
ಬೆಂಗಳೂರು, ಏಪ್ರಿಲ್ 30: ಇತ್ತಿಚೆಗೆ ಕಳಪೆ ಗುಣಮಟ್ಟದ ಆಹಾರ (Food) ಪದಾರ್ಥಗಳಿಂದ ಅನೇಕ ಆರೋಗ್ಯದ (Health) ಸಮಸ್ಯೆಗಳು ಕಾಡುತ್ತಿವೆ. ಈ ಬೆನ್ನಲ್ಲೇ ಇದೀಗ ದಿನನಿತ್ಯ ಸೇವಿಸುವ ಬಿಳಿ ಪಾಲಿಶ್ ಅಕ್ಕಿ (Polished Rice) ಕೂಡ ಜೀವಕ್ಕೆ ಕುತ್ತು ತರುತ್ತದೆ ಎಂಬ ಆತಂಕಕಾರಿ ವಿಚಾರ ಇದೀಗ ಬೆಳಕಿಗೆ ಬಂದಿದೆ.
ಇತ್ತೀಚಿಗೆ ಪುಟ್ಟ ಮಕ್ಕಳಿಗೂ ಕೂಡ ಹೃದಯ ಸಂಬಂಧಿ ಖಾಯಿಲೆಗಳು ಬರುತ್ತಿವೆ. ಇದಕ್ಕೆ ಕಾರಣವೇನು ಎಂಬುವುದು ಜಯದೇವ ಹೃದ್ರೋಗ ಸಂಸ್ಥೆಯ ವೈದ್ಯರು ಬಹಿರಂಗಪಡಿಸಿರುವ ವರದಿಯಲ್ಲಿ ಅಡಕವಾಗಿದೆ. ಸುಮಾರು 400 ಮಕ್ಕಳನ್ನು ಪರೀಕ್ಷೆಗೆ ಒಳಪಡಿಸಿದಾಗ ಗೊತ್ತಾಗಿದ್ದು, ಗರ್ಭಿಣಿಯರು ಹಾಗೂ ಮಕ್ಕಳು ಪಾಲಿಶ್ ಮಾಡಿರುವ ಬಿಳಿ ಅಕ್ಕಿಯನ್ನು ಸೇವಿಸಿರುವುದರಿಂದ ಹೃದಯ ಸಂಬಂಧಿ ಸಮಸ್ಯೆಗೆ ಒಳಗಾಗುತ್ತಿದ್ದಾರೆ ಎಂಬ ಆತಂಕಕಾರಿ ವಿಚಾರ ಬಹಿರಂಗಗೊಂಡಿದೆ.
ಬಿಳಿ ಅಕ್ಕಿ ಸೇವನೆಯಿಂದ ಗರ್ಭಿಣಿಯರಲ್ಲಿ ಮಧುಮೇಹ, ಹಾಗೂ ಒಬೆಸಿಟಿ ಹೆಚ್ಚಾಗುತ್ತಿದ್ದು, ಗರ್ಭಪಾತದ ಸಮಯದಲ್ಲಿ ಸಮಸ್ಯೆ ಉಂಟು ಮಾಡುವುದರ ಜೊತೆಗೆ, ಮಕ್ಕಳ ಮೇಲೂ ಹೆಚ್ಚು ಪರಿಣಾಮ ಬೀರುತ್ತಿದೆ. ಅಕ್ಕಿ ಬಳಕೆ ಕಡಿಮೆ ಮಾಡಿ ಅಂತ ಪ್ರಸೂತಿ ತಜ್ಞರು ಹೇಳುತ್ತಿದ್ದು, ಪಾಲಿಶ್ ಮಾಡುವ ಅಕ್ಕಿಯಲ್ಲಿ ಪೋಷಕಾಂಶ ಇರುವುದಿಲ್ಲ. ಇದರಿಂದ ಕೊಬ್ಬು ಹೆಚ್ಚಳವಾಗುತ್ತದೆ. ಬಿಳಿ ಅಕ್ಕಿಯ ಬದಲು ಕೆಂಪು ಅಕ್ಕಿ ಬಳಸಿದರೆ ಉತ್ತಮ ಎಂದು ಆಹಾರ ತಜ್ಞ ಕೀರ್ತಿ ಹಿರಿಸಾವೆ ಹೇಳಿದ್ದಾರೆ.
ಇದನ್ನೂ ಓದಿ: ಕಾಂತಿಯುತ ಮೈ ಬಣ್ಣ ನಿಮ್ಮದಾಗಬೇಕಾ? ಈ ಆಯುರ್ವೇದದ ಲೇಪನ ಬಳಸಿ
ಒಟ್ಟಿನಲ್ಲಿ ಪಾಲಿಶ್ ಬಿಳಿ ಅಕ್ಕಿಯು ಈಗ ಆರೋಗ್ಯಕ್ಕೆ ಯೋಗ್ಯವಲ್ಲ ಎಂಬ ಅಂಶ ತಿಳಿದು ಬಂದಿದೆ. ಈ ಅಕ್ಕಿ ಮಕ್ಕಳ ಹೃದಯದ ಮೇಲೆ ಸಾಕಷ್ಟು ದುಷ್ಪರಿಣಾಮ ಬೀರುತ್ತಿದೆ. ಈ ಹಿನ್ನೆಲೆಯಲ್ಲಿ ಪೋಷಕರು ಕೊಂಚ ಪಾಲಿಶ್ ಬಿಳಿ ಅಕ್ಕಿಯನ್ನು ಕಡಿಮೆ ಮಾಡಿ, ಕೆಂಪು ಅಕ್ಕಿ ಬಳಸಿದರೆ ಉತ್ತಮ ಎಂಬುವುದು ವೈದ್ಯರ ಸಲಹೆಯಾಗಿದೆ.
Published On - 8:48 pm, Wed, 30 April 25