ಪ್ರಿಯಾಂಕಾ ಚೋಪ್ರಾ ಮೈದುನನಿಗೆ ಕ್ಯಾನ್ಸರ್​: ಚರ್ಮದ ಕ್ಯಾನ್ಸರ್ ಬಗ್ಗೆ ಅಭಿಮಾನಿಗಳಿಗೆ ಎಚ್ಚರಿಕೆ ನೀಡಿದ ಕೆವಿನ್​

|

Updated on: Jun 13, 2024 | 11:11 AM

ಚರ್ಮದ ಮೇಲೆ ಗುಳ್ಳೆ, ಮಚ್ಚೆ ಅಥವಾ ಚರ್ಮದ ಬಣ್ಣದಲ್ಲಿ ಬದಲಾವಣೆ ಈ ಎಲ್ಲ ಲಕ್ಷಣ ಕ್ಯಾನ್ಸರ್​ ಅಲ್ಲದಿದ್ದರೂ ಕೂಡ ಇವುಗಳನ್ನು ನಿರ್ಲಕ್ಷ್ಯ ಮಾಡುವುದು ಒಳ್ಳೆಯದಲ್ಲ. ಏಕೆಂದರೆ ಇಂತಹ ಲಕ್ಷಣಗಳು ಯಾವುದೇ ಸಂದರ್ಭದಲ್ಲಿ ಕ್ಯಾನ್ಸರ್ ಸ್ವರೂಪಕ್ಕೆ ತಿರುಗಬಹುದು ಎಂದು ಗಾಯಕ ಕೆವಿನ್ ಹೇಳಿದ್ದು, ಸದ್ಯ ವಿಡಿಯೋ ಎಲ್ಲೆಡೆ ವೈರಲ್​ ಆಗಿದೆ.

ಪ್ರಿಯಾಂಕಾ ಚೋಪ್ರಾ ಮೈದುನನಿಗೆ ಕ್ಯಾನ್ಸರ್​: ಚರ್ಮದ ಕ್ಯಾನ್ಸರ್ ಬಗ್ಗೆ ಅಭಿಮಾನಿಗಳಿಗೆ ಎಚ್ಚರಿಕೆ ನೀಡಿದ ಕೆವಿನ್​
ಪ್ರಿಯಾಂಕಾ ಚೋಪ್ರಾ ಮತ್ತು ಕೇವಿನ್​ ಜೋನಸ್
Follow us on

ನಟಿ ಪ್ರಿಯಾಂಕಾ ಚೋಪ್ರಾ ಅವರ ಮೈದುನ ಅಂದರೆ ಪತಿ ನಿಕ್​ ಜೋನಸ್​ ಅವರ ಸಹೋದರ ಕೆವಿನ್​ ಜೋನಸ್​ ಇತ್ತೀಚಿಗಷ್ಟೇ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಈ ಮೂಲಕ ತಾನು ಚರ್ಮದ ಕ್ಯಾನ್ಸರ್​ನಿಂದ ಬಳಲುತ್ತಿದ್ದು,ಇತ್ತೀಚಿಗಷ್ಟೇ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದೆ ಎಂದು ಬಹಿರಂಗಪಡಿಸಿದ್ದಾರೆ. ಇದಲ್ಲದೇ ಚರ್ಮದ ಕ್ಯಾನ್ಸರ್​​ನ ಲಕ್ಷಣಗಳ ಬಗ್ಗೆ ತಮ್ಮ ಅಭಿಮಾನಿಗಳಿಗೆ ಎಚ್ಚರಿಕೆ ನೀಡಿದ್ದಾರೆ. ಆದ್ದರಿಂದ ಚರ್ಮದ ಕ್ಯಾನ್ಸರ್ ಎಂದರೇನು? ಇದರ ಆರಂಭಿಕ ಲಕ್ಷಣಗಳಾವುವು? ಎಂಬ ಸಂಪೂರ್ಣ ಮಾಹಿತಿಯನ್ನು ಇಲ್ಲಿ ತಿಳಿದುಕೊಳ್ಳಿ.

ಹೆಸರಾಂತ ಪಾಪ್-ರಾಕ್ ಬ್ಯಾಂಡ್ ಜೋನಾಸ್ ಬ್ರದರ್ಸ್‌ನ ಪ್ರಮುಖ ಗಿಟಾರ್ ವಾದಕ ಕೆವಿನ್ ಜೋನಾಸ್. ಇದೀಗ ಕೆವಿನ್ ತಮ್ಮ ಅಧಿಕೃತ ಇನ್ಸ್ಟಾಗ್ರಾಮ್​​ ಖಾತೆ(@kevinjonas) ತನ್ನ ಚರ್ಮದ ಕ್ಯಾನ್ಸರ್​​ ಬಗ್ಗೆ ಪೋಸ್ಟ್​​​​​ ಒಂದನ್ನು ಹಂಚಿಕೊಂಡಿದ್ದು, ಸದ್ಯ ಈ ವಿಡಿಯೋ ಎಲ್ಲೆಡೆ ವೈರಲ್​ ಆಗಿದೆ. ವಿಡಿಯೋ ಹಂಚಿಕೊಂಡ ಒಂದೇ ದಿನದಲ್ಲಿ 10 ಲಕ್ಷಕ್ಕೂ ಅಧಿಕ ವೀಕ್ಷಣೆಯನ್ನು ಪಡೆದುಕೊಂಡಿದೆ. ವಿಡಿಯೋದಲ್ಲಿ ಕೆವಿನ್​​ ತನಗೆ ಚರ್ಮದ ಕ್ಯಾನ್ಸರ್​​ ಇದ್ದ ಬಗ್ಗೆ ಹೇಳಿಕೊಂಡಿದ್ದು, ಶಸ್ತ್ರಚಿಕಿತ್ಸೆಯ ಬಳಿಕ ಸಂಪೂರ್ಣವಾಗಿ ಗುಣಮುಖವಾಗಿದ್ದೇನೆ ಎಂದು ಹೇಳಿಕೊಂಡಿದ್ದಾರೆ. ಇದಲ್ಲದೇ ಚರ್ಮದ ಕ್ಯಾನ್ಸರ್​ನ ಲಕ್ಷಣಗಳ ಬಗ್ಗೆ ನಿರ್ಲಕ್ಷ್ಯಬೇಡ ಎಂದು ಅಭಿಮಾನಿಗಳಿಗೆ ಎಚ್ಚರಿಕೆ ನೀಡಿದ್ದಾರೆ.

