AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರುಚಿಕರವಾದ ಬಾಳೆಕಾಯಿ ಚಿಪ್ಸ್ ಆರೋಗ್ಯಕ್ಕೆ ಒಳ್ಳೆಯದಾ.. ಹಾನಿಕಾರಕವಾ? ತಿಳಿದುಕೊಳ್ಳಿ

Banana Chips: ಬಾಳೆ ಹಣ್ಣು ಪೊಟ್ಯಾಸಿಯಮ್​​ನ ಅತ್ಯುತ್ತಮ ಮೂಲವಾಗಿದೆ ಎಂದು ಎಲ್ಲರಿಗೂ ತಿಳಿದಿದೆ. ಬಾಳೆ ಚಿಪ್ಸ್ ನಲ್ಲಿಯೂ ಕೂಡ ಪೊಟ್ಯಾಸಿಯಮ್ ಇರುತ್ತದೆ. ಆದ್ದರಿಂದ ಅದು ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತಾರೆ. ಫೈಬರ್ ಭರಿತ ಬಾಳೆ ಕಾಯಿ ಚಿಪ್ಸ್ ತಿನ್ನುವುದರಿಂದ ಜೀರ್ಣಕ್ರಿಯೆ ಸುಧಾರಿಸುತ್ತದೆ.

ರುಚಿಕರವಾದ ಬಾಳೆಕಾಯಿ ಚಿಪ್ಸ್ ಆರೋಗ್ಯಕ್ಕೆ ಒಳ್ಳೆಯದಾ.. ಹಾನಿಕಾರಕವಾ? ತಿಳಿದುಕೊಳ್ಳಿ
ರುಚಿಕರವಾದ ಬಾಳೆಕಾಯಿ ಚಿಪ್ಸ್ ಆರೋಗ್ಯಕ್ಕೆ ಒಳ್ಳೆಯದಾ..
ಸಾಧು ಶ್ರೀನಾಥ್​
|

Updated on: Nov 13, 2023 | 11:15 AM

Share

ಬಾಳೆಹಣ್ಣು (Banana) ತಿನ್ನುವುದರಿಂದ ಸಿಗುವ ಪ್ರಯೋಜನಗಳನ್ನು ನಾವು ತಿಳಿದಿದ್ದೇವೆ. ಆದರೆ, ಬಾಳೆಕಾಯಿ ಚಿಪ್ಸ್ (Banana Chips) ತಿನ್ನುವುದು ಆರೋಗ್ಯಕರವೇ ಎಂಬುದರ ಬಗ್ಗೆ ಹಲವು ಅನುಮಾನಗಳಿವೆ. ವಾಸ್ತವವಾಗಿ, ಇದರಿಂದ ಅನುಕೂಲಗಳು ಇವೆ ಮತ್ತು ಅನಾನುಕೂಲಗಳು ಇವೆ. ಬಾಳೆಕಾಯಿ ಚಿಪ್ಸ್ ನಮ್ಮಲ್ಲಿ ಅನೇಕರ ನೆಚ್ಚಿನ ತಿಂಡಿಯಾಗಿದೆ. ಬಾಳೆಕಾಯಿ ಚಿಪ್ಸ್ ತನ್ನ ವಿಸಿಷ್ಟ ರುಚಿಯಿಂದಾಗಿ ವಯಸ್ಸಿನ ಭೇದವಿಲ್ಲದೆ ಎಲ್ಲರೂ ಇಷ್ಟಪಡುವ ಕುರುಕಲು ತಿಂಡಿಯಾಗಿದೆ. ಇದನ್ನು ಹೆಚ್ಚಾಗಿ ತೆಂಗಿನ ಎಣ್ಣೆಯಲ್ಲಿ ಕರಿಯಲಾಗುತ್ತದೆ. ಇನ್ನು ಬಾಳೆ ಎಲೆಯ ಪ್ರಯೋಜನಗಳನ್ನು (health) ಸಹ ನಾವು ತಿಳಿದಿದ್ದೇವೆ.

