ಬೇಗನೆ ಎದ್ದೇಳುವುದಕ್ಕಿಂತ ತಡವಾಗಿ ಎಚ್ಚರಗೊಳ್ಳುವುದು ಉತ್ತಮವೇ? ವೈದ್ಯರು ಹೇಳುವುದೇನು?

ನಿದ್ರೆ ಸರಿಯಾಗಿ ಮಾಡುವ ವ್ಯಕ್ತಿ ಆರೋಗ್ಯವಾಗಿರುತ್ತಾನೆ. ಉತ್ತಮ ನಿದ್ರೆ ನಿಮ್ಮನ್ನು ಮುಂದಿನ ದಿನಕ್ಕೆ ಸಿದ್ಧವಾಗಿಸುತ್ತದೆ. ಹಾಗಾಗಿಯೇ ಹಿಂದಿನವರು ನಮಗೆ ನಿದ್ರೆ ಸರಿಯಾಗಿ ಮಾಡಿ ಎಂದು ಉಪದೇಶಿಸುತ್ತಿದ್ದರು. ಅದರಲ್ಲಿಯೂ ನಮ್ಮ ದೇಶದಲ್ಲಿ, ಮಕ್ಕಳು ಬೇಗನೆ ಮಲಗಿ ಬೇಗನೆ ಏಳುವ ಅಭ್ಯಾಸವನ್ನು ರೂಢಿಸಿಕೊಳ್ಳಲು ಪೋಷಕರು ತಮ್ಮ ಕೈಲಾದಷ್ಟು ಪ್ರಯತ್ನಿಸುತ್ತಾರೆ. ಆದರೆ ಇಲ್ಲೊಂದು ಸಂಶೋಧನೆ ಇದನ್ನು ಅಲ್ಲಗಳೆದಿದೆ. ಲಂಡನ್ನ ಇಂಪೀರಿಯಲ್ ಕಾಲೇಜಿನ ಹೊಸ ಸಂಶೋಧನೆಯು ಮುಂಜಾನೆ ಎದ್ದೇಳುವುದಕ್ಕಿಂತ ತಡವಾಗಿ ಎಚ್ಚರಗೊಳ್ಳುವುದು ನಿಮಗೆ ಹೆಚ್ಚು ಒಳ್ಳೆಯದು ಎಂದು ಹೇಳಿದೆ. ಹಾಗಾದರೆ ಈ ಅಧ್ಯಯನ ಹೇಳುವುದೇನು? ಇಲ್ಲಿದೆ ಮಾಹಿತಿ.

ಬೇಗನೆ ಎದ್ದೇಳುವುದಕ್ಕಿಂತ ತಡವಾಗಿ ಎಚ್ಚರಗೊಳ್ಳುವುದು ಉತ್ತಮವೇ? ವೈದ್ಯರು ಹೇಳುವುದೇನು?
Follow us
| Updated By: ಅಕ್ಷಯ್​ ಪಲ್ಲಮಜಲು​​

Updated on: Oct 14, 2024 | 6:45 PM

ನಿದ್ರೆ ಎಲ್ಲಾ ರೋಗಕ್ಕೂ ಮೊದಲ ಔಷಧ ಎಂದು ತಜ್ಞರು ಹೇಳುತ್ತಾರೆ. ಏಕೆಂದರೆ ನಿದ್ರೆ ಸರಿಯಾಗಿ ಮಾಡುವ ವ್ಯಕ್ತಿ ಆರೋಗ್ಯವಾಗಿರುತ್ತಾನೆ. ಉತ್ತಮ ನಿದ್ರೆ ನಿಮ್ಮನ್ನು ಮುಂದಿನ ದಿನಕ್ಕೆ ಸಿದ್ಧವಾಗಿಸುತ್ತದೆ. ಹಾಗಾಗಿಯೇ ಹಿಂದಿನವರು ನಮಗೆ ನಿದ್ರೆ ಸರಿಯಾಗಿ ಮಾಡಿ ಎಂದು ಉಪದೇಶಿಸುತ್ತಿದ್ದರು. ಅದರಲ್ಲಿಯೂ ನಮ್ಮ ದೇಶದಲ್ಲಿ, ಮಕ್ಕಳು ಬೇಗನೆ ಮಲಗಿ ಬೇಗನೆ ಏಳುವ ಅಭ್ಯಾಸವನ್ನು ರೂಢಿಸಿಕೊಳ್ಳಲು ಪೋಷಕರು ತಮ್ಮ ಕೈಲಾದಷ್ಟು ಪ್ರಯತ್ನಿಸುತ್ತಾರೆ. ಆದರೆ ಇಲ್ಲೊಂದು ಸಂಶೋಧನೆ ಇದನ್ನು ಅಲ್ಲಗಳೆದಿದೆ. ಲಂಡನ್ನ ಇಂಪೀರಿಯಲ್ ಕಾಲೇಜಿನ ಹೊಸ ಸಂಶೋಧನೆಯು ಮುಂಜಾನೆ ಎದ್ದೇಳುವುದಕ್ಕಿಂತ ತಡವಾಗಿ ಎಚ್ಚರಗೊಳ್ಳುವುದು ನಿಮಗೆ ಹೆಚ್ಚು ಒಳ್ಳೆಯದು ಎಂದು ಹೇಳಿದೆ. ಹಾಗಾದರೆ ಈ ಅಧ್ಯಯನ ಹೇಳುವುದೇನು? ಇಲ್ಲಿದೆ ಮಾಹಿತಿ.