ವಿಡಿಯೋ ಇಲ್ಲಿದೆ ನೋಡಿ:

ಏನಿದು ಚರ್ಮದ ಕ್ಯಾನ್ಸರ್​?

ಚರ್ಮದ ಮೇಲೆ ಗುಳ್ಳೆ, ಮಚ್ಚೆ ಅಥವಾ ಚರ್ಮದ ಬಣ್ಣದಲ್ಲಿ ಬದಲಾವಣೆ ಎಲ್ಲವೂ ಕ್ಯಾನ್ಸರ್​ ಅಲ್ಲದಿದ್ದರೂ ಕೂಡ ಈ ಲಕ್ಷಣಗಳನ್ನು ನಿರ್ಲಕ್ಷ್ಯ ಮಾಡುವುದು ಒಳ್ಳೆಯದಲ್ಲ. ಏಕೆಂದರೆ ಇಂತಹ ಲಕ್ಷಣಗಳು ಯಾವುದೇ ಸಂದರ್ಭದಲ್ಲಿ ಕ್ಯಾನ್ಸರ್ ಸ್ವರೂಪಕ್ಕೆ ಬದಲಾಗಬಹುದು ಎಂದು ಗಾಯಕ ಕೆವಿನ್ ಹೇಳಿದ್ದು, ಸದ್ಯ ನಾನು ಶಸ್ತ್ರಚಿಕಿತ್ಸೆಯ ಮೊರೆ ಹೋಗಿದ್ದೇನೆ, ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದ್ದು ಸದ್ಯ ಹುಷಾರಿಗಿದ್ದೇನೆ ಎಂದಿದ್ದಾರೆ.

ಚರ್ಮದ ಕ್ಯಾನ್ಸರ್​​ನ ಆರಂಭಿಕ ಚಿಹ್ನೆ:

ವಿಶೇಷವಾಗಿ 30 ವರ್ಷ ವಯಸ್ಸಿನ ನಂತರ ಮಹಿಳೆಯರಿಗಿಂತ ಹೆಚ್ಚಾಗಿ ಪುರುಷರಲ್ಲಿ ಚರ್ಮದ ಮೇಲೆ ಹೊಸ ಮಚ್ಚೆಯಂತಹದ್ದು ಬೆಳವಣಿಗೆಯಾದರೆ ಅದು ಚರ್ಮದ ಕ್ಯಾನ್ಸರ್ನ ಚಿಹ್ನೆಯಾಗಿರಬಹುದು. ಇದು ಮೆಲನೋಮಾದ ಹೆಚ್ಚಿನ ಅಪಾಯದೊಂದಿಗೆ ಸಂಬಂಧಿಸಿದೆ.  ಮೆಲನೋಮವು ಚರ್ಮದ ಕ್ಯಾನ್ಸರ್ ನ ಒಂದು ವಿಧ. ಆರಂಭಿಕ ಹಂತದಲ್ಲಿಯೇ ಈ ರೋಗವನ್ನು ಪತ್ತೆ ಹಚ್ಚಿದರೆ, ಸುಲಭವಾಗಿ ಚಿಕಿತ್ಸೆ ಪಡೆದು ಚರ್ಮದ ಕ್ಯಾನ್ಸರ್ ತಡೆಗಟ್ಟಬಹುದು ಎಂದು ಆರೋಗ್ಯ ತಜ್ಞರು ಎಚ್ಚರಿಸುತ್ತಾರೆ. ಅಮೇರಿಕನ್ ಅಕಾಡೆಮಿ ಆಫ್ ಡರ್ಮಟಾಲಜಿ ಪ್ರಕಾರ, ಗಾತ್ರ, ಆಕಾರ ಅಥವಾ ಬಣ್ಣದಲ್ಲಿ ಬದಲಾಗುವ ಮಚ್ಚೆ ಚರ್ಮದ ಕ್ಯಾನ್ಸರ್ನ ರೂಪವಾದ ಮೆಲನೋಮಾದ ಸಂಕೇತವಾಗಿದೆ.

ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

Published On - 11:10 am, Thu, 13 June 24