ಬದುಕಿನಲ್ಲಿ ನಡೆಯುವ ಆಘಾತಕಾರಿ ಘಟನೆಯು ವ್ಯಕ್ತಿಯು ಪೋಸ್ಟ್ ಟ್ರಾಮಾಟಿಕ್ ಸ್ಟ್ರೆಸ್ ಡಿಸಾರ್ಡರ್ (Post traumatic stress disorder) ಅಥವಾ ಪಿಟಿಎಸ್ಡಿಗೆ ಕಾರಣವಾಗಬಹುದು. ಇದು ಒಂದು ರೀತಿಯ ಮಾನಸಿಕ ಆರೋಗ್ಯ ಸ್ಥಿತಿಯಾಗಿದ್ದು, ಆತಂಕ, ಕೆಟ್ಟ ಆಲೋಚನೆಗಳು, ದುಃಸ್ವಪ್ನಗಳು ಮತ್ತು ಹಿಂದಿನ ಕಹಿ ಘಟನೆಗಳನ್ನು ಮತ್ತೆ ಮತ್ತೆ ನೆನಪಿಸುತ್ತದೆ. ಇದಕ್ಕೆ ಚಿಕಿತ್ಸೆ ಮತ್ತು ಔಷಧಿಗಳನ್ನು ಬಳಸಲಾಗುತ್ತದೆಯಾದರೂ, ಯೋಗ ಮತ್ತು ಫಿಸಿಯೋಥೆರಪಿಯಂತಹ ಪೂರಕ ವಿಧಾನಗಳು ಜನರಿಗೆ ತಮ್ಮ ರೋಗಲಕ್ಷಣಗಳನ್ನು ನಿರ್ವಹಣೆ ಮಾಡಿಕೊಳ್ಳುವಲ್ಲಿ ಸಹಾಯ ಮಾಡಲಿದೆ ಎಂಬ ಭರವಸೆಯನ್ನು ಆರೋಗ್ಯ ತಜ್ಞರು ನೀಡಿದ್ದಾರೆ.
ಎಚ್ಟಿ ಲೈಫ್ ಸ್ಟೈಲ್ನ ಸ್ಥಾಪಕ ಮತ್ತು ನಿರ್ದೇಶಕ ಡಾ. ಅಮಿತ್ ದೇಶಪಾಂಡೆ ಅವರು ಎಚ್ ಟಿ ಲೈಫ್ ಸ್ಟೈಲ್ಗೆ ನೀಡಿದ ಸಂದರ್ಶನದಲ್ಲಿ, “ಪೋಸ್ಟ್ ಟ್ರಾಮಾಟಿಕ್ ಸ್ಟ್ರೆಸ್ ಡಿಸಾರ್ಡರ್ (ಪಿಟಿಎಸ್ ಡಿ) ನಮ್ಮನ್ನು ದುರ್ಬಲಗೊಳಿಸುವ ಮಾನಸಿಕ ಆರೋಗ್ಯ ಸ್ಥಿತಿಯಾಗಿದ್ದು, ಆಘಾತಕಾರಿ ಘಟನೆಯನ್ನು ಅನುಭವಿಸಿದ ನಂತರ ಅಥವಾ ಅದಕ್ಕೆ ಸಾಕ್ಷಿಯಾದ ನಂತರ ಸಂಭವಿಸಬಹುದು. ಆದರೆ ಅದೃಷ್ಟವಶಾತ್, ಯೋಗ ಮತ್ತು ಫಿಸಿಯೋಥೆರಪಿ ಪಿಟಿಎಸ್ಡಿ ರೋಗಲಕ್ಷಣಗಳನ್ನು ಗುಣಪಡಿಸಲು ಮತ್ತು ಸರಿಯಾಗಿ ನಿರ್ವಹಣೆ ಮಾಡುವ ಭರವಸೆಯ ಮಾರ್ಗಗಳನ್ನು ನೀಡುತ್ತದೆ. ದೈಹಿಕ ಭಂಗಿಗಳು, ಉಸಿರಾಟದ ವ್ಯಾಯಾಮಗಳು ಮತ್ತು ಧ್ಯಾನ ಮಾಡುವ ಮೂಲಕ ಯೋಗವು ಸಮಗ್ರ ಚಿಕಿತ್ಸೆ ಯನ್ನು ಒದಗಿಸುತ್ತದೆ. ಜೊತೆಗೆ ನರಮಂಡಲವನ್ನು ನಿಯಂತ್ರಿಸಲು ಮತ್ತು ಆತಂಕ ಹಾಗೂ ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಇದನ್ನೂ ಓದಿ:ಸ್ಟಾರ್ ಹಣ್ಣಿನಿಂದ ಆರೋಗ್ಯ ವೃದ್ಧಿ