ನ್ಯೂರೋಸೈನ್ಸ್ ಜರ್ನಲ್ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ಬೇಗ ಏಳುವವರಿಗಿಂತ ತಡವಾಗಿ ಎಚ್ಚರಗೊಳ್ಳುವವರು ಶ್ರೇಷ್ಠ ಅಥವಾ ಇತ್ತಮ ಎಂದು ಪರಿಗಣಿಸಲಾಗಿದೆ. ಈ ಪ್ರಯೋಗವನ್ನು 26,000 ಜನರ ಮೇಲೆ ನಡೆಸಿದ್ದು “ತಡವಾಗಿ ಎದ್ದೇಳುವವರು ಬುದ್ಧಿವಂತಿಕೆ, ತಾರ್ಕಿಕತೆ ಮತ್ತು ಮೆಮೊರಿ ಪರೀಕ್ಷೆಗಳಲ್ಲಿ ಉತ್ತಮ ಅಂಕಗಳನ್ನು ಗಳಿಸಿದ್ದಾರೆ” ಎಂದು ಕಂಡು ಹಿಡಿದಿದೆ.

ಹೈದರಾಬಾದ್ ಅಪೊಲೊ ಆಸ್ಪತ್ರೆಯ ಕನ್ಸಲ್ಟೆಂಟ್ ನ್ಯೂರಾಲಜಿಸ್ಟ್ ಡಾ. ಸುಧೀರ್ ಕುಮಾರ್ ಅವರು ಇದನ್ನು ಇನ್ನಷ್ಟು ವಿವರವಾಗಿ ತಿಳಿಸಿದ್ದು, “ಸಾಮಾನ್ಯವಾಗಿ ನಿದ್ರೆಯ ಮಾದರಿಯು ಕ್ರೋನೊಟೈಪ್ ಗಳಿಂದ ನಿರ್ಧಾರವಾಗುತ್ತದೆ. ಇದನ್ನು ಆನುವಂಶಿಕವಾಗಿ ನಿರ್ಧರಿಸಲಾಗುತ್ತದೆ ಹಾಗಾಗಿ ಇದನ್ನು ಎಂದಿಗೂ ಬದಲಾಯಿಸಲು ಸಾಧ್ಯವಿಲ್ಲ. ಗೂಬೆಗಳ ಕ್ರೋನೊಟೈಪ್ ತಡವಾಗಿ ಮಲಗಲು ಮತ್ತು ತಡವಾಗಿ ಎಚ್ಚರಗೊಳ್ಳಲು ಬಯಸುತ್ತದೆ, ಆದರೆ ಲಾರ್ಕ್ ಕ್ರೋನೊಟೈಪ್ ಬೇಗ ಮಲಗಿ ಬೇಗನೆ ಎದ್ದೇಳುತ್ತದೆ. ಅಂದರೆ ಇದು ಕ್ರೋನೊಟೈಪ್ ಮೇಲೆ ಅವಲಂಬಿತವಾಗಿರುತ್ತದೆ” ಎಂದು ಅವರು ಹೇಳಿದ್ದಾರೆ.

ಇಂದಿನ ಯುಗದಲ್ಲಿ, ಬೇರೆ ಬೇರೆ ರೀತಿಯ ಜೀವನಶೈಲಿಯ ಮಾದರಿಗಳಿಂದಾಗಿ ಜನರು ವಿಭಿನ್ನ ನಿದ್ರೆಯ ವೇಳಾಪಟ್ಟಿಯನ್ನು ಹೊಂದಿರುತ್ತಾರೆ. ಮೆಲಟೋನಿನ್ ಉತ್ಪಾದಿಸಲು ಸಹಾಯ ಮಾಡುವ ದೇಹದ ನೈಸರ್ಗಿಕ ಸಿರ್ಕಾಡಿಯನ್ ಲಯಕ್ಕೆ ಅನುಗುಣವಾಗಿ ಬೆಳಿಗ್ಗೆ 12 ಗಂಟೆಯ ಮೊದಲು ಮಲಗಲು ಯಾವಾಗಲೂ ಶಿಫಾರಸು ಮಾಡಲಾಗುತ್ತದೆ. ಆದರೆ, ಬಹಳಷ್ಟು ಸಂದರ್ಭಗಳಲ್ಲಿ, ತಮ್ಮ ಆನುವಂಶಿಕ ಸ್ವಭಾವಗಳಿಂದ ಬೇಗನೆ ಎಚ್ಚರಗೊಳ್ಳುವವರಿಗಿಂತ ತಡವಾಗಿ ಎದ್ದೇಳುವವರು ಉತ್ತಮವಾಗಿ ಕೆಲಸ ಕಾರ್ಯಗಳಲ್ಲಿ ತೊಡಗುತ್ತಾರೆ ಎಂಬುದನ್ನು ಗಮನಿಸಲಾಗಿದೆ.” ಎಂದು ಅವರು ಹೇಳಿದ್ದಾರೆ.

ಇದರ ಅರ್ಥ ಜನರು ತಮ್ಮ ಕ್ರೋನೊಟೈಪ್ ವಿರುದ್ಧ ಹೋಗಲು ಪ್ರಯತ್ನಿಸಿದಾಗ, ಅವರು ಉತ್ತಮವಾಗಿ ಕಾರ್ಯನಿರ್ವಹಿಸಲು ವಿಫಲರಾಗುತ್ತಾರೆ. ಅಂದರೆ ನಿಮ್ಮ ಕ್ರೋನೊಟೈಪ್ ಅನ್ನು ಅರ್ಥಮಾಡಿಕೊಳ್ಳುವುದು ಮತ್ತು ಗರಿಷ್ಠ ಕಾರ್ಯಕ್ಷಮತೆಯನ್ನು ಪಡೆಯಲು ನಿಮ್ಮ ನಿದ್ರೆಯ ಅಭ್ಯಾಸವನ್ನು ಅದಕ್ಕೆ ಅನುಗುಣವಾಗಿ ಹೊಂದಿಸುವುದು ಮುಖ್ಯ. ಅಧ್ಯಯನದ ಹೊರತಾಗಿ ಅದಕ್ಕೆ ಸಂಬಂಧಿಸಿದ ಸೂಕ್ಷ್ಮತೆಗಳನ್ನು ಅರ್ಥಮಾಡಿಕೊಳ್ಳುವುದು ಅಗತ್ಯವಾಗಿದೆ” ಎಂದು ಡಾ. ಕುಮಾರ್ ಹೇಳುತ್ತಾರೆ,

ಎಷ್ಟು ಸಮಯ ಮಲಗಬೇಕು?

ವಯಸ್ಕರಿಗೆ ಎಷ್ಟು ಗಂಟೆಗಳ ನಿದ್ರೆಯ ಅವಶ್ಯಕತೆ ಇದೆ ಎಂಬುದರ ಬಗ್ಗೆ ಡಾ. ಕುಮಾರ್ ಮಾತನಾಡಿದ್ದು, “ಏಳರಿಂದ ಒಂಬತ್ತು ಗಂಟೆಗಳ ಕಾಲ ನಿದ್ರೆ ಅವಶ್ಯವಾಗಿ ಬೇಕಾಗುತ್ತದೆ. ಏಳು ಗಂಟೆಗಳಿಗಿಂತ ಕಡಿಮೆ ಅಥವಾ ಒಂಬತ್ತು ಗಂಟೆಗಳಿಗಿಂತ ಹೆಚ್ಚು ನಿದ್ರೆ ಮಾಡಿದಲ್ಲಿ ವ್ಯಕ್ತಿಯು ಬೊಜ್ಜು, ಮಧುಮೇಹ, ಅಧಿಕ ರಕ್ತದೊತ್ತಡ, ಹೃದಯಾಘಾತ ಮತ್ತು ಕೆಲವು ಸಂದರ್ಭಗಳಲ್ಲಿ ಕ್ಯಾನ್ಸರ್ ನಂತಹ ಕಾಯಿಲೆಗಳಿಗೆ ಒಳಗಾಗುವ ಅಪಾಯವಿದೆ.” ಎಂದು ಅವರು ಹೇಳಿದ್ದಾರೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಮೌಖಿಕ ಆದೇಶಗಳಿಗೆ ಕಿಮ್ಮತ್ತಿರಲ್ಲ ಅಂತ ಜಮೀರ್​​​ಗೆ ಗೊತ್ತಿಲ್ಲ: ಯತ್ನಾಳ್
ಮೌಖಿಕ ಆದೇಶಗಳಿಗೆ ಕಿಮ್ಮತ್ತಿರಲ್ಲ ಅಂತ ಜಮೀರ್​​​ಗೆ ಗೊತ್ತಿಲ್ಲ: ಯತ್ನಾಳ್
ಆನೆಗಳು ಭಾವುಕ ಜೀವಿಗಳು ಅಂತ ಅರಣ್ಯಾಧಿಕಾರಿ ಹೇಳಿದ್ದು ಶತ ಪ್ರತಿಶತ ಸತ್ಯ
ಆನೆಗಳು ಭಾವುಕ ಜೀವಿಗಳು ಅಂತ ಅರಣ್ಯಾಧಿಕಾರಿ ಹೇಳಿದ್ದು ಶತ ಪ್ರತಿಶತ ಸತ್ಯ
ಪ್ರಾಧ್ಯಾಪಕಿ ಆತ್ಮಹತ್ಯೆಗೆ ಯತ್ನ: 3 ತಿಂಗಳಿನಿಂದ ಕಿರುಕುಳ ಆರೋಪ
ಪ್ರಾಧ್ಯಾಪಕಿ ಆತ್ಮಹತ್ಯೆಗೆ ಯತ್ನ: 3 ತಿಂಗಳಿನಿಂದ ಕಿರುಕುಳ ಆರೋಪ
ಅ.17ರ ವರೆಗೆ ಕರ್ನಾಟಕದಲ್ಲಿ ಭಾರೀ ಮಳೆ: ಯೆಲ್ಲೋ- ಆರೆಂಜ್ ಅಲರ್ಟ್​!
ಅ.17ರ ವರೆಗೆ ಕರ್ನಾಟಕದಲ್ಲಿ ಭಾರೀ ಮಳೆ: ಯೆಲ್ಲೋ- ಆರೆಂಜ್ ಅಲರ್ಟ್​!
ಕೇಸ್ ವಾಪಸ್ಸು ತಗೊಳ್ಳಿ ಅಂತ ಭಿಕ್ಷೆ ಬೇಡುವ ಸ್ಥಿತಿ ಬಂದಿಲ್ಲ: ಸಿಟಿ ರವಿ
ಕೇಸ್ ವಾಪಸ್ಸು ತಗೊಳ್ಳಿ ಅಂತ ಭಿಕ್ಷೆ ಬೇಡುವ ಸ್ಥಿತಿ ಬಂದಿಲ್ಲ: ಸಿಟಿ ರವಿ
ಮುಡಾ ಕೇಸ್: ಲೋಕಾಯುಕ್ತ ಮೇಲೆ ಪ್ರಭಾವ, ಕಾಂಗ್ರೆಸ್​ ವಕ್ತಾರನ ಮೇಲೆ ಆರೋಪ
ಮುಡಾ ಕೇಸ್: ಲೋಕಾಯುಕ್ತ ಮೇಲೆ ಪ್ರಭಾವ, ಕಾಂಗ್ರೆಸ್​ ವಕ್ತಾರನ ಮೇಲೆ ಆರೋಪ
ನಾಗರ ಹಾವಿನ ಮೇಲೆ ಧಾರಾಳ ಮಮಕಾರ ತೋರಿದ ಹಸು
ನಾಗರ ಹಾವಿನ ಮೇಲೆ ಧಾರಾಳ ಮಮಕಾರ ತೋರಿದ ಹಸು
ಆನೆಗಳು ಮೈಸೂರನ್ನು ಖಂಡಿತ ಮಿಸ್ ಮಾಡಿಕೊಳ್ಳುತ್ತವೆ: ಡಾ ಪ್ರಭುಗೌಡ, ಡಿಸಿಎಫ್
ಆನೆಗಳು ಮೈಸೂರನ್ನು ಖಂಡಿತ ಮಿಸ್ ಮಾಡಿಕೊಳ್ಳುತ್ತವೆ: ಡಾ ಪ್ರಭುಗೌಡ, ಡಿಸಿಎಫ್
ತಿರುಪತಿ ತಿಮ್ಮಪ್ಪನ ಸನ್ನಿಧಿಯಲ್ಲಿ ಧಾರಾಕಾರ ಮಳೆ, ವಿಡಿಯೋ ನೋಡಿ
ತಿರುಪತಿ ತಿಮ್ಮಪ್ಪನ ಸನ್ನಿಧಿಯಲ್ಲಿ ಧಾರಾಕಾರ ಮಳೆ, ವಿಡಿಯೋ ನೋಡಿ
ಸಾಧನಾ ಸಮಾವೇಶದ ಹಿನ್ನೆಲೆಯಲ್ಲಿ ಉತ್ಸಾಹದಿಂದ ಓಡಾಡುತ್ತಿರುವ ಜಮೀರ್ ಅಹ್ಮದ್
ಸಾಧನಾ ಸಮಾವೇಶದ ಹಿನ್ನೆಲೆಯಲ್ಲಿ ಉತ್ಸಾಹದಿಂದ ಓಡಾಡುತ್ತಿರುವ ಜಮೀರ್ ಅಹ್ಮದ್