ಸ್ಕಿಜೋಫ್ರೇನಿಯಾವು(Schizophrenia) ಮಾನಸಿಕ ಸಮಸ್ಯೆಯಾಗಿದ್ದು, ಈ ಸಮಸ್ಯೆಯಿಂದ ಬಳಲುತ್ತಿರುವ ವ್ಯಕ್ತಿ ಇತರೊಂದಿಗೆ ಬೆರೆಯಲು ಹಾಗೂ ಮಾತನಾಡಲು ಸಾಕಷ್ಟು ಹೆದರುತ್ತಾನೆ. ಜೊತೆಗೆ ಅವನ ನಡವಳಿಕೆಯಲ್ಲಿ ಅನೇಕ ಬದಲಾವಣೆಗಳು ಕಂಡುಬರುತ್ತವೆ. ಈ ಅಸ್ವಸ್ಥತೆಯನ್ನು ಸಾಕಷ್ಟು ಅಪರೂಪವೆಂದು ಪರಿಗಣಿಸಲಾಗಿದ್ದರೂ, ಇದು ತುಂಬಾ ಗಂಭೀರವಾದ ಸಮಸ್ಯೆಯಾಗಿದೆ. ಹದಿಹರೆಯದವರಲ್ಲಿ ಈ ಸಮಸ್ಯೆ ಹೆಚ್ಚಾಗಿ ಕಂಡುಬರುತ್ತಿದ್ದು, ಪ್ರಪಂಚದಾದ್ಯಂತ ಸುಮಾರು 20 ಲಕ್ಷ ಜನರು ಈ ಕಾಯಿಲೆಯಿಂದ ಬಳಲುತ್ತಿದ್ದಾರೆ. ‘ಸ್ಕಿಜೋಫ್ರೇನಿಯಾ’ ಎಂಬುದು ಗ್ರೀಕ್ ಪದ, ಇದರರ್ಥ ‘ಒಡೆದ ಮನಸ್ಸು’.ಈ ಸಮಸ್ಯೆಯಿಂದ ಬಳಲುತ್ತಿರುವ ವ್ಯಕ್ತಿ ಸದಾ ಭ್ರಮೆಯ ಸ್ಥಿತಿ ಅಂದರೆ ಗೊಂದಲದಲ್ಲಿರುತ್ತಾನೆ. ಈ ಸಮಸ್ಯೆಯನ್ನು ಉತ್ತಮ ವಾತಾವರಣ, ಚಿಕಿತ್ಸೆ ಮತ್ತು ಔಷಧಿಗಳ ಮೂಲಕ ನಿಯಂತ್ರಿಸಬಹುದು. ಸಮಯಕ್ಕೆ ಸರಿಯಾಗಿ ರೋಗಲಕ್ಷಣಗಳಿಗೆ ಗಮನ ಕೊಡುವುದರಿಂದ ಪರಿಸ್ಥಿತಿಯು ಹದಗೆಡುವ ಮೊದಲು ಅದನ್ನು ನಿರ್ವಹಿಸಬಹುದು.
ಹದಿಹರೆಯದವರು ಸ್ಕಿಜೋಫ್ರೇನಿಯಾದಿಂದ ಬಳಲುತ್ತಿದ್ದರೆ, ಅದರ ರೋಗಲಕ್ಷಣಗಳನ್ನು ಗುರುತಿಸುವುದು ತುಂಬಾ ಕಷ್ಟ, ಏಕೆಂದರೆ ಅನೇಕ ಬಾರಿ ಇದು ವಯಸ್ಸಿಗೆ ಸಂಬಂಧಿಸಿದ ನಡವಳಿಕೆಯೊಂದಿಗೆ ಗೊಂದಲಕ್ಕೊಳಗಾಗುತ್ತದೆ. ಈ ಸಮಸ್ಯೆಯಿಂದ ಬಳಲುತ್ತಿರುವ ವ್ಯಕ್ತಿ (ಹುಡುಗ ಅಥವಾ ಹುಡುಗಿ) ಸಮಾಜದಿಂದ ದೂರವಾಗಲು ಪ್ರಾರಂಭಿಸುತ್ತಾನೆ. ಇತರರ ಕಡೆಗೆ ಅವನ ನಡವಳಿಕೆಯು ಬದಲಾಗಲು ಪ್ರಾರಂಭಿಸುತ್ತದೆ ಮತ್ತು ಸಣ್ಣ ವಿಷಯಗಳ ಬಗ್ಗೆ ಅನುಮಾನಿಸುವುದು ಮತ್ತು ಏಕಾಂಗಿಯಾಗಿದ್ದಾಗ ಹೆಚ್ಚು ಸುರಕ್ಷಿತವಾಗಿರುತ್ತೇನೆ ಎಂಬ ಭಾವನೆ ಕಾಡುವುದು.