ಆಳವಾದ ಉಸಿರಾಟವು ಶಾಂತತೆ ಮತ್ತು ಸ್ವಯಂ ಜಾಗೃತಿಯನ್ನು ಬೆಳೆಸುತ್ತದೆ, ಭಾವನಾತ್ಮಕವಾಗಿ ನಿಮ್ಮನ್ನು ಸದೃಢರನ್ನಾಗಿಸುತ್ತದೆ. ಮತ್ತೊಂದೆಡೆ, ಫಿಸಿಯೋಥೆರಪಿಯ ಉದ್ದೇಶಿತ ವ್ಯಾಯಾಮಗಳು ಮತ್ತು ಕೆಲವು ಚಿಕಿತ್ಸೆಯ ಮೂಲಕ ಮತ್ತೆ ಪುನಃ ನಿಮ್ಮ ದಿನನಿತ್ಯದ ಶೈಲಿಗೆ ವಾಪಸಾಗಬಹುದು. ಇದು ಉದ್ವೇಗ ಮತ್ತು ನೋವಿನಂತಹ ಆಘಾತಕ್ಕೆ ಸಂಬಂಧಿಸಿದ ದೈಹಿಕ ರೋಗಲಕ್ಷಣಗಳನ್ನು ಗುಣಪಡಿಸಬಹುದು. ಹೆಚ್ಚುವರಿಯಾಗಿ, ಯೋಗ ಮತ್ತು ಫಿಸಿಯೋಥೆರಪಿ ಎರಡೂ ಸುರಕ್ಷಿತ ಮಾರ್ಗವಾಗಿದ್ದು, ಯಾವುದೇ ರೀತಿಯಯ ಅಡ್ಡಪರಿಣಾಮಗಳಿರುವುದಿಲ್ಲ. ಜೊತೆಗೆ ಸಂಪರ್ಕದ ಪ್ರಜ್ಞೆಯನ್ನು ಬೆಳೆಸುತ್ತದೆ ಮತ್ತು ಚೇತರಿಕೆ ಪ್ರಕ್ರಿಯೆಗೆ ಸಹಾಯ ಮಾಡುತ್ತದೆ.
ಬೆಂಗಳೂರಿನ ಜಿಂದಾಲ್ ನೇಚರ್ಕ್ಯೂರ್ ಇನ್ಸ್ಟಿಟ್ಯೂಟ್ನ ಮುಖ್ಯ ಯೋಗ ಅಧಿಕಾರಿ ಡಾ. ರಾಜೀವ್ ರಾಜೇಶ್ ಈ ಬಗ್ಗೆ ಕೆಲವು ಮಾಹಿತಿಗಳನ್ನು ನೀಡಿದ್ದು “ಯೋಗವು ಮನಸ್ಸು ಮತ್ತು ದೇಹದ ಶಿಸ್ತನ್ನು ಸರಿಯಾದ ರೂಪಕ್ಕೆ ತರುತ್ತವೆ. ಯೋಗದ ವಿವಿಧ ದೈಹಿಕ ಭಂಗಿಗಳು, ಉಸಿರಾಟದ ತಂತ್ರಗಳಿಂದ ಮತ್ತು ಧ್ಯಾನ ಮಾಡುವುದರಿಂದ, ಆತಂಕ ಕಡಿಮೆಯಾಗುತ್ತದೆ, ಜೊತೆಗೆ ನಿದ್ರೆ ಹೆಚ್ಚಿಸುವಲ್ಲಿ ಮತ್ತು ಆರೋಗ್ಯವನ್ನು ಕಾಪಾಡಿಕೊಳ್ಳುವಲ್ಲಿ ಇದು ಯಶಸ್ವಿಯಾಗಿದೆ ಎಂದು ಅಧ್ಯಯನಗಳಿಂದ ತಿಳಿದು ಬಂದಿದೆ. ಅದಲ್ಲದೆ ಇವು ಪಿಟಿಎಸ್ಡಿ ಹೊಂದಿರುವ ಜನರಿಗೆ ತಮ್ಮ ದೇಹದೊಂದಿಗೆ ಮರುಸಂಪರ್ಕಿಸಲು ಸಹಾಯ ಮಾಡುತ್ತದೆ. ಯೋಗದ ದೈಹಿಕ ಆಸನಗಳು ಮತ್ತು ಉಸಿರಾಟದ ತಂತ್ರಗಾರಿಕೆ, ನರಮಂಡಲವನ್ನು ನಿಯಂತ್ರಿಸಲು, ವಿಶ್ರಾಂತಿಯನ್ನು ಹೆಚ್ಚಿಸಲು ಕೆಲಸ ಮಾಡುತ್ತವೆ. ಹೆಚ್ಚುವರಿಯಾಗಿ, ಕೆಟ್ಟ ಆಲೋಚನೆಗಳನ್ನು ಕಡಿಮೆ ಮಾಡಲು ಮತ್ತು ಸ್ವಯಂ ಜಾಗೃತಿಯನ್ನು ಮೂಡಿಸಲು ಸಹಾಯ ಮಾಡುತ್ತದೆ ಎಂದಿದ್ದಾರೆ.
ಮತ್ತೊಂದೆಡೆ, ಫಿಸಿಯೋಥೆರಪಿಯು ಪಿಟಿಎಸ್ಡಿ ಹೊಂದಿರುವ ಜನರಿಗೆ ದೈಹಿಕ ರೋಗಲಕ್ಷಣಗಳು, ದೀರ್ಘಕಾಲದ ನೋವು ಮತ್ತು ಆಘಾತದ ಇತರ ದೈಹಿಕ ಪರಿಣಾಮಗಳನ್ನು ಎದುರಿಸಲು ಸಹಾಯ ಮಾಡುತ್ತದೆ. ಫಿಸಿಯೋಥೆರಪಿ ಪರೋಕ್ಷವಾಗಿ ಮಾನಸಿಕ ತೊಂದರೆಯನ್ನು ಕಡಿಮೆ ಮಾಡುತ್ತದೆ ಮತ್ತು ದೈಹಿಕ ರೋಗಲಕ್ಷಣಗಳನ್ನು ಪರಿಹರಿಸುವ ಮೂಲಕ ಯೋಗಕ್ಷೇಮವನ್ನು ಸುಧಾರಿಸುತ್ತದೆ. ಯೋಗ ಮತ್ತು ಫಿಸಿಯೋಥೆರಪಿ ಎರಡೂ ಗುಣಪಡಿಸುವಿಕೆಗೆ ಸಮಗ್ರ ವಿಧಾನಗಳನ್ನು ಒದಗಿಸುತ್ತವೆ. ಈ ವಿಧಾನಗಳು ಎಲ್ಲರಿಗೂ ಸೂಕ್ತವಲ್ಲದಿರಬಹುದು ಹಾಗಾಗಿ ತರಬೇತಿ ಪಡೆದ ತಜ್ಞರು ನೀಡಿದ ಸಲಹೆಗಳನ್ನು ಮಾತ್ರ ಮಾಡಿ. ಆದರೆ ಪಿಟಿಎಸ್ಡಿ ಚಿಕಿತ್ಸಾ ಯೋಜನೆಗಳಲ್ಲಿ ಯೋಗ ಮತ್ತು ದೈಹಿಕ ಚಿಕಿತ್ಸೆಯನ್ನು ಸೇರಿಸುವುದರಿಂದ ರೋಗಿಗಳಿಗೆ ಅವರ ರೋಗಲಕ್ಷಣಗಳನ್ನು ನಿರ್ವಹಣೆ ಮಾಡಲು ಮತ್ತು ಅವರ ಜೀವನದ ಗುಣಮಟ್ಟವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ವಿನಃ ಯಾವುದೇ ತೊಂದರೆಯಿಲ್ಲ ಎಂದಿದ್ದಾರೆ.
ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: