಯನ್ ಕ್ಯಾನ್ಸರ್ ಪ್ರಕರಣಗಳಿಗೆ ಚಿಕಿತ್ಸೆ ನೀಡಬಹುದಾಗಿದೆ ಎಂದು ಹೇಳಿದೆ.

ಭಾರತದಲ್ಲಿ ಹೆಚ್ಚಿದ ಕ್ಯಾನ್ಸರ್ ತಪಾಸಣೆ ಮತ್ತು ರೋಗನಿರ್ಣಯದ ಮೂಲಕ ಅಪಾಯಕಾರಿ ಅಂಶಗಳನ್ನು ಕಡಿಮೆ ಮಾಡಿ ಮಹಿಳೆಯರಲ್ಲಿ ಶೇ. 63ರಷ್ಟು ಕ್ಯಾನ್ಸರ್ ಸಂಬಂಧಿತ ಸಾವುಗಳನ್ನು ತಡೆಗಟ್ಟಬಹುದೆಂದು ಇತ್ತೀಚಿನ ಸಂಶೋಧನೆಯ ಮೂಲಕ ಬಹಿರಂಗಪಡಿಸಲಾಗಿದೆ.

ಇದನ್ನೂ ಓದಿ: Breastfeeding: ಮಗುವಿಗೆ 6 ತಿಂಗಳ ನಂತರ ಎದೆಹಾಲು ಕುಡಿಸುವುದನ್ನು ನಿಲ್ಲಿಸಬೇಡಿ; ಇಲ್ಲಿದೆ ಕಾರಣ

ಜಾಗತಿಕವಾಗಿ ಕ್ಯಾನ್ಸರ್ ಆರೈಕೆಯಲ್ಲಿ ಕಂಡುಬರುವ ಲಿಂಗ ಅಂತರವನ್ನು ಪರಿಹರಿಸಲು ದಿ ಲ್ಯಾನ್ಸೆಟ್ ಲಿಂಗ ಅಧ್ಯಯನಗಳು, ಮಾನವ ಹಕ್ಕುಗಳು, ಕಾನೂನು, ಅರ್ಥಶಾಸ್ತ್ರ ಮತ್ತು ಕ್ಯಾನ್ಸರ್ ಸಂಶೋಧನೆಯಂತಹ ವಿವಿಧ ಕ್ಷೇತ್ರಗಳಲ್ಲಿ ತಜ್ಞರನ್ನು ಒಳಗೊಂಡ ಆಯೋಗವನ್ನು ರಚಿಸಿದೆ. ಈ ಆಯೋಗದ ಸಹ ಅಧ್ಯಕ್ಷ ಮತ್ತು ಘಾನಾದ ನ್ಯಾಷನಲ್ ಸೆಂಟರ್ ಫಾರ್ ರೇಡಿಯೊಥೆರಪಿ, ಆಂಕೊಲಾಜಿ ಮತ್ತು ನ್ಯೂಕ್ಲಿಯರ್ ಮೆಡಿಸಿನ್‌ನ ಹಿರಿಯ ಸಲಹೆಗಾರ ವೆರ್ನಾ ವಾಂಡರ್‌ಪುಯೆ, 2020ರಲ್ಲಿ 50 ವರ್ಷಕ್ಕಿಂತ ಕಡಿಮೆ ವಯಸ್ಸಿನ 3 ಮಿಲಿಯನ್ ಮಹಿಳೆಯರಲ್ಲಿ ಮೂರನೇ ಎರಡರಷ್ಟು ಕ್ಯಾನ್ಸರ್ ರೋಗನಿರ್ಣಯ ಮಾಡಲಾಗಿದೆ ಎಂದು ಒತ್ತಿ ಹೇಳಿದ್ದಾರೆ. ಇತ್ತೀಚೆಗೆ ಕ್ಯಾನ್ಸರ್ ಮಹಿಳೆಯರ ಸಾವಿನ ಪ್ರಮುಖ ಕಾರಣವಾಗಿ ಹೊರಹೊಮ್ಮಿದೆ.

ದಿ ಲ್ಯಾನ್ಸೆಟ್‌ನಲ್ಲಿ ಪ್ರಕಟವಾದ ಒಂದು ಅಧ್ಯಯನವು 30ರಿಂದ 69 ವರ್ಷ ವಯಸ್ಸಿನ ಮಹಿಳೆಯರ ಆರೋಗ್ಯದ ಮೇಲೆ ಕೇಂದ್ರೀಕರಿಸಿದ 185 ದೇಶಗಳ ಡಾಟಾವನ್ನು ಆಧರಿಸಿದೆ. ಕ್ಯಾನ್ಸರ್ ಚಿಕಿತ್ಸೆಯಲ್ಲಿ ಸ್ತ್ರೀವಾದಿ ವಿಧಾನವನ್ನು ಅಳವಡಿಸಿಕೊಳ್ಳುವುದರಿಂದ ವರ್ಷಕ್ಕೆ ಪ್ರಪಂಚದಾದ್ಯಂತ ಸುಮಾರು 8,00,000 ಮಹಿಳೆಯರ ಜೀವಗಳನ್ನು ಉಳಿಸಬಹುದು ಎಂದು ಅದು ಸೂಚಿಸಿದೆ.