ಸ್ಕಿಜೋಫ್ರೇನಿಯಾದ ಸ್ಪಷ್ಟ ಕಾರಣಗಳಿಲ್ಲದಿದ್ದರೂ. ಈ ಸಮಸ್ಯೆಯು ಡ್ರಗ್ಸ್, ಅತಿಯಾದ ಮದ್ಯಪಾನ, ಅತಿಯಾದ ಒತ್ತಡ, ಜೆನೆಟಿಕ್ಸ್ ಅಥವಾ ಮೆದುಳಿಗೆ ಸಂಬಂಧಿಸಿದ ಯಾವುದೇ ದೀರ್ಘಕಾಲದ ಕಾಯಿಲೆಯ ಕಾರಣದಿಂದಾಗಿರಬಹುದು.
ಇದನ್ನೂ ಓದಿ: ರಾಜ್ಯದಲ್ಲಿ ಹೆಚ್ಚುತ್ತಿರುವ ಮಕ್ಕಳ ಕ್ಯಾನ್ಸರ್ ಪ್ರಕರಣ: ಚಿಕಿತ್ಸೆಗೆ ಆಸ್ಪತ್ರೆಗಳಲ್ಲಿ ತಜ್ಞರ ಕೊರತೆ
ಸ್ಕಿಜೋಫ್ರೇನಿಯಾದ ಮಾನಸಿಕ ಲಕ್ಷಣಗಳೆಂದರೆ ಒಂಟಿಯಾಗಿ ಬದುಕುವುದು, ಜನಸಂದಣಿ ಇರುವ ಸ್ಥಳಗಳಿಗೆ ಹೋಗಲು ಭಯಪಡುವುದು, ಗೊಂದಲದ ಸ್ಥಿತಿಯಲ್ಲಿರುವುದು ಮತ್ತು ವಿಚಿತ್ರವಾದ ಭಾವನೆಗಳು , ಪರಿಸ್ಥಿತಿಗೆ ಅನುಗುಣವಾಗಿ ಭಾವನೆಗಳನ್ನು ಅರ್ಥಮಾಡಿಕೊಳ್ಳದಿರುವುದು. ಇದಲ್ಲದೇ ಈ ಖಾಯಿಲೆಯಿಂದಾಗಿ ಹಸಿವಿನ ಬದಲಾವಣೆ, ಮುಖ ಬಿಳುಪು, ತೂಕ ಇಳಿಕೆ, ದಿನನಿತ್ಯದ ಕೆಲಸಗಳನ್ನು ಸರಿಯಾಗಿ ಮಾಡಲು ಆಗದಿರುವುದು ಮುಂತಾದ ಸಮಸ್ಯೆಗಳು ಎದುರಾಗುತ್ತವೆ. ಈ ಸಮಸ್ಯೆಗಳನ್ನು ನಿರ್ಲಕ್ಷಿಸಬಾರದು.
ಸ್ಕಿಜೋಫ್ರೇನಿಯಾವನ್ನು ಪತ್ತೆಹಚ್ಚಲು ನಿಖರವಾದ ಪರೀಕ್ಷೆ ಲಭ್ಯವಿಲ್ಲ. ಇದಕ್ಕಾಗಿ, ವೈದ್ಯರು ರೋಗಿಯ ವೈದ್ಯಕೀಯ ಪ್ರಕರಣದ ಇತಿಹಾಸ, ಮಾನಸಿಕ ಸ್ಥಿತಿ, ಸಾಮಾಜಿಕ ಅಂಶಗಳು ಮತ್ತು ರೋಗಲಕ್ಷಣಗಳನ್ನು ಮೌಲ್ಯಮಾಪನ ಮಾಡುತ್ತಾರೆ. ಈ ಸಮಸ್ಯೆಯನ್ನು ಧ್ಯಾನ, ವ್ಯಕ್ತಿಗಳ ಬೆಂಬಲ ಮತ್ತು ವರ್ತನೆಯ ಚಿಕಿತ್ಸೆ ಮತ್ತು ಔಷಧಿಗಳ ಮೂಲಕ ನಿಯಂತ್ರಿಸಬಹುದು. ಅದೇ ಸಮಯದಲ್ಲಿ, ರೋಗಿಯನ್ನು ಮಾದಕತೆ ಮತ್ತು ಧೂಮಪಾನದಂತಹ ವಿಷಯಗಳಿಂದ ದೂರವಿಡಬೇಕು.
ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:
Published On - 5:03 pm, Sun, 12 November 23