ಬಾಳೆಕಾಯಿ ಚಿಪ್ಸ್ ಮೆಗ್ನೀಸಿಯಮ್​ನಲ್ಲಿ ಸಮೃದ್ಧವಾಗಿದೆ. ಆದ್ದರಿಂದ, ಅದು ಬೇಗನೆ ಹೊಟ್ಟೆಯನ್ನು ತುಂಬುತ್ತದೆ. ಸ್ವಲ್ಪ ಸಮಯದವರೆಗೆ ಹಸಿವನ್ನು ಕಡಿಮೆ ಮಾಡುತ್ತದೆ/ಮುಂದೂಡತ್ತದೆ . ಹಾಗಂತ ತೂಕ ಇಳಿಸಿಕೊಳ್ಳಲು ಡಯಟ್ ಮಾಡುವವರಿಗೆ ಇದು ಒಳ್ಳೆಯ ಆಯ್ಕೆಯಲ್ಲ. ಕೊಬ್ಬು ಮತ್ತು ಸಕ್ಕರೆ ಅಧಿಕವಾಗಿರುವ ಕಾರಣ, ಅದು ನಿಮ್ಮ ತೂಕ ಇಳಿಸುವ ಪ್ರಯತ್ನಗಳಿಗೆ ಅಡ್ಡಿಯಾಗುತ್ತದೆ.

ಬಾಳೆ ಹಣ್ಣು ಪೊಟ್ಯಾಸಿಯಮ್​​ನ ಅತ್ಯುತ್ತಮ ಮೂಲವಾಗಿದೆ ಎಂದು ಎಲ್ಲರಿಗೂ ತಿಳಿದಿದೆ. ಬಾಳೆ ಚಿಪ್ಸ್ ನಲ್ಲಿಯೂ ಕೂಡ ಪೊಟ್ಯಾಸಿಯಮ್ ಇರುತ್ತದೆ. ಆದ್ದರಿಂದ ಅದು ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತಾರೆ. ಫೈಬರ್ ಭರಿತ ಬಾಳೆ ಕಾಯಿ ಚಿಪ್ಸ್ ತಿನ್ನುವುದರಿಂದ ಜೀರ್ಣಕ್ರಿಯೆ ಸುಧಾರಿಸುತ್ತದೆ. ಮಲಬದ್ಧತೆಯನ್ನು ತಡೆಯುತ್ತದೆ. ಆದರೆ ಮನೆಯಲ್ಲಿ ತಯಾರಿಸಿದ ಚಿಪ್ಸ್ ಹೊರಗೆ ಅಂಗಡಿಗಳಲ್ಲಿ ಖರೀದಿಸಿದ ಚಿಪ್ಸ್​​ಗಿಂತ ಆರೋಗ್ಯಕರವಾಗಿರುತ್ತದೆ.

Also Read: Cooking Tips – ಗರಿಗರಿಯಾದ ಬಾಳೆಕಾಯಿ ಚಿಪ್ಸ್ ತಯಾರಿಸಲು ​​​ಈ ಸಲಹೆ ಪಾಲಿಸಿ

ಅನೇಕರು ಇದನ್ನು ರುಚಿಕರವಾದ ತಿರುತಿಂಡಿ ಎಂದು ಪರಿಗಣಿಸುತ್ತಾರೆ. ಮೈಗ್ರೇನ್ ಪೀಡಿತರು ಬಾಳೆ ಚಿಪ್ಸ್ ನಿಂದ ದೂರವಿರುವುದು ಉತ್ತಮ. ಅದು ಮೈಗ್ರೇನ್ ಅನ್ನು ಉಲ್ಬಣಗೊಳಿಸುವ ಟೈರಮೈನ್ ಎಂಬ ವಸ್ತುವನ್ನು ಹೊಂದಿರುತ್ತವೆ. ಇದು ಹೃದಯದ ಆರೋಗ್ಯಕ್ಕೂ ಒಳ್ಳೆಯದಲ್ಲ. ಬಾಳೆ ಚಿಪ್ಸ್ ನಲ್ಲಿ ಪಿಷ್ಟ ಅಧಿಕವಾಗಿರುತ್ತದೆ. ಆದ್ದರಿಂದ ಅವುಗಳನ್ನು ಅತಿಯಾಗಿ ಸೇವಿಸುವುದರಿಂದ ಹಲ್ಲು ಹುಳುಕಾಗಬಹುದು.

ಇದನ್ನೂ ಓದಿ: ಬೇಸಿಗೆಯಲ್ಲಿ ಹೆಚ್ಚಾಗಿ ಮಲಬದ್ಧತೆ ಸಮಸ್ಯೆಯಿಂದ ಬಳಲುತ್ತಿದ್ದೀರಾ? ಹಾಗಿದ್ದರೆ ಈ ಟಿಪ್ಸ್​​ ಫಾಲೋ ಮಾಡಿ

ಇನ್ನು ಅಸ್ತಮಾದಿಂದ ಬಳಲುತ್ತಿರುವವರು ಬಾಳೆಹಣ್ಣಿನ ಚಿಪ್ಸ್ ಸೇವಿಸುವಾಗ ವೈದ್ಯರ ಸಲಹೆಯನ್ನು ತೆಗೆದುಕೊಳ್ಳುವುದು ಉತ್ತಮ. ಏಕೆಂದರೆ ಈ ಚಿಪ್ಸ್ ಆ ಸಮಸ್ಯೆಯನ್ನು ಮತ್ತಷ್ಟು ಹೆಚ್ಚಿಸುತ್ತದೆ. ಚರ್ಮದ ಅಲರ್ಜಿಯಿಂದ ಬಳಲುತ್ತಿರುವವರು ಇವುಗಳಿಂದ ದೂರವಿರಬೇಕು. ಅಲ್ಲದೆ, ಬಾಳೆಕಾಯಿ ಚಿಪ್ಸ್ ಮಾಡಲು ಅದನ್ನು ಕರಿದಾಗ ತೆಂಗಿನ ಎಣ್ಣೆಯ ಪ್ರಯೋಜನಗಳನ್ನು ಕಳೆದುಕೊಳ್ಳುತ್ತದೆ.

(ಗಮನಿಸಿ: ಆರೋಗ್ಯ ತಜ್ಞರು ಮತ್ತು ಇತರ ಅಧ್ಯಯನಗಳು ಒದಗಿಸಿದ ಮಾಹಿತಿಯ ಆಧಾರದ ಮೇಲೆ ನಾವು ಈ ವಿವರಗಳನ್ನು ಒದಗಿಸುತ್ತಿದ್ದೇವೆ. ಇದು ಸಾಮಾನ್ಯ ಮಾಹಿತಿಗಾಗಿ ಮಾತ್ರ. ನಿಮಗೆ ಯಾವುದೇ ಅನುಮಾನಗಳು ಅಥವಾ ಸಮಸ್ಯೆಗಳಿದ್ದರೆ, ವೈದ್ಯರನ್ನು ಸಂಪರ್ಕಿಸುವುದು ಉತ್ತಮ)

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ತೆನೆ ಹೊತ್ತ ಮಹಿಳೆ ಜತೆ ಚಕ್ರದ ಗುರುತು ಸೇರಿಸಲು ಪ್ಲ್ಯಾನ್
ತೆನೆ ಹೊತ್ತ ಮಹಿಳೆ ಜತೆ ಚಕ್ರದ ಗುರುತು ಸೇರಿಸಲು ಪ್ಲ್ಯಾನ್
ಕಾಂಪೌಂಡ್ ತೆರವು ವಿಚಾರ: ಹಾಸನ ಪೊಲೀಸ್ ಠಾಣೆಗೆ ಯಶ್ ತಾಯಿ ಭೇಟಿ
ಕಾಂಪೌಂಡ್ ತೆರವು ವಿಚಾರ: ಹಾಸನ ಪೊಲೀಸ್ ಠಾಣೆಗೆ ಯಶ್ ತಾಯಿ ಭೇಟಿ
ಕರ್ನಾಟಕ ಕರಾವಳಿ ಆಗಲಿದೆ ಟೂರಿಸಂ ಹಬ್: ಡಿಕೆಶಿ ಮಹತ್ವದ ಘೋಷಣೆ
ಕರ್ನಾಟಕ ಕರಾವಳಿ ಆಗಲಿದೆ ಟೂರಿಸಂ ಹಬ್: ಡಿಕೆಶಿ ಮಹತ್ವದ ಘೋಷಣೆ
ಬೆಂಗಳೂರು: ರಾಪಿಡೋ ಚಾಲಕನಿಂದ ಯುವತಿಗೆ ಲೈಂಗಿಕ ಕಿರುಕುಳ
ಬೆಂಗಳೂರು: ರಾಪಿಡೋ ಚಾಲಕನಿಂದ ಯುವತಿಗೆ ಲೈಂಗಿಕ ಕಿರುಕುಳ
ಕಡಲೆ ಕಳ್ಳನಿಗೆ ಕಂಬಕ್ಕೆ ಕಟ್ಟಿ ಹಾಕಿ ಹಿಗ್ಗಾಮುಗ್ಗಾ ಥಳಿತ!
ಕಡಲೆ ಕಳ್ಳನಿಗೆ ಕಂಬಕ್ಕೆ ಕಟ್ಟಿ ಹಾಕಿ ಹಿಗ್ಗಾಮುಗ್ಗಾ ಥಳಿತ!
ಅಸಹ್ಯ ದೃಶ್ಯ! ಟಾಕ್ಸಿಕ್ ವಿರುದ್ಧ ಕಂಪ್ಲೇಂಟ್ ನೀಡಿದ ವಕೀಲರು ಹೇಳಿದ್ದೇನು?
ಅಸಹ್ಯ ದೃಶ್ಯ! ಟಾಕ್ಸಿಕ್ ವಿರುದ್ಧ ಕಂಪ್ಲೇಂಟ್ ನೀಡಿದ ವಕೀಲರು ಹೇಳಿದ್ದೇನು?
ಪ್ಯಾರಾ-ಅಥ್ಲೀಟ್ ಪ್ರಸಾದ್​​​ಗೆ 5 ವರ್ಷಗಳ ನಂತರ ಸಿಕ್ತು ಸೂರು ಭಾಗ್ಯ!
ಪ್ಯಾರಾ-ಅಥ್ಲೀಟ್ ಪ್ರಸಾದ್​​​ಗೆ 5 ವರ್ಷಗಳ ನಂತರ ಸಿಕ್ತು ಸೂರು ಭಾಗ್ಯ!
ಯುವಕನ ಬಳಿ ನನ್ನ ಕರ್ಕೊಂಡೋಗಿ ಮದುವೆಯಾಗು ಎಂದಿದ್ದ ಅಪ್ರಾಪ್ತೆ ನಿಗೂಢ ಸಾವು
ಯುವಕನ ಬಳಿ ನನ್ನ ಕರ್ಕೊಂಡೋಗಿ ಮದುವೆಯಾಗು ಎಂದಿದ್ದ ಅಪ್ರಾಪ್ತೆ ನಿಗೂಢ ಸಾವು
ಕಾಂಪೌಂಡ್ ಒಳಗಿದ್ದ ನಾಯಿಯನ್ನು ಬೇಟೆಯಾಡಲು ಬಂದ ಚಿರತೆ!
ಕಾಂಪೌಂಡ್ ಒಳಗಿದ್ದ ನಾಯಿಯನ್ನು ಬೇಟೆಯಾಡಲು ಬಂದ ಚಿರತೆ!
ಸಂಬಂಧಗಳನ್ನು ಇಟ್ಟುಕೊಂಡು ಮನೆಯನ್ನು ನರಕ ಮಾಡ್ತಾ ಇದೀರಾ; ರಕ್ಷಿತಾಗೆ ಪಾಠ
ಸಂಬಂಧಗಳನ್ನು ಇಟ್ಟುಕೊಂಡು ಮನೆಯನ್ನು ನರಕ ಮಾಡ್ತಾ ಇದೀರಾ; ರಕ್ಷಿತಾಗೆ ಪಾಠ