ಇದನ್ನೂ ಓದಿ: Lemon: ದಿನವೂ ನಿಂಬೆ ಹಣ್ಣು ಬಳಸಿದರೆ ಆರೋಗ್ಯಕ್ಕಿದೆ 10 ಲಾಭ

2020ರಲ್ಲಿ ಕ್ಯಾನ್ಸರ್‌ಗೆ ಬಲಿಯಾದ ಸರಿಸುಮಾರು 1.3 ಮಿಲಿಯನ್ ಮಹಿಳೆಯರನ್ನು 4 ಪ್ರಮುಖ ಅಪಾಯಕಾರಿ ಅಂಶಗಳಿಂದ ರಕ್ಷಿಸಬಹುದಿತ್ತು. ತಂಬಾಕು, ಮದ್ಯ ಸೇವನೆ, ಸ್ಥೂಲಕಾಯತೆ ಮತ್ತು ಸೋಂಕುಗಳಿಂದ ಈ ಮಹಿಳೆಯರು ಕ್ಯಾನ್ಸರ್​ಗೆ ಬಲಿಯಾಗಿದ್ದಾರೆ. ಸಾಮಾನ್ಯವಾಗಿ ಮಹಿಳೆಯರಲ್ಲಿ ಕಂಡುಬರುವ ಕ್ಯಾನ್ಸರ್ ಕೇವಲ ಸ್ತನ ಕ್ಯಾನ್ಸರ್ ಮತ್ತು ಗರ್ಭಕಂಠದ ಕ್ಯಾನ್ಸರ್‌ನಂತಹ ಸಮಸ್ಯೆಗಳಿಗೆ ಸೀಮಿತವಾಗಿವೆ. ಈ ಎರಡು ಕ್ಯಾನ್ಸರ್​ಗಳು ಮಹಿಳಾ ಕ್ಯಾನ್ಸರ್ ರೋಗಗಳೆಂದು ಬಿಂಬಿತವಾಗಿವೆ. ಆದರೆ, ಆಘಾತಕಾರಿ ಸಂಗತಿಯೆಂದರೆ, ಪ್ರತಿ ವರ್ಷ 70 ವರ್ಷಕ್ಕಿಂತ ಕಡಿಮೆ ವಯಸ್ಸಿನ ಸುಮಾರು 3,00,000 ಮಹಿಳೆಯರು ಶ್ವಾಸಕೋಶದ ಕ್ಯಾನ್ಸರ್‌ನಿಂದ ಸಾಯುತ್ತಿದ್ದಾರೆ. 1,60,000 ಮಹಿಳೆಯರು ಕೊಲೊರೆಕ್ಟಲ್ ಕ್ಯಾನ್ಸರ್‌ನಿಂದ ಸಾಯುತ್ತಾರೆ.

ಮಹಿಳೆಯರಲ್ಲಿ ಸ್ತನ ಮತ್ತು ಗರ್ಭಕಂಠದ ಕ್ಯಾನ್ಸರ್ ಸಂಬಂಧಿತ ಸಾವುಗಳನ್ನು ಸೂಕ್ತ ಚಿಕಿತ್ಸೆಯ ಮೂಲಕ ತಡೆಗಟ್ಟಲು ಸಾಧ್ಯವಿದೆ ಎಂದು ಕ್ಯಾನ್ಸರ್ ಸಂಶೋಧನೆಯ ಏಜೆನ್ಸಿಯು ವಿವರಿಸಿದೆ. ಇತರ ರೀತಿಯ ಕ್ಯಾನ್ಸರ್‌ಗಳೊಂದಿಗೆ ಹೆಣಗಾಡುತ್ತಿರುವ ಮಹಿಳೆಯರ ಪರಿಸ್ಥಿತಿಯು ಭೀಕರವಾಗಿದೆ ಎಂದು ಅದು ಹೇಳಿದೆ.

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆಶಿ ತಂಡದ ಡಿನ್ನರ್​​ ಮೀಟಿಂಗ್​​ ಬಗ್ಗೆ ಸೋಮಶೇಖರ್​​ ಬಿಗ್​​ ಅಪ್ಡೇಟ್​​
ಡಿಕೆಶಿ ತಂಡದ ಡಿನ್ನರ್​​ ಮೀಟಿಂಗ್​​ ಬಗ್ಗೆ ಸೋಮಶೇಖರ್​​ ಬಿಗ್​​ ಅಪ್ಡೇಟ್​​
ಕಾಂಗ್ರೆಸ್​ನ ನೂರಕ್ಕೂ ಹೆಚ್ಚು ಶಾಸಕರು ಡಿಕೆಶಿ ತೆಕ್ಕೆಗೆ?
ಕಾಂಗ್ರೆಸ್​ನ ನೂರಕ್ಕೂ ಹೆಚ್ಚು ಶಾಸಕರು ಡಿಕೆಶಿ ತೆಕ್ಕೆಗೆ?
ಕಷ್ಟಪಟ್ಟಿದ್ದ ಡಿಕೆಶಿಗೆ ಕೊನೆಗೂ ಫಲ, ಅಧಿವೇಶನದ ಬಳಿಕ ಶುಭಸುದ್ದಿ?
ಕಷ್ಟಪಟ್ಟಿದ್ದ ಡಿಕೆಶಿಗೆ ಕೊನೆಗೂ ಫಲ, ಅಧಿವೇಶನದ ಬಳಿಕ ಶುಭಸುದ್ದಿ?